ಗಂಡನ ಮೋಹಿಸುವುದು ಹೇಗೆ? ಗಂಡ ದಾರಿ ತಪ್ಪದಂತೆ ನೋಡಿಕೊಳ್ಳುವುದು ಹೇಗೆ? ಇದಕ್ಕಾಗಿ ಹೊಸ ಕೋರ್ಸ್ ಶುರುವಾಗಿದೆ. 2 ದಿನಕ್ಕೆ 35 ಸಾವಿರ ರೂಪಾಯಿ. ಹಲವು ಮಹಿಳೆಯರು ಈ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಈ ಕೋರ್ಸ್‌ನಲ್ಲಿ ಏನೆಲ್ಲಾ ಕಲಿಸಲಾಗುತ್ತದೆ?
ಬಿಜಿಂಗ್(ಸೆ.16) ಮದುವೆಯಾದ ಬಳಿಕ ದಂಪತಿಗಳ ನಡುವೆ ಪ್ರೀತಿ ಕಡಿಮೆಯಾಗುತ್ತದೆ, ಜೀವನ ಮೆಕಾನಿಕಲ್ ಆಗುತ್ತದೆ. ಇದರಿಂದ ಹೆಚ್ಚಿನ ಸಂಸಾರಗಳಲ್ಲಿ ಬಿರುಕು ಮೂಡುತ್ತಿದೆ. ಅಕ್ರಮ ಸಂಬಂಧಗಳು ಹುಟ್ಟಿಕೊಳ್ಳುತ್ತಿದೆ. ಹೀಗೆ ಹಲವು ಆರೋಪ ಪ್ರತ್ಯಾರೋಪ, ವಾದ ವಿವಾದಗಳಿವೆ. ಇದಕ್ಕೆಲ್ಲಾ ಪರಿಹಾರ ಒದಗಿಸಲು ವಿಶೇಷ ಕೋರ್ಸ್ ಶುರುವಾಗಿದೆ. ಇದು ಗಂಡನ ಮೋಹಿಸುವುದು ಹೇಗೆ? ಅಕ್ರಮ ಸಂಬಂಧ ಸೇರಿದಂತೆ ಇತರ ಸಮಸ್ಯೆಗಳಲ್ಲಿ ಸಿಲುಕಿ ದಾರಿ ತಪ್ಪದಂತೆ ಗಂಡನ ನೋಡಿಕೊಳ್ಳುವುದು ಹೇಗೆ? ಇವೆಲ್ಲಾ ಈ ಕೋರ್ಸ್‌ನಲ್ಲಿ ಪಾಠ ಮಾಡಲಾಗುತ್ತದೆ. ಎರಡು ದಿನದ ಈ ಕೋರ್ಸ್‌ಗೆ 35,000 ರೂಪಾಯಿ.
ಈ ವಿಶೇಷ ಕೋರ್ಸ್ ಆರಂಭಗೊಂಡಿರುವುದು ಚೀನಾದಲ್ಲಿ. ಹೊಸ ಕೋರ್ಸ್ ಮೊದಲ ಬ್ಯಾಚ್ ಫುಲ್ ಆಗಿದೆ. ಅಷ್ಟು ಮಹಿಳೆಯರು ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಕೇವಲ 2 ದಿನದ ಕೋರ್ಸ್‌ಗೆ 35,226 ರೂಪಾಯಿ ನೀಡಬೇಕು. ಈ ವಿಶೇಷ ಕೋರ್ಸ್ ಕುರುತಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಕೋರ್ಸ್ ಕುರಿತು ಎಲ್ಲೆಡೆ ಜಾಹೀರಾತು ನೀಡಲಾಗಿದೆ.
ಶಾದಿ ಭಾಗ್ಯ, ಈ ಹಳ್ಳಿ ಜನರನ್ನು ಮದ್ವೆಯಾದ್ರೆ ಸರ್ಕಾರದಿಂದ ಸಿಗುತ್ತೆ 3.5 ಲಕ್ಷ ರೂ ಜೊತೆಗೆ ಖರ್ಚು ವೆಚ್ಚ!
ಕೋರ್ಸ್‌ನಲ್ಲಿ ಮದುವೆ ಬಳಿಕ ಮಹಿಳೆಯರು ಮಾಡಬೇಕಾದ ಕೆಲ ಅಗತ್ಯವಾದ ಕೆಲಸಗಳು, ಗಂಡನ ಪ್ರೀತಿ ಸಂಪಾದಿಸುವುದು, ಗಂಡನ ಮೋಹಿಸುವುದು, ಲೈಂಗಿಕ ಜೀವನ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲುತ್ತಿದೆ. ಮೊದಲ ದಿನ ಪತಿ ಪತ್ನಿಯ ಸಂಬಂಧ, ಹೃದಯ ತುಂಬಿದ ಪ್ರೀತಿ, ಪರಾಕಾಷ್ಠೆ ಸಾಧಿಸುವ ತಂತ್ರ, ಮುಚ್ಚಿಟ್ಟ ಪ್ರೀತಿಯನ್ನು ತೋರ್ಪಡಿಸುವುದು ಹೇಗೆ ಸೇರಿದಂತೆ ಹಲವು ವಿಚಾರಗಳ ಕುರಿತು ತರಗತಿಗಳನ್ನು ನೀಡಲಾಗುತ್ತದೆ.
ಎರಡನೇ ದಿನ ಲೈಂಗಿಕ ಜೀವನ, ಚುಂಬನ, ಪ್ರವಾಸ, ಸಂಬಂಧಗಳಲ್ಲಿ ಬಿರುಕು ಮೂಡದಂತೆ ವಿಷಗಳ ಪ್ರಸ್ತುತಿ ಸೇರಿದಂತೆ ಇತರ ಕೆಲ ವಿಚಾರಗಳ ಕುರಿತು ತರಗತಿಗಳಿರುತ್ತದೆ.ಹಲವು ಮಹಿಳೆಯರು ಈ ಕೋರ್ಸ್‌ಗೆ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಒತ್ತಡ, ಯಾಂತ್ರಿಕ ಬದುಕು, ದುಡ್ಡಿನ ಮೇಲೆ ಎಲ್ಲವನ್ನೂ ಅಳೆಯುವ ಹಾಗೂ ಖರೀದಿಸುವ ಸಾಮರ್ಥ್ಯವಿರುವ ಈ ಸಂಸಾರದಲ್ಲಿ ಪ್ರೀತಿ ಕಡಿಮೆಯಾಗುತ್ತಿದೆ. ಸಂಸಾರ ಮುರಿದು ಬೀಳುತ್ತಿದೆ. ಹೀಗಾಗಿ ಈ ಕೋರ್ಸ್ ನೆರವಾಗಲಿದೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.
35 ರಿಂದ 55 ವರ್ಷದ ಹಲವು ಮಹಿಳೆಯರು ಈ ಕೋರ್ಸ್‌ಗೆ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಸ್ನಾನದ ವಿಷ್ಯ, ಬ್ಯಾಡವೋ ಶಿಷ್ಯ: ಮದ್ವೆಯಾದ 40 ದಿನಕ್ಕೆ ಡಿವೋರ್ಸ್ ಕೇಳಿದ ಪತ್ನಿ!