Parenting Skills: ಮಕ್ಕಳು ಫೇಮಸ್ ಆಗಬೇಕೆ? ಅವರೊಂದಿಗೆ ಖುಷಿ ಹಂಚಿಕೊಳ್ಳಿ

By Suvarna News  |  First Published Dec 23, 2021, 10:44 AM IST

ಮಕ್ಕಳು ಎಲ್ಲರ ನಡುವೆ ಗುರುತಿಸಿಕೊಳ್ಳಲಿ ಎನ್ನುವುದು ಪಾಲಕರ ಸಾಮಾನ್ಯ ಬಯಕೆ. ಆದರೆ, ಅದಕ್ಕೆ ಪೂರಕವಾಗಿ ನಿಮ್ಮ ನಡೆನುಡಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ. ಏಕೆಂದರೆ, ಮಕ್ಕಳ ಜನಪ್ರಿಯತೆಯಲ್ಲಿ ಪಾಲಕರ ಪಾತ್ರ ಗಾಢವಾಗಿರುತ್ತದೆ.


ಮಕ್ಕಳು ಜನಪ್ರಿಯ (Popularity)ರಾಗಲಿ, ಅವರು ಸಾಮಾಜಿಕ (Social) ವಾಗಿ ಎಲ್ಲರೊಂದಿಗೂ ಬೆರೆತು ಉತ್ತಮ ಜೀವನ (Life) ನಡೆಸಲಿ ಎಂದು ಬಯಸುವ ಪಾಲಕರು (Parents) ನೀವಾಗಿದ್ದರೆ ನೀವು ಹೇಗಿದ್ದೀರಿ ಎಂದು ನೋಡಿಕೊಳ್ಳಿ! ಹೌದು, ಪಾಲಕರ ನಡೆನುಡಿ, ಅವರ ಗುಣಾವಗುಣಗಳು ಮಕ್ಕಳ ಮೇಲೆ ಅತೀವ ಪ್ರಭಾವ (Influence) ಬಿರುತ್ತವೆ ಎನ್ನುವುದನ್ನು ನಾವೆಲ್ಲರೂ ಅರಿತಿದ್ದೇವೆ. ಹಾಗೆಯೇ, ಅವರಲ್ಲಿ ಕೆಲವು ಗುಣಗಳು ಪಾಲಕರಿಂದಾಗಿಯೇ ಬೆಳವಣಿಗೆಯಾಗುತ್ತವೆ. ಪಾಲಕರ ಪ್ರಭಾವ ಮಕ್ಕಳ ಮೇಲೆ ಗಾಢವಾಗಿರುತ್ತದೆ. ಮಕ್ಕಳ ವರ್ತನೆ (Behaviour) ಯಿಂದ ಹಿಡಿದು, ಯಶಸ್ಸಿನವರೆಗೆ ಪಾಲಕರ ಪ್ರಭಾವವನ್ನು ಕಾಣಬಹುದು. 

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಮಕ್ಕಳು ಶಾಲೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿಯೂ ಪಾಲಕರು ನೇರವಾಗಿ ಪ್ರಭಾವಿಸುತ್ತಾರೆ ಎನ್ನುವುದು ತಿಳಿದುಬಂದಿದೆ. ಶಾಲೆಯಲ್ಲಿ ಎಲ್ಲರಿಂದ ಟೀಕೆಗೆ, ತಮಾಷೆಗೆ ಗುರಿಯಾಗುವ ಮಕ್ಕಳು, ಅತಿರೇಕದ ವರ್ತನೆ ತೋರಿಸುವ ಮಕ್ಕಳು, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಮಕ್ಕಳ ವರ್ತನೆ ಪಾಲಕರಿಂದಲೇ ಪ್ರಭಾವಿತವಾಗಿರುತ್ತದೆ ಎನ್ನಲಾಗಿದೆ. 
ನಾರ್ತ್ ಕೆರೋಲಿನಾ ವಿಶ್ವವಿದ್ಯಾಲಯದ ಮನಶ್ಯಾಸ್ತ್ರಜ್ಞ ಡಾ.ಮಿಚ್ ಪ್ರಿನ್ಸ್ ಟನ್ ಅವರ ಪ್ರಕಾರ, ಮಕ್ಕಳು ಶಾಲೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಪಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳ ಖಾಸಗಿ ಮತ್ತು ವೃತ್ತಿಪರ ಅಭಿವೃದ್ಧಿಗೆ ಪಾಲಕರ ಕೊಡುಗೆ ಅಪಾರ. 

Urvashi Rautela Hot Look: ಗೋಲ್ಡನ್ ಡ್ರೆಸ್‌ನಲ್ಲಿ ಮಿಂಚಿದ ಊರ್ವಶಿ ಹಾಟ್ ಲುಕ್

ದ್ವೇಷ ಹಂಚಿಕೊಳ್ಳಬೇಡಿ
ಸಾಮಾನ್ಯವಾಗಿ ಮಕ್ಕಳೊಂದಿಗೆ ಪಾಲಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಎಂತಹ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಏಕೆಂದರೆ, ಈ ಅಧ್ಯಯನದ ಪ್ರಕಾರ, ಪಾಲಕರು ತಮ್ಮ ಮಕ್ಕಳೊಂದಿಗೆ ದ್ವೇಷ ಹಾಗೂ ನಕಾರಾತ್ಮಕ (Hostile) ಅನುಭವಗಳನ್ನು ಹಂಚಿಕೊಂಡರೆ ಮಕ್ಕಳು ಶಾಲೆಯಲ್ಲಿ ಜನಪ್ರಿಯತೆ ಪಡೆಯುವುದಿಲ್ಲ! ಅಂದರೆ ಅವರು ಒಬ್ಬಂಟಿಯಾಗಿರಲು ಬಯಸುತ್ತಾರೆ ಹಾಗೂ ಅವರಲ್ಲಿ ಸದಾ ಕಾಲ ಒಂದು ಉದ್ವೇಗ ಮನೆ ಮಾಡಿರಬಹುದು. ಜನಪ್ರಿಯ ಮಕ್ಕಳ ಪಾಲಕರಿಗೆ ಹೋಲಿಸಿದರೆ ಇಂತಹ ಮಕ್ಕಳ ಪಾಲಕರು ಹೆಚ್ಚು ನಕಾರಾತ್ಮಕ ಧೋರಣೆ ಉಳ್ಳವರಾಗಿರುತ್ತಾರೆ. ಹೀಗಾಗಿಯೇ, ನೀವೆಂಥದ್ದೇ ಕೆಟ್ಟ ಅನುಭವಗಳನ್ನು ಹೊಂದಿರಬಹುದು, ಅವುಗಳನ್ನು ಪದೇ ಪದೆ ಮಕ್ಕಳೆದುರು ಹೇಳುತ್ತಿರಬಾರದು. ಅದರಲ್ಲೂ ಕುಟುಂಬದ ಸದಸ್ಯರು, ಸಂಬಂಧಿಗಳ ಮೇಲೆ ನಿಮಗೆ ಕಹಿ ಭಾವನೆ ಇದ್ದರೂ ಅದನ್ನು ಮಕ್ಕಳೆದುರು ಆಡಬಾರದು. 

Love Sex Dhokha: ಆತ ನಿಮ್ಮನ್ನು ಪ್ರೀತಿಸ್ತಿದ್ದಾನಾ ? ಅಲ್ಲ ಟೈಂ ಪಾಸಾ ? ಮೊದಲು ತಿಳ್ಕೊಳ್ಳಿ

ತಜ್ಞರ ಪ್ರಕಾರ, ಎರಡು ರೀತಿಯ ಜನಪ್ರಿಯತೆಗಳಿರುತ್ತವೆ. ಒಂದು, ಸಾಮಾಜಿಕ ಸ್ಥಾನಮಾನ (Social Status) ಹಾಗೂ ಇನ್ನೊಂದು ಸಾಮಾಜಿಕ ಆದ್ಯತೆ Social Preference). ಒಂದನೆಯದು ಎಲ್ಲರ ಗಮನಕ್ಕೆ ಬರುತ್ತದೆ. ಆದರೆ, ಎರಡನೆಯದು ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತದೆ. ಅರ್ಥಗರ್ಭಿತ ಸಂಬಂಧ, ವಿಶ್ವಾಸಾರ್ಹ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಎರಡನೆಯ ಅಂಶ ಪರಿಣಾಮ ಬೀರುತ್ತದೆ. 
ಸಂತಸದ ಅನುಭವಗಳನ್ನು ಹಂಚಿಕೊಳ್ಳುವ ಪಾಲಕರ ಮಕ್ಕಳು ಎಲ್ಲದರಲ್ಲೂ ಖುಷಿಯನ್ನು ಕಾಣುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಪಾಲಕರ ಈ ಅಭ್ಯಾಸ ಮಕ್ಕಳಲ್ಲಿ ಧನಾತ್ಮಕ (Possitive) ಧೋರಣೆ ತುಂಬುತ್ತದೆ. ಇದರಿಂದ ಅವರಲ್ಲಿ ವಿಶ್ವಾಸ ಮೂಡುತ್ತದೆ.  ವರ್ತನೆಯ ಮೇಲೆ ನಿಯಂತ್ರಣ ಹೊಂದಿದ್ದು, ಹೆಚ್ಚು ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. 

ಪಾಲಕರು ಸಾಮಾಜಿಕ ವ್ಯವಸ್ಥೆಯಲ್ಲಿ ಇತರರೊಂದಿಗೆ ಹೇಗೆ ವರ್ತಿಸುತ್ತಾರೆ ಎನ್ನುವುದು ಸಹ ಮಕ್ಕಳ ಜನಪ್ರಿಯತೆಯ ಮೇಲೆ ಪರಿಣಾಮ ಬೀರುತ್ತದೆ. ಇನ್ನು, ಮಕ್ಕಳ ಆಕ್ರಮಣಕಾರಿ ವರ್ತನೆಯಂತೂ ಪಾಲಕರ ಬಳವಳಿಯೇ ಆಗಿರುತ್ತದೆ ಎನ್ನುತ್ತಾರೆ ತಜ್ಞರು. ಸಣ್ಣ ಸಣ್ಣ ವಿಚಾರಗಳಿಗೂ ತಾಳ್ಮೆ ಕಳೆದುಕೊಂಡು ಕೂಗಾಡುವವರು ನೀವಾಗಿದ್ದರೆ ಮಕ್ಕಳೂ ಅದನ್ನೇ ಅನುಸರಿಸುವುದು ಹೆಚ್ಚು, ಈ ಗುಣದಿಂದ ಅವರು ಜನಪ್ರಿಯತೆ ಪಡೆಯುವುದಿಲ್ಲ. 

ಅಭದ್ರತೆ (Insecure) ಭಾವನೆ ಹೊಂದಿರುವ ಮಕ್ಕಳು, ಪಾಲಕರೊಂದಿಗೆ ಗಾಢ ಬಾಂಧವ್ಯ ಹೊಂದಿಲ್ಲದ ಮಕ್ಕಳು ಭಾವನಾತ್ಮಕವಾಗಿ ಇನ್ನೊಬ್ಬರನ್ನು ಅವಲಂಬಿಸಿರುತ್ತಾರೆ. ಈ ಗುಣ ಸಹ ಅವರು ಜನಪ್ರಿಯರಾಗುವಲ್ಲಿ ಕಡಿವಾಣ ಹಾಕುತ್ತದೆ. 

Tap to resize

Latest Videos

click me!