ಮಂಟಪದಲ್ಲಿ ವರಮಾಲೆ ಹಾಕಲು ವಧು-ವರರ ಡಿಶುಂ ಡಿಶುಂ; ವಿಡಿಯೋ ವೈರಲ್

By Vinutha Perla  |  First Published Jul 26, 2023, 4:11 PM IST

ಮದುವೆಯ ದಿನ ವಧು-ವರರು ಕಿತ್ತಾಡಿಕೊಳ್ಳುವ ತಮಾಷೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ. ಇತ್ತೀಚೆಗೆ ಅಂತಹ ಒಂದು ವಿಡಿಯೋ ವೈರಲ್ ಆಗಿದ್ದು, ವಧು-ವರರು ತಮ್ಮ ಮದುವೆಯ ದಿನದಂದು ವರಮಾಲೆ ಹಾಕಿಕೊಳ್ಳಲು ಕಿತ್ತಾಡುವುದನ್ನು ನೋಡಬಹುದು. 


ಭಾರತೀಯ ಮದುವೆ ಮನೆಗಳಲ್ಲಿ ಸಂಭ್ರಮ-ಸಡಗರ ಇರೋ ಹಾಗೆಯೇ ಗದ್ದಲ ಗಲಾಟೆನೂ ಸಾಮಾನ್ಯವಾಗಿರುತ್ತವೆ. ಇಂಥಾ ತಮಾಷೆ, ಕೀಟಲೆಗಳಲ್ಲಿದೆ ಮದುವೆ ಮನೆ ಅಪೂರ್ಣ ಅಂತಾನೇ ಹೇಳ್ಬಹುದು. ಅದರಲ್ಲೂ ಶಾಸ್ತ್ರದ ಹೆಸರಿನಲ್ಲಿ ವಧು-ವರರ ಮಧ್ಯೆನೂ ಕಾಂಪಿಟೇಶನ್ ನಡೀತಿರುತ್ತೆ . ತಮ್ಮ ಮದುವೆಯ ದಿನ ವಧು-ವರರು ಕಿತ್ತಾಡಿಕೊಳ್ಳುವ ತಮಾಷೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ. ಇತ್ತೀಚೆಗೆ ಅಂತಹ ಒಂದು ವಿಡಿಯೋ ವೈರಲ್ ಆಗಿದ್ದು, ವಧು-ವರರು ತಮ್ಮ ಮದುವೆಯ ದಿನದಂದು ವರಮಾಲೆ ಹಾಕಿಕೊಳ್ಳಲು ಕಿತ್ತಾಡುವುದನ್ನು ನೋಡಬಹುದು. 

ವಿಡಿಯೋದಲ್ಲಿ ವಧು-ವರರು (Bride-groom) ತಮ್ಮ ಕೈಯಲ್ಲಿ ವರಮಾಲ ಹಿಡಿದುಕೊಂಡು ಮದುವೆಯ (Marriage) ವೇದಿಕೆಯಲ್ಲಿ ನಿಂತಿದ್ದಾರೆ. ಹಿರಿಯರು ಸೂಚಿಸಿದ ಬಳಿಕ ವಧು-ವರರು ಪರಸ್ಪರ ಹಾರ (Varmala) ಹಾಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಒಬ್ಬ ವ್ಯಕ್ತಿ ವರನನ್ನು ಮೇಲಕ್ಕೆತ್ತುತ್ತಾರೆ. ವಧು, ವರನಿಗೆ ಮಾಲೆ ಹಾಕಲು ಸಾಧ್ಯವಾಗುವುದಿಲ್ಲ. ವಧು, ವರನ ಕೊರಳಿಗೆ ಹಾಕಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ವೀಡಿಯೊ ಮುಂದುವರಿದಾಗ ಎಲ್ಲಾ ಜಗಳದ ನಂತರ ವರನು ಅಂತಿಮವಾಗಿ ಆಕೆಗೆ ಹಾರವನ್ನು ಹಾಕಲು ಸಾಧ್ಯವಾಗುತ್ತದೆ. ನಂತರ, ವರನು ವಧುವಿಗೆ ಅವಳು ಹಿಡಿದಿದ್ದ ವರಮಾಲವನ್ನು ಬಿಡಿಸಲು ಸಹಾಯ ಮಾಡುವುದನ್ನು ಕಾಣಬಹುದು.

Tap to resize

Latest Videos

ವಧುವಿನ ಗಡಿಬಿಡಿಗೆ ವರನ ಜೊತೆ ಮಾತ್ರವಲ್ಲ ಮಾವನ ಜೊತೆನೂ ಮದ್ವೆ ಆಗೋಯ್ತು!

ವೀಡಿಯೊವನ್ನು bridal_lehenga_designn ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ಪುಟವು ಮದುವೆಯ ವೀಡಿಯೊಗಳಿಂದ ತುಂಬಿದೆ ಮತ್ತು Instagram ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಹೊಂದಿದೆ. ವಿಡಿಯೋಗೆ 'ಯೇ ವರ್ಮಲಾ ಹೋ ರ್ಹೆ ಹೈ ಯಾ ಕುಚ್ ಓರ್' (ಇದು ವರಮಾಲಾ ಶಾಸ್ತ್ರನಾ ಅಥವಾ ಬೇರೆ ಏನಾದರೂ ಜಗಳನಾ" ಎಂಬ ಶೀರ್ಷಿಕೆ (Heading) ನೀಡಲಾಗಿದೆ. ವೈರಲ್ ಆಗಿರುವ ವಿಡಿಯೋವನ್ನು 15 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. ಮಾತ್ರವಲ್ಲ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ತುಂಬಾ ತಮಾಷೆಯಾಗಿದೆ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ಇದು ಮದುವೆನಾ, ಸರ್ಕಸ್ಸಾ' ಎಂದು ಟೀಕಿಸದ್ದಾರೆ. ಇನ್ನೊಬ್ಬ ಬಳಕೆದಾರರು (User), 'ಮದುವೆ ಶಾಸ್ತ್ರಗಳನ್ನು ಹೀಗೆ ಟೀಕಿಸುವುದು ಸರಿಯಲ್ಲ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ. 'ಇಂಥಾ ಘಟನೆಗಳಿಂದಲೇ ಮದುವೆ ನೆನಪು ಯಾವಾಗಲೂ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ' ಎಂದು ಬರೆದಿದ್ದಾರೆ.

ಮದುವೆ ಮನೆಗೆ ಏಕಾಏಕಿ ನುಗ್ಗಿದ ಆನೆ ಹಿಂಡು; ವಧುವಿನೊಂದಿಗೆ ವರ ಪರಾರಿ

ಬಲವಂತವಾಗಿ ಸ್ವೀಟ್ ತಿನ್ನಿಸಿದ ವರನ ಮುಖಕ್ಕೆ ಉಗುಳಿ ರಂಪಾಟ ಮಾಡಿದ ವಧು!
ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಶಾಸ್ತ್ರಗಳು  ನಡೆಯುತ್ತಿರುವಾಗ ವಧು, ವರನಿಗೆ ಸಿಹಿ ತಿನ್ನಿಸುವುದ್ನು ನೋಡಬಹುದು. ನಂತರ ವರ, ವಧುವಿಗೆ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಾನೆ. ಆದರೆ ವಧು(Bride) ಅದನ್ನು ತಿನ್ನುವುದಿಲ್ಲ, ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಾಳೆ.  ಆಗ ವರ ಆಕೆಗೆ ಬಲವಂತವಾಗಿ ಸಿಹಿ ತಿನ್ನಿಸಿ ಬಾಯಿಗೆ ಮೆತ್ತುತ್ತಾನೆ. ಇದರಿಂದ ಸಿಟ್ಟಿಗೆದ್ದ ವಧು ತಕ್ಷಣ ಆತನನ್ನು ತಳ್ಳುತ್ತಾಳೆ. ಮಂಟಪದಿಂದ ಕೆಳಕೆ ತಳ್ಳಿ ಬಿಡುತ್ತಾಳೆ. ಈ ಸಂದರ್ಭದಲ್ಲಿ ಮನೆ ಮಂದಿ ಆಕೆಯ ಸಮಾಧಾನ ಮಾಡಲು ಯತ್ನಿಸುತ್ತಾರೆ.

ಆದರೆ ವಧು ಯಾವುದಕ್ಕೂ ಜಗ್ಗದೆ ಹುಡುಗನನ್ನು ಹಿಗ್ಗಾಮುಗ್ಗಾ ಬೈಯಲು ಶುರು ಮಾಡುತ್ತಾಳೆ. ಆತನ ಮುಖಕ್ಕೆ ಕ್ಯಾಕರಿಸಿ ಉಗಿಯುತ್ತಾಳೆ. ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಝಾಡಿಸಿ ಒದೆಯುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ವಧುವನ್ನು ತಡೆಯಲು ಯತ್ನಿಸುತ್ತಾಳೆ. ಆದರೆ ವಧು ಸುಮ್ಮನಾಗುವುದಿಲ್ಲ. ಮಂಟಪ ಸಮೀಪವಿದ್ದ ಹಿರಿಯರಿಗೂ ಹೊಡೆಯುತ್ತಾಳೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

click me!