ಬಾಯ್‌ಫ್ರೆಂಡ್ ಮೋಸ ಮಾಡ್ತಿದಾನೆ ಅಂತ ಪತ್ತೆ ಹಚ್ಚುವುದು ಹೇಗೆ?

By Suvarna NewsFirst Published Jun 28, 2021, 5:07 PM IST
Highlights

ಅವನ ವರ್ತನೆಯಲ್ಲಿ ಏನೋ ಬೇರೆ ವಾಸನೆ ಬಡೆಯುತ್ತಿದೆ. ಅವನು ನಂಗೆ ಮೋಸ ಮಾಡ್ತಿದಾನಾ? ಬೇರೊಂದು ಹುಡುಗಿ ಜೊತೆ ಫ್ಲರ್ಟ್ ಮಾಡ್ತಿದಾನಾ? ತಿಳಿಯುವುದು ಹೇಗೆ?

ಬಾಯ್‌ಫ್ರೆಂಡ್ ಅಥವಾ ಗಂಡ, ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಜೊತೆಗಿರೋ ಗೆಳೆಯ, ಜನ್ಮ ಜನ್ಮಾಂತರಕ್ಕೂ ನಿನ್ನ ಜತೆಗಿರ್ತೀನಿ ಅಂತ ಹೇಳಿದ ಇನಿಯ- ಯಾಕೋ ಇತ್ತೀಚೆಗೆ ಸರಿಯಿಲ್ಲ ಅನಿಸಲಿಕ್ಕೆ ಶುರುವಾಗಿದೆ. ಅವನ ವರ್ತನೆಯಲ್ಲಿ ಏನೋ ಬೇರೆ ವಾಸನೆ ಬಡೆಯುತ್ತಿದೆ. ಅವನು ನಂಗೆ ಮೋಸ ಮಾಡ್ತಿದಾನಾ? ಬೇರೊಂದು ಹುಡುಗಿ ಜೊತೆ ಫ್ಲರ್ಟ್ ಮಾಡ್ತಿದಾನಾ? ತಿಳಿಯುವುದು ಹೇಗೆ?

ನಿಮ್ಮ ಇನ್‌ಸ್ಟಿಂಕ್ಟ್
ಈ ಕುರಿತು ನಿಮ್ಮ ಇನ್‌ಸ್ಟಿಂಕ್ಟೇ ನಿಮಗೆ ಮೊದಲ ಗುರು. ಎಲ್ಲೋ ಯಾವುದೋ ಸರಿಯಿಲ್ಲ ಅಂತ ಮನಸ್ಸು ಹೇಳಲು ಶುರುಮಾಡುತ್ತದೆ. ಆತನ ವರ್ತನೆಗಳಲ್ಲಿ ಚೇಂಜ್ ಕಾಣಿಸುತ್ತದೆ. ಇವನು ಮೊದಲಿದ್ದಂತೆ ಈಗಿಲ್ಲ, ನನ್ನನ್ನು ಮೊದಲಿನಂತೆ ಪ್ರೀತಿಸುತ್ತಿಲ್ಲ ಅಂತ ಗಾಢವಾಗಿ ಅನಿಸುತ್ತದೆ. ಪರಿಶೀಲಿಸಿ.

ಟೆಕ್ನಾಲಜಿ ಚೇಂಜ್
ವಂಚಿಸುವ ಗಂಡನಾದರೆ ತಾನು ಸದಾ ಬಳಸುವ ಫೋನನ್ನು, ನಿಮ್ಮ ಕೈಗೆ ಸದಾ ಸಿಗುವ ಫೋನನ್ನು ವಂಚನೆಗೆ ಬಳಸುವುದಿಲ್ಲ. ಬದಲಾಗಿ ಬೇರೊಂದು ಫೋನ್‌ ಮೂಲಕ ವ್ಯವಹರಿಸಲು ಶುರುಮಾಡುತ್ತಾನೆ. ಅದಕ್ಕೆ ಕಚೇರಿ ವ್ಯವಹಾರ ಇತ್ಯಾದಿ ಕಾರಣ ಕೊಡಬಹುದು. ಮೆಸೇಜ್‌ಗಳನ್ನು ನೀವು ಗಮಸನಿದಂತೆ ಅಳಿಸಿಹಾಕಲು, ಕಾಲ್ ಹಿಸ್ಟರಿ ಡಿಲೀಟ್ ಮಾಡಲು ಶುರುಮಾಡಬಹುದು.

ಫ್ರೆಂಡ್ಸ್ ಗುರುತಿಸುವ ಬದಲಾವಣೆ
ನೀವಲ್ಲ, ನಿಮ್ಮ ಬಂಧುಗಳು ಅಥವಾ ಗೆಳೆಯ ಗೆಳತಿಯರು, ನೀವಿಬ್ಬರೂ ಜೊತೆಗಿದ್ದಾಗ ನಿಮ್ಮ ವರ್ತನೆಗಳಲ್ಲಿ ಬದಲಾವಣೆಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ವಂಚಿಸುವವರು, ಸಂಗಾತಿಯನ್ನು ಸದಾ ಇನ್ನೊಬ್ಬರ ಮುಂದೆ ಟೀಕಿಸುವುದು ಜಾಸ್ತಿ. ಇದು ತನ್ನ ವಂಚನೆಗೆ ಕೊಟ್ಟುಕೊಳ್ಳುವ ಸಮರ್ಥನೆ.

ಮಹಿಳೆಯ ಕಾಂಡೋಮ್‌ಗೆ ಹೆಚ್ಚಾದ ಬೇಡಿಕೆ, ಪುರುಷರು ಫುಲ್ ಖುಶ್! ...

ದಿನಚರಿಯಲ್ಲಿ ಬದಲಾಗಬಹುದು
ಆತನ ದಿನಚರಿಯಲ್ಲಿ ಬದಲಾವಣೆ ಕಾಣಿಸಬಹುದು. ಕಚೇರಿ ನೆವ ಹೇಳಿ ಬೇಗನೆ ಹೋಗಬಹುದು, ಲೇಟಾಗಿ ಬರಬಹುದು. ಗೆಳೆಯನ ಜೊತೆಗಿದ್ದೆ ಅಂತ ಹೇಳಬಹುದು; ಆಮೇಲೆ ವಿಚಾರಿಸಿದಾಗ ಅವನ ಜೊತೆಗಿರಲಿಲ್ಲ ಎಂದು ಗೊತ್ತಾಗಬಹುದು.

ತುಂಬಾ ಕೇರ್ ತೆಗೆದುಕೊಳ್ಳುವುದು
ಕೆಲವೊಮ್ಮೆ ಅವನು ನಿಮ್ಮ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳಬಹುದು. ಸಣ್ಣ ಪುಟ್ಟ ಕೆಲಸಗಳಲ್ಲೂ ನಿಮಗೆ ಹೆಚ್ಚು ಹೆಚ್ಚು ಸಹಾಯ ಮಾಡಬಹುದು. ಇದಕ್ಕೆ ಕಾರಣ, ತಾನು ಮೋಸ ಮಾಡುತ್ತಿದ್ದೇನೆ ಎನ್ನುವುದು ಈಕೆಗೆ ಗೊತ್ತಾಗದಿರಲಿ ಎಂಬ ಮುಂಜಾಗರೂಕತೆ ಮತ್ತು ಅಪರಾಧಿ ಪ್ರಜ್ಞೆ. ಕೆಲವೊಮ್ಮೆ ಇದು ನೈಜ ಕಾಳಜಿಯೂ ಇರಬಹುದು, ಗುರುತಿಸುವಾಗ ಹುಷಾರು.

ಬೇಗ ಕಿರಿಕಿರಿಗೊಳಗಾಗುವುದು
ಅವನು ಯಾವುದೇ ಕಾರಣವಿಲ್ಲದೇ ಕಿರಿಕಿರಿಗೊಳ್ಳಬಹುದು, ಕಾರಣವಿಲ್ಲದೇ ನಿಮ್ಮ ಮೇಲೆ ನೀವು ಕೇಳಿದ ಸಣ್ಣ ಪ್ರಶ್ನೆಗೂ ಹರಿಹಾಯಬಹುದು.

ವೃಥಾ ಆರೋಪ
ಅವನು ನಿಮ್ಮ ಮೇಲೆಯೇ ದೋಷ ಹೊರಿಸಬಹುದು, ನೀನೇ ಮೋಸ ಮಾಡ್ತಾ ಇದೀಯ, ಬೇರೆ ಯಾರ ಜತೆಗೋ ಅಫೇರ್ ಇಟ್ಕೊಂಡಿದೀಯ ಎಂದು ಆರೋಪಿಸಬಹುದು.

ಬದಲಾಗಿರುವ ಮನುಷ್
ಅವನ ದೈಹಿಕ, ದೈನಂದಿನ ವರ್ತನೆಗಳಲ್ಲೂ ಚೇಂಜ್ ಆಗಬಹುದು. ಹೊಸ ಪರ್‌ಫ್ಯೂಮ್ ಬಂದಿರಬಹುದು, ಹೊಸ ಆಫ್ಟರ್‌ಶೇವ್ ಬಂದಿರಬಹುದು, ಉಡುಗೆಯ ಶೈಲಿ ಬದಲಾಗಿರಬಹುದು.

ಸೆಕ್ಸ್‌ ಬಗ್ಗೆ ನೀವಂದುಕೊಂಡಿರೋದೆಲ್ಲಾ ನಿಜವಲ್ಲ..! ...

ಸೆಕ್ಸ್ ವರ್ತನೆಗಳು ಬದಲಾಗಬಹುದು
ಅವನು ಇದ್ದಕ್ಕಿದ್ದಂತೆ ಹೆಚ್ಚು ಹಾಟ್ ಆಗಿರಬಹುದು. ಹೊಸ ಹೊಸ ಸೆಕ್ಸ್ ಭಂಗಿಗಳನ್ನು, ಸಾಹಸಗಳನ್ನು ನಿಮ್ಮ ಜೊತೆ ಅನ್ವೇಷಿಸಲು ಮುಂದಾಗಬಹುದು. ಅದಕ್ಕೆ ಗಿಲ್ಟ್ ಕೂಡ ಒಂದು ಕಾರಣವೇ. ಇದು ಸಹಜವಾದ ಲೈಂಗಿಕ ಅಪೇಕ್ಷೆಯೂ ಇರಬಹುದು. ಇದಕ್ಕೆ ವಿರುದ್ಧವಾದ ವರ್ತನೆಯನ್ನೂ ನೀವು ಗಮನಿಸಬೇಕು. ಅಂದರೆ ನಿಮ್ಮೊಡನೆ ಸೆಕ್ಸ್ ಅನ್ನು ಪೂರ್ತಿಯಾಗಿ ಬಿಟ್ಟೇ ಬಿಡುವ ವರ್ತನೆಯೂ ಕಾಣಿಸಬಹುದು. ಇದಕ್ಕೆ ಒತ್ತಡ ಮುಂತಾದ ಕಾರಣವಿರಲೂಬಹುದು. ಈ ವಿಷಯದಲ್ಲಿ ನಿರ್ಣಯಿಸುವಾಗ ಜಾಗರೂಕರಾಗಿರಬೇಕು.

ಸಾಂಗತ್ಯವೇ ಬೇಕಾಗಲಿಕ್ಕಿಲ್ಲ
ನಿಮ್ಮೊಡನೆ ಮೊದಲಿನ ಆತ್ಮೀಯತೆಯಿಂದ ನಡೆದುಕೊಳ್ಳಲಿಕ್ಕಿಲ್ಲ. ನಿಮ್ಮನ್ನು ಅಪ್ಪಿಕೊಳ್ಳುವಲ್ಲಿ, ಕಿಸ್ ಕೊಡುವಲ್ಲಿ, ಮೊದಲಿನ ಆತ್ಮೀಯತೆ, ಬೆಚ್ಚಗಿನ ಭಾವ ಇರಲಿಕ್ಕಿಲ್ಲ. ಅಥವಾ ನಿಮ್ಮೊಡನೆ ಮಾತಾಡುವುದನ್ನೇ ಬಹುತೇಕ ಬಿಟ್ಟಿದ್ದರೂ ಇರಬಹುದು.

ಈ ಲೈಬ್ರರಿಯಲ್ಲಿ ನೀವು ಮನುಷ್ಯರನ್ನು ಓದಬಹುದು! ...

click me!