
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಇದೆ. ಬಹಳ ಲೋಕ ಕಂಡವರೇ ಈ ಗಾದೆ ಮಾಡಿದ್ದು. ಉಂಡು ಮಲಗಿದ ಮೇಲೆ ಜಗಳ ಯಾಕೆ ಮುಂದುವರಿಯಲ್ಲ ಅನ್ನೋದಕ್ಕೆ ಕಾರಣ ಏನು ಅನ್ನೋದರ ಬಗ್ಗೆ ಜನ ಹೆಚ್ಚಾಗಿ ಯೋಚಿಸಲ್ಲ. ಆದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಈ ಗಾದೆ ಹೇಳ್ತಾರೆ. ಗಂಡ ಹೆಂಡತಿ ಉಂಡು ಮಲಗಿದ ಮೇಲೆ ಅವರ ಜಗಳ, ದ್ವೇಷ, ಮುನಿಸನ್ನೆಲ್ಲ ದೂರ ಮಾಡೋದು ಸೆಕ್ಸ್ ಅನ್ನೋ ಮಾಯಾಂಗನೆ. ಇದಕ್ಕೆ ಗಂಡು ಹೆಣ್ಣಿನ ನಡುವಿನ ಎಂಥಾ ಸಿಟ್ಟು, ದ್ವೇಷವನ್ನೂ ಶಮನ ಮಾಡುವ ಶಕ್ತಿ ಇದೆ. ಅಷ್ಟೇ ಅಲ್ಲ ಗಂಡು ಹೆಣ್ಣಿನ ಸಂಬಂಧವನ್ನು ಮತ್ತಷ್ಟು ಹತ್ತಿರ ತರುವ ಜೊತೆಗೆ ಅವರ ಅವರಿಬ್ಬರ ನಡುವಿನ ಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ಸಾಮರ್ಥ್ಯ ಇದೆ.
ನೀವು ಗಮನಿಸಿರಬಹುದು. ಮಗು ಹುಟ್ಟುವರೆಗೂ ಬಹಳ ಅನ್ಯೋನ್ಯವಾಗಿದ್ದ ಗಂಡ ಹೆಂಡತಿ ನಡುವೆ ಮಗುವಾದ ಮೇಲೆ ಸ್ವಲ್ಪ ಸ್ವಲ್ಪವೇ ಗ್ಯಾಪ್ ಕ್ರಿಯೇಟ್ ಆಗುತ್ತಾ ಹೋಗುತ್ತೆ. ಹೆಚ್ಚಿನವರು ಈ ಬಗ್ಗೆ ಜಾಸ್ತಿ ಗಮನ ಕೊಡಲ್ಲ. ವಿವಾಹೇತರ ಸಂಬಂಧಗಳಿಗೂ ಇದು ಎಡೆ ಮಾಡಿಕೊಡುವುದುಂಟು. ಹಾಗಿದ್ದರೆ ಇದಕ್ಕೆ ಕಾರಣ ಮಗುವಾ ಅಂತ ನೀವು ಕೇಳಬಹುದು, ಖಂಡಿತಾ ಅಲ್ಲ. ಮಗುವಾದ ಮೇಲೆ ಬದಲಾದ ನಿಮ್ಮ ಭಾವನೆ ಅಷ್ಟೇ. ಮಗು ಹುಟ್ಟೋದಕ್ಕೂ ಮೊದಲು ಸೆಕ್ಸ್ ಅನ್ನು ಬಹಳ ಎನ್ ಜಾಯ್ ಮಾಡುತ್ತಿದ್ದವರು ಮಗುವಾದ ಕೂಡಲೇ ಅದನ್ನು ಗಡಿಬಿಡಿಯಲ್ಲಿ ಪೂರೈಸಿ ಬಿಡುತ್ತಾರೆ. ಎಲ್ಲಿ ಮಗು ಎಚ್ಚರಗೊಳ್ಳಬಹುದೋ ಅನ್ನುವ ಆತಂಕವೂ ಇರುವ ಕಾರಣ ಸೆಕ್ಸ್ ನಲ್ಲಿ ಮೊದಲಿನ ಹಾಗೆ ತೊಡಗಿಸಿಕೊಳ್ಳುವುದು ಸಾಧ್ಯವಾಗಲ್ಲ.
ಎಷ್ಟೋ ಸಲ ಇನ್ನೇನು ಇಬ್ಬರೂ ಒಂದಾಗಬೇಕು ಅನ್ನೋ ಟೈಮ್ ಗೆ ಕರೆಕ್ಟಾಗಿ ಮಗು ಎದ್ದು ಕೂರುತ್ತೆ ಅಥವಾ ಅಳೋಕೆ ಶುರು ಮಾಡುತ್ತೆ. ಉಗುಳು ನುಂಗಿಕೊಂಡು ಅದನ್ನು ಮತ್ತೆ ಮಲಗಿಸುವ ಹೊತ್ತಿಗೆ ಇಬ್ಬರಿಗೂ ನಿದ್ದೆಯ ಜೋಮು. ಹೀಗಾಗಿ ಆರಾಮವಾಗಿ ಎನ್ ಜಾಯ್ ಮಾಡಿಕೊಂಡು ಮಾಡುವ ಮನಸ್ಸಿನ ಸ್ಟ್ರೆಸ್ ಗಳನ್ನೆಲ್ಲ ಕಳೆದು ಹಾಕುವ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತೆ. ಗಡಿಬಿಡಿಯಲ್ಲಿ ಯಾವಾಗೊಮ್ಮೆ ಮುಗಿದುಬಿಡುತ್ತೋ ಅನ್ನೋ ಹಾಗೆ ಅದನ್ನು ಮಾಡುತ್ತಾರೆ. ಸಂಭೋಗ ಮುಗಿದ ಮೇಲೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಗಂಡ ಹೆಂಡತಿ ಇಬ್ಬರೂ ಮಾರು ದೂರ ಬಿದ್ದುಕೊಳ್ಳುತ್ತಾರೆ. ಆದರೆ ಇತ್ತೀಚಿನ ಸ್ಟಡೀ ಒಂದರ ಪ್ರಕಾರ ಸಂಭೋಗದ ಬಳಿಕ ದೂರ ದೂರ ಮಲಗೋದು ಒಳ್ಳೆಯದಲ್ಲ. ಹಾಗೆ ಮಾಡಿದರೆ ಗಂಡ ಹೆಂಡತಿ ಸಂಬಂಧದಲ್ಲಿ ಗ್ಯಾಪ್ ಕ್ರಿಯೇಟ್ ಆಗಬಹುದು. ಜೊತೆಗೆ ಗಂಡ ಸೆಕ್ಸ್ ಗಾಗಿ ಮಾತ್ರ ತನ್ನನ್ನು ಪ್ರೀತಿಸುತ್ತಾನೆ ಎಂಬ ಭಾವನೆ ಹೆಂಡತಿಯಲ್ಲಿ ಬಂದು ಆಕೆಗೆ ಸೆಕ್ಸ್ ಮೇಲೆ ಆಸಕ್ತಿ ಹೋಗಬಹುದು. ಗಂಡನಿಗೂ ಆಕೆಯಲ್ಲಿ ಹೆಚ್ಚು ಅಕ್ಕರೆ ಮೂಡಲಿಕ್ಕಿಲ್ಲ. ಇಬ್ಬರನ್ನೂ ಒಂದು ಮಾಡಬೇಕಾದ ಸೆಕ್ಸ್ ಇಬ್ಬರ ನಡುವೆಯೂ ಗ್ಯಾಪ್ ಬರುವ ಹಾಗೆ ಮಾಡಬಹುದು. ಹಾಗಿದ್ದರೆ ಮತ್ತೇನು ಮಾಡಬೇಕು.
ಸೆಕ್ಸ್ ನಂತರೂ ಇಬ್ಬರೂ ಹತ್ತಿರವಾಗಿ ತಬ್ಬಿಕೊಂಡು ಮಲಗೋದು ಒಳ್ಳೆಯದು ಅನ್ನುತ್ತದೆ ಅಧ್ಯಯನ. ಇದರಿಂದ ಗಂಡ ಹೆಂಡತಿ ನಡುವೆ ಕಾಮ ಅನ್ನುವುದು ಪ್ರೀತಿಯ ಮುಂದುವರಿದ ಭಾಗ ಅನ್ನುವ ಭಾವನೆ ಬರುತ್ತದೆ. ಇಬ್ಬರ ನಡುವೆ ನಂಬಿಕೆ, ಪ್ರೀತಿ ಹೆಚ್ಚಾಗುತ್ತದೆ. ಇಬ್ಬರೂ ಕೊನೇ ತನಕ ಜೊತೆಯಾಗಿರುತ್ತೀವಿ ಅನ್ನುವ ಭಾವನೆ ಬೆಳೆಯಬಹುದು. ಇಬ್ಬರಿಗೂ ಇಬ್ಬರ ಬಗ್ಗೆಯೂ ಗೌರವ, ಕಾಳಜಿ ಹೆಚ್ಚಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆಯೂ ಒಂದು ಸುರಕ್ಷತೆ ಅಥವಾ ಸೆಕ್ಯೂರ್ಡ್ ಫೀಲ್ ಬೆಳೆಯುತ್ತದೆ.
#FeelFree ಯಾವುದು ಸೂಕ್ತ, ಮೊದಲ ರಾತ್ರಿಯೋ ಎರಡನೇ ರಾತ್ರಿಯೋ?
ಸೆಕ್ಸ್ ನಂತರ ಗಂಡಸಿಗೆ ಸುಸ್ತಾಗಿ ಅಬ್ಬಾ ಒಮ್ಮೆ ಸುಮ್ನೇ ಬಿದ್ದುಕೊಂಡರೆ ಸಾಕು ಅನ್ನುವ ಫೀಲ್ ಇರುತ್ತೆ. ಆದರೆ ಹೆಣ್ಣಿಗೆ ಸಂಭೋಗದ ಬಳಿಕ ಗಂಡಿನಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಆಗ ಗಂಡ ದೂರದಲ್ಲಿ ಮಲಗಿದ್ರೆ ಆಕೆಯ ಭಾವನೆಗೆ ಘಾಸಿಯಾಗಬಹುದು. ಮುಂದಿನ ಸಲ ಸೆಕ್ಸ್ನಲ್ಲಿ ಅವಳಿಗೆ ಆಸಕ್ತಿ ಬರದೇ ಹೋಗಬಹುದು. ಹೀಗಾಗಿ ಸಂಭೋಗದ ನಂತರದ ಪ್ರೀತಿ ನಿಮ್ಮಿಬ್ಬರನ್ನು ಬೆಸೆಯುತ್ತದೆ. ಇಂಥ ಸೂಕ್ಷ್ಮಗಳನ್ನು ಹೆಚ್ಚೆಚ್ಚು ಅರ್ಥಮಾಡಿಕೊಂಡಷ್ಟು ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.