ಹಾಸಿಗೇಲಿ ಪತಿ ಮಾಡಿದ 'ಆ' ಕೆಲಸಕ್ಕೆ ಡಿವೋರ್ಸ್‌ ಬೇಕು ಅಂತಿದ್ದಾಳೆ ಈ ಮಹಿಳೆ!

By Roopa Hegde  |  First Published Jul 31, 2024, 11:19 AM IST

ಈಗಿನ ದಿನಗಳಲ್ಲಿ ವಿಚ್ಛೇದನ ಸಂಖ್ಯೆ ಹೆಚ್ಚಾಗಿದೆ. ಈ ಮಹಿಳೆ ಕೂಡ ಪತಿಯಿಂದ ದೂರವಾಗುವ ಆಲೋಚನೆ ಮಾಡ್ತಿದ್ದಾಳೆ. ಅದಕ್ಕೆ ಕಾರಣ ಆತ ಹಾಸಿಗೆಯಲ್ಲಿ ಮಾಡುವ ಈ ಕೆಲಸ ಅಂತ ಮಹಿಳೆ ಪೋಸ್ಟ್ ಹಾಕಿದ್ದು, ಅದು ವೈರಲ್ ಆಗಿದೆ.
 


ಸುಖ ನಿದ್ರೆ ಬರ್ಬೇಕೆಂದ್ರೆ ಹಾಸಿಗೆ ಕ್ಲೀನ್ ಇರ್ಬೇಕು. ಆಗಾಗ ಬೆಡ್ ಶೀಟ್ ಸ್ವಚ್ಛಗೊಳಿಸದೆ ಹೋದ್ರೆ ಖಾಯಿಲೆ ನಮ್ಮನ್ನು ಮುತ್ತಿಕೊಳ್ಳುತ್ತೆ. ನಿನ್ನೆ ನೀವು ಬೆಡ್ ಶೀಟ್ ಕ್ಲೀನ್ ಮಾಡಿದ್ದು, ಇಂದು ಸಂಗಾತಿ ಬೆಡ್ ಶೀಟ್ ಕೊಳಕು ಮಾಡಿದ್ರೆ ನಿಮಗೆ ಏನನ್ನಿಸುತ್ತೆ? ಒಂದು ಎರಡು ದಿನ ನೀವು ಅದನ್ನು ಸಹಿಸಬಹುದು. ಪ್ರತಿ ದಿನ ಇದೇ ಆದ್ರೆ? ಈ ಮಹಿಳೆ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಆಕೆಗೆ ಕ್ಲೀನ್ ಹಾಸಿಗೆ ಮೇಲೆ ಮಲಗುವ ಭಾಗ್ಯವೇ ಇಲ್ಲ. ಅದಕ್ಕೆ ಕಾರಣ ಆಕೆ ಗಂಡ. ಹಾಸಿಗೆ ಮೇಲೆ ಆತ ಮಾಡುವ ಕೆಲಸ ಈಗ ಇಬ್ಬರ ಮಧ್ಯೆ ವಿಚ್ಛೇದನಕ್ಕೆ ದಾರಿ ಮಾಡಿಕೊಡುವಂತಿದೆ.

ದಂಪತಿ (Couple) ಮಧ್ಯೆ ಹೊಂದಾಣಿಕೆ ಇರ್ಲೇಬೇಕು. ಹೊಂದಾಣಿಕೆ (Adjustment) ಎರಡೂ ಕಡೆಯಿಂದ ಬಂದ್ರೆ ಮಾತ್ರ ಚೆಂದ. ಅದೇ ಒಬ್ಬರೇ ಪದೇ ಪದೇ ಹೊಂದಾಣಿಕೆ ಮಾಡಿಕೊಳ್ತಿದ್ದರೆ ದಾಂಪತ್ಯ ಉಸಿರುಗಟ್ಟಿಸಲು ಶುರುವಾಗುತ್ತೆ. ಈಗಿನ ದಿನಗಳಲ್ಲಿ ವಿಚ್ಛೇದನ (Divorce) ಕ್ಕೆ ಈ ಹೊಂದಾಣಿಕೆ ಕೊರತೆ ಕೂಡ ಮುಖ್ಯ ಕಾರಣವಾಗ್ತಿದೆ. ಈ ಮಹಿಳೆ ಕೂಡ ಅದೇ ಮಾತನ್ನು ಹೇಳ್ತಿದ್ದಾಳೆ. ಎಷ್ಟೇ ಹೇಳಿದ್ರೂ ಗಂಡ ತನ್ನ ಕೆಟ್ಟ ಅಭ್ಯಾಸವನ್ನು ಬಿಡ್ತಿಲ್ಲ. ಇದ್ರಿಂದ ಹಾಸಿಗೆ ಕೊಳಕಾಗ್ತಿದೆ. ಇದ್ರಿಂದ ಮಹಿಳೆಗೆ ಕಿರಿಕಿರಿಯಾಗ್ತಿದೆ.  ಕೋಪ ನೆತ್ತಿಗೇರಿ ವಿಚ್ಛೇದನ ನೀಡ್ಬೇಕು ಅನ್ನಿಸುತ್ತೆ. ಪರಿಸ್ಥಿತಿ ಕೈ ಮೀರಿದ್ರೆ ವಿಚ್ಛೇದನ ನೀಡ್ತೇನೆ ಎಂದು ಮಹಿಳೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆ ಗಂಡ ಹಾಸಿಗೆ ಒದ್ದೆ ಮಾಡುವ ಕೆಲಸ ಮಾಡ್ತಿಲ್ಲ. ಬದಲಾಗಿ ಹಾಸಿಗೆ ಕೊಳಕು ಮಾಡ್ತಿದ್ದಾನೆ. 

Latest Videos

ನೀ ನಂಗೆ ಅಲ್ಲವಾ ಎನ್ನುತ್ತಲೇ… ಸ್ಪೆಷಲ್ ಫೋಟೋ ಜೊತೆ ಆತ್ಮ ಸಂಗಾತಿ ಬಗ್ಗೆ ತಿಳಿಸಿದ ಶ್ರುತಿ ಹರಿಹರನ್!

ಸಾಮಾಜಿಕ ಜಾಲತಾಣ ಮಮ್ಸ್‌ನೆಟ್‌ನಲ್ಲಿ ಮಹಿಳೆ ಪೋಸ್ಟ್ ಹಂಚಿಕೊಂಡಿದ್ದಾಳೆ. ಅದ್ರಲ್ಲಿ ಗಂಡನ ಅಭ್ಯಾಸ ಏನು, ಯಾಕೆ ವಿಚ್ಛೇದನ ನೀಡುವ ಆಲೋಚನೆ ಮಾಡ್ತಿದ್ದೇನೆ ಎಂಬುದನ್ನು ಹೇಳಿದ್ದಾಳೆ.

ಕೆಲಸ ಮಾಡಿ ಮನೆಗೆ ಬರುವ ನಾವು ಡ್ರೆಸ್ ಬದಲಿಸಿ ಹಾಸಿಗೆಗೆ ಹೋಗ್ತೇವೆ. ಆದ್ರೆ ಈ ಮಹಿಳೆ ಪತಿ, ಅದೇ ಡ್ರೆಸ್ ನಲ್ಲಿ ಬೆಡ್ ಗೆ ಬರ್ತಾನೆ. ಆತ ಬಾಣಸಿಗ. ಎಣ್ಣೆ, ಆಹಾರದ ಕೊಳಕು ಆತನ ಬಟ್ಟೆಗೆ ಅಂಟಿರುತ್ತದೆ. ಅದೇ ಡ್ರೆಸ್ ನಲ್ಲಿ ಹಾಸಿಗೆಗೆ ಬಂದು ಮಲಗ್ತಾನೆ. ಇದ್ರಿಂದ ಬೆಡ್ ಶೀಟ್ ಕೊಳಕಾಗ್ತಿದೆ. ನಿನ್ನೆಯಷ್ಟೆ ಬೆಡ್ ಶೀಟ್ ಕ್ಲೀನ್ ಮಾಡಿದ್ದೆ. ಆದ್ರೆ ಪತಿ ತನ್ನ ಕೊಳಕು ಬಟ್ಟೆಯಲ್ಲೇ ಹಾಸಿಗೆಗೆ ಬಂದಿದ್ದಾನೆ ಎಂದು ಮಹಿಳೆ ಪೋಸ್ಟ್ ನಲ್ಲಿ ಬರೆದಿದ್ದಾಳೆ.

ಅನೇಕ ಬಾರಿ ನನ್ನ ಪತಿಗೆ ಬಟ್ಟೆ ಬದಲಿಸುವಂತೆ ಸಲಹೆ ನೀಡಿದ್ದೇನೆ. ಆದ್ರೆ ಆತ ನನ್ನ ಮೇಲೆ ರೇಗಾಡ್ತಾನೆಯೇ ವಿನಃ ತನ್ನ ಸ್ವಭಾವ ಬದಲಿಸಿಕೊಂಡಿಲ್ಲ. ನನ್ನ ಗಂಡ ಬಾಲ್ಯವನ್ನು ಕೊಳಕಿನಲ್ಲಿ ಕಳೆದಿದ್ದಾನೆ. ಅದೇ ಅಭ್ಯಾಸ ಈಗ್ಲೂ ಮುಂದುವರೆದಿದೆ. ಅವನ ಈ ಸ್ವಭಾವ ಈಗ ದಾಂಪತ್ಯದ ಮೇಲೆ ಪರಿಣಾಮ ಬೀರುತ್ತಿದೆ. ನನಗೆ ವಿಚ್ಛೇದನ ನೀಡುವ ಉದ್ದೇವಿಲ್ಲ. ಆದ್ರೆ ಪತಿಯ ಈ ಸ್ವಭಾವದಿಂದ ನನಗೆ ಮಿತಿಮೀರಿದ ಕೋಪ ಬರುತ್ತದೆ. ಅವನ ಅಭ್ಯಾಸಕ್ಕೆ ಹೊಂದಿಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಮಹಿಳೆ ಬರೆದಿದ್ದಾಳೆ.

ಸೀರೆ ಕೊಡಿಸದ ಗಂಡನ ಪೊಲೀಸ್ ಠಾಣೆಗೆ ಮೆಟ್ಟಿಲೇರಿಸಿದ ಪತ್ನಿ, ಸಂಧಾನ ಮತ್ತಷ್ಟು ರೋಚಕ!

ಆಕೆ ಬರೆದ ಈ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಆಲೋಚನೆ ಮಾಡಲೂ ನನಗೆ ಸಾಧ್ಯವಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು ಬಟ್ಟೆ ಕೊಳಕಾಗಿದೆ ಎಂದಾಗ ಫ್ರೆಶ್ ಆಗಿ ಹಾಸಿಗೆಗೆ ಬರಬೇಕು ಎಂಬುದು ಅವರಿಗೆ ತಿಳಿದಿರಬೇಕು. ಅವರು ತಮ್ಮ ಸ್ವಭಾವವನ್ನು ಬದಲಿಸಿಕೊಳ್ಳದೆ ಹೋದ್ರೆ ನೀವು ಅವರನ್ನು ಬಿಡುವುದು ಒಳ್ಳೆಯದು ಎಂದು ಬರೆದಿದ್ದಾರೆ. ಮನೆಯಲ್ಲೇ ಅವರು ಇಷ್ಟು ಕೊಳಕು ಅಂದ್ರೆ ಇನ್ನು ಕೆಲಸ ಮಾಡುವ ಸ್ಥಳದಲ್ಲಿ ಎಷ್ಟು ಕೊಳಕಿರಬೇಕು ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಅವರ್ಯಾಕೆ ಇಷ್ಟು ಕೊಳಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

click me!