ದಾಂಪತ್ಯದಲ್ಲಿ ಸ್ವಚ್ಛತೆ ಕೂಡ ಬಹಳ ಮುಖ್ಯವಾಗುತ್ತದೆ. ಬೆವರು ವಾಸನೆ ಬರುವ ಅಥವಾ ಹಲ್ಲುಜ್ಜದ ವ್ಯಕ್ತಿ ಜೊತೆ ಬಾಳ್ವೆ ಮಾಡೋದು ಕಷ್ಟ. ಪ್ರೀತಿ ಎಷ್ಟೇ ಇದ್ರೂ ಸ್ವಚ್ಛತೆ ಸ್ವಲ್ಪ ಮಟ್ಟಿಗಾದ್ರೂ ಅವಶ್ಯಕ. ಇಲ್ಲವೆಂದ್ರೆ ಸಂಬಂಧ ಹಳಸುತ್ತದೆ.
ಸುಂದರವಾಗಿ ಸಿದ್ಧರಾಗೋರನ್ನು ನೋಡಿದ್ರೆ ಎಲ್ಲರೂ ಆಕರ್ಷಿತರಾಗ್ತಾರೆ. ಸ್ವಚ್ಛವಾಗಿ ಸ್ನಾನ ಮಾಡಿ, ಇಸ್ತ್ರಿ ಹಾಕಿರುವ ಬಟ್ಟೆ ಧರಿಸಿ,ಟಿಪ್ ಟಾಪ್ ಆಗಿ ಹೊರಟ್ರೆ ಎಲ್ಲರ ದೃಷ್ಟಿ ಒಮ್ಮೆ ಅವ್ರ ಮೇಲೆ ಬೀಳೋದು ಸಾಮಾನ್ಯ. ಆದ್ರೆ ಕೊಳಕಾದ ವ್ಯಕ್ತಿ ಎಷ್ಟೇ ಪ್ರೀತಿಸಿದ್ರೂ ಮನಸ್ಸು ಅವರನ್ನು ಪ್ರೀತಿಸೋಕೆ ಒಮ್ಮೆಯಾದ್ರೂ ಹಿಂಜರಿಯುತ್ತೆ. ಕೆಲ ಮಹಿಳೆಯರಿಗೆ ಸುಂದರವಿಲ್ಲವೆಂದ್ರೂ ಸ್ವಚ್ಛವಾಗಿರುವ ಪತಿ ಸಿಗ್ಬೇಕೆಂಬ ಆಸೆಯಿರುತ್ತದೆ. ಬೆವರಿನ ಗಬ್ಬು ವಾಸನೆ ಬರುವ ವ್ಯಕ್ತಿ ಜೊತೆ ಸೆಕ್ಸ್ ಹಿಂಸೆ ಎನ್ನಿಸುತ್ತದೆ. ಕೆಲ ಪುರುಷರು ಸ್ವಭಾವತಃ ಕೊಳಕಾಗಿರ್ತಾರೆ. ಅವರು ಸ್ನಾನ, ಡ್ರೆಸ್ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ತಾವು ಕೊಳಕಾಗಿರುವ ಜೊತೆಗೆ ಸುತ್ತಮುತ್ತಲ ಪ್ರದೇಶವನ್ನೂ ಕೊಳಕಾಗಿಟ್ಟುಕೊಳ್ತಾರೆ. ಮಹಿಳೆಯೊಬ್ಬಳ ಪತಿ ಕೂಡ ಇದೇ ಸ್ವಭಾವ ಹೊಂದಿದ್ದಾನೆ. ಆತನ ಕೊಳಕು ಸ್ವಭಾವ, ಆಕೆ ಸಂಸಾರಕ್ಕೆ ಮುಳ್ಳಾಗ್ತಿದೆ. ಪತಿ ಜೊತೆ ಸಂಭೋಗ ಬೆಳೆಸಲು ಮನಸ್ಸಾಗ್ತಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
ಆಕೆಗೆ ಮದುವೆ (Marriage) ಯಾಗಿ ಆರು ವರ್ಷ ಕಳೆದಿದೆ. ಇನ್ನೂ ಆಕೆಗೆ ಪತಿ (Husband) ಯನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಆಕೆ ಪತಿ ಕೊಳಕಂತೆ.
ಸ್ನಾನ (Bath)ಮಾಡಲ್ಲ ಪತಿ : ಚಳಿಗಾಲದಲ್ಲಿ ಕೆಲ ದಿನಗಳವರೆಗೆ ಪತಿ ಸ್ನಾನವನ್ನೇ ಮಾಡೋದಿಲ್ಲವಂತೆ. ಇದು ಮತ್ತಷ್ಟು ಹಿಂಸೆ ನೀಡುತ್ತೆ ಎನ್ನುತ್ತಾಳೆ ಆಕೆ. ಆಕೆ ಕುಟುಂಬದಲ್ಲಿ ಅನೇಕರು ಚಳಿಗಾಲದಲ್ಲಿ ಸ್ನಾನ ಮಾಡೋದಿಲ್ಲವಂತೆ. ಅದೇ ಪತಿಗೂ ಅಭ್ಯಾಸವಾಗಿದೆ ಎನ್ನುತ್ತಾಳೆ ಮಹಿಳೆ. ಚಂದದ ಬಟ್ಟೆ ಧರಿಸಿ, ಕ್ಲೀನ್ ಆಗಿ ರೆಡಿ ಆಗೋ ಗಂಡಸರು ನನಗೆ ಇಷ್ಟ. ಈ ಬಗ್ಗೆ ಅನೇಕ ಬಾರಿ ಪತಿಗೆ ಹೇಳಿದ್ದೇನೆ. ಆದ್ರೆ ಆತ ತನ್ನದೆ ವಾದ ಮಾಡ್ತಾನೆ ಎನ್ನುತ್ತಾಳೆ ಪತ್ನಿ. ಕ್ಲೀನ್ ಇರೋದು ಪುರುಷರ ಲಕ್ಷಣವೇ ಅಲ್ಲ ಎನ್ನುತ್ತಾನಂತೆ ಪತಿ. ಪತಿಯ ಈ ವ್ಯವಹಾರದಿಂದ ನನಗೆ ಕಿರಿಕಿರಿಯಾಗ್ತಿದೆ. ನಮ್ಮಿಬ್ಬರ ಸಂಬಂಧ ಇದೊಂದು ಕಾರಣಕ್ಕೆ ಹಾಳಾಗೋದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ ಮಹಿಳೆ. ಪತಿಯನ್ನು ದಾರಿಗೆ ತರೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾಳೆ.
ತಜ್ಞರ ಸಲಹೆ : ದಾಂಪತ್ಯದಲ್ಲಿ ಸಣ್ಣ ಸಣ್ಣ ವಿಷ್ಯ ಕೂಡ ದೊಡ್ಡದಾಗುತ್ತದೆ. ಅದೇ ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ. ಎಲ್ಲವನ್ನೂ ಒಟ್ಟಿಗೆ ಸರಿ ಮಾಡ್ತೇನೆ ಎಂದ್ರೆ ಅದು ಅಸಾಧ್ಯವಾದ ಮಾತು. ಇದು ಸಂಬಂಧವನ್ನು ಮತ್ತಷ್ಟು ಹಾಳು ಮಾಡ್ಬಹುದು ಎನ್ನುತ್ತಾರೆ ತಜ್ಞರು. ಹಾಗಾಗಿ ಮೊದಲು ನಿಮಗೆ ಯಾವುದು ಇಷ್ಟವಿಲ್ಲ ಎಂಬುದನ್ನು ಪಟ್ಟಿ ಮಾಡಿ. ನಂತ್ರ ಒಂದೊಂದೇ ವಿಷ್ಯದಲ್ಲಿ ಪತಿಯನ್ನು ಬದಲಿಸಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು.
ಅಬ್ಬಾ, ನೆಮ್ಮದಿಯನ್ನೇ ಹಾಳು ಮಾಡೋ ಗರ್ಲ್ ಫ್ರೆಂಡ್‌ನಿಂದ ತಪ್ಪಿಸಿಕೊಂಡ್ರೆ ಲೈಫ್ ಬಿಂದಾಸ್ ಬಿಡಿ!
ಕುಟುಂಬದ ಬಹುತೇಕ ಪುರುಷರು ಸ್ವಚ್ಛತೆ ಬಗ್ಗೆ ಗಮನ ನೀಡೋದಿಲ್ಲ ಎಂದು ನೀವೇ ಹೇಳಿದ್ದೀರಿ. ಕಣ್ಮುಂದೆ ಏನು ಕಾಣುತ್ತದೆಯೋ ಅದನ್ನೇ ಜನರು ಪಾಲನೆ ಮಾಡಲು ಶುರು ಮಾಡ್ತಾರೆ. ನಿಮ್ಮ ಪತಿ ಕುಟುಂಬದಲ್ಲಿ ನೋಡಿದ್ದನ್ನೇ ಪಾಲನೆ ಮಾಡ್ತಿದ್ದಾರೆ. ಇದನ್ನೇ ಸತ್ಯವೆಂದು ನಂಬಿರಬಹುದು. ಹಾಗಾಗಿ ಅವರನ್ನು ಬದಲಿಸಬೇಕೆಂದ್ರೆ ಅವರ ಸ್ವಚ್ಛತೆ ಬಗ್ಗೆ ನೀವು ಆಗಾಗಾ ಹೇಳ್ತಿರಬೇಕು. ಪತಿ ಮಾಡುವ ಯಾವ ಕೆಲಸ ನಿಮಗೆ ಹಿಂಸೆ ನೀಡ್ತಿದೆ ಎಂದು ಅವರಿಗೆ ಪದೇ ಪದೇ ಹೇಳಬೇಕು. ಇದ್ರಿಂದ ನಿಮಗೆ ಎಷ್ಟು ಹಿಂಸೆಯಾಗ್ತಿದೆ ಎಂಬುದನ್ನು ಮನವರಿಕೆ ಮಾಡ್ಬೇಕು.
ಮತ್ತೆ ಮತ್ತೆ ಈ ತಪ್ಪು ಆಗುತ್ತಿದ್ಯಾ? ಬೇಡ ಬ್ರೇಕ್ ಅಪ್ ಆಗೋದೇ ಒಳ್ಳೆಯದು!
ನೀವು ಹೇಳಿದ ತಕ್ಷಣ ಪತಿ ಬದಲಾಗ್ತಾರೆ ಎಂದು ಭಾವಿಸ್ಬೇಡಿ. ಆರು ವರ್ಷಗಳ ಪ್ರಯತ್ನ ಫಲ ನೀಡಿಲ್ಲ. ಹಾಗಾಗಿ ನೀವು ಮತ್ತೆ ಝಿರೋದಿಂದ ಕೆಲಸ ಶುರು ಮಾಡಿ. ನಿಧಾನವಾಗಿ ಅವರನ್ನು ಬದಲಿಸುವ ಪ್ರಯತ್ನ ಮಾಡಿ. ಇದಕ್ಕಾಗಿ ಅವರ ಮುಂದೆ ಗಲಾಟೆ ಮಾಡಬೇಡಿ, ಕೂಗಾಡಬೇಡಿ. ನೀವು ಜಗಳವಾಡಿದ್ರೆ ಅವರನ್ನು ಬದಲಿಸೋದು ಮತ್ತಷ್ಟು ಕಷ್ಟವಾಗಬಹುದು. ಹಾಗಾಗಿ ಶಾಂತವಾಗಿ ಬದಲಾವಣೆಗೆ ಮುನ್ನುಡಿ ಬರೆಯಿರಿ ಎಂದು ತಜ್ಞರು ಹೇಳಿದ್ದಾರೆ.