Sensual Kiss: ಸಂಗಾತಿಗೆ ಮತ್ತು ಬರುವ ಮುತ್ತು ಕೊಡುವುದು ಹೇಗೆ ?

By Suvarna News  |  First Published Feb 21, 2022, 7:34 PM IST

ಕಿಸ್ (Kiss) ಮಾಡೋದು ಅಂದ್ರೆ ಎಲ್ರಿಗೂ ಗೊತ್ತಿರೋ, ಎಲ್ರಿಗೂ ಇಷ್ಟ (Like) ಆಗೋ ವಿಚಾರನೇ. ಆದ್ರೆ ಕಿಸ್ ಮಾಡೋಕು ಒಂದು ರೀತಿ, ನೀತಿ ಇದೆ. ಮುತ್ತು ಕೊಡೋ ರೀತಿಯಾಗಿ ಸರಿಯಾಗಿದ್ರೆ ಮತ್ತು ಬರಿಸೋದು ಖಂಡಿತ. ಅದ್ಹೇಗೆ ಅನ್ನೋದು ನಿಮ್ಗೂ ಗೊತ್ತಾಗ್ ಬೇಕಾ. ಇದನ್ನೋದಿ.
 


ಮನುಷ್ಯರ ಜೀವನ ರೂಪುಗೊಂಡಿರುವುದೇ ಪ್ರೀತಿ (Love)ಯಿಂದ. ಪ್ರೀತಿಯಿಂದಲೇ ಈ ಜಗತ್ತು ನಿರ್ಮಾಣವಾಗಿದೆ. ದ್ವೇಷದಿಂದಲೇ ಈ ಜಗತ್ತು ನಾಶವಾಗುತ್ತಿದೆ. ಪ್ರೀತಿಯನ್ನು ಅನೇಕ ರೀತಿಯಲ್ಲಿ ವ್ಯಕ್ತಪಡಿಸಬಹುದು. ಆಲಿಂಗನ, ಚುಂಬನ, ಕಣ್ಣೀರು, ನಗು ಎಲ್ಲವೂ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಗಳೇ ಆಗಿವೆ. ಮುತ್ತಿನ ಮೂಲಕ ನಾವು ನಮ್ಮ ಭಾವನೆಯನ್ನು ಪ್ರೀತಿ ಪಾತ್ರರಿಗೆ ವ್ಯಕ್ತಪಡಿಸುತ್ತೇವೆ. ಹಾಗೆಂದು ಮುತ್ತು ಕೇವಲ ಸಂಗಾತಿಗೆ ಸೀಮಿತವಾಗಿಲ್ಲ. ಮಕ್ಕಳು, ಹಿರಿಯರು, ಸ್ನೇಹಿತರಿಗೆ ಕಿಸ್ (Kiss) ಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಚುಂಬನದಿಂದ ಹಲವಾರು ಆರೋಗ್ಯ (Health) ಪ್ರಯೋಜನಗಳು ಸಹ ಇವೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಸರಿಯಾದ ರೀತಿಯಲ್ಲಿ ಕಿಸ್ ಮಾಡಬೇಕಾದುದು ಅಗತ್ಯ.

ಮುತ್ತು ಎಂದರೆ ಒಬ್ಬ ವ್ಯಕ್ತಿ ತನ್ನ ತುಟಿಗಳನ್ನು ಇನ್ನೊಬ್ಬರನ್ನು ಸ್ಪರ್ಶಿಸುವುದಾಗಿದೆ. ಇದರಿಂದ ಪ್ರೀತಿ, ಭಾವೋದ್ರೇಕ, ಪ್ರಣಯ, ಲೈಂಗಿಕ ಆಕರ್ಷಣೆ, ಲೈಂಗಿಕ ಚಟುವಟಿಕೆ, ಲೈಂಗಿಕ (Sex0 ಪ್ರಚೋದನೆ, ವಾತ್ಸಲ್ಯ, ಗೌರವ, ಶುಭಾಶಯ, ಸ್ನೇಹ, ಶಾಂತಿ ಹೀಗೆ ವಿವಿಧ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಹುದು. ಆದರೆ ಸಂಗಾತಿಗಳಿಗೆ ನೀಡುವ ಮುತ್ತು ವಿಭಿನ್ನವಾಗಿರುತ್ತದೆ. ಅದನ್ನು ಯಾವ ರೀತಿ ನೀಡಿದರೆ ಚಂದ ಎಂಬುದನ್ನು ತಿಳಿಯಿರಿ.

Tap to resize

Latest Videos

Love Bites: ಲವ್ ಬೈಟ್ಸ್ ಬಗ್ಗೆ ವಾತ್ಸಾಯನ ಕಾಮಸೂತ್ರದಲ್ಲಿ ಹೇಳಿದ್ದೇನು ಗೊತ್ತೆ?

ನಿಧಾನವಾಗಿ ಆರಂಭಿಸಿ
ಯಾರನ್ನಾದರೂ ಚುಂಬಿಸುವಾಗ ಅದಕ್ಕಾಗಿ ಸಮಯವನ್ನು ತೆಗೆದುಕೊಳ್ಳಿ. ಆತುರಪಡಬೇಡಿ, ಏಕೆಂದರೆ ಅದು ಎಲ್ಲಾ ಸಂತೋಷವನ್ನು ಹಾಳುಮಾಡುತ್ತದೆ. ಇಷ್ಟಪಡುವ ಯಾರನ್ನಾದರೂ ಯದ್ವಾತದ್ವಾ ಚುಂಬಿಸುವುದು ಆ ಅನುಭವವನ್ನು ಹಾಳು ಮಾಡುತ್ತದೆ. ಹೀಗಾಗಿ ನಿಧಾನವಾಗಿ ಬರಸೆಳೆದು, ಪ್ರೀತಿಯಿಂದ ನಕ್ಕು ನಿಧಾನವಾಗಿ ಮುತ್ತು ಕೊಡಲು ಆರಂಭಿಸಿ.

ಚುಂಬಿಸುವಾಗ ಒತ್ತಡ ಹಾಕಿ
ಸಂಗಾತಿಯನ್ನು ಚುಂಬಿಸುವಾಗ ಸ್ಪಲ್ಪ ಒತ್ತಡವನ್ನು ಹಾಕಿ. ಇದು ನಿಮ್ಮ ಸಂಗಾತಿಯನ್ನು ಖುಷಿಪಡಿಸುತ್ತದೆ. ಚುಂಬಿಸುವಾಗ ಸ್ಪಲ್ಪ ಕಚ್ಚುವುದು ಅಥವಾ ಹಲ್ಲುಗಳಿಂದ ತುಟಿಗಳ ಮೇಲೆ ಸ್ವಲ್ಪ ಒತ್ತಡ ಹಾಕುವುದು ಸಂಗಾತಿಯನ್ನು ಉದ್ರೇಕಗೊಳಿಸುತ್ತದೆ.

ಚುಂಬಿಸುವಾದ ದೇಹವನ್ನೂ ಬಳಸಿ
ಚುಂಬಿಸುವಾಗ ಬರೀ ತುಟಿ (Lips) ಮಾತ್ರ ಕೆಲಸ ಮಾಡುವುದಲ್ಲ. ಮುತ್ತು ಎಂದರೆ ತುಟಿಯನ್ನು ಮತ್ತೊಬ್ಬರ ದೇಹದ ಮೇಲೆ ಸುಮ್ಮನೆ ಊರಿ ಬಿಡುವುದಲ್ಲ. ಚುಂಬಿಸುವಾದ ಸಂಪೂರ್ಣ ದೇಹ ಖುಷಿಯಿಂದ ಒಗ್ಗಿಕೊಳ್ಳಲಿ. ಮುತ್ತು ಕೊಡುವಾಗ ದೇಹವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಕೈಗಳನ್ನು ಸಂಗಾತಿಯ ದೇಹದ ಸುತ್ತಲೂ ಬಳಸಿ, ತಬ್ಬಿಕೊಳ್ಳಿ. ಇದು ಇಬ್ಬರ ನಡುವೆ ಘರ್ಷಣೆಯನ್ನು ಉಂಟುಮಾಡುತ್ತದೆ ಮತ್ತು ಬಹಳಷ್ಟು ಭಾವೋದ್ರಿಕ್ತ ಮತ್ತು ಇಂದ್ರಿಯ ಕ್ಷಣಗಳನ್ನು ಸೃಷ್ಟಿಸುತ್ತದೆ. 

ಮುತ್ತಿನ ಕುರಿತು ಹೀಗೊಂದು ಇಂಟ್ರೆಸ್ಟಿಂಗ್ ಸ್ಟೋರಿ

ನಾಲಗೆಯನ್ನು ಬಳಸಿ
ಚುಂಬಿಸುವಾಗ ನಿಮ್ಮ ನಾಲಿಗೆ (Tongue)ಯನ್ನು ಬುದ್ಧಿವಂತಿಕೆಯಿಂದ ಬಳಸಿ. ನಾಲಿಗೆ ಮತ್ತು ಬಾಯಿ ನಿಮ್ಮ ಸಂಗಾತಿಯನ್ನು ಮುದ್ದಿಸಲಿ. ಆದರೆ ಒಂದು ತಪ್ಪು ನಡೆಯು ನಿಮ್ಮ ಸಂಗಾತಿಗೆ ಇಷ್ಟವಾಗದಿರಬಹುದು. ಹೀಗಾಗಿ ನಿಧಾನವಾಗಿ ಆರಂಭಿಸಿ, ಈ ರೀತಿ ಮಾಡಿ.

ಸಂಗಾತಿಯನ್ನು ಕೀಟಲೆ ಮಾಡಿ
ಪ್ರೀತಿಯಿಂದ ಮಾತನಾಡುತ್ತಾ, ನಗುತ್ತಾ ಸಂಗಾತಿಯನ್ನು ಚುಂಬಿಸಿ ಚುಂಬನ ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವು ಬಯಸಿದರೆ, ಚುಂಬನದ ನಡುವೆ ನಿಮ್ಮ ಸಂಗಾತಿಯನ್ನು ಸ್ವಲ್ಪಮಟ್ಟಿಗೆ ಕೀಟಲೆ ಮಾಡಬಹುದು. ಮುತ್ತು ಕೊಡುವಾಗ ಮುಂಚೆ ಅವರಿಗೆ ಸಿಗದಂತೆ ಆಟವಾಡಿಸಿ. ಸಾಕಷ್ಟು ಆಟದ ನಂತರ ಒಂದಾಗಿ ಸಿಗುವ ಮುತ್ತು ಅವರಿಗೆ ಹೆಚ್ಚು ಖುಷಿಯನ್ನುಂಟು ಮಾಡುತ್ತದೆ.

ಚುಂಬಿಸುವ ಪ್ರಕ್ರಿಯೆ ಯಾಂತ್ರಿಕವಾಗಿರದಿರಲಿ
ಮುತ್ತು ಕೊಡುವ ಪ್ರಕ್ರಿಯೆಯಲ್ಲಿ ಇದು ಪ್ರಮುಖವಾದುದು. ಎಲ್ಲಿಗೆ ಕಿಸ್ ಮಾಡುತ್ತೀರಿ, ಹೇಗೆ ಕಿಸ್ ಮಾಡುತ್ತೀರಿ ಎಂಬುದಕ್ಕಿಂತ ಯಾವ ಭಾವನೆಯನ್ನಿಟ್ಟುಕೊಂಡು ಕಿಸ್ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಮುತ್ತು ಕೊಡುವಾಗ ನೀವು ಚೆನ್ನಾಗಿರುವ ಮೂಡ್‌ (Mood)ನಲ್ಲಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಚುಂಬನವೆಂಬುದು ಕೇವಲ ತುಟಿಗೆ ತುಟಿ ಬೆರೆಸುವ ಯಾಂತ್ರಿಕ ಪ್ರಕ್ರಿಯೆ, ಸೆಕ್ಸ್‌ನ್ನು ಒಂದು ಭಾಗವಷ್ಟೇ ಆಗದಿರಲಿ. ಪರಸ್ಪರ ನಕ್ಕು, ಮಾತನಾಡಿ ನಂತರ ಚುಂಬಿಸಿ. ಈ ರೀತಿಯಲ್ಲಿ ಮುತ್ತು ಕೊಟ್ಟರೆ ನಿಮ್ಮ ಸಂಗಾತಿ ಮುತ್ತಿನಲ್ಲಿ ಮುಳುಗೇಳುವುದು ಖಂಡಿತ.

click me!