People Pleaser: ಜನರನ್ನು ಅತಿಯಾಗಿ ಮೆಚ್ಚಿಸೋಕೆ ಹೋಗಿ ನಿಮ್ಮತನ ಕಳೆದುಕೊಳ್ಬೇಡಿ

By Suvarna NewsFirst Published Jan 24, 2022, 5:34 PM IST
Highlights

ಇಷ್ಟವಿಲ್ಲದಿದ್ದರೂ ಇನ್ನೊಬ್ಬರು ಹೇಳಿದರೆಂದು ಯಾವುದೋ ಕೆಲಸ ಮಾಡುವವರು, ಅನಿಸಿಕೆಗೆ ವಿರುದ್ಧವಾಗಿ ವರ್ತಿಸುವುದು, ಅತಿಯಾದ ಸಹಾಯ ಮಾಡಲು ಮುಂದಾಗುವುದು, ಇನ್ನೊಬ್ಬರ ಸಿಡಿಮಿಡಿಗೆ ಭಯಪಡುವುದು, ಇನ್ನೊಬ್ಬರ ಕಿರಿಕಿರಿಗೆ ಕಾರಣವಾಗಬಾರದು ಎಂದು ಯತ್ನಿಸುವುದು... ಇಂಥವೆಲ್ಲ ಸ್ವಭಾವದಿಂದಾಗಿ ನಾವು ಪೀಪಲ್ ಪ್ಲೀಸರ್ ಎನಿಸಿಕೊಳ್ಳುತ್ತೇವೆ.
 

ನಿಮಗೆ ಇಷ್ಟವಿರಲಿ, ಇಲ್ಲದಿರಲಿ, ಆಪ್ತರು ಯಾರೋ ಹೇಳಿದರೆಂದು ನಿಮ್ಮ ಅಭಿಪ್ರಾಯ(Opinion), ನಿಲುವುಗಳನ್ನು ಬದಿಗೊತ್ತಿ ಅವರು ಹೇಳಿದಂತೆ ಮಾಡುತ್ತೀರಾ? ಯಾರಾದರೂ ನಿಮಗೆ ತೊಂದರೆಯಾಗುವಷ್ಟು ಸಹಾಯ ಕೇಳಿದರೂ “ನೋ’(No) ಎನ್ನಲು ನಿಮಗೆ ಸಾಧ್ಯವಾಗುವುದಿಲ್ಲವೇ? ಮನೆಯಲ್ಲಿ ಯಾವುದಾದರೂ ವಿಷಯಕ್ಕೆ ಸಂಬಂಧಿಸಿ ಅಭಿಪ್ರಾಯ ಕೇಳಿದರೆ “ಎಲ್ಲರೂ ಹೇಗೆ ಹೇಳುತ್ತೀರೋ ಹಾಗೆ’ ಎನ್ನುವ ಉತ್ತರ ನಿಮ್ಮದೇ? ನಿಮ್ಮ ಅನಿಸಿಕೆ ಬೇರೆಯಾಗಿದ್ದರೂ ಇನ್ನೊಬ್ಬರು ಹೇಳುವುದನ್ನು ಹೌದು ಎಂದು ಒಪ್ಪಿಕೊಳ್ಳುತ್ತೀರಾ? ಹಾಗಿದ್ದರೆ ನೀವು ಖಂಡಿತವಾಗಿ ಪೀಪಲ್ ಪ್ಲೀಸರ್ (People Pleaser). ಅಂದರೆ, ಜನರನ್ನು ಸಂಪ್ರೀತಿಗೊಳಿಸಲು ಮುಂದಿರುವ ಪೈಕಿ ಎಂದರ್ಥ. 
ನಾವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಮಾಜ(Society)ದ ಪಾತ್ರ ಬಲವಾಗಿರುತ್ತದೆ. ಯಾವುದೇ ನಿರ್ಣಯ (Dicision) ತೆಗೆದುಕೊಳ್ಳುವಾಗ “ಯಾರು ಏನು ಅಂದುಕೊಳ್ಳುತ್ತಾರೋ?’ ಎನ್ನುವ ಪ್ರಶ್ನೆಯೊಂದು ಇದ್ದೇ ಇರುತ್ತದೆ. ಈ ಪ್ರಶ್ನೆಯನ್ನು ಕೇಳದೆ ನಿಮಗೆ ಏನನಿಸುತ್ತದೆಯೋ ಅದನ್ನು ಮಾಡಿಬಿಟ್ಟರೆ ಏನಾಗುತ್ತದೆ? ಇದರಿಂದ ನಿಮ್ಮವರೇ ನಿಮ್ಮನ್ನು ದೂರುವಂತಾಗಬಹುದು, ಅಸಮಾಧಾನ ಹೊಂದಬಹುದು. ಇದನ್ನು ತಪ್ಪಿಸಿಕೊಳ್ಳಲೆಂದೇ ನೀವು ಪೀಪಲ್ ಪ್ಲೀಸರ್ ಆಗಿಬಿಡುತ್ತೀರಿ.

ನಾವೆಲ್ಲ ಪೀಪಲ್ ಪ್ಲೀಸರ್ಸ್!
ನಮಗೆಲ್ಲ ಸಹಾಯ (Help) ಮಾಡುವುದೆಂದರೆ ಇಷ್ಟ. ಆದರೆ, ಅದೂ ಸಹ ಮಿತಿಯಲ್ಲಿರಬೇಕು. ನಮಗೇ ಹಾನಿಯಾಗುವಷ್ಟು ಅಥವಾ ನಿಭಾಯಿಸಲು ಸಾಧ್ಯವಾಗದಷ್ಟು ಸಹಾಯ ಮಾಡಲು ಮುಂದಾಗುವುದು ಕರುಣಾಭಾವವನ್ನು ಬಿಂಬಿಸುವುದಿಲ್ಲ. ಪೀಪಲ್ ಪ್ಲೀಸಿಂಗ್ ಗುಣವನ್ನು ತೋರ್ಪಡಿಸುತ್ತದೆ.

ಯಾರ ಜತೆಗೂ ವೈಮನಸ್ಯ (Difference) ಬೇಡವೆಂಬ ಉದಾತ್ತ ನಿಲುವು ಮೇಲ್ನೋಟಕ್ಕೆ ಕಂಡುಬಂದರೂ ಪೀಪಲ್ ಪ್ಲೀಸಿಂಗ್ ಗುಣ ವ್ಯಕ್ತಿತ್ವ(Personality)ವನ್ನು ನಿಧಾನವಾಗಿ ನಾಶ ಮಾಡುತ್ತದೆ. ಆತ್ಮವಿಶ್ವಾಸ(Confidence)ವನ್ನು ಕಳೆದುಬಿಡುತ್ತದೆ. ಹೀಗಾಗಿ, ಸಹಾಯ ಮಾಡುವ ಹಾಗೂ ಇತರರಿಗೆ ನೋವುಂಟು ಮಾಡದಿರುವ ಗುಣಗಳು ಹದ ತಪ್ಪದಂತೆ ಎಚ್ಚರಿಕೆ ವಹಿಸಬೇಕು. 

ಇತ್ತೀಚೆಗೆ ಅಮೆರಿಕದ (America) ಖ್ಯಾತ ಸ್ಟ್ಯಾಂಡ್ ಅಪ್ ಕಾಮೆಡಿಯನ್ (Stand up Comedian) ಸಲ್ಮಾ ಹಿಂಡಿ (Salma Hindi) ಟೆಡ್ ಎಕ್ಸ್ (TEDx) ಮಾತುಕತೆಯಲ್ಲಿ ಈ ಗುಣದ ಬಗ್ಗೆ ಹಂಚಿಕೊಂಡಿದ್ದಾರೆ. ಪೀಪಲ್ ಪ್ಲೀಸಿಂಗ್ ಗುಣವನ್ನು ಕೈಬಿಟ್ಟ ಬಳಿಕ ತಮ್ಮ ಏಳ್ಗೆಯಾಗಿರುವ ಕುರಿತು ಹೇಳಿಕೊಂಡಿದ್ದಾರೆ. 

ಸಲ್ಮಾ ಪ್ರಕಾರ, ನಾವು ಇಷ್ಟಪಡದ ಹಾಗೂ ಮಾಡಲಿಚ್ಛಿಸದ ಕಾರ್ಯವನ್ನು ಇನ್ನೊಬ್ಬರ ಆಶಯದ ಮೇರೆಗೆ ಮಾಡುವುದು, ಇತರರ ಅಸಮ್ಮತಿ ಹಾಗೂ ಅವರ ಕಿರಿಕಿರಿಗೆ ನಾವು ಕಾರಣವಾಗಬಾರದು ಎಂದು ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳೆಲ್ಲ ಈ ಗುಣವನ್ನು ತೋರುತ್ತವೆ. 

ಯಾರಲ್ಲಿ ಹೆಚ್ಚು?
ಪ್ರೀತಿಪಾತ್ರರ ಅತಿಯಾದ ಅವಲಂಬನೆಗೂ ಪೀಪಲ್ ಪ್ಲೀಸಿಂಗ್ ಗುಣಕ್ಕೂ ಪರಸ್ಪರ ಸಂಬಂಧವಿದೆ. ಬದುಕಿನಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟಪಡದವರು, ಎಲ್ಲರೂ ಹೇಳಿದಂತೆ ಸಾಗಿದರೆ ರಿಸ್ಕ್ ಕಡಿಮೆ ಎಂದು ಭಾವಿಸುವವರು ಅರಿಯದೆಯೇ ಈ ಗುಣವನ್ನು ಅಳವಡಿಸಿಕೊಳ್ಳುತ್ತಾರೆ. 
ಯಾರದ್ದಾದರೂ ಬೆಂಬಲ ಬೇಕೆನ್ನುವವರದ್ದು ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ. 

National girl child day: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ನಿಮ್ಮಲ್ಲಿದೆಯೇ? ಚೆಕ್ (Check) ಮಾಡಿಕೊಳ್ಳಿ
ಸಲ್ಮಾ ಪ್ರಕಾರ, ಎರಡು ಪ್ರಶ್ನೆಗಳ ಮೂಲಕ ಪೀಪಲ್ ಪ್ಲೀಸಿಂಗ್ ಗುಣ ನಿಮ್ಮಲ್ಲಿದೆಯೇ ಎಂದು ಚೆಕ್ ಮಾಡಬಹುದು. ಒಂದನೆಯದಾಗಿ, ನಿಮ್ಮ ಜೀವನಕ್ಕೆ ಸಂಬಂಧಿಸಿದ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ಇತರರ ನಿಲುವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೀರಾ? ಎರಡನೆಯದು, ನಿಮ್ಮ ಸಂಬಂಧಗಳು ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ತೊಡಕಾಗಿವೆ ಎಂದೋ ಅಥವಾ ಸಂಬಂಧಗಳು ಅಡೆತಡೆಯೆಂದೋ ಭಾವಿಸುತ್ತೀರಾ? ಇವೆರಡೂ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ನೀವು ಪೀಪಲ್ ಪ್ಲೀಸರ್ ವ್ಯಕ್ತಿತ್ವದವರಾಗಿದ್ದೀರಿ ಎಂದರ್ಥ. 
“ಬದುಕಿನಲ್ಲಿ ಉದ್ದೇಶವೇ ಇಲ್ಲದೇ ಹೇಗೆ ಜೀವಿಸುತ್ತೀರಿ? ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ. ಇತರರನ್ನು ಸಂಪ್ರೀತಿಗೊಳಿಸುವ ಪ್ರಯತ್ನ ಕೈಬಿಡಿ’ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. 

Female Friends: ಸಂತೋಷದ ಜೊತೆ ಆರೋಗ್ಯಕ್ಕೆ ಅತ್ಯುತ್ತಮ ಮದ್ದು ಗೆಳತಿ

ಹೇಗೆ ಕೈಬಿಡುವುದು?
ಮನೋತಜ್ಞರ ಪ್ರಕಾರ, ಪೀಪಲ್ ಪ್ಲೀಸಿಂಗ್ ಗುಣವನ್ನು ಧೈರ್ಯವಾಗಿ ಕೈಬಿಡುತ್ತ ನಡೆಯಬಹುದು. ಮೊದಲನೆಯದಾಗಿ, ಕೆಲವು ನಿಮಗಿಷ್ಟವಿಲ್ಲದ ವಿಚಾರಗಳಲ್ಲಿ “ನೋ’ ಎನ್ನುವುದನ್ನು ಕಲಿತುಕೊಳ್ಳಿ. ನಿಮಗಿಷ್ಟವಿಲ್ಲವಾದರೆ ಆ ಕೆಲಸ ಮಾಡಬೇಡಿ. ಕೆಲವು ಬಾರಿ ನಿಮ್ಮ ನಿಲುವ(Stand)ನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ನೀವು ನಂಬುವ ವಿಚಾರಗಳಲ್ಲಿ ಅಚಲ ನಿರ್ಧಾರ ತೆಗೆದುಕೊಳ್ಳಿ. ಹೀಗೆ, ನಿಮ್ಮತನವನ್ನು ದಾಖಲಿಸುತ್ತ ಹೋಗಿ. ಕ್ರಮೇಣ ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಿಕೊಳ್ಳುವುದನ್ನು ನೀವೇ ಕಾಣುತ್ತೀರಿ. ಆಗ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ನಿಮಗೆ ಬರುತ್ತದೆ. ನಿಮ್ಮ ಬದುಕು (Life) ನಿಮ್ಮದೇ ಕೈಯಲ್ಲಿರುತ್ತದೆ. 
 

click me!