ಬ್ರೇಕಪ್ ಲೆಟರ್ ಬರೆದ ಹುಡುಗ, ವಾವ್ಹ್‌..ಮತ್ತೆ ಲವ್ವಾಯ್ತು ಅಂದ್ಲು ಹುಡುಗಿ!

By Vinutha Perla  |  First Published Mar 2, 2023, 1:02 PM IST

ದೀರ್ಘಕಾಲದವರೆಗೆ ರಿಲೇಷನ್‌ ಶಿಪ್‌ನಲ್ಲಿದ್ದ ನಂತರ, ಈ ಸಂಬಂಧವು ಹೆಚ್ಚು ಕಾಲ ಉಳಿಯೋದಿಲ್ಲ ಎಂದು ಅನಿಸಿದಾಗ ಹುಡುಗ-ಹುಡುಗಿ ಬ್ರೇಕಪ್ ಮಾಡ್ಕೊಳ್ತಾರೆ. ಸಾಮಾನ್ಯವಾಗಿ ಲೆಟ್ಸ್ ಬ್ರೇಕಪ್ ಅನ್ನೋ ಮಾತಿನಲ್ಲೇ ಪ್ರೇಮಿಗಳು ದೂರ ದೂರವಾಗಿ ಬಿಡ್ತಾರೆ. ಆದ್ರೆ ಇಲ್ಲೊಬ್ಬ ಹುಡುಗ ಬ್ರೇಕಪ್ ಮಾಡ್ಕೊಂಡಿರೋ ರೀತಿ ನೋಡಿದ್ರೆ ನೀವು ನಿಬ್ಬೆರಗಾಗುವುದು ಖಂಡಿತ.


ಪ್ರೀತಿ ಎಷ್ಟು ಮಧುರವಾದ ಭಾವನೆಯೋ, ಬ್ರೇಕಪ್‌ ಅಷ್ಟೇ ಯಾತನೆ ಕೊಡುತ್ತದೆ. ಆದರೆ ಪ್ರೀತಿಯಲ್ಲಿ ಬ್ರೇಕಪ್ ಆಗೋದು ಸಾಮಾನ್ಯ. ದೀರ್ಘಕಾಲದವರೆಗೆ ರಿಲೇಷನ್‌ ಶಿಪ್‌ನಲ್ಲಿದ್ದ ನಂತರ, ಈ ಸಂಬಂಧವು ಹೆಚ್ಚು ಕಾಲ ಉಳಿಯೋದಿಲ್ಲ ಎಂದು ಅನಿಸಿದಾಗ ಹುಡುಗ-ಹುಡುಗಿ ಬ್ರೇಕಪ್ ಮಾಡ್ಕೊಳ್ತಾರೆ. ಸಾಮಾನ್ಯವಾಗಿ ಲೆಟ್ಸ್ ಬ್ರೇಕಪ್ ಅನ್ನೋ ಮಾತಿನಲ್ಲೇ ಪ್ರೇಮಿಗಳು ದೂರ ದೂರವಾಗಿ ಬಿಡ್ತಾರೆ. ಆದರೆ ಕೆಲವೊಬ್ಬರು ಬ್ರೇಕಪ್‌ ಮಾಡಿಕೊಳ್ತಾ, ಮತ್ತೆ ಪ್ಯಾಚಪ್ ಮಾಡ್ಕೊಂಡು ನರಕಯಾತನೆ ಅನುಭವಿಸ್ತಾರೆ. ಆದ್ರೆ ಇಲ್ಲೊಬ್ಬ ಪ್ರೇಮಿ ಬ್ರೇಕಪ್ ಮಾಡ್ಕೊಂಡಿರೋ ರೀತಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. 

ವಿಲನ್ ಎಂಬಾತ ಬ್ರೇಕಪ್ ಮಾಡಿಕೊಂಡಾಗ ಡಾಕ್ಯುಮೆಂಟ್‌ನ್ನು ಸಹ ಮಾಡಿಸಿಕೊಂಡಿದ್ದಾನೆ. ಈ ವಿಲಕ್ಷಣವಾದ ಪೋಸ್ಟ್‌ನ್ನು ಟ್ವಿಟರ್‌ನಲ್ಲಿ ಸಹ ಪೋಸ್ಟ್ ಮಾಡಿದ್ದಾನೆ. ಯುವಕ ಟ್ವಿಟರ್‌ನಲ್ಲಿ ನಾನು ಈಗ ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡಿದ್ದೇನೆ ಎಂದು ಡಾಕ್ಯುಮೆಂಟ್‌ ಫೋಟೋವನ್ನು ಹಂಚಿಕೊಂಡಿದ್ದಾನೆ.

Guys she said yes, and it's now official pic.twitter.com/u0r2wW3o5H

— Velin (@velin_s)

Latest Videos

undefined

Breakup ಬಳಿಕ ಪ್ರತಿಯೊಬ್ಬ ಗಂಡಸ್ರೂ ಮಾಡೋ ಕೆಲಸಾನೇ ಇದು!

ತನ್ನ ಮಾಜಿ ಸಂಗಾತಿಗೆ ಬರೆದ ಪತ್ರದಲ್ಲಿ, 'ವೆಲಿನ್ ಸಂಬಂಧದಲ್ಲಿ (Relationship) ಬ್ರೇಕಪ್ ಮಾಡಿಕೊಳ್ಳುತ್ತಿರುವ ತನ್ನ ನಿರ್ಧಾರವನ್ನು ವಿವರಿಸಿದ್ದಾನೆ. 'ಈ ಪತ್ರವು ನಿಮಗೆ ಖುಷಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಕಾಡುತ್ತಿರುವ ಸಮಸ್ಯೆಯನ್ನು ಪರಿಹರಿಸಲು ನಾನು ಸ್ವಲ್ಪ ಸಮಯ (Time) ತೆಗೆದುಕೊಳ್ಳಬೇಕೆಂದು ಬಯಸುತ್ತೇನೆ. ನಮ್ಮ ಸಂಬಂಧವನ್ನು ಮರುಪರಿಶೀಲಿಸಲು ನನಗೆ ಪ್ರೇರೇಪಿಸಿದ ಸಂಗತಿಯ ಬಗ್ಗೆ ನನಗೆ ಇತ್ತೀಚೆಗೆ ಅರಿವಾಯಿತು. ಹೀಗಾಗಿ ನಾನು ಈ ಸಂಬಂಧದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ. ನಿಮಗೆ ಈ ವಿಷಯವನ್ನು ತಿಳಿಸಲು ನಾನು ವಿಷಾದಿಸುತ್ತೇನೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದಲ್ಲದೆ, ನನ್ನ ನಿರ್ಧಾರವು ಅವಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅವನು ಹುಡುಗಿಗೆ ಭರವಸೆ ನೀಡಿದನು. ವೆಲಿನ್ ತನ್ನ ಸಂಗಾತಿ (Partner)ಯೊಂದಿಗಿನ ಕೊನೆಯ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಸಹ ಪೋಸ್ಟ್ ಮಾಡಿದ್ದಾನೆ. ಡಾಕ್ಯುಮೆಂಟ್‌ಗೆ ಸಹಿ ಮಾಡಿ ತನಗೆ ಕಳುಹಿಸಲು ಅವನು ಪ್ರೇಯಸಿಯ ಬಳಿ ಕೇಳಿಕೊಂಡನು. ವೆಲಿನ್ ಅವರ ಪತ್ರವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಯನ್ನು ಹುಟ್ಟುಹಾಕಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಭರ್ತಿ 244k ವೀಕ್ಷಣೆ ಗಳಿಸಿದೆ.

Break Up: ಹೃದಯದ ಮೇಲೂ ಬೀರುತ್ತೆ ಗಂಭೀರ ಪರಿಣಾಮ

ಜನರು ಇದಕ್ಕೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, 'ಇದು ಬ್ರೇಕಪ್ ಮಾಡಿಕೊಳ್ಳುವ ಸರಿಯಾದ ವಿಧಾನವಾಗಿದೆ' ಎಂದು ಹೇಳಿದ್ದಾರೆ. ಇನ್ನೊಬ್ಬರು 'ಯಾರಾದರೂ ನನಗೆ ಇದನ್ನು ಕಳುಹಿಸಿದರೆ, ನಾನು ಮತ್ತೆ ನನ್ನೊಂದಿಗೆ ಮಾತನಾಡುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಈ ವ್ಯಕ್ತಿ ನಾನು ಹಿಂದೆ ತಿಳಿದಿರುವ ಎಲ್ಲಾ ಜನರಿಗಿಂತಲೂ ಉತ್ತಮ ಸ್ವಭಾವವವನ್ನು (Behaviour) ಹೊಂದಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

ಸಂಗಾತಿ ಈ ತಪ್ಪು ಮಾಡ್ತಿದ್ರೆ ಗುಡ್ ಬೈ ಹೇಳೋದೇ ಬೆಸ್ಟ್
ಸುಳ್ಳಿನ ಮನೆ: ಸಂಗಾತಿ (Spouse ) ಮಧ್ಯೆ ಸುಳ್ಳು ಬರಬಾರದು. ಸಂಗಾತಿ ಅನೇಕ ಬಾರಿ ನಿಮ್ಮ ಬಳಿ ಸುಳ್ಳು ಹೇಳಿ ಸಿಕ್ಕಿಬೀಳ್ತಿದ್ದರೆ, ನೀವು ಮುಂದೆ ಕ್ಷಮಿಸುವ ಅಗತ್ಯವಿಲ್ಲ. ತಪ್ಪನ್ನು ಕ್ಷಮಿಸಿದ್ರೆ ಮತ್ತೆ ಅದೇ ಸುಳ್ಳು ರಿಪಿಟ್ ಆಗ್ಬಹುದು. ಇದ್ರಿಂದ ಸಂಬಂಧ ಹಳಸಬಹುದು. ಹಾಗಾಗಿ ಆರಂಭದಲ್ಲಿಯೇ ನೇರವಾಗಿ ಮಾತನಾಡಿ. ಇದ್ರಿಂದಲೂ ಸಮಸ್ಯೆ ಬಗೆಹರಿದಿಲ್ಲವೆಂದ್ರೆ ಆ ಸಂಬಂಧದಿಂದ ಹೊರಗೆ ಬನ್ನಿ. ಇಲ್ಲವೆಂದ್ರೆ ನಿಮ್ಮ ಸಂಗಾತಿ ಸುಳ್ಳಿನ ಮನೆಯಲ್ಲಿ ನಿಮ್ಮನ್ನು ನಾಶ ಮಾಡಬಹುದು. 

ಕರೆ –ಸಂದೇಶಕ್ಕೆ ನಿರ್ಲಕ್ಷ್ಯ: ಕೆಲಸ (Work) ದ ಒತ್ತಡದಲ್ಲಿ ಜನರು ಫೋನ್ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಸಂದೇಶಗಳನ್ನು ಓದಲು ಸಮಯವಿರುವುದಿಲ್ಲ. ಸಂಬಂಧದಲ್ಲಿ ಈ ಸಮಸ್ಯೆ ಸಾಂದರ್ಭಿಕವಾಗಿ ಸಂಭವಿಸಿದರೆ ಅದು ಸರಿ. ಆದರೆ ನಿಮ್ಮ ಸಂಗಾತಿ ಇದನ್ನು ನಿರಂತರವಾಗಿ ಮಾಡುತ್ತಿದ್ದರೆ, ಮೊದಲು ಕಾರಣವನ್ನು ತಿಳಿಯಲು ಪ್ರಯತ್ನಿಸಿ. 

ಮಾಜಿ ಬಗ್ಗೆ ನಿರಂತರ ಮಾತು: ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ಮಾಜಿ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಎಚ್ಚೆತ್ತುಕೊಳ್ಳಿ. ನಿಮ್ಮ ಸಂಗಾತಿಗೆ ನೀವು ಇಷ್ಟವಾಗ್ತಿಲ್ಲ ಎಂದೇ ಇದರ ಅರ್ಥ. ಸಂಗಾತಿ ನಿಮ್ಮನ್ನು ನಿರ್ಲಕ್ಷಿಸುತ್ತಿರುವ ಕಾರಣಕ್ಕೆ ಮಾಜಿ ಹೆಸರು ಬರ್ತಿದೆ. ಈ ಸಂಬಂಧದಲ್ಲಿ ಮುಂದುವರೆದ್ರೆ ಪ್ರಯೋಜನವಿಲ್ಲ.

ಪುಟ್ಟ ವಿಷ್ಯಕ್ಕೆ ದೊಡ್ಡ ಜಗಳ: ನಿಮ್ಮ ಸಂಗಾತಿ ಪುಟ್ಟ ವಿಷ್ಯಕ್ಕೂ ನಿಮ್ಮ ಜೊತೆ ಜಗಳವಾಡ್ತಿದ್ದಾರೆ ಎಂದಾದ್ರೆ ನಿಮ್ಮ ಮೇಲೆ ಅವರಿಗಿರುವ ಭಾವನೆ ಬದಲಾಗಿದೆ ಎಂಬ ಸೂಚನೆಯಾಗಿದೆ. ಸಂಗಾತಿ ಮನಸ್ಸಿನಲ್ಲಿ ಬೇರೆ ಏನೋ ನಡೆಯುತ್ತಿದೆ ಎಂಬ ಸಂಕೇತವಿದು. ಆದಷ್ಟು ಬೇಗ ಪಾಲುದಾರರ ಜೊತೆ ಮಾತನಾಡಿ. ಜಗಳದ ಹಿಂದಿನ ಕಾರಣ ಅಥವಾ ಸಮಸ್ಯೆ ತುಂಬಾ ಸೌಮ್ಯವಾಗಿರುತ್ತದೆ, ಇಬ್ಬರೂ ಕುಳಿತು ಅದನ್ನು ಪರಿಹರಿಸಬಹುದು. ಆದರೆ ಮಾತುಕತೆ ನಂತ್ರವೂ ಇದು ಬಗೆಹರಿಯುತ್ತಿಲ್ಲ, ಸಂಗಾತಿ ವರ್ತನೆ ಬದಲಾಗ್ತಿಲ್ಲ ಎಂದಾದ್ರೆ ದೂರವಾಗುವ ಬಗ್ಗೆ ಆಲೋಚನೆ ಮಾಡೋದು ಒಳ್ಳೆಯದು.

click me!