ಬಹುತೇಕ ಭಾರತೀಯರು First Night ನಲ್ಲಿ ಏನು ಮಾಡ್ತಾರೆ..?

By Suvarna News  |  First Published Sep 16, 2022, 4:17 PM IST

ಫಸ್ಟ್ ನೈಟ್ ಬಗ್ಗೆ ನಮ್ಮ ಕಲ್ಪನೆಗಳೇ ಬೇರೆ ಇದೆ. ಸಿನಿಮಾಗಳಲ್ಲಿ ತೋರಿಸೋದನ್ನೇ ಬಹುತೇಕರು ವಾಸ್ತವ ಎಂದು ನಂಬುತ್ತಾರೆ. ಆದ್ರೆ ಸತ್ಯ ಬೇರೆಯೇ ಇದೆ. ಮೊದಲ ರಾತ್ರಿ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಹೊರ ಬಿದ್ದಿದೆ.
 


ಭಾರತದಲ್ಲಿ ಮದುವೆಯನ್ನು ಇಬ್ಬರಲ್ಲ, ಎರಡು ಕುಟುಂಬಗಳ ಮಿಲನವೆಂದು ಭಾವಿಸಲಾಗುತ್ತದೆ. ದೀರ್ಘಕಾಲ ದಂಪತಿ ಚೆನ್ನಾಗಿರಲಿ ಎನ್ನುವ ಉದ್ದೇಶವನ್ನಿಟ್ಟುಕೊಂಡು, ಜಾತಕ ಹೊಂದಿಸಿ, ಸಂಪ್ರದಾಯದಂತೆ ಮದುವೆ ಮಾಡುತ್ತಾರೆ. ಭಾರತದಲ್ಲಿ ಈಗ್ಲೂ ಬಹುತೇಕ ಮದುವೆಗಳು ಅರೆಂಜ್ ಮ್ಯಾರೇಜ್ ಆಗಿರುತ್ತವೆ. ಹಾಗೆಯೇ ಮದುವೆಯನ್ನು ತಮ್ಮ ತಮ್ಮ ಸಂಪ್ರದಾಯ, ಪದ್ಧತಿಯಂತೆ ಮಾಡಲಾಗುತ್ತದೆ. ಮದುವೆ ನಂತ್ರ ಮೊದಲ ರಾತ್ರಿ ಎಂಬ ಪದ್ಧತಿ ಕೂಡ ಇದೆ. ಮೊದಲ ರಾತ್ರಿಗೂ ಮುಹೂರ್ತ ನೋಡುವವರಿದ್ದಾರೆ. ದಂಪತಿ ಜೀವನ ಹಸನಾಗಿರಲಿ ಎನ್ನುವ ಕಾರಣಕ್ಕೆ ಮುಹೂರ್ತ ನೋಡಿ, ದಂಪತಿಯನ್ನು ಕೋಣೆಗೆ ಕಳಿಸ್ತಾರೆ. ಮೊದಲ ರಾತ್ರಿ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ಮೊದಲ ರಾತ್ರಿಯನ್ನು ವಿಶೇಷವಾಗಿ ತೋರಿಸಲಾಗುತ್ತದೆ. ಮೊದಲ ರಾತ್ರಿ ದಂಪತಿ ಸಮ್ಮಿಲನವನ್ನು ನಾವಲ್ಲಿ ಕಾಣಬಹುದು. ಆದ್ರೆ ಅದು ರೀಲ್. ರಿಯಲ್ ಲೈಫ್ ನಲ್ಲಿ ನೀವು ಅಂದುಕೊಂಡ ಹಾಗೆ ಏನೂ ನಡೆಯುವುದಿಲ್ಲ ಎಂಬುದು ಕೆಲ ಸಮೀಕ್ಷೆಗಳಿಂದ ತಿಳಿದು ಬಂದಿದೆ. ವಾಸ್ತವವಾಗಿ  ಹೆಚ್ಚಿನ ದಂಪತಿ (Couple)  ತಮ್ಮ ಮೊದಲ ರಾತ್ರಿ (First Night ) ಏನು ಮಾಡುತ್ತಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.  

ಮೊದಲ ರಾತ್ರಿ ಹೇಗಿರುತ್ತದೆ? : ಯುಕೆ (UK) ಕಂಪನಿ ನಡೆಸಿ ಸಮೀಕ್ಷೆ (Survey) ಒಂದರ ಪ್ರಕಾರ  ಶೇಕಡಾ 52 ದಂಪತಿ ಮದುವೆಯ ಮೊದಲ ರಾತ್ರಿ ಸಂಭೋಗ ಬೆಳೆಸುವುದಿಲ್ಲ. ಅವರು ಸಾಕಷ್ಟು ಒತ್ತಡದಲ್ಲಿರುತ್ತಾರೆಂದು ಸಮೀಕ್ಷೆ ಹೇಳಿದೆ. 
ಮದುವೆಯ ಮೊದಲ ರಾತ್ರಿಯೇ ಸಂಬಂಧ ಬೆಳೆಸಿದ ಶೇಕಡಾ 16ರಷ್ಟು ಜನರು ನಿರಾಶೆಗೊಂಡಿರುವುದಾಗಿ ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 9 ರಷ್ಟು ಜನರು ಮದುವೆಯಾದ ನಂತರ ಕನಿಷ್ಠ ಎರಡು ದಿನಗಳ ಕಾಲ ಶಾರೀರಿಕ ಸಂಬಂಧ ಬೆಳೆಸುವುದಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಮೊದಲ ರಾತ್ರಿ ಸಂಬಂಧ ಬೆಳೆಸದ ದಂಪತಿ ಏನು ಮಾಡ್ತಾರೆ ಎನ್ನುವ ಪ್ರಶ್ನೆ ಕಾಡುವುದು ಸಹಜ. 

Tap to resize

Latest Videos

ಇದನ್ನೂ ಓದಿ: ಒಂದಿನ ಬೇರೆಯವರ ಜೊತೆ ಮಲಗಬೇಕು, ಹೆಂಡತಿ ಡಿಮ್ಯಾಂಡಿಗೆ ಗಂಡ ಸುಸ್ತು!

ಸುಸ್ತಿನಿಂದ ನಿದ್ರೆಗೆ ಜಾರುತ್ತಾರೆ : ಸಮೀಕ್ಷೆ ಪ್ರಕಾರ ಅನೇಕ ದಂಪತಿ ಇದೇ ಉತ್ತರ ನೀಡಿದ್ದಾರೆ. ಮದುವೆ ವಿಧಿ ವಿಧಾನಗಳಿಂದ ದಂಪತಿಗೆ ಸುಸ್ತಾಗುತ್ತದೆ. ಇದ್ರಿಂದ ನಿದ್ರೆ ಅನಿವಾರ್ಯವಾಗುತ್ತದೆ. ಭಾರತೀಯ ಮದುವೆಯಲ್ಲಿ ಶಾಸ್ತ್ರ, ಪದ್ಧತಿ ಹೆಚ್ಚಿರುವ ಕಾರಣ, ಮದುವೆಗೆ ಒಂದು ವಾರದ ಮೊದಲೇ ವರ  ಮತ್ತು ವಧು ನಿದ್ರೆ ಬಿಟ್ಟಿರುತ್ತಾರೆ. ಹಾಗಾಗಿ ದಂಪತಿ ಮಲಗಲು ಪ್ರಯತ್ನಿಸುತ್ತಾರೆ. ಆಯಾಸದಿಂದ ಹೆಚ್ಚು ಮಾತನಾಡಲೂ ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿದ್ರೆ ಮಾಡ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.  

ಹನಿಮೂನ್ ಬಗ್ಗೆ ಪ್ಲಾನ್ : ಮದುವೆ ನಂತ್ರ ಹನಿಮೂನ್ ಗೆ ಹೋಗುವ ಟ್ರೆಂಡ್ ಹೆಚ್ಚಾಗಿದೆ. ಹಾಗಾಗಿ ಮದುವೆ ಮೊದಲ ರಾತ್ರಿ ದಂಪತಿ ಹನಿಮೂನ್ ಬಗ್ಗೆ ಪ್ಲಾನ್ ಮಾಡ್ತಾರೆ. ಎಲ್ಲಿಗೆ ಹೋಗುವುದು ಎಂಬುದ್ರಿಂದ ಹಿಡಿದು ಅಲ್ಲಿನ ಹೊಟೇಲ್ ಬುಕ್ಕಿಂಗ್ ವರೆಗೆ ಅನೇಕ ವಿಷ್ಯಗಳನ್ನು ಚರ್ಚಿಸ್ತಾರೆ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ.   

ಪರಸ್ಪರ ಅರ್ಥೈಸಿಕೊಳ್ಳುವ ಪ್ರಯತ್ನ : ಮೊದಲೇ ಹೇಳಿದಂತೆ ಭಾರತದಲ್ಲಿ ಅರೆಂಜ್ ಮ್ಯಾರೇಜ್ ಸಂಖ್ಯೆ ಹೆಚ್ಚಿದೆ. ಸಂಗಾತಿ ಬಗ್ಗೆ ತುಂಬಾ ವಿಷ್ಯಗಳನ್ನು ಮಾತನಾಡಲು ಅವಕಾಶ ಸಿಕ್ಕಿರುವುದಿಲ್ಲ. ಹಾಗಾಗಿ ಕೆಲ ದಂಪತಿ ಮೊದಲ ರಾತ್ರಿಯನ್ನು ಪರಸ್ಪರ ಅರ್ಥ ಮಾಡಿಕೊಳ್ಳುವುದ್ರಲ್ಲಿ ಕಳೆಯುತ್ತಾರೆ. ದಂಪತಿ ಪರಸ್ಪರ ಕುಟುಂಬ, ಅಭ್ಯಾಸ, ಹವ್ಯಾಸ, ಇಷ್ಟ-ಕಷ್ಟದ ಬಗ್ಗೆ ಮಾತನಾಡ್ತಾರೆ. 

ಇದನ್ನೂ ಓದಿ: LOVE AND RELATION: ಪ್ರೀತಿಯಲ್ಲಿರೋ ಪುರುಷ ಹೀಗೆಲ್ಲ ಆಡ್ಬೋದು, ಗಾಬರಿ ಆಗ್ಬೇಡಿ

ಮೊದಲ ರಾತ್ರಿ ಆಟ : ಕೆಲ ಕುಟುಂಬಗಳಲ್ಲೊ ಮದುವೆಯ ಮೊದಲ ರಾತ್ರಿ ಕೆಲ ಆಟಗಳನ್ನು ಆಯೋಜನೆ ಮಾಡಲಾಗುತ್ತದೆ. ಮಧ್ಯರಾತ್ರಿಯವರೆಗೂ ಕಾರ್ಯಕ್ರಮವಿರುತ್ತದೆ. ಇಂಥ ಸಂದರ್ಭದಲ್ಲಿ ಪತಿ – ಪತ್ನಿಗೆ ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಕುಟುಂಬದ ಜೊತೆ ಅವರು ಕಾಲ ಕಳೆಯಬೇಕಾಗುತ್ತದೆ.  

click me!