Parenting Tips: ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡೋದು ಹೇಗೆ? ಸುಧಾ ಮೂರ್ತಿ ಹೇಳಿದ್ದಾರೆ ಕೇಳಿ

By Suvarna News  |  First Published Jul 26, 2023, 4:24 PM IST

ಈಗಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದೆ ಇರೋದೆ ಕಷ್ಟವಾಗಿದೆ. ಮಕ್ಕಳನ್ನು ಗ್ಯಾಜೆಟ್ ನಿಂದ ದೂರವಿಡಲು ಪಾಲಕರು ಏನೇ ಸಾಹಸ ಮಾಡಿದ್ರೂ ಸಾಧ್ಯವಾಗೋದಿಲ್ಲ. ಇದಕ್ಕೆ ಕೆಲ ಸಿಂಪಲ್ ವಿಧಾನವಿದೆ. ಅದನ್ನು ಸುಧಾ ಮೂರ್ತಿ ಹೇಳಿದ್ದಾರೆ.
 


ನನ್ನ ಮಗ ಸ್ಕೂಲ್ ಇಂದ ಬಂದ ತಕ್ಷಣ ಮೊಬೈಲ್ ಹಿಡಿದು ಕೂರ್ತಾನೆ, ಮಗಳು ಸ್ಕೂಲ್ ನಿಂದ ಬಂದು ತಕ್ಷಣ ಟಿವಿ ನೋಡ್ತಾಳೆ,  ಅಭ್ಯಾಸ ಮಾಡೋದಿಲ್ಲ. ದಿನಪೂರ್ತಿ ಗೇಮ್, ರೀಲ್ಸ್, ಕಾರ್ಟೂನ್ ಇದರಲ್ಲೇ ಮುಳುಗಿರುತ್ತಾರೆ ಎನ್ನುವುದೇ ಈಗಿನ ಎಲ್ಲ ತಂದೆ ತಾಯಿಯರ ದೊಡ್ಡ ಕಂಪ್ಲೇಂಟ್.

ಗ್ಯಾಜೆಟ್ಸ್ (Gadgets) ಅಬ್ಬರದಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿರುವುದಂತೂ ನಿಜ. ಎಲ್ಲ ಮಕ್ಕಳೂ (Children) ಇದಕ್ಕೆ ದಾಸರಾಗದೇ ಇದ್ದರೂ ಕೂಡ ಬಹುಪಾಲು ಮಕ್ಕಳು ಇಂದು ಮೊಬೈಲ್ (Mobile), ಐ ಪ್ಯಾಡ್, ಟಿವಿ ಇವುಗಳ ಹಿಂದೆ ಬಿದ್ದಿದ್ದಾರೆ. ಇದರಿಂದ ಅವರಿಗೆ ವಿದ್ಯಾಭ್ಯಾಸದಲ್ಲಾಗಲೀ, ಕತೆ ಪುಸ್ತಕಗಳನ್ನು ಓದುವುದರಲ್ಲಾಗಲೀ ಅಥವಾ ಆಟಗಳಲ್ಲಾಗಲೀ ಉತ್ಸಾಹವೇ ಇಲ್ಲದಂತಾಗಿದೆ. ಇಂತಹ ಗ್ಯಾಜೆಟ್ ಗಳಿಂದ ಇಂದು ಅನೇಕ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ದೋಷ ಸೇರಿದಂತೆ ಅನೇಕ ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಮಾಧ್ಯಮಗಳನ್ನು ನಾವು ಸೀಮಿತವಾಗಿ ಬಳಸಿಕೊಂಡರೆ ಅದರಿಂದ ಯಾವುದೇ ಅಪಾಯವಿಲ್ಲ. ಆದರೆ ಇಂದಿನ ಮಕ್ಕಳು ಅವುಗಳಿಂದ ಹೊರಬರಲಾದಷ್ಟು ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಅಂತಹ ಮಕ್ಕಳನ್ನು ಗ್ಯಾಜೆಟ್ ಗಳಿಂದ ದೂರ ಇಡಲು ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾ ಮೂರ್ತಿಯವರು ಕೆಲವು ಸಲಹೆಯನ್ನು ನೀಡಿದ್ದಾರೆ.

Tap to resize

Latest Videos

undefined

AMAZING COUPLE: ಪ್ರವಾಸಕ್ಕಿಲ್ಲ ವಯಸ್ಸಿನ ಮಿತಿ, 96ರ ಹರೆಯದಲ್ಲಿ ವಿಮಾನವೇರಿದ ಜೋಡಿ!

ಮನೆಯಲ್ಲಿ ಟಿವಿ ಹಚ್ಚಲೇಬೇಡಿ :  ಮನೆಯ ಹಿರಿಯರು ಇದ್ದಾಗ ಅವರು ಟಿವಿಯಲ್ಲಿ ಧಾರಾವಾಹಿ ಸಿನಿಮಾ ಮುಂತಾದವುಗಳನ್ನು ನೋಡುವುದು ಸಹಜ. ಮನೆಯ ಹಿರಿಯರ ಈ ಅಭ್ಯಾಸ ಮಕ್ಕಳಲ್ಲೂ ಇದೇ ರೂಢಿಯನ್ನು ಬೆಳೆಸುತ್ತದೆ. ಧಾರಾವಾಹಿ, ಸಿನಿಮಾಗಳಲ್ಲಿ ಬರುವ ಸನ್ನಿವೇಶಗಳಿಂದ ಅವರು ಪ್ರೇರಿತರಾಗುತ್ತಾರೆ. ಇದು ಮಕ್ಕಳಲ್ಲಿ ನಕಾರಾತ್ಮಕ ಗುಣಗಳನ್ನು ಬೆಳೆಸುತ್ತದೆ. ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ, ಮಕ್ಕಳು ಮನೆಯಲ್ಲಿ ಇರುವಾಗ ಟಿವಿ ಹಚ್ಚಲೇ ಬೇಡಿ ಅಥವಾ ಟಿವಿಯನ್ನು ಮಾರಿದರೂ ಒಳ್ಳೆಯದೇ ಎನ್ನುತ್ತಾರೆ. ಹಾಗೊಮ್ಮೆ ಮಕ್ಕಳಿಗೆ ಟಿವಿ ತೋರಿಸಬೇಕೆಂದರೆ ಕೇವಲ 10 ನಿಮಿಷದ ಸಮಯವನ್ನು ನಿಗದಿಪಡಿಸಿ ನಂತರ ಟಿವಿ ಆಫ್ ಮಾಡಿಬಿಡಿ. ಮನೆಯಲ್ಲಿರುವ ಹಿರಿಯರೂ ಟಿವಿ ನೋಡಬೇಡಿ ಎಂಬುದು ಸುಧಾ ಮೂರ್ತಿ ಸಲಹೆ.

ಒಳ್ಳೆಯ ಸಿನೆಮಾ ಮಕ್ಕಳಿಗೆ ಹಾಗೂ ಲಕ್ಷಾಂತರ ಜನರಿಗೆ ಮಾದರಿಯಾಗುತ್ತೆ : ಟಿವಿ, ಮೊಬೈಲ್ ಮುಂತಾದವುಗಳಲ್ಲಿಯೂ ನಾವು ತಿಳಿದುಕೊಳ್ಳಬೇಕಾದ್ದ ಒಳ್ಳೆಯ ವಿಚಾರಗಳು ಹಲವಾರು ಇರುತ್ತವೆ. ಇಂತಹ ಮಾಧ್ಯಮಗಳು ಜನರನ್ನು ಬೇಗ ತಲುಪುತ್ತವೆ. ಹಾಗಾಗಿ ಮಾಧ್ಯಮಗಳು ಜನರ ಅರಿವು ಹೆಚ್ಚಿಸುವ ಕೆಲಸವನ್ನು ಮಾಡಬೇಕು ಎನ್ನುವುದು ಸುಧಾ ಮೂರ್ತಿಯವರ ಅಭಿಪ್ರಾಯವಾಗಿದೆ. ನಾವು ಯಾರಿಗೋ ಉಪದೇಶ ಮಾಡಿದರೆ ಅಥವಾ ಬೋಧನೆ ಮಾಡಿದರೆ ಅದು ಒಂದು ಅಥವಾ ಎರಡು ಜನರಿಗೆ ಮಾತ್ರ ಅರ್ಥವಾಗುತ್ತದೆ. ಪುಸ್ತಕ ಬರೆದರೆ ಅದನ್ನು ಹತ್ತಾರು ಮಂದಿ ಓದುತ್ತಾರೆ. ಆದರೆ ಒಂದು ಸಿನೇಮಾವನ್ನು ಸಹಸ್ರಾರು ಮಂದಿ ನೋಡಿ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವಂತಹ ಸಿನೆಮಾಗಳನ್ನು ಮಕ್ಕಳಿಗೆ ತೋರಿಸಬೇಕು ಎಂದು ಸುಧಾ ಮೂರ್ತಿ ಹೇಳ್ತಾರೆ.

Masturbation: ಹಸ್ತಮೈಥುನದ ಬಗ್ಗೆ ಈ ಬಾಲಿವುಡ್ ನಟಿಯರಿಗೆ ನಾಚಿಕೆಯೇ ಇಲ್ಲ!

ಮಿತಿಮೀರಿದರೆ ಯಾವುದೂ ಒಳ್ಳೇದಲ್ಲ : ಅತಿಯಾದ ಟಿವಿ ವೀಕ್ಷಣೆ, ಅತಿಯಾದ ಮೊಬೈಲ್ ಬಳಕೆ ಹಾಗೂ ಅತಿಯಾದ ಆಹಾರ ಸೇವನೆ ಯಾವುದೂ ಒಳ್ಳೆಯದಲ್ಲ. ಮಿತಿಮೀರಿ ಯಾವುದನ್ನೂ ನೋಡಬಾರದು, ತಿನ್ನಬಾರದು ಅದರಿಂದ ತೊಂದರೆ ತಪ್ಪಿದ್ದಲ್ಲ. ಕೆಲವು ಪಾಲಕರು ಮೊಬೈಲ್ ನಲ್ಲಿ ಗಂಟಗಟ್ಟಲೇ ಅನವಶ್ಯಕ ಮಾತಿನಲ್ಲಿ ತೊಡಗುತ್ತಾರೆ. ಪಾಲಕರ ಈ ವರ್ತನೆ ಕೂಡ ಮಕ್ಕಳಲ್ಲಿ ಕೆಟ್ಟ ಪರಿಣಾಮ ಬೀರುತ್ತೆ. ಹಾಗಾಗಿ ಮೊಬೈಲ್ ನಲ್ಲಿ ಮಿತಿಮೀರಿ ಮಾತನಾಡುವುದು ಕೂಡ ಒಳ್ಳೇದಲ್ಲ. ಅನವಶ್ಯಕ ಗಿಫ್ಟ್ ಗಳನ್ನು ಕೊಡಿಸಬೇಡಿ : ಕೆಲವು ಪಾಲಕರು ತಮ್ಮ ದೊಡ್ಡಸ್ತಿಕೆಯನ್ನು ತೋರಿಸುವುದಕ್ಕೋಸ್ಕರ ಮಕ್ಕಳಿಗೆ ಕಾಸ್ಟ್ಲಿ ಗಿಫ್ಟ್ ಕೊಡಿಸುತ್ತಾರೆ. ಬರ್ತಡೇ ಗಿಫ್ಟ್ ಅದು ಇದೂಂತ ಮಕ್ಕಳಿಗೆ ಅನವಶ್ಯಕ ಗಿಫ್ಟ್ ಕೊಡುವುದನ್ನು ಬಿಡಬೇಕು. ಹಾಗೇಯೇ ಮಕ್ಕಳಿಗೆ ಮೊಬೈಲ್, ಐ ಪ್ಯಾಡ್ ಗಳನ್ನು ಕೂಡ ಗಿಫ್ಟ್ ಆಗಿ ಕೊಡಬಾರದು ಎಂದು ಸುಧಾ ಮೂರ್ತಿ ಸಲಹೆ ನೀಡಿದ್ದಾರೆ.
 

click me!