7 ತಿಂಗಳು ಆನ್ಲೈನ್‌ ಡೇಟಿಂಗ್‌ ಮಾಡಿದ್ದ ಯುವಕನಿಗೆ ಗೊತ್ತಾಯ್ತು ಘೋರ ಸತ್ಯ, ಚಾಟ್‌ ಮಾಡಿದ್ದು ಅವಳು !

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನೊಬ್ಬ ಆನ್ಲೈನ್ ಡೇಟಿಂಗ್ ನಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 
 

Man online date with stepmother for 7 months

ಯುವಕನೊಬ್ಬನಿಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯೊಬ್ಬಳು ಪರಿಚಯವಾಗಿದ್ದಾಳೆ. 18 ವರ್ಷದ ಯುವಕ ಆಕೆ ಜೊತೆ ಮಾತನಾಡ್ತಾ ಆಕೆಯ ಪ್ರೀತಿ (love)ಗೆ ಬಿದ್ದಿದ್ದಾನೆ. ಇಬ್ಬರು ನಂಬರ್ ಹಂಚಿಕೊಂಡಿದ್ದಾರೆ. ನಂತ್ರ ಮಾತುಕತೆ ಫೋನ್ ನಲ್ಲಿ ಶುರುವಾಗಿದೆ. ಇಬ್ಬರೂ ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡಿದ್ದಾರೆ. ಹುಡುಗ ತನ್ನ ಸಂಬಂಧವನ್ನು ಮುಂದುವರೆಸುವ ತೀರ್ಮಾನಕ್ಕೆ ಬಂದಿದ್ದಲ್ಲದೆ ಆಕೆ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದಾನೆ. ಹುಡುಗಿ ಮದುವೆಗೆ ಒಪ್ಪಿಕೊಂಡಿದ್ದಾಳೆ. ಎಲ್ಲ ವಿಷ್ಯವನ್ನು ತಂದೆಗೆ ತಿಳಿಸಬೇಕು ಎನ್ನುವಷ್ಟರಲ್ಲಿ ಯುವಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ವಿಷ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ್ದ ಯುವಕನನ್ನು ತಂದೆ ಬದುಕಿಸಿಕೊಂಡಿದ್ದಾನೆ. ಸದ್ಯ ಯುವಕ ಚೇತರಿಸಿಕೊಳ್ತಿದ್ದು, ಪ್ರೀತಿಯಲ್ಲಾದ ಮೋಸಕ್ಕೆ ನೋವು ತಿನ್ನುತ್ತಿದ್ದಾನೆ. 

ಪ್ರೀತಿಸಿದ ಯುವಕ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು? : ಎಲ್ಲ ಚೆನ್ನಾಗಿತ್ತು, ಇನ್ನೇನು ಸಮಸ್ಯೆ ಅಂದ್ಕೊಂಡ್ರೆ ಅಲ್ಲೇ ಇರೋದು ದೊಡ್ಡ ಟ್ವಿಸ್ಟ್. ಯುವಕ ಏಳು ತಿಂಗಳಿಂದ ಆನ್ಲೈನ್ ಚಾಟ್, ಫೋನ್ ಟಾಕ್ ಅಂತ ಬ್ಯೂಸಿಯಾಗಿದ್ದು ಆತನ ಮಲ ತಾಯಿಯ ಜೊತೆ. ಈ ವಿಷ್ಯ ಗೊತ್ತಾಗ್ತಿದ್ದಂತೆ ಯುವಕ ನೊಂದುಕೊಂಡಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. 18 ವರ್ಷದ ಯುವಕ 7 ತಿಂಗಳ ಕಾಲ ಆನ್ಲೈನ್ (online) ನಲ್ಲಿ ಡೇಟಿಂಗ್ (dating) ಮಾಡಿದ್ದಾನೆ. ಕೊನೆಯಲ್ಲಿ ಆಘಾತಕಾರಿ ವಿಷ್ಯ ತಿಳಿದು ದಂಗಾಗಿದ್ದಾನೆ.

Latest Videos

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇಸ್​

ವಿಷ್ಯ ಬಹಿರಂಗವಾಗಿದ್ದು ಹೇಗೆ? : ಆನ್ಲೈನ್ ಡೇಟಿಂಗ್ ನಲ್ಲಿದ್ದ ಯುವಕ, ಹುಡುಗಿ ಮುಖವನ್ನು ಒಮ್ಮೆಯೂ ನೋಡಿರಲಿಲ್ಲ. ನಂಬರ್ ಮಾತ್ರ ಅವನ ಬಳಿ ಇತ್ತು. ಯುವಕನ ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿತ್ತು. ಅದ್ರ ಸಂಬಂಧ ಒಟಿಟಿ ಪಡೆಯಲು ಅಪ್ಪನ ಫೋನ್ ತೆಗೆದುಕೊಂಡಿದ್ದಾನೆ. ಅಪ್ಪನ ಫೋನ್ ನಲ್ಲಿ ಅನೇಕ ಮಹಿಳೆಯರ ನಂಬರ್ ಕಂಡಿದೆ. ಅದ್ರಲ್ಲಿ ಈ ಮಹಿಳೆ ನಂಬರ್ ಕೂಡ ಸಿಕ್ಕಿದೆ. ಮಹಿಳೆ ಜೊತೆ ತಂದೆ ಚಾಟ್ ಮಾಡಿದ್ದನ್ನು ಮಗ ನೋಡಿದ್ದಾನೆ. ನಂಬರ್ ಸರಿಯಾಗಿ ಪರಿಶೀಲಿಸಿ ಕನ್ಫರ್ಮ್ ಮಾಡಿಕೊಂಡ ಯುವಕ ಸತ್ಯ ತಿಳಿದು ಕಂಗಾಲಾಗಿದ್ದಾನೆ. 

ಅಪ್ಪನಿಗೂ ಮಲತಾಯಿಯಿಂದ ಮೋಸ : ಯುವಕನ ತಾಯಿ ಸಾವನ್ನಪ್ಪಿದ ನಂತ್ರ ತಂದೆ ಇನ್ನೊಂದು ಮದುವೆ ಆಗಿದ್ದ. ಆದ್ರೆ ಮದುವೆ ವಿಷ್ಯವನ್ನು ಮನೆಯವರಿಗೆ ಹೇಳಿರಲಿಲ್ಲ. ಈ ಮಧ್ಯೆ ಹುಡುಗ, ಆಕೆಗೆ ಮದುವೆ ಪ್ರಸ್ತಾಪ ಇಟ್ಟಿದ್ದ. ಅದನ್ನು ಆಕೆ ಒಪ್ಪಿಕೊಂಡಿದ್ದಳು. ಅಂದ್ರೆ ಮಲ ತಾಯಿ, ಯುವಕನ ತಂದೆಗೂ ಮೋಸ ಮಾಡಲು ಸಿದ್ಧವಿದ್ದಳು. ಚಾಟ್ ನಲ್ಲಿ ತನ್ನ ವಯಸ್ಸನ್ನು ಕಡಿಮೆ ಹೇಳಿದ್ದಳು. ಆಕೆ ಮುಖ ನೋಡದೆ, ವಾಸ್ತವದ ಅರಿವಿಲ್ಲದೆ ಯುವಕ, ಆಕೆಯನ್ನು ಪ್ರೀತಿ ಮಾಡಿದ್ದ. 

ಈ ಗ್ರಾಮದಲ್ಲಿ ಎಲ್ಲರಿಗೂ ಇಬ್ಬರು ಪತ್ನಿಯರು ಕಡ್ಡಾಯ! ಇದರ ಹಿಂದಿದೆ ಕುತೂಹಲದ ಸ್ಟೋರಿ-

ಮಹಿಳೆ ಜೊತೆ ಜಗಳ : ಅಪ್ಪನ ಎರಡನೇ ಪತ್ನಿ ಆಕೆ ಎಂಬುದು ಗೊತ್ತಾಗುತ್ತಿದ್ದಂತೆ ಯುವಕ ಆಕೆ ಜೊತೆ ಮಾತನಾಡಿದ್ದಾನೆ. ಆಕೆ ದ್ರೋಹವನ್ನು ಖಂಡಿಸಿ ಜಗಳವಾಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಲ್ಲದೆ ಫೋನ್ ಕಟ್ ಮಾಡಿದ್ದಾನೆ. ಇದರಿಂದ ಮಹಿಳೆಗೆ ಭಯವಾಗಿದೆ. ಆಕೆ ತಕ್ಷಣ ಯುವಕನ ತಂದೆಗೆ ಫೋನ್ ಮಾಡಿದ್ದಾಳೆ. ಎಲ್ಲ ವಿಷ್ಯವನ್ನು ತಂದೆಗೆ ಹೇಳಿದ್ದಲ್ಲದೆ ಆತನನ್ನು ರಕ್ಷಿಸುವಂತೆ ಹೇಳಿದ್ದಾಳೆ. ತಕ್ಷಣ ತಂದೆ ಮನೆಗೆ ಹೋಗಿದ್ದಾನೆ. ಆದ್ರೆ ಅಷ್ಟರಲ್ಲಾಗ್ಲೇ ಯುವಕ ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆಗೆ ಮುಂದಾಗಿದ್ದ. ಅವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಯುವಕ ಚೇತರಿಸಿಕೊಂಡಿದ್ದಾನೆ. ಆದ್ರೆ ಸುತ್ತಮುತ್ತ ಇದೇ ವಿಷ್ಯದ ಬಗ್ಗೆ ಚರ್ಚೆಯಾಗ್ತಿದೆ. ಆನ್ಲೈನ್ ಡೇಟಿಂಗ್ ನಲ್ಲಿ ಮೋಸವಾಗೋದು ಇದೇ ಮೊದಲಲ್ಲ.   
 

vuukle one pixel image
click me!