
ವೈವಾಹಿಕ ಜೀವನದಲ್ಲಿ ಲೈಂಗಿಕತೆಯ ದೊಡ್ಡ ಕೊಡುಗೆ ಇರುತ್ತೆ. ಭಾವನಾತ್ಮಕ ಅನ್ಯೂನ್ಯತೆ ಜೊತೆ ದೈಹಿಕ ಅನ್ಯೂನ್ಯತೆಯಿದ್ದಾಗ ಸಂಬಂಧ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಪತಿ – ಪತ್ನಿಯರ ಮಧ್ಯೆ ಲೈಂಗಿಕ ಸಂಬಂಧ ಇಲ್ಲವೆಂದ್ರೆ ದಾಂಪತ್ಯ ಮುರಿದು ಬಿದ್ದ ಬೀಳುತ್ತಾ ಎಂಬ ಪ್ರಶ್ನೆ ಮೂಡಬಹುದು. ಅನೇಕ ಬಾರಿ ಇದು ವೈವಾಹಿಕ ಜೀವನ ಮುರಿದು ಬೀಳಲು ಕಾರಣವಾಗುತ್ತದೆ. ಕೆಲ ದಿನಗಳ ಹಿಂದಷ್ಟೆ ಅಲಹಾಬಾದ್ ಹೈಕೋರ್ಟ್ ಇದೇ ವಿಷ್ಯಕ್ಕೆ ದಂಪತಿಗೆ ವಿಚ್ಛೇದನ ನೀಡಿದೆ. ಇಬ್ಬರ ಮಧ್ಯೆ ಯಾವುದೇ ದೈಹಿಕ ಸಂಪರ್ಕವಿರಲಿಲ್ಲ. ಹಾಗಾಗಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ದಾಂಪತ್ಯದಲ್ಲಿ ದೈಹಿಕ ಸಂಬಂಧಕ್ಕೆ ಅವಕಾಶವಿಲ್ಲ ಎಂದಾದ್ರೆ ಅದು ಮಾನಸಿಕ ಹಿಂಸೆ ಹಾಗೂ ಕ್ರೂರತೆಯಾಗುತ್ತದೆ ಎಂದ ಕೋರ್ಟ್, ವಿಚ್ಛೇದನ ಮಂಜೂರು ಮಾಡಿದೆ. ಸಂಭೋಗವಿಲ್ಲವೆಂದ್ರೆ ಎಲ್ಲ ಸಂಸಾರಗಳು ಒಡೆಯುತ್ತವೆ ಅನ್ನೋದು ತಪ್ಪು. ನಾವಿಂದು ಅದ್ರ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಸಾಮಾನ್ಯವಾಗಿ ವಿವಾಹವಾದ್ಮೇಲೆ ದಂಪತಿ (Couple) ಶಾರೀರಿಕ ಸಂಬಂಧ ಬೆಳೆಸುವುದು ಸಹಜ. ಇದು ನೈಸರ್ಗಿಕ ಕ್ರಿಯೆ. ಮಕ್ಕಳನ್ನು ಪಡೆಯಲು ಇಬ್ಬರು ಒಂದಾಗುವುದು ಅನಿವಾರ್ಯ. ಇಬ್ಬರ ಮಧ್ಯೆ ಲೈಂಗಿಕತೆ (Sex) ಇಲ್ಲ ಎಂದಾಗ ಈ ಸಂಬಂಧ ಎಷ್ಟು ದಿನ ಇರಬಲ್ಲದು ಹಾಗೇ ಎಷ್ಟು ಗಟ್ಟಿಯಾಗಿ ಇರಬಲ್ಲದು ಎಂಬುದು ದಂಪತಿಯ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಲಿಂಗರಹಿತ ಸಂಬಂಧದಲ್ಲಿ ವಾಸಿಸಲು ಇಬ್ಬರಿಗೂ ಆಸಕ್ತಿಯಿದ್ದು, ಇಬ್ಬರೂ ಒಪ್ಪಿಗೆ ನೀಡಿದ್ದರೆ ಈ ಸಂಬಂಧ (Relationship) ಕ್ಕೆ ಯಾವುದೇ ಹಾನಿಯಾಗುವುದಿಲ್ಲ.
Relationship Tips: ಪ್ರೀತಿಸೋ ಹುಡುಗಿ ಇತ್ತೀಚೆಗೆ ನಿಮ್ಮನ್ನ ನೆಗ್ಲೆಕ್ಟ್ ಮಾಡ್ತಿದ್ದಾಳಾ? ಕಾರಣ ಇದಿರ್ಬೋದು ನೋಡಿ!
ಮಹಿಳೆ ಎಷ್ಟು ದಿನ ಸೆಕ್ಸ್ ಇಲ್ಲದೆ ಇರಬಲ್ಲಳು : ಸೆಕ್ಸ್ ವಿಷ್ಯ ಬಂದಾಗ ಅದನ್ನು ಪುರುಷರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಸಂಸಾರದಲ್ಲಿ ಲೈಂಗಿಕ ಸುಖ ಇಬ್ಬರಿಗೂ ಮುಖ್ಯವಾಗುತ್ತದೆ. ಕೆಲ ಮಹಿಳೆಯರು ಸೆಕ್ಸ್ ಇಲ್ಲದೆ ಸಂಪೂರ್ಣ ಜೀವನವನ್ನು ಕಳೆಯುವ ಸಾಮರ್ಥ್ಯ ಹೊಂದಿರುತ್ತಾರೆ. ಪುರುಷರು ಕೂಡ ಸೆಕ್ಸ್ ಇಲ್ಲದೆ ಜೀವನ ನಡೆಸುವ ಶಕ್ತಿ ಹೊಂದಿರುತ್ತಾರೆ. ಕೆಲಸ, ವೃತ್ತಿ ಅಥವಾ ಮತ್ತ್ಯಾವುದೋ ಕಾರಣಕ್ಕೆ ಮದುವೆಯಾಗದೆ, ಲೈಂಗಿಕ ಸುಖ ಪಡೆಯದೆ ಬದುಕುವವರಿದ್ದಾರೆ. ಆದ್ರೆ ಮದುವೆ, ಸಂಸಾರ ಎಂಬ ಸಂಗತಿ ಬಂದಾಗ ಸೆಕ್ಸ್ ಬಗ್ಗೆಯೂ ಆಲೋಚನೆ (Thought) ನಡೆಸಬೇಕಾಗುತ್ತದೆ. ವಿವಾಹವಾದ್ಮೇಲೆ ಶಾರೀರಿಕ ಸಂಬಂಧ ಬೆಳೆಸದೆ ಇರುವ ದಂಪತಿ ಬಹಳ ಅಪರೂಪ. ಆದ್ರೆ ಜೀವನ ಪರ್ಯಂತ ಸೆಕ್ಸ್ ದೂರವಿಟ್ಟು ಒಬ್ಬರಿಗೊಬ್ಬರು ಆಸರೆಯಾಗಿ ಬದುಕಿದ ಜೋಡಿಗಳೂ ಇವೆ.
ಪ್ರತಿ ದಂಪತಿಗೆ ಲೈಂಗಿಕತೆ ಮಹತ್ವ ವಿಭಿನ್ನ : ದಂಪತಿ ಜೀವನ (Life) ಸುಖವಾಗಿರಲಿ, ಸಂತಾನಪ್ರಾಪ್ತಿಯಾಗ್ಲಿ ಎನ್ನುವ ಕಾರಣಕ್ಕೆ ಹಿಂದೂ ಧರ್ಮದಲ್ಲಿ ದಂಪತಿ ಒಂದಾಗಲು ದಿನ, ಮುಹೂರ್ತವನ್ನು ನೋಡ್ತಾರೆ. ಇದ್ರಿಂದ ನಾವು ಲೈಂಗಿಕತೆ ವಿವಾಹ ಸಂಬಂಧದ ಪ್ರಮುಖ ಭಾಗ ಎಂಬುದನ್ನು ಅರ್ಥೈಸಬಹುದು. ಆದಾಗ್ಯೂ ಇದರ ಪ್ರಾಮುಖ್ಯತೆಯು ದಂಪತಿಯಿಂದ ದಂಪತಿಗೆ ಭಿನ್ನವಾಗಿರುತ್ತದೆ. ಕೆಲವರು ನಿತ್ಯ ಸಂಭೋಗ ಸುಖ ಬಯಸಿದ್ರೆ ಮತ್ತೆ ಕೆಲವರು ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಶಾರೀರಿಕ ಸಂಬಂಧ ಬೆಳೆಸಿ ತೃಪ್ತರಾಗ್ತಾರೆ. ಹಾಗಾಗಿ ಪಾಲುದಾರರ ಮಧ್ಯೆ ತಿಳುವಳಿಕೆ ಮುಖ್ಯವಾಗುತ್ತದೆ.
Relationship Tips: ಸಂಗಾತಿ ಮೇಲೆ ಸಂದೇಹನಾ? ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಇದನ್ನೋದಿ
ಪರಸ್ಪರ ಮಾತುಕತೆ : ಒಬ್ಬರಿಗೆ ಲೈಂಗಿಕತೆಯಲ್ಲಿ ಆಸಕ್ತಿ ಇರಬಹುದು, ಇನ್ನೊಬ್ಬರಿಗೆ ಇರದೆ ಇರಬಹುದು. ಆಗ ಸಮಸ್ಯೆ ಶುರುವಾಗುತ್ತದೆ. ಇದ್ರ ಬಗ್ಗೆ ತಿಳಿಯಲು ಸಂಗಾತಿ ಮುಕ್ತವಾಗಿ ಮಾತುಕತೆ ನಡೆಸಬೇಕು. ಅವರ ಆಸೆಗಳನ್ನು ಅರಿಯಬೇಕು. ಲೈಂಗಿಕ ಜೀವನದಲ್ಲಿ ಪರಸ್ಪರ ಸಹಾಯಮಾಡಿದಾಗ ಬಂಧ ಬಲಗೊಳ್ಳುತ್ತದೆ.
ಸಲಹೆ ಪಡೆಯಲು ಹಿಂಜರಿಕೆ ಬೇಡ : ಲೈಂಗಿಕ ಜೀವನದಿಂದ ಸಂಸಾರ ದಾರಿತಪ್ಪುತ್ತಿದೆ ಎನ್ನಿಸಿದ್ರೆ ನೀವು ತಜ್ಞರ ಸಲಹೆ ಪಡೆಯಬಹುದು. ದಾಂಪತ್ಯದಲ್ಲಿ ಸಮಸ್ಯೆ ಅಥವಾ ಒತ್ತಡ ಉಂಟಾಗುತ್ತಿದ್ದರೆ ಚಿಕಿತ್ಸಕರಿಂದ ಅಥವಾ ಸಲಹೆಗಾರರಿಂದ ಸಹಾಯ ಪಡೆಯುವುದು ಯೋಗ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.