Wifes Secret: ಗಂಡನಿಗೆ ಗೊತ್ತಾಗಬಾರದು ಎಂದು ಹೆಂಡತಿ ಬಚ್ಚಿಡುವ ಟಾಪ್ ಸೀಕ್ರೆಟ್ಸ್ !

Suvarna News   | Asianet News
Published : Dec 23, 2021, 12:27 PM IST
Wifes Secret: ಗಂಡನಿಗೆ ಗೊತ್ತಾಗಬಾರದು ಎಂದು ಹೆಂಡತಿ ಬಚ್ಚಿಡುವ ಟಾಪ್ ಸೀಕ್ರೆಟ್ಸ್ !

ಸಾರಾಂಶ

ಮೀನಿನ ಹೆಜ್ಜೆಯನ್ನಾದ್ರೂ ಗುರುತಿಸ್ಬೋದು ಆದ್ರೆ ಹೆಣ್ಣಿನ ಮನಸ್ಸನ್ನು ಅರಿತುಕೊಳ್ಳೋದು ಕಷ್ಟ ಅಂತ ಹೇಳ್ತಾರೆ. ಹೆಣ್ಣಿನ ಮನಸ್ಸೇ ಹಾಗೆ ಒಂಥರಾ ರಹಸ್ಯ (Secret). ಅದರಲ್ಲೂ ಗಂಡಸರಿಗೆ ಗೊತ್ತಾಗಲೇಬಾರದು ಎಂದು ಹೆಂಗಸರು ಅಂದುಕೊಳ್ಳುವ ಕೆಲವು ಟಾಪ್ (Top) ಸೀಕ್ರೆಟ್‌ಗಳಿವೆ. ಏನದು ?  

ಸೀಕ್ರೆಟ್ ಅನ್ನೋದು ಯಾರ ಜೀವನದಲ್ಲಿ ಇಲ್ಲ ಹೇಳಿ. ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರಹಸ್ಯವಿರುತ್ತದೆ. ಅಂಥಹಾ ಸೀಕ್ರೆಟ್ಸ್ ಬೇರೆಯವರಿಗೆ ಗೊತ್ತಾಗುವುದು ಯಾರಿಗೂ ಇಷ್ಟವಿರುವುದಿಲ್ಲ. ಆ ರಹಸ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಸೀಕ್ರೆಟ್ ಕಾಪಾಡಿಕೊಳ್ಳುವುದರಲ್ಲಿ ಮಹಿಳೆಯರು ಅತ್ಯಂತ ವೀಕ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ನಿಮ್ಗೊಂದು ಗುಟ್ಟು ಹೇಳ್ತೀನಿ ಯಾರಿಗೂ ಹೇಳ್ಬೇಡಿ ಅಂತ ಮಹಿಳೆಯೊಬ್ಬಳಿಗೆ ಹೇಳಿದರೆ ಆ ಸುದ್ದಿ ಊರಿಡೀ ತಲುಪಿಯಾಯ್ತು ಎಂದೇ ಅರ್ಥ. ಅಷ್ಟರಮಟ್ಟಿಗೆ ಹೆಂಗಸರ ಬಾಯಲ್ಲಿ ರಹಸ್ಯಗಳು ನಿಲ್ಲುವುದಿಲ್ಲ. ಯಾರಿಗೂ ಹೇಳ್ಬೇಡಿ ಅನ್ನೋ ಟ್ಯಾಗ್‌ಲೈನ್‌ನೊಂದಿಗೆ ಎಲ್ಲೆಡೆ ಸೀಕ್ರೆಟ್ ರಿವೀಲ್ ಆಗಿರುತ್ತದೆ.

ಆದ್ರೆ ನಿಮಗೆ ಗೊತ್ತಾ..ಈ ಕೆಲವು ವಿಷಯದಲ್ಲಿ ಮಹಿಳೆಯರು ಶಿಸ್ತುಬದ್ಧವಾಗಿ ಸೀಕ್ರೆಟ್ ಕಾಪಾಡಿಕೊಳ್ಳುತ್ತಾರೆ. ಗಂಡಸರಿಗೆ ಗೊತ್ತಾಗಲೇಬಾರದು ಎಂದು ಮಹಿಳೆಯರು ಅಂದುಕೊಳ್ಳುವ ಕೆಲವು ವಿಷಯಗಳಿವೆ. ಆ ವಿಷಯಗಳು ಗಂಡಸರನ್ನೇ ಬೆಚ್ಚಿ ಬೀಳಿಸುವಂಥದ್ದು. ಏನದು ?

Bedroom secret: ಹುಡುಗಿಯರಿಗೆ ಸೆಕ್ಸ್‌ನಲ್ಲಿ ಏನಿಷ್ಟ..?

ಮಹಿಳೆಯರು ಪುರುಷರಿಗಿಂತ ಹೆಚ್ಚು ಸೆಕ್ಸ್‌ಗಾಗಿ ಹಂಬಲಿಸುತ್ತಾರೆ

ಮಹಿಳೆಯರು ಪುರುಷರಿಗಿಂತ ಹೆಚ್ಚು ಸೆಕ್ಸ್‌ (Sex)ಗಾಗಿ ಹಂಬಲಿಸುತ್ತಾರೆ. ಆದರೆ ಹೊರನೋಟಕ್ಕೆ ಪುರುಷರು ಹೆಚ್ಚಾಗಿ ಸೆಕ್ಸ್‌ಗಾಗಿ ಹಂಬಲಿಸುವವರಂತೆ ಕಾಣುತ್ತಾರೆ. ಆದರೆ ಮಹಿಳೆ ಯಾವ ಹೊತ್ತಿಗೂ, ಎಷ್ಟು ಹೊತ್ತಾದರೂ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾಳೆ.

ಪ್ರತಿಯೊಬ್ಬ ಮಹಿಳೆಯೂ ಬೈಸೆಕ್ಸುವಲ್ 

ಪ್ರತಿ ಮಹಿಳೆಯೂ ದ್ವಿಲಿಂಗಿ (Bisexual). ಪುರುಷನೊಂದಿಗಿನ ಸಂಬಂಧವು ಕೊನೆಗೊಂಡಾಗ ಮಹಿಳೆ (Woman)ಯರು ಅಸಮಾಧಾನಗೊಂಡಂತೆ ನಟಿಸುತ್ತಾರೆ. ಆದರೆ ಎಲ್ಲಾ ಮಹಿಳೆಗೂ ಮತ್ತೊಬ್ಬ ಮಹಿಳೆಯೆಡೆಗೆ ಒಂದು ಆಕರ್ಷಣೆ ಇದ್ದೇ ಇರುತ್ತದೆ. 

ಎಷ್ಟೇ ಸುಂದರವಾಗಿದ್ದರೂ ತನ್ನ ಬಗ್ಗೆ ಇನ್ ಸೆಕ್ಯೂರ್ಡ್ ಆಗಿರುತ್ತಾಳೆ

ಹುಡುಗಿ ಎಷ್ಟೇ ಸುಂದರವಾಗಿದ್ದರೂ, ಎಷ್ಟು ಚಂದವಾಗಿ ಮೇಕಪ್ (Makeup) ಮಾಡಿಕೊಂಡರೂ ತನ್ನ ಬಗ್ಗೆ ಇನ್ ಸೆಕ್ಯೂರ್ಡ್ ಆಗಿರುತ್ತಾಳೆ. ಹೀಗಾಗಿಯೇ ಮನೆಯಿಂದ ಹೊರ ಹೋಗುವಾಗ ಯಾವ ಸೀರೆ, ಡ್ರೆಸ್ (Dress) ಹಾಕಿಕೊಳ್ಳಬೇಕು ಎಂಬ ಗೊಂದಲ ಆಕೆಗೆ ತಪ್ಪುವುದಿಲ್ಲ. ಆದಷ್ಟೂ ಮೇಕಪ್ ಮಾಡಿಕೊಳ್ಳುತ್ತಾಳೆ. ಬೇರೆ ಮಹಿಳೆಯರು ತನಗಿಂತ ಸುಂದರವಾಗಿ ಕಾಣುತ್ತಿದ್ದಾರೆ ಎಂಬ ಭಯ ಅವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ತಾನು ಇನ್ ಸೆಕ್ಯೂರ್ಡ್ ಆಗಿರುವ ಕಾರಣವೇ ಹೆಂಡತಿಗೆ ಗಂಡನ ಮೇಲೆ ಹೆಚ್ಚು ಅನುಮಾನವಿರುತ್ತದೆ.

Husband Wife Relationship: ಹೆಂಡ್ತಿಗೆ ಕಿರಿಕಿರಿ ಉಂಟು ಮಾಡುವ ಅಭ್ಯಾಸಗಳಿವು..!

ಮದುವೆಯಾಗಿದ್ದರೂ ಇತರ ಹುಡುಗರನ್ನು ಕಂಡು ಆಕರ್ಷಿತಳಾಗುತ್ತಾಳೆ

ಹುಡುಗಿಯರೆಡೆಗೆ ಹುಡುಗರ ಅಟ್ರ್ಯಾಕ್ಷನ್ (Attraction) ಹೇಗೆ ಸಹಜವೋ, ಹುಡುಗರೆಡೆಗೂ ಹುಡುಗಿಯರ ಅಟ್ರ್ಯಾಕ್ಷನ್ ಹೀಗೇ ಸಹಜವಾಗಿದೆ. ಅದೆಷ್ಟೋ ಹುಡುಗರು ಮದುವೆಯಾದ ಬಳಿಕವೂ ಬೇರೆ ಹುಡುಗಿಯ ಪ್ರೀತಿ (Love)ಯಲ್ಲಿ ಬೀಳುತ್ತಾರೆ. ಈಕೆಯನ್ನು ಬಿಟ್ಟು ಆಕೆಯನ್ನು ಮದುವೆ (Marriage)ಯಾಗುತ್ತಾರೆ. ಅಧ್ಯಯನವೊಂದರ ಪ್ರಕಾರ ಹೀಗೆ ಮಾಡುವವರು ಹೆಚ್ಚಾಗಿ ಪುರುಷರು. ಮದುವೆಯಾದ ಬಳಿಕ ಬೇರೊಬ್ಬನ ಪುರುಷನ ತೆಕ್ಕೆಗೆ ಜಾರುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಕಡಿಮೆ. ಹಾಗೆಂದು ಮದುವೆಯಾದ ಕೂಡಲೇ ಮಹಿಳೆಯರಿಗೆ ಇತರ ಪುರುಷರೆಡೆಗಿನ ಆಕರ್ಷಣೆ ಮುಗಿಯಿತು ಎಂದಲ್ಲ. ಮಹಿಳೆ ಮದುವೆಯಾದ ಬಳಿಕ, ಮಕ್ಕಳಾದ ಬಳಿಕವೂ ಹ್ಯಾಂಡ್ ಸಮ್ ಹುಡುಗನನ್ನೇ ನೋಡಿದೊಡನೇ ಅಟ್ರ್ಯಾಕ್ಟ್ ಆಗುತ್ತಾಳೆ. ಆದರೆ ಅವಳು ಯಾವಾಗಲೂ ತನ್ನ ಮಿತಿಯನ್ನು, ಕಟ್ಟುಪಾಡುಗಳನ್ನು ತಿಳಿದಿರುತ್ತಾಳೆ. ಹಾಗಾಗಿಯೇ ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

ಆತ್ಮೀಯ ಸ್ನೇಹಿತರಲ್ಲಿ ನಿಮ್ಮ ಬಗ್ಗೆಯೂ ಹೇಳಿಕೊಳ್ಳುತ್ತಾಳೆ

ಬೆಡ್‌ರೂಮ್ ಸೀಕ್ರೆಟ್ ಮನೆಯಿಂದ ಆಚೆ ಹೋಗುವುದಿಲ್ಲ ಎಂದು ನೀವು ಅಂದುಕೊಳ್ಳಬಹುದು. ಆದರೆ ಮಹಿಳೆಯರು ಸಾಮಾನ್ಯವಾಗಿ ಗಂಡನ ಬಗ್ಗೆ,ಆತ ಮಾಡುವ ಒಳ್ಳೆಯ, ಕೆಟ್ಟ ಕೆಲಸಗಳ ಬಗ್ಗೆ ತಮ್ಮ ಆಪ್ತ ಸ್ನೇಹಿತೆಯರಲ್ಲಿ ಹೇಳಿಕೊಳ್ಳುತ್ತಾರೆ. ಇದರಲ್ಲಿ ಬೆಡ್‌ರೂಮ್ (Bedroom) ಸೀಕ್ರೆಟ್ಸ್ ಸಹ ಸೇರಿರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು