ಗಂಡ-ಹೆಂಡ್ತಿ(Husband-wife) ಅಂದ್ಮೇಲೆ ಇಬ್ರೂ ಆರೋಗ್ಯ (Health)ವಾಗಿ ಚೆನ್ನಾಗಿದ್ರೇನೆ ದಾಂಪತ್ಯ (Married life) ಚೆನ್ನಾಗಿರುತ್ತದೆ. ಎಷ್ಟೋ ಜನ ಹೆಣ್ಮಕ್ಕಳು ಗಂಡ ಚೆನ್ನಾಗಿರ್ಬೇಕು ಅಂತ ಏನೆಲ್ಲಾ ಸರ್ಕಸ್ ಮಾಡ್ತಾರೆ. ಆದ್ರೆ ಗಂಡ ಚೆನ್ನಾಗಿರ್‌ಬೇಕಾಂದ್ರೆ ನಿಜವಾಗ್ಲೂ ಹೆಂಡ್ತಿ ಏನ್ಮಾಡ್ಬೇಕು, ನಾವ್ ಹೇಳ್ತೀವಿ.
ಗಂಡ-ಹೆಂಡತಿ (Husband-wife) ಅನ್ನೋದು ಒಂದು ಅನುರೂಪದ ಸಂಬಂಧ (Relationship). ಇಬ್ಬರು ಪರಸ್ಪರ ಪ್ರೀತಿಯಿಂದ, ಹೊಂದಾಣಿಕೆಯಿಂದ, ನಂಬಿಕೆಯಿಂದ ಜೀವನ (Life) ನಡೆಸಬೇಕಾಗುತ್ತದೆ. ಇಬ್ಬರೂ ಪರಸ್ಪರ ಕಷ್ಟ-ಸುಖವನ್ನು ಅರಿತುಕೊಂಡು ಜೀವನ ನಡೆಸಬೇಕಾಗುತ್ತದೆ. ಗಂಡನಿಗೆ ಕಷ್ಟವಾದಾಗ ಹೆಂಡತಿ, ಹೆಂಡತಿಗೆ ಕಷ್ಟವಾದಾಗ ಗಂಡ ಅನುಸರಿಸಿಕೊಂಡು ಜೀವನ ನಡೆಸಬೇಕು. ಪ್ರತಿಯೊಂದು ಗಂಡೂ, ಹೆಣ್ಣು ತಮ್ಮ ಸಂಗಾತಿಯು ಆರೋಗ್ಯ (Health)ವಾಗಿರಲು ಬಯಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಮೊದಲೇ ಕಾಳಜಿ ಜಾಸ್ತಿ. ಹೀಗಾಗಿ ಗಂಡನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಇದಕ್ಕಾಗಿ ಅನೇಕ ವಿಷಯಗಳನ್ನು ನೋಡಿಕೊಳ್ಳಬೇಕು.
ಸಂಗಾತಿಯ (Partner) ಆರೋಗ್ಯಕ್ಕಾಗಿ ಹೆಣ್ಮಕ್ಕಳು ಕೆಲವು ಉತ್ತಮ ಅಭ್ಯಾಸ (Habit)ಗಳನ್ನು ಆರಿಸಿಕೊಳ್ಳಬಹುದು. ಪುರುಷರು ಸಾಮಾನ್ಯವಾಗಿ ತಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪತಿಗೆ ಕೆಲವು ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಹೊಂದಲು ನೀವು ಪ್ರೇರೇಪಿಸಬಹುದು. ಅಂಥಹಾ ಕೆಲವೊಂದು ಸಿಂಪಲ್ ಟಿಪ್ಸ್ ಇಲ್ಲಿದೆ.
Reason for Divorce: ಜೊತೆಯಾಗಿ ಹಿತವಾಗಿ ನಡೆವ ಆಸೆಯಿದ್ರೂ ದಂಪತಿ ದೂರವಾಗೋದ್ಯಾಕೆ?
ಆರೋಗ್ಯಕರ ಆಹಾರಾಭ್ಯಾಸ
ಪುರುಷರು ಹೆಚ್ಚಾಗಿ ಮನೆಯಿಂದ ಹೊರಗಡೆ ತಿನ್ನುವುದರ ಕುರಿತಾಗಿಯೇ ಆಸಕ್ತಿ ವಹಿಸುತ್ತಾರೆ. ತಮ್ಮ ಸಹೋದ್ಯೋಗಿಗಳ ಹೊಟೇಲ್, ರೆಸ್ಟೋರೆಂಟ್, ಸ್ಟ್ರೀಟ್ ಫುಡ್‌ಗಳನ್ನು ತಿನ್ನುತ್ತಾರೆ. ಇಂಥಾ ಆಹಾರ (Food) ತಿನ್ನಲು ರುಚಿಕರವಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ನಿಮ್ಮ ಗಂಡನಿಗೆ ಮನೆಯಿಂದ ಹೊರಗಡೆ ಆಹಾರ ತಿನ್ನದಂತೆ ಸೂಚಿಸಿ. ಮನೆಯಲ್ಲೇ ರುಚಿಕರವಾದ, ಆರೋಗ್ಯಕರವಾದ ಆಹಾರಗಳನ್ನು ಮಾಡಿಕೊಡಿ.
ಆರೋಗ್ಯವಾಗಿರಲು ಯಾವ ಆಹಾರ ನೀಡಬೇಕು?
ಪುರುಷರಿಗೆ ಶಕ್ತಿಗಾಗಿ ಒಮೆಗಾ 3, ವಿಟಮಿನ್ ಬಿ 12, ವಿಟಮಿನ್ ಸಿ, ವಿಟಮಿನ್ (Vitamin) ಎ (ಒಮೆಗಾ 3, ವಿಟಮಿನ್ ಬಿ 12, ವಿಟಮಿನ್ ಸಿ, ವಿಟಮಿನ್ ಎ) ನಂತಹ ಅನೇಕ ಪ್ರಮುಖ ಜೀವಸತ್ವಗಳು ಬೇಕಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಗಾತಿಗೆ ಬೆಳಗ್ಗಿನ ಉಪಾಹಾರದಿಂದ ರಾತ್ರಿ ಊಟದವರೆಗೆ ಈ ಎಲ್ಲಾ ಪೋಷಕಾಂಶಗಳು ಇರುವಂತಹ ಆಹಾರವನ್ನು ನೀಡಿ. ನೀವು ನಿಮ್ಮ ಸಂಗಾತಿಯ ಆಹಾರದಲ್ಲಿ ಗೋಡಂಬಿ, ಬಾದಾಮಿ, ಪಿಸ್ತಾಗಳನ್ನು ಕೂಡ ಸೇರಿಸಿಕೊಳ್ಳಬಹುದು. ಹಣ್ಣು, ತರಕಾರಿಗಳನ್ನು ಸಹ ಸೇರಸುವುದನ್ನು ಮರೆಯಬೇಡಿ.
ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ
ಪುರುಷರ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಮಹಿಳೆ (Woman)ಯರಂತೆ ಪುರುಷರಿಗೂ ಆರೋಗ್ಯ ತಪಾಸಣೆ ಅಗತ್ಯ. ನಿಮ್ಮ ಪತಿ ಹೆಚ್ಚು ಹೊರಗಿನ ಆಹಾರವನ್ನು ಸೇವಿಸಿದರೆ, ಖಂಡಿತವಾಗಿಯೂ ಅವರ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿ. ಇದರ ಹೊರತಾಗಿ, ನೀವು ಥೈರಾಯ್ಡ್, ಬಿಪಿ, ಮಧುಮೇಹ ಇತ್ಯಾದಿ ತಪಾಸಣೆಯನ್ನು ಸಹ ಮಾಡಬಹುದು. ಇದರಿಂದ ಆರೋಗ್ಯ ಸಮಸ್ಯೆಯಿದ್ದರೆ ಮೊದಲೇ ತಿಳಿದುಕೊಳ್ಳಬಹುದು.
ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇದ್ದಾರ ? ಸರಿಯಾದ ಸಂಗಾತಿಯ ಆಯ್ಕೆ ಮಾಡಿದ್ದೀರಾ ತಿಳ್ಕೊಂಡು ಬಿಡಿ
ಕೆಟ್ಟ ಅಭ್ಯಾಸಗಳಿಂದ ಗಂಡನನ್ನು ದೂರಿವಿಡಿ
ಗಂಡ ಯಾವುದೇ ಚಟಗಳಿಗೆ ಬಲಿಯಾದರೆ ಸಂಪೂರ್ಣ ದಾಂಪತ್ಯ ಹಾಳಾಯಿತು ಎಂದೇ ಅರ್ಥ, ಹೀಗಾಗಿ ಗಂಡ ಯಾವುದೇ ಚಟದ ದಾಸನಾಗಿಲ್ಲ ಎಂಬುದನ್ನು ಆಗಾಗ ಖಚಿತಪಡಿಸಿಕೊಳ್ಳಿ. ನಿಮ್ಮ ಪತಿಯು ಮದ್ಯಪಾನ, ಸಿಗರೇಟ್, ಡ್ರಗ್ಸ್ ಇತ್ಯಾದಿಗಳ ಚಟವನ್ನು ಹೊಂದಿದ್ದರೆ, ತಕ್ಷಣ ಅವರನ್ನು ವೈದ್ಯರ ಬಳಿಗೆ ಕರೆದೊಯ್ದು ಚಟವನ್ನು ತೊಡೆದುಹಾಕಲು ಚಿಕಿತ್ಸೆ ಪ್ರಾರಂಭಿಸಿ. ಸಂಗಾತಿ ದೈಹಿಕ ವ್ಯಾಯಾಮದಿಂದ ದೂರವಿದ್ದರೆ, ಅವರಲ್ಲಿ ಸೋಮಾರಿತನ ಉಂಟಾಗಬಹುದು. ಅದು ಕೆಟ್ಟ ಅಭ್ಯಾಸವಾಗಿದೆ ಆದ್ದರಿಂದ ನೀವು ಅವರನ್ನು ಸಕ್ರಿಯವಾಗಿರಲು ಪ್ರೇರೇಪಿಸಬೇಕು.