Breakup Tips: ಗೌರವಪೂರ್ಣ ಬ್ರೇಕಪ್ ನಿಮ್ಮದಾಗಲು ಹೀಗ್ಮಾಡಿ

By Suvarna News  |  First Published Mar 3, 2022, 5:41 PM IST

ಪ್ರೀತಿಯಲ್ಲಿ ಕೆಲವೊಮ್ಮೆ ಬ್ರೇಕಪ್ ಅನಿವಾರ್ಯ. ಅಂತಹ ಸನ್ನಿವೇಶವನ್ನು ಹೆಚ್ಚು ನಾಟಕೀಯವನ್ನಾಗಿಸಿಕೊಳ್ಳದೆ, ಪರಸ್ಪರ ಮಾತುಕತೆ, ಗೌರವಪೂರ್ಣವಾಗಿ ದೂರವಾಗುವುದು ಉತ್ತಮ ಆಯ್ಕೆ.
 


ಕೆಲವರು ಎಷ್ಟು ಬೇಗ ಪ್ರೀತಿ(Love)ಯಲ್ಲಿ ಬೀಳುತ್ತಾರೋ ಅಷ್ಟೇ ಬೇಗ ಅದರಿಂದ ಹೊರಬರುತ್ತಾರೆ. ದೀರ್ಘಾವಧಿಯ ಸಂಬಂಧ (Relationship) ಇರಿಸಿಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಸಂಬಂಧ ದೀರ್ಘ ಕಾಲದಿಂದ ಇರುವಂಥದ್ದಾಗಲೀ, ಕಿರು ಅವಧಿಯದ್ದಾಗಲೀ, ಕೆಲವೊಮ್ಮೆ ಬ್ರೇಕಪ್ (Breakup) ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ, ಆ ಸಮಯದಲ್ಲಿ ಪರಸ್ಪರ ಕಿರುಚಾಡಿ, ಒಬ್ಬರ ಮೇಲೊಬ್ಬರು ಆರೋಪ(Allegations)ಗಳ ಸುರಿಮಳೆ ಸುರಿಸುತ್ತ, ನಾಲ್ಕಾರು ಜನರ ಬಾಯಿಗೆ ಆಹಾರವಾಗುವಂತೆ ಜಗಳ (Quarrel) ಮಾಡಿಕೊಂಡು ಬ್ರೇಕಪ್ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅದರಿಂದ ಮಾನಸಿಕವಾಗಿ ಇನ್ನಷ್ಟು ಹಿಂಸೆ ಆಗುತ್ತದೆ. ಹಾಗಾದಿರಲು ಕೆಲವು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. 

ಪ್ರೀತಿಪಾತ್ರರೊಂದಿಗೆ ಏಕಾಏಕಿ ಸಂಬಂಧ ಕಡಿದುಕೊಳ್ಳಲು ಕಷ್ಟವಾಗಬಹುದು. ಆದರೆ, ಅವರೊಂದಿಗೆ ಏಗುವುದು ಇನ್ನೂ ಸಮಸ್ಯೆಯಾಗಬಹುದು. ಅಂತಹ ಸಮಯದಲ್ಲಿ ಅವರಿಂದ ದೂರವಾಗುವುದು ಉತ್ತಮ ಆಯ್ಕೆ. ಇಬ್ಬರೂ ಮಾನಸಿಕವಾದ ಪಕ್ವತೆ (Maturity) ಹೊಂದಿದ್ದರೆ ಹೆಚ್ಚು ಸಮಸ್ಯೆಯಾಗುವುದಿಲ್ಲ. ನೀವು ಸಹ  ಸಂಬಂಧದಿಂದ ವಿಮುಖರಾಗಲು ಇಚ್ಛಿಸಿದ್ದರೆ ಹಾಗೂ ನಿಮ್ಮ ಈ ವಿದಾಯ ಸುಗಮವಾಗಿ ಆಗಬೇಕೆಂದು ಬಯಸಿದರೆ ಕೆಲವು ನಿಯಮ ಅಥವಾ ವಿಧಾನ ಅನುಸರಿಸಬೇಕಾಗುತ್ತದೆ.  ಏಕೆಂದರೆ, ಇಬ್ಬರೂ ಸಮಾಧಾನದಿಂದ ಚರ್ಚಿಸಿ, ಕಡಿಮೆ ಕಣ್ಣೀರು ಸುರಿಸಿ, ಹೆಚ್ಚು ನೋವಿಗೆ ಒಳಗಾಗದೆ, ಇನ್ನೊಬ್ಬರು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಮಾಡುವ ಸನ್ನಿವೇಶ ಸುಲಭವಾದುದ್ದಲ್ಲ. ಆರೋಗ್ಯಪೂರ್ಣ ಬ್ರೇಕಪ್ ನಿಮ್ಮದಾಗಲು ಹೀಗ್ಮಾಡಿ.

•    ಮೆಸೇಜ್ (Messege) ನಲ್ಲಿ ಬ್ರೇಕಪ್ ಸಂದೇಶ ಬೇಡ, ಮುಖತಃ ಭೇಟಿ(Meet)ಯಾಗಿ
ಮೆಸೇಜ್ ನಲ್ಲಿ ಬ್ರೇಕಪ್ ಸಂದೇಶ ಕಳಿಸುವುದು, ಮೀಟ್ ಮಾಡಲು ಅವಾಯ್ಡ್ ಮಾಡುವುದು, ನಿರ್ಲಕ್ಷಿಸುವುದು, ಸ್ನೇಹಿತರ ಮೂಲಕ ಹೇಳಿಸುವುದು ಇವೆಲ್ಲವೂ ಪರಿಸ್ಥಿತಿಯನ್ನು ಇನ್ನಷ್ಟು ತೊಡಕಾಗಿಸುತ್ತವೆ. ಅದರ ಬದಲು, ಆಕೆಯನ್ನಾಗಲೀ, ಆತನನ್ನಾಗಲೀ ನೀವೇ ಖುದ್ದಾಗಿ ಭೇಟಿಯಾಗಿ. ಆದರೆ, ಅದು ಸಾರ್ವಜನಿಕ (Public) ಸ್ಥಳ (Place) ಆಗದಿರಲಿ. ಸ್ವಲ್ಪ ಖಾಸಗಿ (Private) ಮಾತುಕತೆಗೆ ಅವಕಾಶ ಇರಲಿ. ನಿಮ್ಮ ಇದುವರೆಗಿನ ನಡತೆಯಿಂದ ನಿಮ್ಮ ನಿರ್ಧಾರದ ಬಗ್ಗೆ ಅರಿವಿರುವವರಾದರೆ ಸರಿ. ಇಲ್ಲವಾದರೆ, ಅವರಿಗೆ ಆಘಾತವಾಗಬಹುದು. ಆಗ ಅವರು ಅಳಬಹುದು, ನಿಮ್ಮನ್ನು ಹಾಗೆ ಮಾಡದಂತೆ ಬೇಡಬಹುದು. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಿದ್ದರೆ, ಹಿಂಸೆ ನೀಡಿದ್ದರೆ ಮಾತ್ರ ದೂರ ಇರುವುದು ಕ್ಷೇಮ. ಆದರೆ, ಅವರು ಸಾಮಾನ್ಯರಂತಿದ್ದರೆ ಮುಖಾಮುಖಿಯಾಗಿ ಭೇಟಿಯಾಗಿಯೇ ವಿಷಯ ತಿಳಿಸಿ. ಇದರಿಂದ ಅವರಿಗೆ ತಾನು “ಮೋಸ ಹೋದೆ’ ಎನ್ನುವ ಭಾವನೆ ಬರುವುದಿಲ್ಲ. ಯಾವುದನ್ನೂ ಮುಚ್ಚಿಡಬೇಡಿ. ನಿಮ್ಮ ಲವರ್ ಅಷ್ಟುಮಾತ್ರದ ಗೌರವಕ್ಕೆ ಅರ್ಹರಾಗಿರುತ್ತಾರೆ. ಅತಿರೇಕದ ವರ್ತನೆ ಮಾಡುವವರಾಗಿದ್ದರೆ ಹುಷಾರಾಗಿರಿ. 

Tap to resize

Latest Videos

ಪರ್ಫೆಕ್ಟ್ ಪತಿಗಾಗಿ ಪಾರ್ಕ್ ನಲ್ಲಿ ಓಡ್ತಾಳೆ ಈ ಮಹಿಳೆ!

•    ಯಾರ ಮೇಲೆಯೂ ಗೂಬೆ (Blame) ಕೂರಿಸುವ ಮಾತು ಬೇಡ
ನಿಮ್ಮ ಸಂಗಾತಿಯ ಮೇಲೆ ಯಾವುದೇ ಕಾರಣಕ್ಕೂ ಆರೋಪ ಮಾಡಬೇಡಿ. ಬ್ರೇಕಪ್ ಆದ ಬಳಿಕ ನಿಮ್ಮ ಮೇಲೆಯೇ ನಿಮಗೆ ಕೋಪ ಬಂದರೆ ಬರಲಿ, ಬೇಸರವಾದರೆ ಆಗಲಿ. ಆದರೆ, ಅವರನ್ನು ಇದಕ್ಕೆ ಹೊಣೆಯಾಗಿಸಬೇಡಿ. ಸಮಸ್ಯೆಗೆ ಎಡೆಯಿಲ್ಲದಂತೆ ಬ್ರೇಕಪ್ ಮಾಡಿಕೊಳ್ಳಬೇಕಾದರೆ ಹೆಚ್ಚು ನಾಟಕಕ್ಕೆ ಆಸ್ಪದವಿಲ್ಲದಂತೆ ಮಾಡಬೇಕು. ಭಾವನೆಗಳನ್ನು ಆರೋಗ್ಯಕರವಾಗಿ ನಿಭಾಯಿಸಬೇಕು. 

Shocking News : ಬಾಯ್ ಫ್ರೆಂಡ್ ಖಾಸಗಿ ಅಂಗ ಕತ್ತರಿಸಿ ಮಹಿಳೆ ಮಾಡಿದ್ದೇನು?

•    ಒಂದೆರಡು ತಿಂಗಳ ಕಾಲ ಮತ್ತೆ ಸಂಪರ್ಕ(Contact)ಕ್ಕೆ ಬಾರದಂತೆ ಎಚ್ಚರ ವಹಿಸಿ
ನಿಮ್ಮಂತೆಯೇ ನಿಮ್ಮ ಸಂಗಾತಿಗೂ ನಿಮ್ಮಿಂದ ದೂರವಾಗಬೇಕು ಎನ್ನುವ ಭಾವನೆ ಇರಲೇಬೇಕೆಂದಿಲ್ಲ. ಹೀಗಾಗಿ, ಅವರು ಸಂಬಂಧವನ್ನು ಮತ್ತೆ ಆರಂಭಿಸುವ ಯತ್ನ ಮಾಡಬಹುದು. ನಿಮಗೆ ನಿಜವಾಗಿಯೂ ಅವರಿಂದ ದೂರವಾಗಬೇಕು ಎಂದಿದ್ದರೆ ನೇರವಾಗಿ, ಗೌರವಯುತವಾಗಿ ಎರಡು-ಮೂರು ತಿಂಗಳ ಕಾಲ ಸಂಪರ್ಕಿಸದಂತೆ ತಿಳಿಸಿ. ಇದರಿಂದ ಅವರಿಗೆ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಳ್ಳಲು ಸಮಯ ದೊರೆಯುತ್ತದೆ. ಹಾಗೂ ನಿಮ್ಮನ್ನು ಸತತವಾಗಿ ಸಂಪರ್ಕಿಸುವ ಅಭ್ಯಾಸ ನಿಂತುಹೋಗಿ ಬೇರೆಯದೇ ರೀತಿಯಲ್ಲಿ ಯೋಚಿಸಲು ಆರಂಭಿಸಬಹುದು. ಪಶ್ಚಾತ್ತಾಪದಿಂದ, “ಪಾಪ’ ಎಂದುಕೊಂಡು ಕರೆಯನ್ನು ಸ್ವೀಕರಿಸಬೇಡಿ, ಸಂದೇಶಗಳಿಗೆ ಉತ್ತರ ನೀಡಬೇಡಿ. ಏಕೆಂದರೆ, ಅವರ ಮಾತುಗಳಿಂದ ನಿಮಗೆ ಭಾವನಾತ್ಮಕ ಒತ್ತಡವುಂಟಾಗುತ್ತದೆ. 

click me!