
ಕಾನ್ಪುರ(ಏ.14) ಪತಿ ಕೆಲಸಕ್ಕೆ ತೆರಳುತ್ತಿದ್ದಂತೆ ಮನೆಯಲ್ಲಿದ್ದ ಪತ್ನಿಯ ಕೆಲಸ ಶುರುವಾಗುತ್ತಿತ್ತು. ಪಕ್ಕದ ಮನೆ ವ್ಯಕ್ತಿ ಈಕೆಯ ಜೊತೆ ಕಳೆಯುತ್ತಿದ್ದ. ಇದು ಹಲವು ದಿನಗಳಿಂದ ನಡೆಯುತ್ತಿತ್ತು. ಹಾಗಂತ ಎಲ್ಲಾ ಘಟನೆಗಳಲ್ಲಿರುವಂತೆ ಇಲ್ಲಿ ಪತಿಗೆ ಅನುಮಾನ ಇರಲಿಲ್ಲ. ಎಂದಿನಂತೆ ಕೆಲಸಕ್ಕೆ ತೆರಳಿದ ಪತಿ ದಿಢೀರ್ ವಾಪಾಸ್ಸಾಗಿದ್ದಾನೆ. ಮನೆಗೆ ಬಂದರೆ ಪತ್ನಿ ಹಾಗೂ ಪಕ್ಕದ ಮನೆ ವ್ಯಕ್ತಿ ಇಬ್ಬರೂ ಒಂದೇ ಮಂಚದಲ್ಲಿದ್ದರು. ಈ ದೃಶ್ಯ ನೋಡಿದ ಗಂಡನ ಆಕ್ರೋಶ ಹೆಚ್ಚಾಗಿದೆ. ಮೊದಲೇ ಬಟ್ಟೆ ದೂರ ಸರಿದಿತ್ತು. ಹಿಂದೂ ಮುಂದು ನೋಡದ ಗಂಡನ, ಪಕ್ಕದ ಮನೆಯವನ್ನು ಖಾಸಗಿ ಅಂಗವನ್ನೇ ಕಚ್ಚಿ ತುಂಡರಿಸಿದ್ದಾನೆ.
ಒಂದು ವರ್ಷದ ಹಿಂದೆ ಮದುವೆ
ಈ ಘಟನೆ ನಡೆದಿರುವುದು ಕಾನ್ಪುರದಲ್ಲಿ. ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಕಾನ್ಪುರದ ಬಾಪುರ್ವಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಪತಿ ಕೆಲಸಕ್ಕೆ ತೆರಳಿದರೆ ಒಂದೆರೆಡು ದಿನವಾಗುತ್ತೆ ಮನೆಗೆ ಮರಳಲು. ಇದರ ನಡುವೆ ಪಕ್ಕದ ಮನೆಯವನೊಬ್ಬ ಆಂಟಿಗೆ ಕಾಳು ಹಾಕಿದ್ದ. ಇತ್ತ ಪತಿ ಯಾವಾಗಲೂ ಮನೆಯಲ್ಲಿ ಇರಲ್ಲ, ಈ ಕಾಳಿಗೆ ಈಕೆ ಕೂಡ ಬಿದ್ದಿದ್ದಳು. ಇಲ್ಲಿ ಕಾಳು ಹಾಕಿದ್ದು, ಕಾಳು ಹೆಕ್ಕಿದ್ದು ಪ್ರೀತಿಗಾಗಿ ಅಲ್ಲ, ಇದು ಮುಂದಿನ ಹಂತಕ್ಕಾಗಿ ಆಗಿತ್ತು ಅನ್ನೋದು ಇಬ್ಬರಿಗೂ ಅರಿವಿತ್ತು. ಹೀಗಾಗ ಇವರ ಸಂಬಂಧ ತಡಮಾಡದೇ ಮಂಚಕ್ಕೆ ಶಿಫ್ಟ್ ಆಗಿತ್ತು.
ಈ ರಾಶಿಗೆ ಅಕ್ರಮ ಸಂಬಂಧದಲ್ಲಿ ಖುಷಿ ಸಿಗುತ್ತೆ, ಅನೈತಿಕ ಸಂಬಂಧದ ಆಸೆ ಜಾಸ್ತಿ
ಗಂಡ ಕೆಲಸಕ್ಕೆ ಪತ್ನಿ ಮಂಚಕ್ಕೆ
ಗಂಡ ಕೆಲಸಕ್ಕೆ ತೆರಳಿದರೆ ಬಳಿಕ ವಾಪಾಸ್ ಆಗಲು ಎರಡಿಂದ ಮೂರು ದಿನ ಆದರೂ ಬೇಕು. ಮೊದಲೇ ಬಾಡಿಗೆ ಮನೆ. ಹೀಗಾಗಿ ಊರವರುು ಗಮನಿಸಲ್ಲ, ಅಕ್ಕ ಪಕ್ಕದವರು ಊಸಾಬರಿಗೆ ಬರಲ್ಲ.ಇದರಿಂದ ಪಕ್ಕದ ಮನೆಯವ ಈಕೆಯ ಮನೆಯಲ್ಲೇ ಖಾಯಂ ಆಗಿದ್ದ. ಆದರೆ ಎರಡು ದಿನಗಳ ಹಿಂದೆ ಪತಿ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಸಂಜೆ ಹೊರಟಿದ್ದಾನೆ. ಮರಳಿ ಬರುವಾಗ ಎರಡುು ದಿನವಾಗಲಿದೆ. ಜೋಪಾನ , ಏನೇ ಇದ್ದರೂ ಕರೆ ಮಾಡಲು ಸೂಚಿಸಿದ್ದಾನೆ. ಆದರೆ ಪತ್ನಿ ಕರೆ ಮಾಡಿದ್ದು ಮತ್ತದೇ ಪಕ್ಕದ ಮನೆಯವನಿಗೆ.
ಎಂದಿನಂತೆ ಕೆಲಸ ಕಾರ್ಯಗಳು ನಡೆದಿದೆ. ಬಳಿಕ ಹಾಗೇ ಮಲಗಿದ್ದಾರೆ. ಆದರೆ ಕೆಲಸಕ್ಕೆ ಹೋದ ಗಂಡ ಕೆಲ ಕಾರಣಗಳಿಂದ ಕೆಲಸ ರದ್ದಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಮನೆಗೆ ಬಂದಿದ್ದಾನೆ. ರಾತ್ರಿಯಾಗಿದ್ದ ಕಾರಣ ಪತ್ನಿ ಮಲಗಿರುತ್ತಾಳೆ. ಹೀಗಾಗಿ ಆಕೆಯನ್ನು ಎಬ್ಬಿಸುವುದು ಬೇಡ ಎಂದು ತನ್ನಲ್ಲಿರುವ ಕೀ ಬಳಸಿ ಬಾಗಿಲು ತೆರೆದು ಕೋಣೆಯ ಲೈಟ್ ಹಾಕಿದರೆ ಪತ್ನಿ ಹಾಗೂ ಪಕ್ಕದ ಮನೆಯ ವ್ಯಕ್ತಿ ಇಬ್ಬರು ಒಂದೇ ಮಂಚದಲ್ಲಿ ಮಲಗಿದ್ದಾರೆ. ಈ ದೃಶ್ಯ ನೋಡಿ ಸಿಟ್ಟು, ಆಕ್ರೋಶ ಒಟ್ಟಿಗೆ ಬಂದಿದೆ.
ಮರ್ಮಾಂಗದ ಮೇಲೆ ದಾಳಿ
ಪಕ್ಕದ ಮನೆಯವನ ಮೇಲೆ ದಾಳಿ ಮಾಡಲು ಕೈಗೆ ಏನು ಸಿಗುತ್ತೆ ಎಂದು ನೋಡಿದ್ದಾನೆ. ಆದರೆ ತಕ್ಷಣಕ್ಕೆ ಏನು ಸಿಕ್ಕಿಲ್ಲ. ಇನ್ನು ಇಬ್ಬರ ಮೇಲೂ ಬಟ್ಟೆ ಇಲ್ಲ. ಲೈಟ್ ಹಾಕುತ್ತಿದ್ದಂತೆ ಇಬ್ಬರು ಎಚ್ಚರಗೊಂಡಿದ್ದಾನೆ. ಅತ್ತ ಇತ್ತ ಓಡಲು ಆರಂಭಿಸಿದ್ದಾರೆ. ಪಕ್ಕದ ಮನೆಯವನ್ನು ಹಿಡಿದ ಗಂಡ ಆತನ ಮರ್ಮಾಂಗವನ್ನೇ ಕಚ್ಚಿದ್ದಾನೆ. ಗಂಡನ ದಾಳಿಗೆ ಪಕ್ಕದ ಮನೆಯವನ್ನು ಮರ್ಮಾಂಗದಲ್ಲಿ ತೀವ್ರವಾಗಿ ಗಾಯವಾಗಿದೆ. ಅಲ್ಲಿಂದ ಓಡಲು ಯತ್ನಿಸಿದ್ದಾನೆ. ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪೊಲೀಸರು ಆತನ ಪರಿಸ್ಥಿತಿ ನೋಡಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಈತ ಚೇತರಿಸಿಕೊಳ್ಳುತ್ತಿದ್ದಾನೆ. ಆದರೇ ಯಾವುದೇ ದೂರು ದಾಖಾಗಿಲ್ಲ. ಹೀಗಾಗಿ ಪೊಲೀಸರು ದೂರಿಗಾಗಿ ಕಾಯುತ್ತಿದ್ದಾರೆ.
ಪತ್ನಿಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದ್ರೆ ಅದ್ರ ಹೊಣೆ ಯಾರದ್ದು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.