ಸೆಕ್ಸ್‌ ಬಗ್ಗೆ ನೀವಂದುಕೊಂಡಿರೋದೆಲ್ಲಾ ನಿಜವಲ್ಲ..!

By Suvarna NewsFirst Published Jun 25, 2021, 2:23 PM IST
Highlights

ಸೆಕ್ಸ್‌ ಬಗ್ಗೆ ನಿಮ್ಮ ಗೆಳೆಯರು/ ಗೆಳತಿಯರು ನೂರಾರು ಸಂಗತಿಗಳನ್ನು ಹೇಳಬಹುದು. ಆದರೆ ಅದೆಲ್ಲವೂ ನಿಜವಲ್ಲ. ಸೆಕ್ಸ್ ಬಗ್ಗೆ ನಿಮಗೆ ಸಿಗುವ ಮಾಹಿತಿಗಳಲ್ಲಿ ನಿಜವಿರುವಂತೆ ಮಿಥ್‌ಗಳೂ ಸಾಕಷ್ಟಿವೆ. ಅಂಥ ಜನಪ್ರಿಯ ಮಿಥ್‌ಗಳು ಇಲ್ಲಿವೆ ನೋಡಿ:

1. ಹೆಣ್ಣು ಸಂಭೋಗದ ವೇಳೆ ಮೇಲಿದ್ದರೆ ಗರ್ಭಿಣಿಯಾಗೋಲ್ಲ.
ಇದು ಸುಳ್ಳು. ಹೆಣ್ಣು ಯಾವುದೇ ಭಂಗಿಯಲ್ಲಿದ್ದು ಸಂಭೋಗಿಸಿದರೂ, ಶಿಶ್ನ ಆಕೆಯ ಯೋನಿಯನ್ನು ಪ್ರವೇಶಿಸಿ ಸ್ಖಲಿಸಿದ್ದರೆ, ಆ ವೀರ್ಯಾಣುಗಳು ವೇಗವಾಗಿ ಸಾಗಿ ಆಕೆಯ ಗರ್ಭಕೋಶವನ್ನು ಸೇರುವ ಚಾನ್ಸ್ ಇದ್ದೇ ಇದೆ. ಇಂಥದೇ ಇನ್ನೊಂದು ಮಿಥ್ ಎಂದರೆ ಸೆಕ್ಸ್ ಮಾಡಿದಕೂಡಲೇ ಮೂತ್ರ ಮಾಡಿದರೆ ಗರ್ಭಿಣಿಯಾಗೋಲ್ಲ ಎಂಬುದು. ಇದು ಕೂಡ ಅಸತ್ಯ. ಮೂತ್ರ ಮಾಡುವ ಮುನ್ನವೇ ವೀರ್ಯಾಣು, ಅಂಡಾಣುವನ್ನು ಸೇರಿಕೊಂಡಿರುವ ಎಲ್ಲ ಸಾಧ್ಯತೆ ಇದೆ.

2. 'ಹೊರಗೆ ತೆಗೆ' ಗರ್ಭನಿಯಂತ್ರಣಕ್ಕೆ ಒಳ್ಳೇ ಪದ್ಧತಿ.
ಇದು ನಿಜವಲ್ಲ. ಸಂಭೋಗದ ವೇಳೆ, ಇನ್ನೇನು ಸ್ಖಲನವಾಗುತ್ತದೆ ಎಂಬ ಸಂದರ್ಭದಲ್ಲಿ ಗಂಡು ತನ್ನ ಶಿಶ್ನವನ್ನು ಹೊರತೆಗೆಯುವ ಈ ಪದ್ಧತಿ ಶೇ.80 ಸನ್ನಿವೇಶಗಳಲ್ಲಿ ಮಾತ್ರ ಸಕ್ಸಸ್ ಆಗುತ್ತದಂತೆ. ಉಳಿದ ಶೇ.20 ಸಂದರ್ಭಗಳಲ್ಲಿ ಇದು ವಿಫಲವಾಗಿರುವುದೇ ಹೆಚ್ಚು. ಕೆಲವೊಮ್ಮೆ ಹೊರತೆಗೆಯುವ ಮುನ್ನವೇ ಯೋನಿಯಲ್ಲೇ ಸ್ಖಲನವಾಗಿಬಿಡುತ್ತೆ.

ಕೆಲವೊಮ್ಮೆ ಸ್ಖಲನಕ್ಕೂ ಮುನ್ನವೇ ಕೆಲವು ವೀರ್ಯಾಣು ಅಂಡಾಶಯ ಸೇರಿರುವ ಸಾಧ್ಯತೆಯೂ ಇದೆ. ಹೀಗಾಗಿ ಹೊರಗೆ ತೆಗೆಯುವ ಪದ್ಧತಿಯ ಜೊತೆಗೆ ಇನ್ನೂ ಒಂದು ಗರ್ಭ ತಡೆ ಪದ್ಧತಿಯನ್ನೂ ಜೊತೆಗೆ ಅಳವಡಿಸಿಕೊಳ್ಳುವುದು ಉತ್ತಮ.

3. ಗುದ ಸಂಭೋಗ, ಸೆಕ್ಸೇ ಅಲ್ಲ.
ಹಾಗೇನೂ ಇಲ್ಲ. ಜಗತ್ತಿನ ಅರ್ಧ ಭಾಗ ಜನ ಅದರಿಂದ ಸಂತೋಷ ಪಡೆಯುತ್ತಾರೆ. ಆದರೆ ಇದನ್ನು ಮಾಡುವಾಗ ಇಬ್ಬರ ಒಪ್ಪಿಗೆ ಹಾಗೂ ಹ್ಯಾಪಿನೆಸ್ ಕೋಷಿಯೆಂಟ್ ಅಗತ್ಯ. ಲ್ಯೂಬ್ರಿಕೆಂಟ್ ಬಳಸುವುದರಿಂದ ನೋವು ತಡೆಯಬಹುದು. 

4. ತುಂಬಾ ಸೆಕ್ಸ್ ಮಾಡುವುದರಿಂದ ಯೋನಿ ಸಡಿಲವಾಗುತ್ತದೆ.
ಇದಕ್ಕೆ ಆಧಾರವಿಲ್ಲ. ಕೆಲವೊಮ್ಮೆ ಮಗುವಿಗೆ ಜನನ ನೀಡಿದ ಬಳಿಕ ಯೋನಿ ಸಡಿಲವಾಗುವುದುಂಟು. ಆದರೆ ಮತ್ತೆ ಅದನ್ನು ಯಥಾಸ್ಥಿತಿಗೆ ತರಲು ಕೆಲವು ಬಗೆಯ ವ್ಯಾಯಾಮಗಳಿವೆ. ಅದನ್ನು ನಿಮ್ಮ ಗೈನಕಾಲಜಿಸ್ಟ್ ಬಳಿ ಅಥವಾ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿ ತಿಳಿಯಬಹುದು.

5. ಮುಖಮೈಥುನದಿಂದ ಗುಹ್ಯ ರೋಗಗಳು ಹರಡುವುದಿಲ್ಲ.
ಇದು ಸುಳ್ಳು. ಗುಪ್ತಾಂಗಗಳ ಸಂಪರ್ಕದಿಂದ ಲೈಂಗಿಕ ರೋಗಗಳು ಹರಡುವಂತೆ, ಮುಖ ಮೈಥುನದಿಂದಲೂ ಹರಡಬಹುದು. ಏಡ್ಸ್, ಎಚ್‌ಪಿವಿ, ಹರ್ಪಿಸ್, ಸಿಫಿಲಿಸ್, ಗೊನೋರಿಯಾ ಮುಂತಾದವು ಮುಖಮೈಥುನದಿಂದ ಹರಡುವುದು ಗೊತ್ತಾಗಿದೆ. ಓರಲ್ ಸೆಕ್ಸ್ ವೇಳೆ ಬಾಯಿಯಲ್ಲಿ ಗಾಯಗಳು ಇರಬಾರದು. ಗುಪ್ತಾಂಗಗಳು ಸ್ವಚ್ಛವಾಗಿರಬೇಕು. ಅಪರಿಚಿತರ ಜೊತೆ ಸೆಕ್ಸ್‌ನಲ್ಲಿ ಓರಲ್ ಸೆಕ್ಸ್ ಬೇಡ.

6. ಕಾಂಡೋಮ್ ಬಳಸುವುದರಿಂದ ಸಂಭೋಗಸುಖವೇ ಸಿಗೊಲ್ಲ.
ಇದೂ ಒಂದು ಮಿಥ್. ಇತ್ತೀಚೆಗೆ ಕಾಂಡೋಮ್‌ಗಳು ಕೂಡ ತೆಳುವಾಗುತ್ತಿವೆ, ಎಕ್ಸ್‌ಟ್ರಾ ಥಿನ್ ಕೂಡ ಲಭ್ಯ. ಇವುಗಳನ್ನು ಹಾಕಿದರೆ ಹಾಕಿದಂತೆಯೇ ಇರೋಲ್ಲ.

ಯೋನಿಯಲ್ಲಿ ಸಂಘರ್ಷಿಸಿದಂತೆಯೇ ಅನುಭವ ಆಗುವುದರಿಂದ ಸುಖವೂ ಪುರುಷರಿಗೆ ಸಿಗುತ್ತದೆ. ಮಾತ್ರವಲ್ಲ ಗುಹ್ಯರೋಗಗಳ ಭಯ, ಗರ್ಭವತಿಯಾಗುವ ಭಯ ಕೂಡ ಇರೊಲ್ಲ. 

7. ಹಸ್ತಮೈಥುನದ ಅಭ್ಯಾಸದಿಂದ ಕಾಮೋತ್ಕಟತೆ ದೂರ
ಹಸ್ತಮೈಥುನ ಅಭ್ಯಾಸ ಮಾಡಿಕೊಂಡರೆ ರಿಯಲ್ ಲೈಫ್ ಸೆಕ್ಸ್‌ನಲ್ಲಿ ಸಂಭೋಗ ಸುಖದ ಉತ್ತುಂಗ ಅನುಭವಿಸಲು ಸಾಧ್ಯವಾಗದು ಎಂಬುದು ಕೂಡ ಒಂದು ಮಿಥ್. ಬದಲಾಗಿ, ಹಸ್ತಮೈಥುನದ ವೇಳೆ, ನಿಮ್ಮ ದೇಹದ ಕಾಮೋತ್ಕಟ ತಾಣಗಳು ಯಾವುವು, ಅವುಗಳನ್ನು ಹೇಗೆ ತೃಪ್ತಿಪಡಿಸುವುದು ಯಾವುದು ಎಂಬ ಅಂಶಗಳೆಲ್ಲ ತಿಳಿದು, ನಿಮಗೆ ಹೆಚ್ಚು ಲಾಭವೇ ಆಗುತ್ತದೆ. 

8. ನೀರಿನಲ್ಲಿ ಸಂಭೋಗಿಸಿದರೆ ಗರ್ಭಿಣಿಯಾಗೋಲ್ಲ
ಇದೊಂದು ವಿಚಿತ್ರ ನಂಬಿಕೆ, ನೀರಿನಲ್ಲಿ ಸಂಭೋಗಿಸಿದಾಗ ವೀರ್ಯವೇನೂ ನೀರಾಗೋಲ್ಲ. ವೀರ್ಯ ಹೋಗಿ ಅಂಡಾಣುವನ್ನು ಸೇರುವಲ್ಲಿ ಯಾವ ತಡೆಯೂ ಆಗೋಲ್ಲ. ಆ ಪ್ರಕ್ರಿಯೆ ಅದರಷ್ಟಕ್ಕೆ ನಡೆದೇ ನಡೆಯುತ್ತಿರುತ್ತದೆ.

click me!