ಲಾಕ್ ಡೌನ್ ಸಂದರ್ಭ ಕೆಲವರಿಗೆ ಸಿಹಿಯಾದರೆ ಇನ್ನು ಕೆಲವರಿಗೆ ಕಹಿ. ದಿನಪೂರ್ತಿ ಹೆಂಗಪ್ಪಾ ಜತೆಗಿರುವುದು ಅನ್ನುವವರ ಆಲೋಚನೆಗೆ ಇಂಬು ಕೊಡಲು ನಾಲ್ಕು ಮಾತುಗಳು.
ನಿಮಗೂ ಚೂರು ಟೈಮ್ ಕೊಡಿ
ಮನೆಯಲ್ಲಿ ಒಟ್ಟಿಗಿದ್ದೇವೆ ಅಂದ ಮಾತ್ರಕ್ಕೆ ಪ್ರತಿಕ್ಷಣ ಜತೆಗೇ ಇರಬೇಕು ಅಂತೇನೂ ಇಲ್ಲ. ಪ್ರತಿಯೊಬ್ಬರಿಗೂ ಅವರವರ ಪರ್ಸನಲ್ ಸಮಯ ಇದ್ದೇ ಇರುತ್ತದೆ ಮತ್ತು ಇರಬೇಕು. ನೀವು ಏನಾದರೂ ಮಾಡುತ್ತಾ ಅಥವಾ ಸುಮ್ಮನೆ ಕುಳಿತಿರುವುದಾದರೂ ನಿಮ್ಮ ಜತೆಗೇ ನೀವು ಸ್ವಲ್ಪ ಸಮಯ ಕಳೆಯಿರಿ.
ಸಂಗಾತಿಗಾಗಿಯೇ ಸಮಯ ಎತ್ತಿಡಿ
ಆಫ್ಟರಾಲ್ ನಾವೆಲ್ಲಾ ಮನುಷ್ಯರು. ಯಾರಾದರೂ ನಮಗೆ ಪ್ರೀತಿ ತೋರಿಸಿದರೆ ನಾವು ಸಂತೋಷದಿಂದ ಬದುಕುತ್ತೇವೆ. ಹಾಗಾಗಿ ನಿಮ್ಮ ಸಂಗಾತಿಗಾಗಿಯೇ ಸ್ವಲ್ಪ ಟೈಮ್ ಎತ್ತಿಡಿ. ಅವರಿಗಾಗಿ, ಅವರು ಏನು ಇಷ್ಟಪಡುತ್ತಾರೋ ಅದನ್ನು ಮಾಡಿ. ಆಗ ಬೇರೇನೂ ಮಾಡಬೇಕಿಲ್ಲ, ಅವರ ಮುಖದಲ್ಲಿ ಬೆಳಗುವ ನಗುವನ್ನು ನೋಡಿ ಆನಂದಿಸಿ.
ಲಾಕ್‌ಡೌನ್ ಎಫೆಕ್ಟ್: ನಿಮ್ಮ ಎಕ್ಸ್ ಪದೇ ಪದೆ ಕನಸಿನಲ್ಲಿ ಬರುತ್ತಿದ್ದಾರಾ?
ಏರುಪೇರುಗಳಿರಲಿ ಬಾಳಲಿ
ಇಬ್ಬರು ಸಮಾನ ಮನಸ್ಕರು ಇದ್ದರೂ ಇಬ್ಬರೂ ಒಂದೇ ಥರ ಯೋಚನೆ ಮಾಡಲು ಸಾಧ್ಯವಿಲ್ಲ. ಒಂದೇ ಕೆಲಸವನ್ನು ಇಬ್ಬರೂ ಬೇರೆ ಬೇರೆ ಥರ ಮಾಡಬಹುದು. ಹಾಗಾಗಿ ಅವರ ಆಲೋಚನೆ ಅವರಿಗಿರಲಿ, ನಿಮ್ಮದು ನಿಮಗೆ. ಏರುಪೇರುಗಳಿದ್ದರೂ ಸಂತೋಷದಿಂದ ಬಾಳಬಹುದು ಅನ್ನುವುದನ್ನು ಈಗಲಾದರೂ ಕಲಿಯಬೇಕಿದೆ.
#FeelFree: ಲಾಕ್‌ಡೌನ್ ಆದ್ರಿಂದ ಸೆಕ್ಸ್ ಮಾಡೋಕಾಗ್ತಿಲ್ಲ, ಯಾಕಿಂಗೆ?!