Real Story : ಮೋಸ ಮಾಡಿದ ಪತಿ ಸುಧಾರಿಸಿಕೊಳ್ತಿದ್ದಾನೆ… ಆದ್ರೆ ನಂಬೋದು ಹೇಗೆ?

By Suvarna News  |  First Published Mar 2, 2023, 2:30 PM IST

ಒಡೆದ ಕನ್ನಡಿ ಜೋಡಿಸೋದು ಸಾಧ್ಯವಿಲ್ಲ. ಹಾಗೆ ಒಡೆದ ಮನಸ್ಸು ಕೂಡ. ಅನೇಕ ಬಾರಿ ಇದನ್ನು ಒಂದುಗೂಡಿಸುವ ಪ್ರಯತ್ನ ನಡೆಯುತ್ತದೆ. ಇದ್ರಲ್ಲಿ ಪ್ರಾಮಾಣಿಕತೆ, ಪ್ರೀತಿ ತುಂಬಿದ್ರೆ ಮತ್ತೆ ಮನಸ್ಸು ಒಂದಾಗುತ್ತೆ. ಆದ್ರೆ ಮೋಸ ಮಾಡಿದ ವ್ಯಕ್ತಿಯನ್ನು ಎರಡನೇ ಬಾರಿ ನಂಬೋದೇ ಕಷ್ಟ. 
 


ಪ್ರೀತಿ, ವಿಶ್ವಾಸದಲ್ಲಿ ಮೋಸ ಮಾಡಿದ ವ್ಯಕ್ತಿಯನ್ನು ನಂಬೋದು ಕಷ್ಟ. ಯಾಕೆಂದ್ರೆ ಮೋಸ ಮಾಡಿದ ವ್ಯಕ್ತಿಯ ಸ್ವಭಾವ ಬಹುಬೇಗ ಬದಲಾಗಲು ಸಾಧ್ಯವಿಲ್ಲ. ಅನೇಕರು ಬದಲಾದಂತೆ ನಾಟಕವಾಡ್ತಾರೆ. ಇನ್ನು ಕೆಲವರು ಬದಲಾಗುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಾರೆ. ಮತ್ತೆ ಕೆಲವರು ಪ್ರೀತಿಯಿಂದ ಬದಲಾಗ್ತಾರೆ. ಈ ಮಹಿಳೆ ಕೂಡ  ಪತಿ ಪ್ರಾಮಾಣಿಕವಾಗಿ ಬದಲಾಗ್ತಿದ್ದಾನಾ ಅಥವಾ ಇದೆಲ್ಲ ತೋರಿಕೆಯಾ ಎಂಬ ಗೊಂದಲದಲ್ಲಿದ್ದಾಳೆ. ಮುಂದೇನು ಎಂಬ ಪ್ರಶ್ನೆ ಕೇಳಿದ್ದಾಳೆ.

ಆಕೆಗೆ ಮದುವೆ (Marriage) ಯಾಗಿ ತುಂಬಾ ದಿನ ಕಳೆದಿಲ್ಲ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ತಿಂಗಳು ಕಳೆಯುತ್ತಿದ್ದಂತೆ ಪತಿಯ ಮೋಸ (Cheating) ಗೊತ್ತಾಯ್ತು. ಮೋಸ ಮಾಡ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಳು. ಇದಾದ್ಮೇಲೆ ಇಡೀ ಜೀವನ ಬದಲಾಗಿತ್ತು. ಪತಿ (Husband) ಯ ಮೋಸದಿಂದ ಚೇತರಿಸಿಕೊಳ್ತಿದ್ದ ಮಹಿಳೆಗೆ ಈಗ ಪತಿಯ ಬದಲಾವಣೆ ರೂಪ ಕಾಣ್ತಿದೆ. ದಾಂಪತ್ಯ (Marriage) ವನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಪತಿ ಮಾಡ್ತಿದ್ದಾನೆ. ಪತ್ನಿಯನ್ನು ಹೋಟೆಲ್, ರೆಸ್ಟೋರೆಂಟ್, ಪಾರ್ಕ್, ಪ್ರವಾಸಿ ತಾಣ ಹೀಗೆ ಎಲ್ಲೆಂದರಲ್ಲಿ ಸುತ್ತಾಡಿಸಲು ಪ್ಲಾನ್ ಮಾಡ್ತಿದ್ದಾನೆ. ಪ್ರತಿ ದಿನ ಕಚೇರಿಯಿಂದ ಮನೆಗೆ ಬೇಗ ಬರ್ತಿದ್ದಾನೆ. ಪತಿ ಇಷ್ಟೆಲ್ಲ ಮಾಡ್ತಿರೋದು ಪತ್ನಿಯ ಕಣ್ಣಿಗೆ ಕಾಣ್ತಿದೆ. ಆದ್ರೆ ಆತನನ್ನು ನಂಬಲು ಸಾಧ್ಯವಾಗ್ತಿಲ್ಲ. ಹಿಂದೆಂದೂ ಹೀಗೆ ಮಾಡದ ಪತಿ ಈಗ ಒತ್ತಾಯಕ್ಕೆ ಮಾಡ್ತಿದ್ದಾನೆ ಎನ್ನಿಸುತ್ತಿದೆ. ನಾನು ಸಂಬಂಧ (Relationship) ಕೊನೆಗೊಳಿಸಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡ್ತಿದ್ದಾನೆ ಎನ್ನಿಸುತ್ತಿದೆ. ಮುಂದೇನು ಮಾಡ್ಲಿ?, ನಾನು ಅತಿಯಾಗಿ ಚಿಂತಿಸುತ್ತಿದ್ದೇನಾ? ಆತನಿಗೆ ಇನ್ನೊಂದು ಅವಕಾಶ ನೀಡ್ಬೇಕಾ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾಳೆ.

Latest Videos

undefined

ಯಪ್ಪಾ..ಹೀಗೂ ಇರ್ತಾರ, ಗಂಡನಿಗೆ ಇನ್ನೊಬ್ಬಳ ಜೊತೆ ಅಫೇರ್ ಇರ್ಲಿ ಅನ್ನೋದೆ ಈಕೆಯ ಆಸೆಯಂತೆ!

ತಜ್ಞ (Expert) ರ ಉತ್ತರ : ಒಮ್ಮೆ ಮೋಸ ಮಾಡಿದ ವ್ಯಕ್ತಿಯನ್ನು ನಂಬೋದು ಕಷ್ಟ. ಹಾಗಂತ ಇನ್ನೊಂದು ಅವಕಾಶ ನೀಡೋದು ತಪ್ಪಲ್ಲ ಎನ್ನುತ್ತಾರೆ ತಜ್ಞರು. ಮೊದಲು ಮೋಸ ಮಾಡಿ, ನಂತ್ರ ನಿಮ್ಮನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸುತ್ತಿದ್ದಾನೆ ಎಂದ್ರೆ ಆತನಿಗೆ ತನ್ನ ತಪ್ಪಿನ ಅರಿವಾಗಿದೆ. ತಾನು ತಪ್ಪಿತಸ್ಥ (Guilty) ನೆಂದು ಆತ ಭಾವಿಸಿದ್ದಾನೆ ಎನ್ನುತ್ತಾರೆ ತಜ್ಞರು. ನಿಮ್ಮ ಸಂತೋಷಕ್ಕೆ ಪತಿ ಆದ್ಯತೆ ನೀಡ್ತಿದ್ದಾನೆ. ಈ ಬಗ್ಗೆ ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ. ಅವುಗಳನ್ನು ಬೇರೆ ಬೇರೆ ಆಂಗಲ್ ನಲ್ಲಿ ನೋಡುವ ಅವಶ್ಯಕತೆಯಿಲ್ಲ. ನೀವು ನಿಮ್ಮ ಪತಿಗೆ ಎರಡನೇ ಅವಕಾಶ ನೀಡಿ ಎನ್ನುತ್ತಿದ್ದಾರೆ ತಜ್ಞರು. 

ವಿಶ್ವಾಸವೇ ಇಲ್ಲದಿದ್ದಲ್ಲಿ ಮನುಷ್ಯ ಏನೂ ಸಾಧಿಸಲಾರ, ಅದೂ ಸೆಕ್ಸ್ ಲೈಫ್‌ಗಾದರೂ ಸರಿ!

ಗಂಡನ ವರ್ತನೆ ಬಗ್ಗೆ ಗಮನವಿರಲಿ : ಗಂಡನ ವರ್ತನೆ ಅನುಮಾನ ಬರ್ತಿದೆ, ಇದ್ರಲ್ಲಿ ಪ್ರಾಮಾಣಿಕತೆ ಎಷ್ಟು, ನಾಟಕವೆಷ್ಟು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದಾದ್ರೆ ನೀವು ಕೆಲ ವಾರಗಳ ಕಾಲ ಗಂಡನ ವರ್ತನೆಯನ್ನು ಗಮನಿಸಿ ಎನ್ನುತ್ತಿದ್ದಾರೆ ತಜ್ಞರು.  ಸಂಬಂಧ ಬಲಪಡಿಸಲು ಆತ ಏನೆಲ್ಲ ಮಾಡ್ತಿದ್ದಾನೆ ಎಂಬುದನ್ನು ನೋಟ್ ಮಾಡಿ. ಪ್ರೀತಿಯಿಂದ ಪ್ರಯತ್ನ ನಡೆಸುತ್ತಿದ್ದರೆ ನೀವು ಅವರನ್ನು ಕಣ್ಮುಚ್ಚಿ ಒಪ್ಪಿಕೊಳ್ಳಬಹುದು. ಒಂದ್ವೇಳೆ ಈ ಪ್ರಯತ್ನನ ಒತ್ತಡದಿಂದ ಕೂಡಿದೆ, ಬಲವಂತಕ್ಕೆ ಕಷ್ಟಪಟ್ಟು ಮಾಡ್ತಿದ್ದಾನೆ ಎಂದಾದ್ರೆ ಅದು ತನ್ನ ತಪ್ಪನ್ನು ಕಡಿಮೆ ಮಾಡುವ ಪ್ರಯತ್ನ ಎಂದು ನೀವು ಅರ್ಥೈಸಿಕೊಳ್ಳಬಹುದು.  ಪತಿ ಸಂಪೂರ್ಣ ಬದಲಾಗಿಲ್ಲ ಎಂಬ ಅಭಿಪ್ರಾಯ ನಿಮಗೆ ಬಂದ್ರೆ ಅವರನ್ನು ಬದಲಿಸುವುದು ಹೇಗೆ ಎನ್ನುವ ಬಗ್ಗೆ ನೀವು ಆಲೋಚನೆ ಮಾಡಿ. ನಿಮಗೆ ಆಪ್ತರೆನ್ನಿಸುವವರ ಜೊತೆ ಮಾತನಾಡಿ ಈ ಬಗ್ಗೆ ಸಲಹೆ ಪಡೆಯಿರಿ. ದಾಂಪತ್ಯ ಮುರಿದುಕೊಳ್ಳುವುದು ಸುಲಭ. ಆದ್ರೆ ಮತ್ತೆ ಜೋಡಿಸೋದು ಕಷ್ಟ. ಹಾಗಾಗಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಬಾರಿ ಆಲೋಚನೆ ಮಾಡಿ ಎನ್ನುತ್ತಾರೆ ತಜ್ಞರು. 
 

click me!