ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

By Suvarna News  |  First Published Jun 24, 2020, 5:42 PM IST

ಪಲಾಯನವಾದದ ಹಾದಿ ಖಂಡಿತಾ ಎಮೋಶನಲಿ ಇಂಟೆಲಿಜೆಂಟ್ ಇರುವವರು ಹಿಡಿಯುವ ಹಾದಿಯಲ್ಲ. ಎಮೋಶನ್ಸ್‌ಗಳಿಂದ ದೂರ ಓಡುವುದೆಂದರೆ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ನೋಡುವುದು. ಇದು ತಾತ್ಕಾಲಿಕ ಸಮಾಧಾನ ನೀಡಬಹುದೇ ಹೊರತು, ಧೀರ್ಘಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಡ್ಯಾಮೇಜನ್ನು ಮಾಡುತ್ತವೆ. 


ಉದ್ಯೋಗ ಕ್ಷೇತ್ರದಲ್ಲಿ, ಸಂಬಂಧಗಳಲ್ಲಿ, ಸಾಮಾಜಿಕ ಬದುಕಿನಲ್ಲಿ- ಯಶಸ್ವಿಯಾಗಲು ಕೇವಲ ಜ್ಞಾನ ಬುದ್ಧಿವಂತಿಕೆ ಸಾಲುವುದಿಲ್ಲ, ಅಲ್ಲೆಲ್ಲ ಎಮೋಶನಲ್ ಇಂಟೆಲಿಜೆನ್ಸ್ ಕೂಡಾ ಹೆಚ್ಚಿರಬೇಕು ಎಂದು ಹಲವು ಬಾರಿ ಕೇಳಿರುತ್ತೀರಿ. ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿರುವವರು ಹೆಚ್ಚು ಬೇಗ ಎತ್ತರದ ಸ್ಥಾನಕ್ಕೇರುತ್ತಾರೆ, ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಆದರೆ, ಈ ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳುವುದು ಹೇಗೆ?

ನಿಮ್ಮ ಭಾವನೆಗಳನ್ನು ಗಮನಿಸಿ
ಯಾವುದಾದರೂ ಭಾವನೆಗಳು ಎದ್ದು ಕಾಡುವಾಗ ಸ್ವಲ್ಪ ನಿಮ್ಮದೇ ಆದ ಸಮಯ ತೆಗೆದುಕೊಂಡು ಆ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅದು ನೋವುಂಟು ಮಾಡುವಂಥದ್ದಾಗಿದ್ದರೆ, ಕೋಪ ತರುವಂಥದ್ದಾಗಿದ್ದರೆ ನಿಮಗೆ ನೀವೇ ಆ ಕುರಿತು ಪ್ರಶ್ನೆಗಳನ್ನು ಕೇಳಿಕೊಂಡು ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿ. ಶಾಂತವಾದ ಬಳಿಕ ಮತ್ತೆ ಮುಂಚಿನ ಎಮೋಶನ್ ಕುರಿತು ಯೋಚಿಸಿ, ಪ್ರತಿಕ್ರಿಯಿಸುವ ಮುನ್ನ ಅದನ್ನು ನಿಯಂತ್ರಿಸುವ ದಾರಿಗಳನ್ನು ಹುಡುಕಿಕೊಳ್ಳಿ. ನಿಮ್ಮನ್ನು ನೀವೇ ಜಜ್ ಮಾಡುವುದನ್ನು ಬಿಡಿ. ಭಾವನೆಗಳು ಬಹಳ ನ್ಯಾಚುರಲ್ ಆಗಿ ಉದ್ಭವಿಸುವಂಥವು. ನೀವು ಅವುಗಳ ಬಗ್ಗೆ ಲಾಜಿಕಲ್ ಆಗಿ ಯೋಚಿಸಿ ಪ್ರತಿಕ್ರಿಯಿಸಬಹುದಷ್ಟೇ. ಹೆಚ್ಚು ಎಮೋಶನ್ಸ್ ಕೆದಕಿದ ಯಾವುದೇ ವಿಷಯದಲ್ಲಿ ತಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. ಎಮೋಶನ್ಸ್ ತಣ್ಣಗಾದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಅಭ್ಯಾಸ ಮಾಡಿ. 

ಹುಡುಗಿಯರು ಹೀಗಿದ್ದರೆ ಹುಡುಗರಿಗೆ ಇಷ್ಟವಾಗಲ್ಲ!

Tap to resize

Latest Videos

ನಿಮ್ಮ ಭಾವನೆಗಳನ್ನು ಹತ್ತಿಕ್ಕಬೇಡಿ
ಕೆಲವೊಮ್ಮೆ ಆತಂಕವಾಗುವುದು, ಸಿಟ್ಟಾಗುವುದು, ದುಃಖವಾಗುವುದು ಯಾವುದೂ ತಪ್ಪಲ್ಲ. ಆ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಆಗ ಆ ಎಲ್ಲ ನೆಗೆಟಿವ್ ಭಾವನೆಗಳು ಒಳಗೇ ದೊಡ್ಡದಾಗಿ ಬೆಳೆಯತೊಡಗುತ್ತವೆ. ಕಡೆಗೊಮ್ಮೆ ಸ್ಫೋಟಗೊಂಡು ದೊಡ್ಡ ಮಟ್ಟದಲ್ಲಿ ಹಾನಿ ಮಾಡುತ್ತವೆ. ಇಲ್ಲವೇ, ನಿಮ್ಮ ಮನಸ್ಸನ್ನು ಸಂಪೂರ್ಣ ಕೆಡಿಸಿ ಕೇವಲ ನೆಗೆಟಿವ್ ಯೋಚನೆಗಳೇ ಬರುವಂತಾಗುತ್ತದೆ ಇಲ್ಲವೇ ಖಿನ್ನತೆಗೆ ತಳ್ಳುತ್ತವೆ. ಅದಕ್ಕಾಗಿಯೇ ಪ್ರತಿ ಬಾರಿಯೂ ನಿಮಗೇನನ್ನಿಸಿತು ಎಂಬುದನ್ನು ಯಾರಾದರೂ ಆಪ್ತರಲ್ಲಿ ಹೇಳಿಕೊಳ್ಳುವುದು ಉತ್ತಮ ಅಭ್ಯಾಸ. ಹೇಳಿಕೊಳ್ಳುವುದು ಸಾಧ್ಯವಿಲ್ಲ ಎಂದಾಗ ಬರೆಯುವ ಅಭ್ಯಾಸವನ್ನಾದರೂ ಮಾಡಿ. ಇದರಿಂದ ಬಹಳಷ್ಟು ಸಮಾಧಾನ ಸಿಗುತ್ತದೆ. 

undefined

ಪಲಾಯನವಾದಿಗಳಾಗಬೇಡಿ
ಜೀವನದಲ್ಲಿ ಪ್ರತಿ ಬಾರಿಯೂ ಎಲ್ಲವೂ ನೀವಂದುಕೊಂಡಂತೆಯೇ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಪಲಾಯನವಾದದ ಹಾದಿ ಖಂಡಿತಾ ಎಮೋಶನಲಿ ಇಂಟೆಲಿಜೆಂಟ್ ಇರುವವರು ಹಿಡಿಯುವ ಹಾದಿಯಲ್ಲ. ಎಮೋಶನ್ಸ್‌ಗಳಿಂದ ದೂರ ಓಡುವುದೆಂದರೆ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ನೋಡುವುದು, ಅದಕ್ಕಾಗಿ ಕುಡಿತ, ಸಿಗರೇಟ್,  ಡ್ರಗ್ಸ್, ಅತಿಯಾಗಿ ಮೂವೀಸ್ ನೋಡುವುದು, ಅತಿಯಾಗಿ ಗಾಸಿಪ್ ಮಾಡಲು ಶುರು ಮಾಡುವುದು ಇತ್ಯಾದಿ ದಾರಿ ಹಿಡಿಯುವುದು. ಆದರೆ ಇವೆಲ್ಲವೂ ತಾತ್ಕಾಲಿಕ ಸಮಾಧಾನ ನೀಡಬಹುದೇ ಹೊರತು, ಧೀರ್ಘಕಾಲದಲ್ಲಿ ಡ್ಯಾಮೇಜನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತವೆ. 

ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ
ಯಾವಾಗಲೂ ಕಠಿಣ ಪರಿಸ್ಥಿತಿಯನ್ನು ಕೇವಲ ನಿಮ್ಮ ಮೂಗಿನ ನೇರಕ್ಕೆ ಯೋಚಿಸಬೇಡಿ. ಅ ಸಂದರ್ಭಕ್ಕೆ ಸಂಬಂಧಿಸಿರುವವರ ಮನಸ್ಥಿತಿ ಹೇಗಿರಬಹುದು ಎಂಬುದನ್ನು ಅವರ ದೃಷ್ಟಿಯಿಂದ ಯೋಚಿಸಲು ಪ್ರಯತ್ನಿಸಿ. ನಿಮ್ಮ ಎಮೋಶನ್ಸ್‌ಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಎದುರಿನವರ ಎಮೋಶನ್ಸ್‌ಗೂ ನೀಡಿ. ಇದಕ್ಕೆ ಅತ್ಯುತ್ತಮ ಕೇಳುಗರಾಗುವುದು ಮುಖ್ಯ. ಅವರ ಕತೆಯನ್ನು ಕೇಳಿ. ನೀವು ಕೇಳಲಾರಿರಿ ಅಥವಾ ಸರಿಯಾಗಿ ಸಂವಹಿಸಲಾರಿರಿ ಎಂದರೆ ನಿಮಗೆ ಇನ್ನೊಬ್ಬರ ಭಾವನೆಗಳು ಅರ್ಥವಾಗಲೂ ಸಾಧ್ಯವಿಲ್ಲ. ಹೆಚ್ಚು ಸೆನ್ಸಿಟಿವ್ ಆಗಿದ್ದು, ಅಗತ್ಯವಿದ್ದಲ್ಲಿ ಅವರ ಬೆಂಬಲಕ್ಕೆ ನಿಲ್ಲಿ. 

ದೇಹಭಾಷೆ ಓದಲು ಕಲಿಯಿರಿ
ಪದಗಳಲ್ಲಿಯೂ ವಿವರಿಸಲಾಗದ ಹಲವಷ್ಟನ್ನು ಮುಖಭಾವ ಹಾಗೂ ದೇಹಭಾಷೆಗಳು ಹೇಳುತ್ತಿರುತ್ತವೆ. ಅವನ್ನು ಓದಲು ಕಲಿಯಿರಿ. ನಿಮ್ಮ ಬಾಡಿ ಲಾಂಗ್ವೇಜನ್ನು ಕೂಡಾ ನಿಭಾಯಿಸುವುದನ್ನು ಅಭ್ಯಸಿಸಿ. ಕೆಲವೊಮ್ಮೆ ವ್ಯಕ್ತಿಯು ಸಮಾಧಾನದಿಂದಿಲ್ಲವಾದರೂ, ಅದನ್ನು ವ್ಯಕ್ತಪಡಿಸದೇ ಇರಬಹುದು. ಅವೆಲ್ಲವೂ ದೇಹಭಾಷೆಯಲ್ಲಿ ವ್ಯಕ್ತವಾಗುತ್ತಿರುತ್ತವೆ. ಅದನ್ನು ಅರ್ಥ ಮಾಡಿಕೊಂಡು ಹೆಚ್ಚು ಕರುಣೆಯಿಂದ ವರ್ತಿಸಿ. ಯಾರಾದರೂ ದೊಡ್ಡ ಸ್ವರದಲ್ಲಿ ಕೂಗಾಡುತ್ತಿದ್ದರೆ, ಅವರು ಸ್ಟ್ರೆಸ್‌ನಲ್ಲಿರುವುದೇ ಕಾರಣವಿರಬಹುದು. ಅದನ್ನು ಅರ್ಥ ಮಾಡಿಕೊಂಡು ಶಾಂತವಾಗಿ ಪ್ರತಿಕ್ರಿಯಿಸಿ, ಸಮಾಧಾನ ಹೇಳಿ. 

ನೋವನ್ನು ತಿರಸ್ಕರಿಸಬೇಡಿ, ತಬ್ಬಿಕೊಳ್ಳಿ; ಟಾಂಗ್ಲಿನ್ ಧ್ಯಾನ!

ನಿಮ್ಮ ಭಾವನೆಗಳ ಪರಿಣಾಮ ಗಮನಿಸಿ
ನಿಮ್ಮ ಭಾವನೆಗಳು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ಗಮನಿಸಿ. ನಿಮ್ಮೆದುರಿಗೆ ಯಾರಾದರೂ ಪ್ರಾಮಾಣಿಕವಾಗಿರಲು ಹಿಂದೆಮುಂದೆ ನೋಡುತ್ತಿದ್ದಾರೆಯೇ? ನಿಮ್ಮ ಒರಟನ್ನು ನೋಡಿ ಹೆದರುತ್ತಿದ್ದಾರೆಯೇ? ನಿಮ್ಮ ಮಾತನ್ನು ಕೇಳಲು ಯಾರಿಗೋ ಇಷ್ಟವಿಲ್ಲವೇ? ಇಂಥವನ್ನೆಲ್ಲ ಗಮನಿಸುತ್ತಾ, ನಿಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಿ. ಸಣ್ಣ ಸಣ್ಣ ಬದಲಾವಣೆ ಕೂಡಾ ನಿಮ್ಮ ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸುತ್ತಿರುತ್ತವೆ ಎಂಬುದನ್ನು ನೆನಪಿಡಿ. ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಿಕೊಳ್ಳುತ್ತಿರುವುದು ನಿರಂತರ ಅಭ್ಯಾಸ ಎಂಬ ಅರಿವಿರಲಿ. ಅದಕ್ಕೆ ವಯೋಬೇಧ ಇಲ್ಲ. 

ಹೆಚ್ಚು ನಗುತ್ತಾ ಇರಿ, ಮತ್ತೊಬ್ಬರನ್ನೂ ನಗಿಸಿ. ಹಾಸ್ಯಪ್ರಜ್ಞೆ ಹೆಚ್ಚಿಸಿಕೊಳ್ಳಿ. ಸದಾ ಪಾಸಿಟಿವ್ ಆಗಿರಿ. ನಿಮ್ಮ ಬಗ್ಗೆ ನೀವು ನಗಲು ಕಲಿಯಿರಿ. ಇನ್ನೊಬ್ಬರನ್ನು ದೂರುವ ಬದಲು ನಿಮ್ಮನ್ನು ಉತ್ತಮಗೊಳಿಸಿಕೊಳ್ಳಿ. ಬದುಕು ಬದಲಾಗುವುದನ್ನು ನೀವೇ ಗಮನಿಸಿ. 
 

click me!