ಸೆಕ್ಸ್ ಮಾಡುವಾಗ ವೀರ್ಯ ಹೊರ ಚೆಲ್ಲುತ್ತದೆ. ಹೀಗಾದರೆ ಮಕ್ಕಳಾಗೋದು ಹೇಗೆ ಅಂತ ಯೋಚಿಸಿ ತಲೆ ಕೆಡುತ್ತದೆ. ಇದೆಲ್ಲವನ್ನು ನಮ್ಮೆಜಮಾನ್ರ ಬಳಿ ಹೇಳುವಷ್ಟು ಧೈರ್ಯ ಇಲ್ಲ. ದಯಮಾಡಿ, ನಾನು ಮಕ್ಕಳಾಗ್ಬೇಕು ಅಂದರೆ ಏನ್ಮಾಡ್ಬೇಕು ಅಂತ ಹೇಳ್ತೀರಾ?
ಪ್ರಶ್ನೆ - ನಾನು 25 ವರ್ಷದ ಮಹಿಳೆ. ಮದುವೆಯಾಗಿ ಐದಾರು ತಿಂಗಳಾಗಿವೆ. ಯಜಮಾನ್ರ ಬಳಿ ಏನನ್ನಾದರೂ ಕೇಳಲು ಭಯ, ಸಂಕೋಚ. ಅವರು ತುಂಬ ಸೈಲೆಂಟ್, ಸೀರಿಯಸ್ ವ್ಯಕ್ತಿ. ಮದುವೆಯಾಗಿ ಇಷ್ಟು ಸಮಯವಾದರೂ ಅವರ ಬಳಿ ಮಾತಾಡಿದ್ದು ಬಹಳ ಕಡಿಮೆ. ಮೊದ ಮೊದಲು ಸೆಕ್ಸ್ ಅಂದರೆ ಬಹಳ ಭಯವಾಗ್ತಿತ್ತು. ಈಗ ಭಯ ಇಲ್ಲ, ಅಂಥಾ ಆಸಕ್ತಿಯೂ ಇಲ್ಲ. ಆದರೆ ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ನನಗೆ ಸೆಕ್ಸ್ ನಲ್ಲಿ ಆಸಕ್ತಿ ಬರದ ಕಾರಣ ಮಕ್ಕಳಾಗ್ತವಾ ಇಲ್ಲವಾ ಅಂತ ಭಯ ಶುರುವಾಗಿದೆ. ಜೊತೆಗೆ ಸೆಕ್ಸ್ ಮಾಡುವಾಗ ವೀರ್ಯ ಹೊರ ಚೆಲ್ಲುತ್ತದೆ. ಹೀಗಾದರೆ ಮಕ್ಕಳಾಗೋದು ಹೇಗೆ ಅಂತ ಯೋಚಿಸಿ ತಲೆ ಕೆಡುತ್ತದೆ. ಇದೆಲ್ಲವನ್ನು ನಮ್ಮೆಜಮಾನ್ರ ಬಳಿ ಹೇಳುವಷ್ಟು ಧೈರ್ಯ ಇಲ್ಲ. ದಯಮಾಡಿ, ನಾನು ಮಕ್ಕಳಾಗ್ಬೇಕು ಅಂದರೆ ಏನ್ಮಾಡ್ಬೇಕು ಅಂತ ಹೇಳ್ತೀರಾ?
ಉತ್ತರ - ಮೊದಲನೆಯ ವಿಚಾರ ನೀವು ದೈಹಿಕವಾಗಷ್ಟೇ ಒಂದಾಗಿದ್ದೀರಿ. ಮಾನಸಿಕವಾಗಿ ಅಪರಿಚಿತರಾಗಿ ಉಳಿದಿದ್ದೀರಿ. ಮಾನಸಿಕವಾಗಿಯೂ ಹತ್ತಿರವಾಗದಿದ್ದರೆ ಸೆಕ್ಸ್ ಒಂದು ಕ್ರಿಯೆಯಾಗುತ್ತೆ, ಒಂದು ವ್ಯಾಯಾಮದ ಹಾಗೆ ಅಷ್ಟೇ. ನೀವು ಮಾನಸಿಕವಾಗಿ ಹತ್ತಿರಾದರಷ್ಟೇ ಈ ಕ್ರಿಯೆಯಲ್ಲಿ ನಿಜವಾದ ಆನಂದ ಸಿಗುತ್ತೆ. ಜೊತೆಗೆ ಪತಿ ಪತ್ನಿಯರ ನಡುವೆ ಬಾಂಡಿಂಗ್ ಚೆನ್ನಾಗಿರುತ್ತದೆ. ಸದ್ಯ ನೀವು ಪತಿಯ ಬಗ್ಗೆ ಇರುವ ಭಯ ಬಿಡಿ. ಅವರ ಜೊತೆಗೆ ಫ್ರೀಯಾಗಿ ಮಾತನಾಡಲು, ಫ್ರೆಂಡ್ಲಿಯಾಗಿ ಒಡನಾಡಲು ಆರಂಭಿಸಿ, ನಿಮ್ಮ ಸಮಸ್ಯೆ ಹಂಚಿಕೊಳ್ಳಿ. ಆಗ ನಿಮಗೂ ಸೆಕ್ಸ್ ನಲ್ಲಿ ಖುಷಿ ಸಿಗುತ್ತದೆ. ಸ್ರವಿಸುವ ವೀರ್ಯವೆಲ್ಲ ಗರ್ಭದೊಳಗೆ ಹೋಗಲ್ಲ, ವೀರ್ಯದಲ್ಲಿ ಅಸಂಖ್ಯಾತ ವೀರ್ಯಾಣುಗಳಿರುತ್ತದೆ. ಅವುಗಳಲ್ಲಿ ಒಂದು ವೀರ್ಯಾಣು ಫಲಿತವಾಗುತ್ತದೆ. ವೀರ್ಯ ಹೊರ ಚೆಲ್ಲುವುದು ಸಹಜ ಕ್ರಿಯೆ. ನೀವು ಮನಸ್ಸಿಲ್ಲದ ಮನಸ್ಸಿಂದ ಸೆಕ್ಸ್ ಮಾಡಿದರೂ ಗರ್ಭ ಧರಿಸುವ ಸಾಧ್ಯತೆ ಇದ್ದೇ ಇದೆ. ಆದರೆ ಮಾನಸಿಕ ಒತ್ತಡಗಳು, ಹಿಂಸೆ ಇತ್ಯಾದಿ ಹುಟ್ಟುವ ಮಗುವಿನ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ.
ಪ್ರಗ್ನೆನ್ಸಿ; ಹೀಗಿರಲಿ ಪತಿಪತ್ನಿ ನಡುವಿನ ಇಂಟಿಮಸಿ
ಪ್ರಶ್ನೆ- ನನಗೀಗ 25 ವರ್ಷ ವಯಸ್ಸು, ಗಂಡಸು. ನಾನು ಅಷ್ಟು ಆಕರ್ಷಕನಲ್ಲದ ಕಾರಣ ನನ್ನ ಕಡೆ ಯಾವ ಹುಡುಗಿಯೂ ತಿರುಗಿ ನೋಡೋದಿಲ್ಲ. ನನ್ನ ಗೆಳೆಯರಿಗೆಲ್ಲ ಗರ್ಲ್ ಫ್ರೆಂಡ್ ಇದ್ದಾರೆ. ಅವರು ಆಗಾಗ ಲೈಂಗಿಕ ಅನುಭವ ಪಡೆಯುತ್ತಾರೆ. ಆ ವಿಚಾರಗಳನ್ನು ನನ್ನ ಬಳಿಯೂ ಶೇರ್ ಮಾಡಿಕೊಳ್ಳುತ್ತಾರೆ. ನಾನು ವರ್ಜಿನ್. ಸೆಕ್ಸ್ ಮಾಡಲೇಬೇಕೆಂಬ ಹಂಬಲ. ಅವರ ಮಾತು ಕೇಳಿದ ಮೇಲೆ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಆದರೆ ಇತ್ತೀಚೆಗೆ ನನಗೆ ಖಿನ್ನತೆ ಶುರುವಾಗ್ತಿದೆ ಅನಿಸುತ್ತೆ, ಯಾವ ಹುಡುಗಿಯೂ ನನ್ನ ಇಷ್ಟ ಪಡೋದಿಲ್ಲ ಅನ್ನೋದೇ ಅದಕ್ಕೆ ಕಾರಣ. ನನಗೆ ನನ್ನ ಬಗೆಗೇ ಬೇಸರ ಹುಟ್ಟುತ್ತದೆ. ನನ್ನ ಹುಟ್ಟಿಗೆ ಕಾರಣವಾದ ಅಪ್ಪ ಅಮ್ಮನ ಮೇಲೂ ಹರಿಹಾಯುತ್ತೇನೆ. ಕೆಲವೊಮ್ಮೆ ದಿನಕ್ಕೆ ನಾಲ್ಕು ಬಾರಿ ಹಸ್ತಮೈಥುನ ಮಾಡಿಕೊಳ್ಳೋದೂ ಇದೆ. ದಯಮಾಡಿ ನನ್ನ ಸಮಸ್ಯೆ ಪರಿಹರಿಸಿ.
#Feelfree: ನಾವಿಬ್ರೂ ಮಂಚದಲ್ಲಿರುವಾಗ ಮಗ ನೋಡಿಬಿಟ್ಟ!
ಉತ್ತರ- ನೀವು ತಕ್ಷಣ ಆಪ್ತ ಸಲಹೆಗಾರರನ್ನು ಕಾಣುವುದು ಉತ್ತಮ. ಈಗ ನಿಮ್ಮಲ್ಲಿ ಬಲಗೊಳ್ಳಬೇಕಾದ್ದು ಆತ್ಮವಿಶ್ವಾಸ. ಇದೊಂದಿದ್ದರೆ ನಿಮ್ಮ ರೂಪದಲ್ಲಿ ಆಕರ್ಷಣೆ ತನ್ನಿಂತಾನೆ ಸೃಷ್ಟಿಯಾಗುತ್ತದೆ. ನಿಮ್ಮ ಖಿನ್ನತೆಯೂ ಕಡಿಮೆಯಾಗುತ್ತದೆ. ದಿನಕ್ಕೆ ನಾಲ್ಕೈದು ಬಾರಿ ಹಸ್ತಮೈಥುನ ಮಾಡಿಕೊಳ್ಳೋದು ಒಳ್ಳೆಯದಲ್ಲ. ತೀವ್ರವಾಗಿ ನಿಮ್ಮ ಆಸಕ್ತಿಯ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಬೆಳಗ್ಗೆ ಬೇಗ ಎದ್ದು ರನ್ನಿಂಗ್ ಮಾಡಿ. ಬಿಸಿಲು ಮೈಗೆ ಬೀಳುತ್ತಿರಲಿ. ಕೌನ್ಸಿಲಿಂಗ್ ಜೊತೆಗೆ ಇದನ್ನೆಲ್ಲ ಮಾಡುತ್ತಿದ್ದರೆ ನೀವು ಈ ಎಲ್ಲ ಸಮಸ್ಯೆಗಳಿಂದ ಹೊರಬರಬಹುದು.
#Feelfree: ಆಫೀಸಲ್ಲೂ ಪೋರ್ನ್ ನೋಡ್ತೀನಿ, ಪರವಾಗಿಲ್ವಾ?