ಪ್ರೀತಿ ಸಂಬಂಧದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರೀತಿ ಜೊತೆ ನೋವು ಕೂಡ ಇರುತ್ತದೆ. ಈ ಸಮಯವನ್ನು ಇಬ್ಬರು ಒಟ್ಟಿಗೆ ನಿಂತು ಎದುರಿಸಬೇಕಾಗುತ್ತದೆ. ಗರ್ಲ್ ಫ್ರೆಂಡ್ ಅಳ್ತಿದ್ದಾಗ ಅಲ್ಲಿಂದ ಕಾಲ್ಕೀಳದೆ, ಅಲ್ಲೇ ನಿಂತು ಆಕೆಗೆ ಸಾಂತ್ವಾನ ಹೇಳ್ಬೋದನ್ನು ಕಲಿಯಬೇಕಾಗುತ್ತೆ.
ಅಳೋದ್ರಲ್ಲಿ ಹೆಣ್ಮಕ್ಕಳು ಮುಂದೆ. ಸಣ್ಣ ಮಾತಿಗೂ ಗಳ, ಗಳ ಕಣ್ಣಲ್ಲಿ ನೀರು ಬಂದಿರುತ್ತದೆ. ಕೆಲ ಹುಡುಗಿಯರು ಬೇಸರವಾದ್ರೆ ಅಳ್ತಾರೆ ಮತ್ತೆ ಕೆಲ ಹುಡುಗಿಯರು ಕೋಪ ಅತಿರೇಕಕ್ಕೆ ಹೋದ್ರೆ ಅಳ್ತಾರೆ, ಇನ್ನು ಕೆಲ ಹುಡುಗಿಯರು ಸುಕಾಸುಮ್ಮನೆ ಅಳ್ತಾರೆ. ಹುಡುಗಿಯರ ಕಣ್ಣಲ್ಲಿ ನೀರು ಬರ್ತಿದ್ದಂತೆ ಬಹುತೇಕ ಹುಡುಗ್ರ ಭಾವನೆಗೆ ಹರ್ಟ್ ಆಗುತ್ತೆ. ಆ ಕ್ಷಣ ಏನು ಮಾಡ್ಬೇಕು ಅನ್ನೋದು ಅವರಿಗೆ ತಿಳಿಯೋದಿಲ್ಲ. ಕೆಲವರು ಸಿಟ್ಟು ಮಾಡಿಕೊಳ್ತಾರೆ. ಮತ್ತೆ ಕೆಲವರು ಸುಮ್ಮನೆ ಕುಳಿತಿರ್ತಾರೆ. ಇನ್ನು ಕೆಲ ಹುಡುಗ್ರು ಅಲ್ಲಿಂದ ಎದ್ದು ಹೋಗ್ತಾರೆ. ಹುಡುಗ್ರು ಅಳುವಿಗೆ ಪ್ರತಿಕ್ರಿಯೆ ನೀಡದೆ ಹೋದಾಗ ಹುಡುಗಿಯರ ಭಾವನೆಗೆ ಮತ್ತಷ್ಟು ಧಕ್ಕೆಯುಂಟಾಗುತ್ತೆ. ಸಮಾಧಾನ ಮಾಡದೆ ಹೊರಟು ಹೋದ ಎಂದು ಮತ್ತಷ್ಟು ನೊಂದುಕೊಳ್ತಾರೆ. ಇದೇ ಪದೇ ಪದೇ ನಡೆಯುತ್ತಿದ್ದರೆ ಇಬ್ಬರ ನಡುವಿನ ಸಂಬಂಧ ಹದಗೆಡುವ ಸಾಧ್ಯತೆಯಿದೆ. ಹುಡುಗಿ ಅಳ್ತಿದ್ದರೆ ಬಾಯ್ ಫ್ರೆಂಡ್ ಏನು ಮಾಡ್ಬೇಕು ಅನ್ನೋದನ್ನು ನಾವಿಂದು ಹೇಳ್ತೇವೆ.
ಗರ್ಲ್ ಫ್ರೆಂಡ್ (Girlfriend) ಅಳ್ತಿದ್ದರೆ (Crying) ಏನ್ ಮಾಡ್ಬೇಕು ಗೊತ್ತಾ? :
ಸಲಹೆ (Advice) ನೀಡಲು ಹೋಗ್ಬೇಡಿ : ನಿಮ್ಮ ಮುಂದೆ ಗರ್ಲ್ ಫ್ರೆಂಡ್ ಅಳ್ತಿದ್ದಾಳೆಂದ್ರೆ ನೀವು ತಕ್ಷಣ ಏನು ಕ್ರಮಕೈಗೊಳ್ಳುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆಕೆಯನ್ನು ತಬ್ಬಿಕೊಳ್ಳಬೇಕಾ? ಆಕೆಗೆ ಸುಮ್ಮನಿರು ಎನ್ನಬೇಕಾ ಇಲ್ಲ ಆಕೆ ಸಮಸ್ಯೆಗೆ ಸಲಹೆ ನೀಡ್ಬೇಕಾ ಎಂಬ ಗೊಂದಲದಲ್ಲಿಯೇ ಸಮಯ ಹಾಳಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಲಹೆ ನೀಡಲು ಹೋಗ್ಬೇಡಿ. ಅವರಿಗೆ ನಿಮ್ಮ ಸಲಹೆ ಅವಶ್ಯಕತೆ ಇರುವುದಿಲ್ಲ. ನಿಮ್ಮಿಂದ ಧೈರ್ಯ ಹಾಗೂ ಸ್ಪೂರ್ತಿಯನ್ನು ಅವರು ಬಯಸ್ತಾರೆ. ನಿನ್ನ ಸಮಸ್ಯೆ ನನಗೆ ಅರ್ಥವಾಗಿದೆ, ನಿನ್ನನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ನಿಮ್ಮ ಬಾಯಿಂದ ಬರಲಿ ಎಂದವರು ಬಯಸ್ತಾರೆ. ನೀನು ಯಾಕೆ ಹೀಗೆ ಮಾಡಿದೆ, ನೀನು ಯಾಕೆ ಹೀಗೆ ಮಾಡಲಿಲ್ಲ, ನೀನು ಹೀಗೆ ಮಾಡ್ಬೇಕಿತ್ತು ಎಂಬ ಮಾತು ಕೇಳಲು ಅವರು ಬಯಸೋದಿಲ್ಲ. ಹಾಗಾಗಿ ಎಂದೂ ಅಳುವವರ ಮುಂದೆ ಸಲಹೆ ನೀಡ್ಬೇಡಿ.
ಕೋಪ (Anger) ಪರಿಹಾರವಲ್ಲ : ಪುರುಷರು ಸಾಮಾನ್ಯವಾಗಿ ಅಳುವವರನ್ನು ನೋಡಿ ಕೋಪಗೊಳ್ತಾರೆ. ನಿಮ್ಮ ಕೋಪ ಅವರಿಗೆ ಬೇಡವಾಗಿರುತ್ತದೆ. ನೀವು ಕೋಪಗೊಂಡ್ರೆ ಅವರು ಮತ್ತಷ್ಟು ಅಸಮಾಧಾನಗೊಳ್ತಾರೆ. ಇದ್ರಿಂದ ಅವರ ನೋವು ಹೆಚ್ಚಾಗುತ್ತದೆ. ಹಾಗಾಗಿ ಅಳುವ ಹುಡುಗಿ ಮುಂದೆ ಅಪ್ಪಿತಪ್ಪಿಯೂ ಕೋಪ ತೋರಿಸ್ಬೇಡಿ.
ಗರ್ಲ್ ಫ್ರೆಂಡ್ (GiflFriend) ಗೆ ಪ್ರಶ್ನೆ ಕೇಳಿ : ಅಳಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಹಾಗಾಗಿ ಗರ್ಲ್ ಫ್ರೆಂಡ್ ಯಾಕೆ ಅಳ್ತಿದ್ದಾಳೆ ಎಂಬುದನ್ನು ನೀವು ತಿಳಿಯಬೇಕು. ಅದಕ್ಕೆ ಕೆಲವೊಂದು ಪ್ರಶ್ನೆ ಕೇಳ್ಬಹುದು. ಏನಾಯಿತು ಹೇಳಿ, ಚಿಂತಿಸುತ್ತಿರುವ ವಿಷ್ಯವೇನು, ಅಳುವ ಬದಲು ಸಮಸ್ಯೆ ಹಂಚಿಕೊಂಡ್ರೆ ಇಬ್ಬರು ಸೇರಿ ಪರಿಹಾರ ಹುಡುಕಬಹುದು ಹೀಗೆ ಆಕೆಯನ್ನು ಮಾತನಾಡಿಸಿ, ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡಬಹುದು.
Relationship Tips: ಸೆಕ್ಸ್ ಲೈಫ್ ಚೆನ್ನಾಗಿರಬೇಕಂದ್ರೆ ಇಷ್ಟೆಲ್ಲಾ ಮಾಡ್ಲೇಬೇಕು
ಹಾಗೆಲ್ಲ ಯೋಚಿಸ್ಬೇಡ ಎಂದು ಹೇಳಲು ಹೋಗ್ಬೇಡಿ : ಹುಡುಗಿ ಅಳ್ತಿದ್ದರೆ ಆಕೆಯನ್ನು ಸುಮ್ಮನಿರಿಸಲು, ಹಾಗೆಲ್ಲ ಯೋಚನೆ ಮಾಡ್ಬೇಡ, ಏನೂ ಆಗಲ್ಲ ಎಂದು ಕೆಲವರು ಹೇಳ್ತಾರೆ. ಆದ್ರೆ ಇದ್ರಿಂದ ಆಕೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಅದ್ರ ಬದಲು ಸಮಸ್ಯೆ ತಿಳಿದು ಪರಿಹಾರ ತಿಳಿಸಲು ಮುಂದಾದ್ರೆ ಅಥವಾ ಒಂದಿಷ್ಟು ಪರಿಹಾರ ಆಯ್ಕೆ ನೀಡಿದ್ರೆ ಆಗ ಆಕೆ ಶಾಂತಗೊಳ್ಳುವ ಸಾಧ್ಯತೆ ಹೆಚ್ಚಿದೆ.
Sex Education: ಅವಳು ಸೆಕ್ಸ್ ವೇಳೆ ಹಿಂಸೆ ಕೊಡೋಕೆ ಹೇಳ್ತಾಳೆ, ಏನ್ ಮಾಡಲಿ?
ನಿಮ್ಮಿಬ್ಬರ ಮಧ್ಯೆ ಸಮಸ್ಯೆ ಇದ್ರೆ ಏನ್ ಮಾಡ್ಬೇಕು? : ಗರ್ಲ್ ಫ್ರೆಂಡ್ ಅಳಲು ನೀವು ಕಾರಣವಾಗಿದ್ದರೆ ಮೊದಲು ಆಕೆ ಹೇಳೋದನ್ನು ಕೇಳಿ. ನಂತ್ರ ನಿಮ್ಮ ಅಭಿಪ್ರಾಯ ಹೇಳಿ. ಹಾಗೆ ಅಳುವುದು ಮಾತ್ರ ಎಲ್ಲದಕ್ಕೂ ಪರಿಹಾರವಲ್ಲ, ಇಬ್ಬರು ಒಟ್ಟಿಗಿದ್ರೆ ಏನು ಬೇಕಾದ್ರೂ ಮಾಡಬಹುದು ಎಂಬ ವಿಶ್ವಾಸವನ್ನು ಅವರಿಗೆ ನೀಡುವ ಪ್ರಯತ್ನ ಮಾಡಿ.