ಸಂಬಂಧ ಸೂಕ್ಷ್ಮವಾದದ್ದು. ಸಂತೋಷ, ಪ್ರೀತಿ ಜೊತೆ ತೃಪ್ತಿಯೂ ಇಲ್ಲಿ ಮುಖ್ಯವಾಗುತ್ತದೆ. ಪತಿಯಿಂದ ಸಂಭೋಗ ಸುಖ ಸಿಗದೆ ಹೋದಾಗ ಪತ್ನಿ ಬದಲಾಗುವ ಸಾಧ್ಯತೆಯಿರುತ್ತದೆ. ನಿಮ್ಮ ಸನಿಹ ಪತ್ನಿಗೆ ಹಿತವೆನ್ನಿಸಿದೆಯೇ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.
ದಾಂಪತ್ಯದಲ್ಲಿ ಸಂಭೋಗ ( Intercourse) ಬೆಳೆಸುವುದು ಎಷ್ಟು ಮುಖ್ಯವೋ ಸಂತೃಪ್ತಿ (Satisfaction )ಸಿಗುವುದು ಅಷ್ಟೆ ಮುಖ್ಯ. ಶಾರೀರಿಕ ಸಂಬಂಧ ಬೆಳೆಸಬೇಕೆಂಬ ಕಾರಣಕ್ಕೆ ಸಂಬಂಧ ಬೆಳೆಸಿದ್ರೆ ಅದು ಯಾಂತ್ರಿಕವಾಗುತ್ತದೆ. ಸೆಕ್ಸ್ (Sex )ನಂತ್ರ ಸಂಗಾತಿ ಪರಾಕಾಷ್ಠೆ (Orgasm) ತಲುಪಿದ್ದಾರೆ ಎಂಬುದನ್ನು ತಿಳಿಯಬೇಕಾಗುತ್ತದೆ. ನಿಮ್ಮ ಸಂಗಾತಿ ಯಾವಾಗ ಪರಾಕಾಷ್ಠೆ ಹೊಂದುತ್ತಾರೆ ಎಂಬುದು ನಿಮಗೆ ತಿಳಿದಿದ್ದರೆ ಒಳ್ಳೆಯದು. ಕೆಲವರಿಗೆ ಇದು ತಿಳಿಯುವುದಿಲ್ಲ. ಬಹುತೇಕ ಮಹಿಳೆಯರು ಸಂಭೋಗದಲ್ಲಿ ಪರಾಕಾಷ್ಠೆ ತಲುಪಿರುವುದಿಲ್ಲ. ಅವರಿಗೆ ಸಂಪೂರ್ಣ ಚರ್ಮ ಸುಖ ಪ್ರಾಪ್ತಿಯಾಗಿರುವುದಿಲ್ಲ. ಆದ್ರೂ ಪತಿಯ ಸ್ವಾಭಿಮಾನಕ್ಕೆ ಧಕ್ಕೆಯಾಗದಿರಲಿ ಎನ್ನುವ ಕಾರಣಕ್ಕೆ ಅನೇಕ ಪತ್ನಿಯರು ಸುಳ್ಳು ಹೇಳ್ತಾರೆ. ನನ್ನಿಂದ ಪತ್ನಿಗೆ ಸಂಭೋಗ ಸುಖ ಸಿಕ್ಕಿಲ್ಲ ಎಂಬುದು ಪುರುಷರಿಗೆ ಸಾಮಾನ್ಯ ಸಂಗತಿಯಾಗಿರುವುದಿಲ್ಲ. ಇದನ್ನು ಪುರುಷರು ಗಂಭೀರವಾಗಿ ತೆಗೆದುಕೊಳ್ತಾರೆ. ಇದು ಅವರ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿಯೇ ಮಹಿಳೆಯರು ಪರಾಕಾಷ್ಠೆ ವಿಷ್ಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಪತ್ನಿಗೆ ಪರಾಕಾಷ್ಠೆ ಸಿಕ್ಕಿದೆಯೇ ಇಲ್ಲವೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಇದಕ್ಕೆ ಕೆಲ ದಾರಿಗಳಿವೆ. ಇಂದು ನಿಮ್ಮ ಸಂಗಾತಿ, ಸಂಭೋಗದಲ್ಲಿ ಪರಾಕಾಷ್ಠೆ ತಲುಪಿದ್ದಾರೆಯೇ ಎಂಬುದನ್ನು ಹೇಗೆ ಪತ್ತೆ ಮಾಡ್ಬೇಕೆಂಬುದನ್ನು ನಾವು ಹೇಳ್ತೆವೆ.
ನೇರ ಪ್ರಶ್ನೆ : ಪತ್ನಿಗೆ ಸಂತೃಪ್ತಿ ಸಿಕ್ಕಿದೆಯೇ ಅಥವಾ ಇಲ್ಲವೆ ಎಂಬುದನ್ನು ಕಂಡುಹಿಡಿಯಲು ಇರುವ ಸುಲಭ ಮಾರ್ಗ ಮಾತು. ನಿಮ್ಮ ಹೆಂಡತಿ ಜೊತೆ ಇದನ್ನು ನೀವು ನೇರವಾಗಿ ಕೇಳಬಹುದು. ಯಾವುದೇ ಒತ್ತಡವಿಲ್ಲದೆ,ಪ್ರೀತಿಯ ಮಾತಿನ ಜೊತೆ ನೀವು ಈ ಪ್ರಶ್ನೆಗೆ ಉತ್ತರ ಪಡೆಯಬಹುದು. ಸಂಬಂಧದ ಬಗ್ಗೆ ಫ್ರೀಯಾಗಿ ಮಾತನಾಡುವ ಪತ್ನಿ,ಇಷ್ಟಪಡುವ ಮತ್ತು ಇಷ್ಟಪಡದಿರುವ ವಿಷ್ಯವನ್ನು ಬಹಿರಂಗವಾಗಿ ಹೇಳುತ್ತಾಳೆ. ಪರಾಕಾಷ್ಠೆ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾಳೆ. ಈಗಿನ ಹುಡುಗಿಯರು ಇದ್ರ ಬಗ್ಗೆ ಮಾತನಾಡಲು ಹೆಚ್ಚು ಮುಜುಗರಪಡುವುದಿಲ್ಲ. ಹಾಗಾಗಿ ನೀವು ನಿಮ್ಮ ಪತ್ನಿಯ ಜೊತೆ ಇದ್ರ ಬಗ್ಗೆ ಬಹಿರಂಗವಾಗಿ ಮಾತನಾಡಬಹುದು. ಒಂದು ವೇಳೆ ಮಾತನಾಡುವುದು ಸಾಧ್ಯವಿಲ್ಲ ಎನ್ನುವವರು ಸಂಭೋಗದ ನಂತ್ರ ಮಹಿಳೆಯರ ವರ್ತನೆಯನ್ನು ನೋಡಿ,ಅವರಿಗೆ ಪರಾಕಾಷ್ಠೆ ಸಿಕ್ಕಿದೆಯೇ ಎಂಬುದನ್ನು ಪತ್ತೆ ಮಾಡಬಹುದು.
Married Life : ಕದ್ದುಮುಚ್ಚಿ ಪತಿಯ ಫೋನ್ ಚೆಕ್ ಮಾಡ್ತೀರಾ? ಹಾಗಿದ್ರೆ ಇದನ್ನೋದಿ
ಸಂಭೋಗದ ನಂತ್ರ ಬದಲಾಗುವ ವರ್ತನೆ : ಪರಾಕಾಷ್ಠೆ ತಲುಪಿದ ಸಂದರ್ಭದಲ್ಲಿ ಹಾಗೂ ಪರಾಕಾಷ್ಠೆ ಸಿಗದ ಸಮಯದಲ್ಲಿ ಮಹಿಳೆಯ ವರ್ತನೆ ಭಿನ್ನವಾಗಿರುತ್ತದೆ. ಅದನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ಪರಾಕಾಷ್ಠೆ ಪಡೆದ ಮಹಿಳೆ ಹೆಚ್ಚು ದಣಿಯುತ್ತಾಳೆ.
ಯೋನಿ ಕಿರಿದಾಗುತ್ತದೆ : ನಿಮ್ಮ ಸಂಗಾತಿ, ನೈಟ್ ಲೈಫಲ್ಲಿ ಉತ್ತುಂಗಕ್ಕೆ ತಲುಪಿದ್ದಾರೆಯೇ ಎಂಬುದನ್ನು ಖಾಸಗಿ ಅಂಗವೂ ಹೇಳುತ್ತದೆ. ಪರಾಕಾಷ್ಠೆ ನಂತ್ರ ಯೋನಿ ಕಿರಿದಾಗುತ್ತದೆ. ಉತ್ತೇಜನಗೊಂಡಾಗ ಪುರುಷರ ಖಾಸಗಿ ಅಂಗ ಗಟ್ಟಿಯಾದಂತೆ, ಪರಾಕಾಷ್ಠೆ ತಲುಪಿದ ಮಹಿಳೆಯ ಯೋನಿ ಕಿರಿದಾಗುತ್ತದೆ.
ಏಕಾಗ್ರತೆ ಸಾಧ್ಯವಾಗುವುದಿಲ್ಲ : ನಿಮ್ಮ ಸಂಗಾತಿಯನ್ನು ನೋಡಿಯೇ ನೀವು ಸಂಭೋಗ ಸುಖ ಪ್ರಾಪ್ತಿಯಾಗಿದೆಯೇ ಎಂಬುದನ್ನು ಪತ್ತೆ ಮಾಡಬಹುದು. ಅವರಿಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಲು ವಿಫಲವಾಗ್ತಾರೆ. ಕಣ್ಣುಗಳನ್ನು ಅವರು ತೆರೆಯಲು ಇಷ್ಟಪಡುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ನೋಡಲು ಬಯಸುವುದಿಲ್ಲ.
ದೇಹವು ಹೆಚ್ಚು ಸೂಕ್ಷ್ಮವಾಗುತ್ತದೆ : ಸಂಗಾತಿ ದೇಹವು ಹೆಚ್ಚು ಸೂಕ್ಷ್ಮವಾಗುವುದನ್ನು ನೀವು ಗಮನಿಸಬಹುದು. ಪರಾಕಾಷ್ಠೆಯ ನಂತರವೂ ನೀವು ಲೈಂಗಿಕ ಕ್ರಿಯೆ ಮುಂದುವರೆಸಿದಾಗ ಅವಳು ಹೆಚ್ಚು ಪ್ರತಿಕ್ರಿಯಿಸುತ್ತಾಳೆ. ಪ್ರತಿಯೊಂದರಲ್ಲೂ ಆಕೆ ಸುಖ ಅನುಭವಿಸುತ್ತಾಳೆ. ಇದು ಅವಳ ಸಂತೋಷವನ್ನು ಹೆಚ್ಚಿಸುತ್ತದೆ. ಆದರೆ ಈ ಸಮಯದಲ್ಲಿ ನೋವಾಗುವ ಸಾಧ್ಯತೆಯೂ ಇದೆ.
Attraction Theory: ಇಬ್ಬರ ನಡುವೆ ಆಕರ್ಷಣೆ ಹುಟ್ಟೋಕೆ ಇಷ್ಟೆಲ್ಲ ಕಾರಣಗಳು ಬೇಕು..
ಬದಲಾಗುವ ಮೂಡ್ : ಪರಾಕಾಷ್ಠೆ ಸಿಗದಿರುವಾಗ ತೃಪ್ತಿ ಹೊಂದಲು ಸಾಧ್ಯವಿಲ್ಲ. ಆಗ ಪತ್ನಿ ನಿಮ್ಮ ಬಳಿಗೆ ಬರದೆ ಇರಬಹುದು. ಅನವಶ್ಯಕ ಜಗಳ ಮಾಡಬಹುದು. ಆದ್ರೆ ಪರಾಕಾಷ್ಠೆ ಪ್ರಾಪ್ತಿಯಾದಾಗ ಮೂಡ್ ಬದಲಾಗಿರುತ್ತದೆ. ನಿಮಗೆ ಮತ್ತಷ್ಟು ಆತ್ಮೀಯರಾಗುತ್ತಾರೆ. ಇಬ್ಬರ ಮಧ್ಯೆ ಹೆಚ್ಚಿನ ಸಂತೋಷ ಕಾಣಬಹುದು.