#Feelfree: ಹುಡುಗಿಯರನ್ನು ಸಂತೃಪ್ತಿಪಡಿಸಲು ಶಿಶ್ನ ಎಷ್ಟುದ್ದ ಇರಬೇಕು?

Suvarna News   | Asianet News
Published : Mar 03, 2021, 05:14 PM IST
#Feelfree: ಹುಡುಗಿಯರನ್ನು ಸಂತೃಪ್ತಿಪಡಿಸಲು ಶಿಶ್ನ ಎಷ್ಟುದ್ದ ಇರಬೇಕು?

ಸಾರಾಂಶ

ಸ್ತ್ರೀಯನ್ನು ಸಂಭೋಗದಲ್ಲಿ ಸಂತೃಪ್ತಿಪಡಿಸಲು ಪುರುಷನ ಶಿಶ್ನ ಎಷ್ಟು ಉದ್ದ ಇರಬೇಕು? ಚಿಕ್ಕ ಶಿಶ್ನದಿಂದ ಆಕೆಯನ್ನು ಸಂತೃಪ್ತಿಪಡಿಸಲು ಸಾಧ್ಯವಿದೆಯೇ?

ಪ್ರಶ್ನೆ: ನಾನು ಹದಿನೆಂಟು ವರ್ಷದ ಯುವಕ. ನನ್ನ ಶಿಶ್ನ ನಿಮಿರಿದಾಗ ನಾಲ್ಕು ಇಂಚು ಉದ್ದವಾಗುತ್ತದೆ. ನಮ್ಮ ಕಾಲೇಜ್ ಸರ್ಕಲ್‌ನಲ್ಲಿ ಡೇಟಿಂಗ್ ಮತ್ತು ಒನ್ ನೈಟ್ ಸ್ಟಾಂಡ್‌ಗಳು ಸಾಮಾನ್ಯ. ನನಗೆ ಹಲವರು ಹುಡುಗಿಯರು ಸ್ನೇಹಿತೆಯರಾಗಿದ್ದಾರೆ. ಇಬ್ಬರ ಜೊತೆಗೆ ಡೇಟಿಂಗ್ ಮಾಡಿದ್ದೇನೆ ಹಾಗೂ ಹಾಸಿಗೆ ಹಂಚಿಕೊಂಡಿದ್ದೇನೆ. ಇಬ್ಬರಿಗೂ ನನ್ನಿಂದ ತೃಪ್ತಿಯಾಯಿತು ಎಂದು ನನಗೆ ಅನಿಸಿಲ್ಲ. ಬದಲಾಗಿ ಅತೃಪ್ತಿಯಾದಂತೆ ಭಾಸವಾಗಿದೆ. ಇಬ್ಬರೂ ಒಂದು ಸಲಕ್ಕಿಂತ ಹೆಚ್ಚಿಗೆ ನನ್ನೊಡನೆ ಸೆಕ್ಸ್ ನಡೆಸಲು ಒಪ್ಪಿಕೊಂಡಿಲ್ಲ. ನನ್ನಶಿಶ್ನ ತುಂಬಾ ಚಿಕ್ಕದಾಗಿರುವುದರಿಂದ ಇರಬಹುದೇ? ನಾನು ಮಂಚದಲ್ಲಿ ಹೆಣ್ಣುಮಕ್ಕಳನ್ನು ಸಂತೃಪ್ತಿಪಡಿಸಲು ಎಂದಿಗೂ ಸಾಧ್ಯವಿಲ್ಲವೇ? ಚಿಂತೆಯಾಗಿದೆ. ನಾನು ಮುಂದೆ ದಾಂಪತ್ಯ ನಡೆಸುವುದು ಹೇಗೆ? ಪರಿಹಾರ ನೀಡಿ. ನನ್ನ ಶಿಶ್ನ ಇನ್ನೂ ಬೆಳೆಯುವ ಸಾಧ್ಯತೆ ಇದೆಯೇ? ವಯಾಗ್ರಾ ಸೇವಿಸಿದರೆ ದೊಡ್ಡದಾಗಬಹುದೇ?

Feelfree: ಕಾರ್ ಸೆಕ್ಸ್ ಅಪರಾಧವಾ? ಏನು ಎಚ್ಚರಿಕೆ ತಗೋಬೇಕು? ...

ಉತ್ತರ: ಆ ಗರ್ಲ್‌ಫ್ರೆಂಡ್‌ಗಳು ನಿಮ್ಮ ಜೊತೆ ಎರಡನೇ ರಾತ್ರಿಯಲ್ಲಿ ಪಾಲ್ಗೊಳ್ಳಲು ಒಪ್ಪದೆ ಇರುವುದು ನಿನ್ನ ಶಿಶ್ನದ ಗಾತ್ರದಿಂದಾಗಿ ಇರಲಿಕ್ಕಿಲ್ಲ. ಬದಲು ನಿಮ್ಮ ಅವಸರ, ಅಪಕ್ವ ಚಿಂತನೆಗಳಿಂದಾಗಿ ಇರಬಹುದು.

ಯಾಕೆಂದರೆ ಶಿಶ್ನದ ಗಾತ್ರ ಸಂಭೋಗದ ವೇಳೆ ಲೆಕ್ಕಾಚಾರಕ್ಕೆ ಬರುವುದೇ ಇಲ್ಲ. ಅದಕ್ಕಿಂತ ಮುಖ್ಯವಾಗಿ ನಿಮ್ಮ ಫೋರ್‌ಪ್ಲೇ ಅರ್ಥಾತ್‌ ಮುನ್ನಲಿವಿನ, ಅಥವಾ ಸಂಭೋಗಕ್ಕೆ ಮೊದಲಿನ ರಸಿಕತೆಯೇ ಪ್ರಮುಖ ಪಾತ್ರ ವಹಿಸುತ್ತದೆ.

#Feelfree: Oral Sex ಅಪರಾಧವೇ? ಈ ಬಗ್ಗೆ ಒಂದಿಷ್ಟು ಡೌಟ್ಸಿಗಿಲ್ಲಿವೆ ಮಾಹಿತಿ ...

ಎಷ್ಟು ಆಪ್ತವಾಗಿ ನೀವು ನಿಮ್ಮ ಗೆಳತಿಯ ಜೊತೆ ಭಾವನೆಗಳನ್ನು ಹಂಚಿಕೊಳ್ಳುತ್ತೀರಿ, ಆಕೆಯನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ, ಆಕೆಯ ಲೈಂಗಿಕ ಆಸೆಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದೀರೋ ಅಥವಾ ನಿಮ್ಮ ಸ್ಖಲನವನ್ನು ಮಾತ್ರ ಪ್ರಮುಖವಾಗಿಟ್ಟುಕೊಂಡು ಆಟವಾಡುತ್ತಿದ್ದೀರೋ- ಎಂಬುದೆಲ್ಲ ಮುಖ್ಯವಾಗುತ್ತದೆ. ನಿಮ್ಮ ವಯಸ್ಸು ಹದಿನೆಂಟು ಎನ್ನುತ್ತಿದ್ದೀರಿ. ನಿಮ್ಮ ಶಿಶ್ನ ಇನ್ನು ಬೆಳೆಯುವ ಸಾಧ್ಯತೆ ಇಲ್ಲ. ವಯಾಗ್ರ ಸೇವಿಸುವುದು ಒಂದು ಹೊತ್ತಿನ ಕಾಮೋದ್ರೇಕಕ್ಕಾಗಿ ಮಾತ್ರ. ಮರುದಿನ ಮುಂಜಾನೆ ಆ ಉದ್ರೇಕವೂ ಇರುವುದಿಲ್ಲ. ಹೀಗಾಗಿ ವಯಾಗ್ರ ಸೇವಿಸಬೇಡಿ. ಅದು ನಿಮ್ಮಂಥ ಯುವಕರಿಗೂ ಅಲ್ಲ. 

#Feelfree: ಇಬ್ಬರ ಜೊತೆ ಲೈಂಗಿಕ ಸಂಬಂಧ, ಮಗು ಯಾರದ್ದು? ...

ಹಾಗಾದರೆ ಶಿಶ್ನದ ಗಾತ್ರ ಕೌಂಟ್‌ ಆಗುವುದೇ ಇಲ್ಲವೆ? ಈ ಬಗ್ಗೆ ಸಂಶೋಧನೆ, ಸಮೀಕ್ಷೆಗಳು ನಡೆದಿವೆ, ಇಲ್ಲವೆಂದಲ್ಲ. ವಿದೇಶಗಳಲ್ಲಿ ಈ ಬಗೆಯ ಸಮೀಕ್ಷೆಗಳು ಆಗಿವೆ. ಸುಮಾರು ಎಪ್ಪತ್ತು ಶೇಕಡ ಹೆಣ್ಣುಮಕ್ಕಳು, ತಾವು ಶಿಶ್ನದ ಗಾತ್ರಕ್ಕಿಂತಲೂ ಆ ಹುಡುಗನ ಆತ್ಮೀಯತೆ, ಪ್ರೀತಿ, ರಸಿಕತೆ, ಫೋರ್‌ಪ್ಲೇ ಕೌಶಲಗಳನ್ನೇ ಹೆಚ್ಚು ಮೆಚ್ಚುತ್ತೇವೆ ಎಂದು ಹೇಳಿದ್ದಾರೆ. ಶೇಕಡ ಮೂವತ್ತು ಹೆಣ್ಣುಮಕ್ಕಳು ಮಾತ್ರ, ತಮಗೆ ಶಿಶ್ನದ ಗಾತ್ರವೂ ಮುಖ್ಯ, ಅದು ತೀರಾ ಚಿಕ್ಕದಾಗಿದ್ದರೆ ನಿರಾಸೆಯಾಗುತ್ತದೆ ಅಂದಿದ್ದಾರೆ. ಆದರೆ ಇವರೂ ಕೂಡ, ಶಿಶ್ನದ ಗಾತ್ರ ಹಾಗೂ ಓರಲ್ ಸೆಕ್ಸ್ (ಮುಖಮೈಥುನ)ಗಳನ್ನು ಮುಂದಿಟ್ಟರೆ, ಅದರ ಗಾತ್ರಕ್ಕಿಂತಲೂ ತಮ್ಮ ಸಂಗಾತಿ ತಮಗೆ ಓರಲ್ ಸೆಕ್ಸ್ ನೆರವೇರಿಸುವುದನ್ನೇ ಹೆಚ್ಚು ಇಷ್ಟಡುತ್ತೇವೆ ಎಂದಿದ್ದಾರೆ. ಸಂತೃಪ್ತಿ ಎಂಬುದು ಶಿಶ್ನದಿಂದಲೇ ಬರಬೇಕೆಂದಿಲ್ಲ.

ಆದರೆ ಶಿಶ್ನದ ಗಾತ್ರ ತೀರಾ ದೊಡ್ಡದಾದರೂ ಸಮಸ್ಯೆ ಕಾದಿದೆ. ವಿದೇಶಗಳಲ್ಲಿ ಇಂಥ ಘಟನೆಗಳೂ ನಡೆದಿವೆ. ಏಳಿಂಚು, ಎಂಟಿಂಚು ಗಾತ್ರದ ಶಿಶ್ನ ಹೊಂದಿರುವ ಅನೇಕ ಪುರುಷರು ವೈದ್ಯರ ಬಳಿಗೆ ಬಂದು, ಈ ಶಿಶ್ನದ ಗಾತ್ರದಿಂದಾಗಿ ಒಮ್ಮೆ ತಮ್ಮ ಜೊತೆ ಸೆಕ್ಸ್ ಹಂಚಿಕೊಂಡ ನಾರಿಯರು ಇನ್ನೊಮ್ಮೆ ಬರುವುದಿಲ್ಲ, ಇದಕ್ಕೆ ಪರಿಹಾರ ಬೇಕು ಎಂದು ಅಂಗಲಾಚಿದ್ದಾರಂತೆ. ಅಂದರೆ ದೊಡ್ಡ ಗಾತ್ರದ ಮದನಾಯುಧವೂ ಸ್ತ್ರೀಯ ಪಾಲಿಗೆ ಸರಿಯಾದ ಕಾಮಕೌಶಲ್ಯವಿಲ್ಲದ ಸಂದರ್ಭದಲ್ಲಿ ಕಠೋರ ಅನಿಸಬಲ್ಲದು. ಅಂಥ ಸಂದರ್ಭದಲ್ಲಿ ಸ್ತ್ರೀ ಮೇಲಿರುವ ಸಂಭೋಗಾಸನ ಹೆಚ್ಚು ನೆರವಾಗಬಹುದು.

ಹಾಗಿದ್ದರೆ ಸಣ್ಣ ಶಿಶ್ನ ಹೊಂದಿರುವವರಿಗೆ ಸೂಕ್ತ ಆಸನ ಯಾವುದು? ಅವರಿಗೂ ಸ್ತ್ರೀ ಮೇಲಿರುವ ಆಸನವೇ ಸೂಕ್ತ. ಯಾಕೆಂದರೆ ಸ್ತ್ರೀ ತನ್ನ ಭಗಾಂಕುರ ಅಥವಾ ಜಿ ಸ್ಪಾಟ್‌ ಅನ್ನು ಶಿಶ್ನವು ಸರಿಯಾಗಿ ಘರ್ಷಿಸುವಂತೆ ಕುಳಿತುಕೊಂಡು ತನಗೆ ಬೇಕಾದ ಸುಖವನ್ನು ಪಡೆಯಬಲ್ಲಳು- ನಿಮಗೂ ಕೊಡಬಲ್ಲಳು. ಬೇಕಿದ್ದರೆ ಪ್ರಯತ್ನಿಸಿ ನೋಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?