ಪೋರ್ನ್ ವಿಡಿಯೋಗಳಲ್ಲಿ ಕಾಣಿಸುವ ಗಂಡಸರು ತುಂಬಾ ಹೊತ್ತು ಸೆಕ್ಸ್ ನಡೆಸಿ ಸಂಗಾತಿಯನ್ನು ಖುಷಿಪಡಿಸುತ್ತಾರೆ. ಅವರಂತೆ ತಮಗಿರಲು ಸಾಧ್ಯವೇ ಎಂಬ ಆತಂಕ ಗಂಡಸರನ್ನು ಕಾಡುತ್ತದೆ. ಇದೇ ಅವರ ದುರ್ಬಲ ಪರ್‌ಫಾರ್ಮೆನ್ಸ್‌ಗೂ ಕಾರಣವಾಗಬಹುದು.
ಪ್ರಶ್ನೆ: ನಾನು ಇಪ್ಪತ್ತು ವರ್ಷದ ಗಂಡಸು. ಆಗಾಗ ಪೋರ್ನ್ ವಿಡಿಯೋಗಳನ್ನು ನೋಡುತ್ತಿರುತ್ತೇನೆ. ಅದರಲ್ಲಿ ಬರುವ ಪುರುಷರು ನೀಟಾಗಿ, ಕ್ಲೀನಾಗಿ, ತಮ್ಮ ಗುಪ್ತಾಂಗಗಳನ್ನೂ ಕ್ಲೀನಾಗಿ ಶೇವ್ ಮಾಡಿಕೊಂಡಿರುತ್ತಾರೆ. ಅವರ ಶಿಶ್ನಗಳು ಗಡುಸಾದಾಗ ಹೆಚ್ಚು ಉದ್ದವಾಗಿರುತ್ತವೆ. ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಸೆಕ್ಸ್‌ನಲ್ಲಿ ತೊಡಗಿ ತಮ್ಮ ಸಂಗಾತಿಯನ್ನು ತೃಪ್ತಿ ಪಡಿಸುತ್ತಾರೆ. ನನ್ನ ಕೆಲವು ಗೆಳೆಯರು ಸಹ ತಮ್ಮ ಗುಪ್ತಾಂಗ ನಿಮಿರಿದಾಗ ಐದಾರು ಇಂಚಿಗಿಂತಲೂ ಉದ್ದವಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ನೋಡಿದಾಗ ನನ್ನ ಬಗ್ಗೆಯೇ ನನಗೆ ತಿರಸ್ಕಾರ, ಕೀಳರಿಮೆ ಮೂಡುತ್ತದೆ. ನನ್ನ ಜನನೇಂದ್ರಿಯ ಸಾಕಷ್ಟು ದೊಡ್ಡದಾಗಿಲ್ಲ. ನಾನು ಸೆಕ್ಸ್‌ನಲ್ಲಿ ಆನಂದ ಪಡೆಯಲು, ಸಂಗಾತಿಗೆ ಆನಂದ ಕೊಡಲು ಸಾಧ್ಯವೇ?
#Feelfree: ಯೋನಿ ಬಿಗಿಯಾಗಿಸೋಕೂ ಇದೆ ವ್ಯಾಯಾಮ
ಉತ್ತರ: ಹೆಚ್ಚಿನ ಪುರುಷರು ತಮ್ಮ ತಲೆಯಲ್ಲಿ ಸೆಕ್ಸ್ ಬಗ್ಗೆ ಅನೇಕ ಮಿಥ್‌ಗಳನ್ನು, ತಪ್ಪು ಕಲ್ಪನೆಗಳನ್ನು ತುಂಬಿಕೊಂಡಿರುತ್ತಾರೆ. ಇದರಿಂದಾಗಿ ಅವರಿಗೆ ನಿಜವಾದ ಸೆಕ್ಸ್ ಎಂಜಾಯ್ ಮಾಡಲು ಸಾಧ್ಯವಾಗದೆ ಹೋಗುತ್ತದೆ. ಅಥವಾ ತಾವು ಪಡೆಯುತ್ತಿರುವ ಸೆಕ್ಸ್‌ನ ಆನಂದದಲ್ಲಿ ನಿಜವಾದ ಆನಂದವಿಲ್ಲ ಎನ್ನಿಸಲು ಶುರುವಾಗುತ್ತದೆ. ಇದಕ್ಕೆ ಒಂದು ಕಾರಣ ಅವರು ನೋಡುವ ಪೋರ್ನ್ ಇರಬಹುದು; ಇನ್ನೊಂದು ಇತರ ಪುರುಷರಿಂದ ಪಡೆಯುವ ತಪ್ಪು ಮಾಹಿತಿ ಅಥವಾ ಅತಿರಂಜಿತ ಮಾತುಗಳು. ಕೆಲವು ಪುರುಷರು ತಮ್ಮಲ್ಲಿ ಏನೇನೂ ಸಾಮರ್ಥ್ಯವಿಲ್ಲದಿದ್ದರೂ ತಮ್ಮ ಸಂಭೋಗ ಶಕ್ತಿಯ ಬಗ್ಗೆ ಗೆಳೆಯರ ಬಳಗದಲ್ಲಿ ಕೊಚ್ಚಿಕೊಳ್ಳುತ್ತಾ ಇರುತ್ತಾರೆ. ತಾನು ಒಂದು ರಾತ್ರಿಯಲ್ಲಿ ನಾಲ್ಕೈದು ಬಾರಿ ಸಂಭೋಗಿಸಿದೆ, ರಾತ್ರಿಯಿಡೀ ಸೆಕ್ಸ್ ಮಾಡಿದೆ ಎಂದೆಲ್ಲಾ ನಂಬುವಂತೆ ಕತೆ ಕಟ್ಟುತ್ತಾರೆ. ಆದರೆ ಇದು ನಿಜಕ್ಕೂ ಸಾಧ್ಯವಿಲ್ಲ. ಇಂಥವರ ಮಾತುಗಳನ್ನು ಕೇಳದಿರುವುದು ಒಳ್ಳೆಯದು.
ಪೋರ್ನ್ ಫಿಲಂಗಳು ನಿಜವಲ್ಲ. ಅರ್ಧ ಗಂಟೆಯ ಒಂದು ಫಿಲಂ ಶೂಟ್ ಮಾಡಲು ಒಂದು ದಿನ ತೆಗೆದುಕೊಂಡಿರುತ್ತಾರೆ. ಮಾತ್ರವಲ್ಲ. ಬೇರೆ ಬೇರೆ ಕೋನಗಳಿಂದ ಚಿತ್ರೀಕರಿಸುತ್ತಾರೆ. ಹತ್ತಾರು ಮಂದಿಯ ನಡುವೆ ಈ ಚಿತ್ರೀಕರಣ ನಡೆಯುತ್ತದೆ. ಯಾರಾದರೂ ಅಷ್ಟೊಂದು ಮಂದಿನ ನಡುವೆ ಆನಂದವಾಗಿ, ನಿರಾಳವಾಗಿ ಸೆಕ್ಸ್ ನಡೆಸಲು ಸಾಧ್ಯವೆ? ಪುರುಷರ ಶಿಶ್ನ ಅಷ್ಟು ಕಾಲ ಗಡುಸಾಗಿಯೇ ಇರುವಂತೆ ಔಷಧಗಳು, ಇಂಜೆಕ್ಷನ್‌ಗಳು ಬಳಸಲ್ಪಡುತ್ತವೆ. ಹೀಗೆ ಬಳಸುವ ಪುರುಷರು ಇಂಡಸ್ಟ್ರಿಯಲ್ಲಿ ನಾಲ್ಕೈದು ವರ್ಷ ಮಾತ್ರ ಇರುತ್ತಾರೆ. ನಂತರ ಇಂಜೆಕ್ಷನ್‌ಗಳ ಪರಿಣಾಮ ದೇಹದ ಮೇಲಾಗುತ್ತದೆ. ಮತ್ತೆಂದೂ ಶಿಶ್ನ ನಿಮಿರುವುದೇ ಇಲ್ಲ; ನಿಮಿರಬೇಕೆಂದರೆ ಇಂಜೆಕ್ಷನ್ನೇ ಅಗತ್ಯವಾಗುತ್ತದೆ. ತಮ್ಮ ನಿಜಜೀವನದಲ್ಲಿ ಸೆಕ್ಸ್‌ನ ಆನಂದವನ್ನು ಇವರು ಕಳೆದುಕೊಂಡಿರುತ್ತಾರೆ. ಇಂದು ಸೆಕ್ಸ್ ಫಿಲಂ ಇಂಡಸ್ಟ್ರಿಗೆ ತೆಗೆದುಕೊಳ್ಳುವುದೇ ಇಂಥವರನ್ನು. ಅಲ್ಲಿ ಚಿಕ್ಕ ಶಿಶ್ನದ ಪುರುಷರನ್ನು ಪರಿಗಣಿಸಲಾಗುವುದಿಲ್ಲ. ಆದರೆ ಜಗತ್ತಿನಲ್ಲಿ ಎಲ್ಲ ಬಗೆಯ ಪುರುಷರೂ ಇರುತ್ತಾರೆ; ಎಲ್ಲ ಬಗೆಯ ಸ್ತ್ರೀಯರೂ ಇರುತ್ತಾರೆ. ಪೋರ್ನ್ ಫಿಲಂನಲ್ಲಿ ನಿಮಗೆ ಕಾಣಿಸುವ ಸ್ತ್ರೀಯರಂತೆ ಎಲ್ಲರೂ ನೀಟಾದ ಫಿಗರ್ ಹೊಂದಿ, ಕ್ಲೀನ್ಶೇವ್ ಮಾಡಿದ ಬಾಡಿಗಳನ್ನು ಹೊಂದಿರುವುದಿಲ್ಲ. ನಿಜ ಜೀವನದಲ್ಲಿ ತಮಗೆ ದೊರೆತ ದೇಹವನ್ನು, ತಮಗೆ ಸಿಕ್ಕಿದ ಸಾಂಗತ್ಯವನ್ನು ಆಸ್ವಾದಿಸಬೇಕಿರುತ್ತದೆ, ಅದೇ ಜೀವನಪ್ರೀತಿ.
#Feelfree: ಮನೆಯಿಂದ ಹೊರಗೆ ಹೋದಾಗ ಮಾತ್ರ ಸೆಕ್ಸ್ ಮೂಡ್ ಬರುತ್ತೆ!
ಪೋರ್ನ್ ನೋಡಬಹುದು; ನೀವು ನಿಮ್ಮ ಸೆಕ್ಸ್‌ಗೆ ಐಡಿಯಾ ಪಡೆಯಲು, ಉದ್ರೇಕ ಪಡೆಯಲು ಅದನ್ನು ನೋಡಬಹುದು. ಆದರೆ ಅದು ಫಿಲಂನಲ್ಲಿ ನಡೆಯುವ ಕಾರ್ ಚೇಸಿಂಗ್ ನೋಡಿದಂತೆ. ಚೇಸಿಂಗ್ ಅದ್ಭುತವಾಗಿರುತ್ತದೆ. ಆದರೆ ರೆಗ್ಯುಲರ್ ಲೈಫಿನಲ್ಲಿ ಡ್ರೈವ್ ಮಾಡಬೇಕಿರುವುದು ಹಾಗಲ್ಲ.
ಒಂದು ಅಧ್ಯಯನದ ಪ್ರಕಾರ ನವದಂಪತಿಗಳಲ್ಲಿ ಪ್ರತಿದಿನ ಸೆಕ್ಸ್ ನಡೆಯುತ್ತದೆ. ಒಂದೆರಡು ವರ್ಷದ ಬಳಿಕ ಅದು ವಾರಕ್ಕೆರಡು ಬಾರಿಗೆ ಇಳಿಯುತ್ತದೆ. ನಲುವತ್ತು ವರ್ಷದ ಬಳಿಕ ಅದು ಹತ್ತು ದಿನಕ್ಕೊಮ್ಮೆ ಎಂದಾಗುತ್ತದೆ. ಇದು ಸಹಜ. ಇದನ್ನೂ ಮೀರಿ ಸೆಕ್ಸ್ ಆರೋಗ್ಯವನ್ನು ಇನ್ನಷ್ಟು ಹೆಚ್ಚಾಗಿ ನಡೆಯುವಂತೆ ಕಾಯ್ದುಕೊಂಡ ದಂಪತಿಗಳು ಇರಬಹುದು. ಅಂಥವರಲ್ಲಿ ನಿಜಕ್ಕೂ ಆರೋಗ್ಯವಂತ ಸೆಕ್ಸ್ ಇದೆ ಎಂದರ್ಥ. ಇದಕ್ಕೆ ಪರಸ್ಪರ ಸಂಗಾತಿಗಳನ್ನು ಗೌರವಿಸುವ, ಪ್ರೀತಿಸುವ, ಇದ್ದುದರಲ್ಲೇ ಆನಂದಿಸುವ ಗುಣ ಇರಬೇಕು. ಇತರ ಪುರುಷರು ಹೇಳುವ ಮಾತುಗಳನ್ನು ನಂಬಬೇಡಿ. ನೀವು ಮುಂದೆ ಸಂಗಾತಿಯನ್ನು ಹುಡುಕಿಕೊಂಡಾಗ, ಸೆಕ್ಸ್ ಬಗ್ಗೆ ಆಕೆಯ ಜೊತೆಗೆ ನಡೆಸುವ ಆರೋಗ್ಯಕರವಾದ ಮಾತುಕತೆಯೇ ಮುಂದೆ ನಿಮ್ಮ ಜೀವನವನ್ನು ಆನಂದಮಯ ಸೆಕ್ಸ್ ಲೈಫ್‌ನ ಕಡೆಗೆ ಕರೆದೊಯ್ಯುತ್ತದೆ. ಇನ್ನು ಶಿಶ್ನದ ಗಾತ್ರಕ್ಕೂ ಸೆಕ್ಸ್ ಆನಂದಕ್ಕೂ ಯಾವ ಸಂಬಂಧವೂ ಇಲ್ಲ. ಚಿಕ್ಕ ಶಿಶ್ವ ಹೊಂದಿರುವವರು ಕೂಡ ಜೀವನದಲ್ಲಿ ಆನಂದವಾಗಿರುತ್ತಾರೆ. ಇದರ ಬಗ್ಗೆ ಅತಿಯಾದ ಕಾಳಜಿ ಬೇಡ.