ಹರೆಯದ ಮಕ್ಕಳನ್ನು ನಿಭಾಯಿಸುವುದು ಬಲುಕಷ್ಟ ಎನ್ನುವ ಮಾತನ್ನು ಎಲ್ಲ ಪಾಲಕರೂ ಒಮ್ಮತದಿಂದ ಒಪ್ಪಿಕೊಳ್ಳುತ್ತಾರೆ. ಅವರು ನಮ್ಮನ್ನು ಕೆಣಕುತ್ತಾರೆ, ಬೇಕೆಂದೇ ಹೇಳಿದ್ದಕ್ಕೆಲ್ಲ ಇಲ್ಲ ಎನ್ನುತ್ತಾರೆ ಎನ್ನುವ ದೂರೂ ಇದೆ. ಆದರೂ ಅವರು ನಿಮ್ಮದೇ ಮಕ್ಕಳು. ಅವರನ್ನು ನಿಭಾಯಿಸಲು ಕೆಲವು ವಿಧಾನಗಳನ್ನು ಕಂಡುಕೊಳ್ಳಿ.
ಹದಿಹರೆಯದ (Teenage) ಮಕ್ಕಳನ್ನು ನಿಭಾಯಿಸುವ ಹೊತ್ತಿಗೆ ಪಾಲಕರು ಸುಸ್ತಾಗುತ್ತಾರೆ. “ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಪಾಲಕರು (Parents) ಹೇಳಿದ್ದನ್ನು ಕೇಳುತ್ತಿದ್ದೆವುʼ ಎಂದು ಗೊಣಗಿಕೊಳ್ಳಬಹುದು. ಆದರೂ ಅಂದೂ ಸಹ ನಾವು ನಮ್ಮ ಪಾಲಕರಿಗೆ ರೆಬೆಲ್ (Rebel) ಥರವೇ ಕಂಡಿರುತ್ತೇವೆ ಎನ್ನುವುದು ಸತ್ಯ. ಅನೇಕ ಬಾರಿ ಅವರಿಂದ ತಿಂದ ಏಟಿನ ಮೂಲಕ ಇದನ್ನು ನೆನಪಿಸಿಕೊಳ್ಳಬಹುದು.
ಈಗ ನಿಮಗೂ ಹಾಗೆಯೇ ಮಕ್ಕಳ (Children) ವರ್ತನೆ, ಹಣ (Money), ವಸ್ತು (Things) ಸೇರಿದಂತೆ ಯಾವುದರ ಬಗೆಗೂ ಇಲ್ಲದ ಕಾಳಜಿ, ಬೇಕಾಬಿಟ್ಟಿ ಕೊಳ್ಳುವುದು, ಅವರ ಮೊಬೈಲ್ (Mobile) ಸಹವಾಸ… ಇವೆಲ್ಲವೂ ನಿಮ್ಮನ್ನು ಇನ್ನಿಲ್ಲದಂತೆ ಕೋಪ (Anger) ತರಿಸುತ್ತವೆಯೇ? ಅವರ ಪ್ರತಿ ವರ್ತನೆಯೂ ನಿಮ್ಮನ್ನು ಧಿಕ್ಕರಿಸುವಂತೆಯೇ ತೋರುತ್ತವೆಯೇ? ನೀವು ಹೇಳಿದ ಶಿಸ್ತನ್ನು ಅವರು ಅಳವಡಿಸಿಕೊಳ್ಳುವುದೇ ಇಲ್ಲವೆಂದು ಬೇಸರವಾಗುತ್ತದೆಯೇ? ಆದರೆ, ಒಂದು ಮಾತು ನೆನಪಿರಲಿ. ಅಂದಿನ ದಿನಗಳಲ್ಲಿ ನಿಮಗೆ ಸ್ವಲ್ಪವಾದರೂ ಶಿಸ್ತು ಇದ್ದಿರಬಹುದು. ಪಾಲಕರು ಹೇಳಿದಂತೆ ಕೇಳುವ ಸ್ವಭಾವವೂ ಸ್ವಲ್ಪ ಇದ್ದಿರಬಹುದು. ಇಂದಿನ ಮಕ್ಕಳು ಹಾಗಲ್ಲ. ದಿನದಿಂದ ದಿನಕ್ಕೆ ಜನರೇಷನ್ ವರ್ತನೆ ತೀವ್ರವಾಗಿ ಬದಲಾಗುತ್ತಿದೆ. ಅದರಲ್ಲೂ ಸ್ಮಾರ್ಟ್ ಸಲಕರಣೆಗಳ ಸಹವಾಸದಲ್ಲಿ ಅವರು ಬಹಳ ಚೂಪಾದ ವರ್ತನೆ ಹೊಂದಿರುತ್ತಾರೆ. ಹೀಗಾಗಿ, ಭಯದಿಂದ, ಹಠದಿಂದ ಅವರನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಅವರಿಗೆ ತಿಳಿಹೇಳಲು ತಾರ್ಕಿಕತೆ ಹಾಗೂ ಚರ್ಚೆಯ ಮಾರ್ಗವನ್ನು ಕಂಡುಕೊಳ್ಳಬಹುದು.
breakup ಬೇಡ ಅಂದ್ರೆ ಅವ್ಳ ಜೊತೆ ಇಂಥದ್ದೆಲ್ಲ ಮಾತಾಡಬೇಡಿ!
ಮಕ್ಕಳ ಕೇರ್ ಲೆಸ್ (Careless) ವರ್ತನೆಯ ಕುರಿತಾಗಿಯೂ ಬಹಳಷ್ಟು ಪಾಲಕರು ತಲೆಕೆಡಿಸಿಕೊಳ್ಳುತ್ತಾರೆ. ಅದರ ಬದಲು ಕೆಲವಷ್ಟನ್ನು ಅವರ ಪಾಡಿಗೇ ಬಿಡುವುದು ಉತ್ತಮ. ಏಕೆಂದರೆ, ದಿನಗಳು ಹೀಗೆಯೇ ಇರುವುದಿಲ್ಲ. ಜತೆಗೆ, ಹದಿಹರೆಯದವರು ಪಾಲಕರ ಬಳಿ ವಿಚಿತ್ರ ಬೇಡಿಕೆಗಳನ್ನು ಇಡುವುದು ಅತಿ ಸಾಮಾನ್ಯ. ಹಣದ ಬಗ್ಗೆ ಚಿಂತೆಯೇ ಇಲ್ಲದಂತೆ ವರ್ತಿಸುವುದು ಸಹಜ. ಆದರೆ, ನೀವು ಈ ಸಮಯದಲ್ಲಿ ಕೂಲಾಗಿರುವುದು ಮಾತ್ರ ಕಷ್ಟ. ಅವರನ್ನು ಕೋಪದಿಂದ, ಹೊಡೆದು ಬಡಿದು ಮಾಡುವ ಸಮಯ ಇದಲ್ಲ. ಹೀಗಾಗಿ, ಹೇಗಾದರೂ ಮಾಡಿ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಅದಕ್ಕಾಗಿ ಹೀಗ್ಮಾಡಿ.
• ದೈಹಿಕ ಅಂತರ (Physical Distance) ಕಾಪಾಡಿಕೊಳ್ಳಿ.
ಕೆಲವೊಮ್ಮೆ ನಿಮ್ಮ ಮಕ್ಕಳು ನಿಯಂತ್ರಣಕ್ಕೇ ಸಿಗದವರ ಹಾಗೆ ಹಾರಾಡುತ್ತಾರೆ. ಏನೇ ಹೇಳಿದರೂ ತಿರುಗಿ ಮಾತನಾಡುತ್ತಾರೆ. ನೀವು ಎಷ್ಟೇ ಸಮಜಾಯಿಸಿ ತಿಳಿಸಿ ಹೇಳಲು ಯತ್ನಿಸಿದರೂ ನಿಮಗೆ ಬೇಕೆಂದೇ ಕೋಪ ಬರಿಸುವಂತೆ ನೀವು ಹೇಳಿದ್ದಕ್ಕೆಲ್ಲ 'ಇಲ್ಲʼವೆಂದೇ ಹೇಳುತ್ತಾರೆ. ಆಗ ಕೋಪ ಬಂದು ಅವರ ಮೇಲೆ ಕೈ ಮಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಪರಿಸ್ಥಿತಿ ಕೈ ಮೀರುತ್ತಿದೆ ಎಂದಾದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ. ಅಂದರೆ ಅವರಿಂದ ದೂರ ನಡೆದುಬಿಡಿ. ಇದರಿಂದ ಅವರಿಗೆ ಹೊಡೆಯದೆ ಇರಲು ಸಾಧ್ಯವಾಗುತ್ತದೆ. ಒಂದೆಡೆ ಕುಳಿತುಕೊಂಡು ಶಾಂತವಾಗಿ ನಿಮ್ಮ ನಡೆಯ ಬಗ್ಗೆ ಒಮ್ಮೆ ಯೋಚಿಸಿ.
ಅಂತಹ ಸಮಯದಲ್ಲಿ ದೀರ್ಘವಾಗಿ ಉಸಿರಾಟ ಮಾಡಿ. ನಿಮ್ಮ ಸಂಬಂಧಕ್ಕೆ ಖಾಯಂ ಧಕ್ಕೆಯಾಗುವುದನ್ನು ಹೇಗಾದರೂ ತಪ್ಪಿಸಿಕೊಳ್ಳುವುದು ಜಾಣತನ. ಹದಿಹರೆಯದ ಮಕ್ಕಳು ಕೆಲವೊಮ್ಮೆ ಬೇಕೆಂದೇ ಪಾಲಕರನ್ನು ಕೆಣಕುತ್ತಾರೆ. ಅದು ತಿಳಿದರೂ ತಿಳಿಯದಂತೆ ವರ್ತಿಸಿ. ಅಥವಾ ಸಮಾಧಾನದಿಂದ ಅವರಲ್ಲಿ ಮಾತನಾಡಿ.
ಯಾವಾಗ್ಲೂ ಆಕ್ಟಿವ್ ಆಗಿರಲು ದೇಹಕ್ಕೆ ಈ 7 ಬಗೆಯ ವಿಶ್ರಾಂತಿ ಸಿಗಲೇಬೇಕು
• ನಿಮಗೆ ನೀವೇ ಧೃಡಪಡಿಸಿಕೊಳ್ಳುವ ಸಂಗತಿಗಳು
ಇದು ಭಯಪಡುವಷ್ಟು (Panic) ದೊಡ್ಡ ಬಿಕ್ಕಟ್ಟಲ್ಲ (Crisis) ಎನ್ನುವ ಮಾತನ್ನು ನಿಮಗೆ ನೀವೇ ಪದೇ ಪದೆ ಹೇಳಿಕೊಳ್ಳಿ. ಅವರು ಎಷ್ಟೇ ಕ್ರಾಂತಿಕಾರಿಯಂತೆ ವರ್ತಿಸಿದರೂ ಅವರಿಗೆ ನಿಮ್ಮ ಬೆಂಬಲ ಹಾಗೂ ಪ್ರೀತಿ (Love) ಬೇಕು ಎನ್ನುವುದನ್ನೂ ಅರಿತುಕೊಳ್ಳಿ. ಅವರಲ್ಲಿ ಉಂಟಾಗುತ್ತಿರುವ ಬೆಳವಣಿಗೆ ಹಾಗೂ ಹಾರ್ಮೋನ್ (Hormone) ಬದಲಾವಣೆಯಿಂದ ಅವರು ಹಾಗೆ ವರ್ತಿಸುತ್ತಾರೆ. ಹಾಗೆಯೇ, ತಾವು ದೊಡ್ಡವರು ಎಂದು ತೋರಿಸಿಕೊಳ್ಳುವ ಚಪಲವೂ ಇರುತ್ತದೆ. ಮಕ್ಕಳು ನಮ್ಮನ್ನು ಖಂಡಿತವಾಗಿ ಪ್ರೀತಿಸುತ್ತಾರೆ ಎನ್ನುವುದನ್ನು ಸಹ ಪದೇ ಪದೆ ಹೇಳಿಕೊಳ್ಳಿ.