ದಾಂಪತ್ಯವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ. ಡಿಜಿಟಲ್ ಯುಗದಲ್ಲಿ ದಾಂಪತ್ಯ ಬೇಗ ಮುರಿದು ಬೀಳ್ತಿದೆ. ಕಚೇರಿಯಲ್ಲಿರುವ ಪತಿ, ಮನೆಯಲ್ಲಿರುವ ಪತ್ನಿಗೆ ಮಣ್ಣು ಮುಕ್ಕಿಸ್ತಿದ್ರೂ ಆಕೆಯ ಅರಿವಿಗೆ ಇದು ಬರೋದಿಲ್ಲ. ಒಂದ್ವೇಳೆ ಸತ್ಯ ಗೊತ್ತಾದ್ರೆ ಏನೆಲ್ಲ ಕ್ರಮಕೈಗೊಳ್ಳಬೇಕು ಗೊತ್ತಾ?
ದಾಂಪತ್ಯ ವಿಶ್ವಾಸ – ನಂಬಿಕೆಗಳ ಮೇಲೆ ನಿಂತಿರುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಸಂಗಾತಿ ಮೇಲೆ ಪ್ರೀತಿ ಜೊತೆ ನಂಬಿಕೆ ಇರಬೇಕಾಗುತ್ತದೆ ನಿಜ. ಹಾಗಂತ ಎಲ್ಲ ವಿಷ್ಯವನ್ನು ಬ್ಲೈಂಡ್ ಆಗಿ ನಂಬೋದು ಮೂರ್ಖತನ. ನಿಮ್ಮ ಸಂಗಾತಿ ಎಷ್ಟೇ ಪ್ರೀತಿ ತೋರಿಸಿದ್ರೂ, ಆಪ್ತರಾಗಿದ್ದರೂ, ವಿಶ್ವಾಸದಿಂದಿದ್ದರೂ ನೀವು ಸ್ವಲ್ಪ ಜಾಗರೂಕರಾಗಿರುವುದು ಮುಖ್ಯ. ಅದ್ರಲ್ಲೂ ವಿಶೇಷವಾಗಿ ಮಹಿಳೆಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಭಾವುಕರಾಗಿರುವ ಮಹಿಳೆಯರು ಪತಿ (Husband) ಯನ್ನು ಅತಿಯಾಗಿ ನಂಬುತ್ತಾರೆ. ಸಂಗಾತಿ ಹೇಳಿದ ಎಲ್ಲ ಮಾತುಗಳನ್ನು ನಂಬುವ ಅವರು, ಪತಿಯ ವರ್ತನೆಯಲ್ಲಿ ಬದಲಾವಣೆಯಾದ್ರೂ ಅದಕ್ಕೆ ತಮ್ಮದೆ ಒಂದು ಸಬೂಬು ನೀಡಿ ಸಮಾಧಾನಪಟ್ಟುಕೊಳ್ತಾರೆ. ಪತಿಯ ಕಚೇರಿ (Office) ಯಲ್ಲಿ ಯಾವುದೇ ಮಹಿಳೆ, ನಿಮ್ಮ ಪತಿಗೆ ಹತ್ತಿರವಾಗಿದ್ದಾಳೆ ಎಂದಾದ್ರೆ ಅಥವಾ ಫ್ಲರ್ಟ್ ಮಾಡ್ತಿದ್ದರೆ ನೀವು ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕು. ಯಾವುದೇ ಪತಿ ಈ ಗುಟ್ಟನ್ನು ಪತ್ನಿಗೆ ಹೇಳೋದಿಲ್ಲ. ಸ್ನೇಹಿತ (Friend) ರು ಅಥವಾ ಬೇರೆ ಮೂಲದಿಂದ ನಿಮ್ಮ ಕಿವಿಗೆ ಈ ವಿಷ್ಯ ಬಿದ್ದಾಗ, ನನ್ನ ಪತಿ ಅಂಥವರಲ್ಲ, ಶ್ರೀರಾಮಚಂದ್ರ ಎನ್ನುವ ಒಣ ಮಾತು ಬಿಟ್ಟು ಎಚ್ಚರಿಕೆ ತೆಗೆದುಕೊಳ್ಳಿ. ಕಚೇರಿಯಲ್ಲಿ ಯಾವುದೋ ಮಹಿಳೆ ನಿಮ್ಮ ಪತಿಗೆ ಹತ್ತಿರವಾಗ್ತಿದ್ದರೆ ನೀವೇನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
undefined
BEHAVIOR TIPS: ನೀವು ಅಂತರ್ಮುಖಿಗಳೇ? ಜನರೊಂದಿಗಿನ ಒಡನಾಟ ಸಾಕೆನಿಸಿದಾಗ ಹೀಗ್ಮಾಡಿ
ಪತಿ ಜೊತೆ ಮಾತನಾಡೋದು ಮುಖ್ಯ : ಮನಸ್ಸಿನಲ್ಲಿಯೇ ಕತ್ತಿ ಮಸೆಯುತ್ತ ಕುಳಿತ್ರೆ ಪ್ರಯೋಜನವಿಲ್ಲ. ನಿಮ್ಮ ಮೊದಲ ಹೆಜ್ಜೆ ಮಾತಾಗಿರಲಿ. ನೀವು ಪತಿ ಜೊತೆ ಮಾತುಕತೆ (Talk) ನಡೆಸಿ. ಮಹಿಳೆ ಫ್ಲರ್ಟ್ ಮಾಡ್ತಿದ್ರೂ ಪತಿ ಸಂಬಂಧವಿಲ್ಲದಂತೆ ಇದ್ದಾರೆ ಎಂದಾದ್ರೆ ನಿಮ್ಮ ಜೊತೆ ಮಾತನಾಡ್ತಾರೆ. ಮಾತನಾಡಿದ್ರೆ ನಿಮ್ಮ ಪತಿ ಎಷ್ಟು ಸತ್ಯ ಹೇಳ್ತಿದ್ದಾರೆ, ಎಷ್ಟು ಸುಳ್ಳು ಹೇಳ್ತಿದ್ದಾರೆ ಎಂಬುದನ್ನು ನೀವು ಪತ್ತೆ ಮಾಡಬಹುದು.
ಸಮಯ (Time) ಕ್ಕೆ ನೀಡಿ ಮಹತ್ವ : ಮದುವೆ ನಂತ್ರ ಅನೇಕ ಜವಾಬ್ದಾರಿಗಳು ಪತಿ – ಪತ್ನಿಯನ್ನು ದೂರ ಮಾಡುತ್ತದೆ. ಇಬ್ಬರಿಗೂ ಸಮಯವಿರೋದಿಲ್ಲ. ಇದು ಗಂಡ – ಹೆಂಡತಿ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಪತಿ ಕೆಲಸದಲ್ಲಿ ಎಷ್ಟೇ ಬ್ಯುಸಿಯಿದ್ರೂ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಲು ಹೇಳಿ. ಅವರ ಜೊತೆ ಆದಷ್ಟು ಸಮಯ ಕಳೆಯಿರಿ. ಅವರ ಜೊತೆಗಿನ ಸಂಬಂಧ ನಿಮಗೆ ಬೋರ್ ಆಗಿಲ್ಲ, ಅವರನ್ನು ಈಗ್ಲೂ ನೀವು ಪ್ರೀತಿ ಮಾಡ್ತಿರಿ ಎಂಬುದನ್ನು ಅವರಿಗೆ ಮನದಟ್ಟು ಮಾಡಿ. ನೀವಿಬ್ಬರು ಜೊತೆಗಿದ್ದರೆ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಅವಕಾಶವಿರೋದಿಲ್ಲ.
ಪತ್ನಿಗಿಂತ ಸ್ನೇಹಿತೆಯಾಗಲು ಪ್ರಯತ್ನಿಸಿ : ಸ್ನೇಹ ಎಲ್ಲಕ್ಕಿಂತ ಮಿಗಿಲಾಗಿರುತ್ತದೆ. ಪತ್ನಿಯಾದವಳು ಪತಿಗೆ ಒಳ್ಳೆ ಸ್ನೇಹಿತೆಯಾಗಿರಬೇಕು. ಆಗ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳೋದು ಸುಲಭ. ಪತಿ ತನ್ನ ಮನಸ್ಸಿನ ಭಾವನೆಗಳನ್ನು ನಿಮ್ಮ ಮುಂದೆ ತೋಡಿಕೊಳ್ತಾರೆ. ಪತ್ನಿ, ಸ್ನೇಹಿತೆಯಾದಾಗ ಪತಿ – ಪತ್ನಿ ಮಧ್ಯೆ ಸಂಬಂಧ ಗಟ್ಟಿಯಾಗುತ್ತದೆ. ಆಗ ಇನ್ನೊಬ್ಬ ಮಹಿಳೆಗೆ ನುಸುಳಲು ಜಾಗವಿರೋದಿಲ್ಲ.
Bedroom Secret ಬಹಿರಂಗಗೊಳಿಸಿದ ಬಾಲಿವುಡ್ನ ಖ್ಯಾತ ತಾರಾ ಜೋಡಿ!
ನಂಬಿಕೆ ಇಲ್ಲಿ ಮುಖ್ಯ – ಆತುರ ಬೇಡ : ಕಣ್ಣಲ್ಲಿ ಕಂಡಿದ್ದನ್ನು ಪರಾಮರ್ಶಿಸಿ ನೋಡು ಎನ್ನುವ ಮಾತಿದೆ. ಪತಿಯ ವರ್ತನೆ ಬದಲಾಗಿದೆ ಎಂದಾಗ ಆತುರದಲ್ಲಿ ಆತ ಮೋಸ ಮಾಡ್ತಿದ್ದಾನೆ ಎನ್ನುವ ನಿರ್ಧಾರಕ್ಕೆ ಬರಬೇಡಿ. ಹಾಗೆಯೇ ವರ್ತನೆ ಬದಲಾದ್ರೂ ಆತನನ್ನೇ ನಂಬಿ ಕುಳಿತುಕೊಳ್ಬೇಡಿ. ನಿಧಾನವಾಗಿ ಒಂದೊಂದೆ ನಡೆಯನ್ನು ಪರೀಕ್ಷಿಸಿ. ನಿಮ್ಮ ಪತಿಯನ್ನು ನೀವು ಎಷ್ಟು ನಂಬುತ್ತೀರಿ ಎಂಬುದನ್ನು ಅವರಿಗೆ ಮನದಟ್ಟು ಮಾಡಿ. ನಾನು ನಿಮ್ಮ ಪತ್ನಿ, ನಿಮ್ಮ ಮೇಲೆ ನನಗೆ ಸಂಪೂರ್ಣ ಹಕ್ಕಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿ. ಹಾಗೆಯೇ ನೀವು ಅವರ ಮೇಲಿಟ್ಟ ನಂಬಿಕೆಯನ್ನು ತಿಳಿಸಲು ಪ್ರಯತ್ನಿಸಿ.