
ನಂಬಿಕೆ,ವಿಶ್ವಾಸದ ಮೇಲೆ ಪ್ರೀತಿ (Love) ನಿಂತಿರುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ, ಮೋಸ ಮಾಡುತ್ತಾನೆ ಎಂಬುದು ಗೊತ್ತಾದಾಗ ಆಗುವ ನೋವು ಅಷ್ಟಿಷ್ಟಲ್ಲ. ಪ್ರೀತಿಯಲ್ಲಿ ಮೋಸ (Cheat) ಹೋದವರ ಆಲೋಚನೆಗಳು ಭಿನ್ನವಾಗಿರುತ್ತವೆ. ಕೆಲವರು ಪ್ರೀತಿಸಿ ಮೋಸ ಮಾಡಿದ ಸಂಗಾತಿ (Partner) ಸುಖವಾಗಿರಲೆಂದು ಅವರನ್ನು ಅವರ ಪಾಡಿಗೆ ಬಿಡುತ್ತಾರೆ. ಮತ್ತೆ ಕೆಲವರು ಹಳೆ ದಿನಗಳನ್ನು ನೆನೆದು ದುಃಖಿಸುತ್ತ ದೇವದಾಸರಾಗ್ತಾರೆ. ಮತ್ತೆ ಕೆಲವರು ಮೋಸಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಪಣ ತೊಡುತ್ತಾರೆ. ಪ್ರೀತಿಯಲ್ಲಿ ಮೋಸ ಹೋದವರು ಹಿಂಸೆಗೆ ಇಳಿದ ಅನೇಕ ಉದಾಹರಣೆಗಳಿವೆ. ಇನ್ನು ಕೆಲ ಬುದ್ಧಿವಂತರು ಸೇಡಿಗೆ ಪ್ರತಿ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಾರೆ. ವಂಚಿಸಿದವರ ಎದುರು ಎದ್ದು ನಿಂತು ಯಶಸ್ವಿ ಪಯಣ ನಡೆಸುತ್ತಾರೆ. ಮತ್ತೊಂದಿಷ್ಟು ಮಂದಿಯ ಕೋಪ ತೀರಿಸಿಕೊಳ್ಳುವ ವಿಧಾನ ಅಚ್ಚರಿ,ಆಘಾತಕಾರಿಯಾಗಿರುತ್ತದೆ. ಲಂಡನ್ ನಲ್ಲಿರುವ ವ್ಯಕ್ತಿಯೊಬ್ಬ ಮೋಸ ಮಾಡಿದ ಪತ್ನಿ (Wife )ಮನಸ್ಸಿಗೆ ಬರೆ ಎಳೆಯಲು ಹಿಡಿದ ದಾರಿ ಸ್ವಲ್ಪ ಭಿನ್ನವಾಗಿದೆ.
ಇದು ಇಂಟರ್ನೆಟ್ ಯುಗ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ವೈಯಕ್ತಿಕ ಬದುಕನ್ನು ಬಿಚ್ಚಿಡುತ್ತಾರೆ. ರೆಡ್ಡಿಟ್ (Reddit) ಸಾಮಾಜಿಕ ಜಾಲತಾಣದಲ್ಲಿ (Social Media) ಬಳಕೆದಾರರೊಬ್ಬರು, ಪ್ರೀತಿಯ ವಿಷಯವನ್ನು ಹಂಚಿಕೊಳ್ಳುವಂತೆ ಪೋಸ್ಟ್ ಒಂದನ್ನು ಹಾಕಿದ್ದರು. ಆ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೊದಲ ಪ್ರೀತಿ, ಮೋಸ, ಸಂಬಂಧದ ಮಧ್ಯೆ ಆದ ಸಮಸ್ಯೆ ಹೀಗೆ ಅನೇಕ ಸಂಗತಿಗಳನ್ನು ಬಳಕೆದಾರರ ಮುಂದಿಟ್ಟಿದ್ದಾರೆ. ಲಂಡನ್ ವ್ಯಕ್ತಿಯೂ ತನ್ನ ಬದುಕಿನಲ್ಲಾದ ಮೋಸ ಹಾಗೂ ಸೇಡಿನ ಕಥೆಯನ್ನು ಹೇಳಿದ್ದಾನೆ. ಆತನ ಕಥೆ ಕೇಳಿದ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಭಲೇ ಹುಡುಗ ಎಂದವರೂ ಇದ್ದಾರೆ.
ಆಗಿದ್ದೇನು : ರೆಡ್ಡಿಟ್ ಬಳಕೆದಾರನ ಪತ್ನಿ,ಆತನಿಗೆ ಮೋಸ ಮಾಡಿದ್ದಾಳಂತೆ. ಪ್ರೀತಿಯಲ್ಲಿ ಆದ ಮೋಸವನ್ನು ಆತನಿಗೆ ಸಹಿಸಲಾಗಲಿಲ್ಲ. ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಆಗ ಆತನ ಕಣ್ಣಿಗೆ ಕಂಡಿದ್ದು ಪತ್ನಿಯ ತಾಯಿ (mother in law) ಅಂದರೆ ಅತ್ತೆ.
30ರ ನಂತರ ಮದುವೆಯಾದರೂ ಲಾಭ ಹಲವಿವೆ
ಇನ್ನೂ ಹತ್ತಿರ…ಹತ್ತಿರವಾದ ಅತ್ತೆ : ಸೇಡಿನ ಯೋಜನೆಯನ್ನು ಯಶಸ್ವಿಗೊಳಿಸಲು ಅತ್ತೆಗೆ ಹತ್ತಿರವಾಗಿದ್ದಾನೆ ಬಳಕೆದಾರ. ಮೊದಲು ಮಾತಿನ ಮೂಲಕ ಶುರುವಾದ ಆಪ್ತತೆ ನಂತರ ಬೆಡ್ ರೂಮಿಗೆ ಬಂದು ನಿಂತಿದೆ. ಪತ್ನಿಯ ತಾಯಿಯ ಮನಸ್ಸು ಕದಿಯಲು ಯಶಸ್ಸಿಯಾಗಿದ್ದಾನೆ. ನಂತರ ಇಬ್ಬರ ಮಧ್ಯೆ ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆದಿದೆ. ಅಳಿಯನ ಮಾತು,ನಡವಳಿಕೆಗೆ ಮನಸೋತ ಅತ್ತೆ,ಮಗಳನ್ನು ಮರೆತಿದ್ದಾಳೆ.
ರೆಡ್ಡಿಟ್ ನಲ್ಲಿ ಬಳಕೆದಾರ ಹೇಳಿದ್ದೇನು ? : ಪತ್ನಿ ಪ್ರೀತಿಯಲ್ಲಿ ಮೋಸ ಮಾಡಿದ ಸಂಗತಿ ನನಗೆ ಬೇಸರ ತಂದಿತ್ತು. ಸೇಡು ತೀರಿಸಿಕೊಳ್ಳಲು ಅತ್ತೆಯನ್ನು ಆಯ್ದುಕೊಂಡೆ. ಮೊದಲು ಅತ್ತೆಗೆ ಹತ್ತಿರವಾದೆ. ನಂತರ ಇಬ್ಬರ ಮಧ್ಯೆ ಸಂಬಂಧ ಬೆಳೆಯಿತು. ಅನೇಕ ಬಾರಿ ನಾವಿಬ್ಬರೂ ಸಂಬಂಧ ಬೆಳೆಸಿದ್ದೇವೆ. ಪತ್ನಿ ಮೋಸಕ್ಕೆ ನಾನು ತಕ್ಕ ಉತ್ತರ ನೀಡಿದ್ದೇನೆಂಬ ಸಮಾಧಾನ ನನಗಿದೆ ಎಂದು ಆತ ಬರೆದುಕೊಂಡಿದ್ದಾನೆ.
ಬಳಕೆದಾರ ಹಿಡಿದ ದಾರಿ ಬಗ್ಗೆ ಕೆಲವರು ಛೀಮಾರಿ ಹಾಕಿದ್ದಾರೆ. ಮತ್ತೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಳಕೆದಾರನೊಬ್ಬ ತನ್ನ ಅನುಭವವನ್ನೂ ಹಂಚಿಕೊಂಡಿದ್ದಾನೆ.
ಸೆಕ್ಸ್ ವೇಳೆ ಕೋಣೆಗೆ ಬಂದ ಗರ್ಲ್ ಫ್ರೆಂಡ್ ತಾಯಿ ..!:
ಈ ಬಳಕೆದಾರ (User)ನಿಗೆ ವಿಚಿತ್ರ ಅನುಭವವಾಗಿದೆಯಂತೆ. ಪ್ರೇಯಸಿ ಜೊತೆ ಹಾಟ್ ಟಬ್ ನಲ್ಲಿ ಬಳಕೆದಾರ ಶಾರೀರಿಕ ಸಂಬಂಧ (Physical Relationship ) ಬೆಳೆಸುತ್ತಿದ್ದನಂತೆ. ಈ ವೇಳೆ ಅಲ್ಲಿಗೆ ಪ್ರೇಯಸಿ ತಾಯಿ ಬಂದಿದ್ದಾಳಂತೆ. ಒಮ್ಮೆ ಮುಜುಗರಕ್ಕೊಳಗಾದ ಬಳಕೆದಾರ,ಮಾಡ್ತಿದ್ದ ಕೆಲಸ ಮುಂದುವರೆಸಿದ್ದಾನಂತೆ. ಅತ್ತೆ ಏನೂ ಆಗಿಲ್ಲವೆನ್ನುವಂತೆ ಮಾತು ಮುಂದುವರೆಸಿದ್ದಳಂತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.