ವಿಚ್ಛೇದನ ಸುದ್ದಿ ಮಧ್ಯೆಯೇ ಧನಶ್ರೀ ಧಮಾಲ್ ಮಾಡಿದ್ದಾರೆ. ಹೊಸ ಸಾಂಗ್ ರಿಲೀಸ್ ಮಾಡಿ ವೀಕ್ಷಕರ ತಲೆಯಲ್ಲಿ ಹುಳು ಬಿಟ್ಟಿದ್ದಾರೆ.
ಸೆಲೆಬ್ರಿಟಿ ಜೋಡಿ ಯುಜ್ವೇಂದ್ರ ಚಹಲ್ (Yuzvendra Chahal) ಮತ್ತು ಧನಶ್ರೀ ವರ್ಮಾ (Dhanashree Verma) ಅಧಿಕೃತವಾಗಿ ಬೇರೆಯಾಗಿದ್ದಾರೆ. ಗುರುವಾರ ಚಹಲ್ ಮತ್ತು ಧನಶ್ರೀಗೆ ಕೋರ್ಟ್ ವಿಚ್ಛೇದನ ನೀಡಿದೆ. ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ಈ ತೀರ್ಪು ಹೊರ ಬಂದಿದೆ. ಯುಜ್ವೇಂದ್ರ ಚಹಲ್ ವಕೀಲ ನಿತಿನ್ ಕುಮಾರ್ ಗುಪ್ತಾ ವಿಚ್ಛೇದನವನ್ನು ದೃಢಪಡಿಸಿದ್ದಾರೆ. ಯುಜ್ವೇಂದ್ರ ಚಹಲ್ ವಿಚ್ಛೇದನದ ಸುದ್ದಿಯ ನಡುವೆ, ಧನಶ್ರೀ ವರ್ಮಾ ತಮ್ಮ ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೂ ಧನಶ್ರೀ ವೈಯಕ್ತಿಕ ಜೀವನಕ್ಕೂ ನಂಟಿದ್ದಂತಿದೆ. ಪ್ರೇಮಕಥೆಯಲ್ಲಿನ ದ್ರೋಹವನ್ನು ಈ ಹಾಡು ಆಧರಿಸಿದೆ. ಧನಶ್ರೀ ವರ್ಮಾ ಈ ಹಾಡಿಗೆ ಅದ್ಭುತವಾಗಿ ನಟಿಸಿದ್ದಾರೆ. ಹಾಡಿಗೆ ಜ್ಯೋತಿ ನೂರನ್ ಧ್ವನಿಯಾಗಿದ್ದಾರೆ.
ಧನಶ್ರೀ ಅವರ ಹೊಸ ಹಾಡು, ದೇಖಾ ಜಿ ದೇಖಾ ಮೈನೇ, ಡಿವೋರ್ಸ್ ದಿನವೇ ಬಿಡುಗಡೆ ಆಗಿದ್ದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ಹಾಡಿನಲ್ಲಿ ಧನಶ್ರೀ ಅವರ ನೋವು ಪ್ರತಿಫಲಿಸ್ತಿದೆ. ಹಾಡಿನಲ್ಲಿ ಧನಶ್ರೀ ಭಾವುಕರಾಗುತ್ತಿರುವುದು ಕಂಡುಬರ್ತಿದೆ. ಈ ಹಾಡಿನಲ್ಲಿ ಧನಶ್ರೀ ಜೊತೆ ಇಶ್ವಾಕ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ, ನಾಯಕಿ ತನ್ನ ಗಂಡನ ದಾಂಪತ್ಯ ದ್ರೋಹ ಎದುರಿಸುತ್ತಿರುವುದನ್ನು ಕಾಣಬಹುದು. ಆಕೆಯ ಪತಿ ಆಕೆಗೆ ಚಿತ್ರಹಿಂಸೆ ನೀಡ್ತಾನೆ. ಇದರಿಂದಾಗಿ ಆಕೆ ಮನೆ ಬಿಟ್ಟು ಹೋಗುತ್ತಾಳೆ. ಈ ಹಾಡು ಬಿಡುಗಡೆಯಾಗಿ ಎರಡು ಗಂಟೆ ಮೊದಲೇ 90 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ಹಾಡಿನಲ್ಲಿ ಪ್ರೀತಿಪಾತ್ರರು ಅಪರಿಚಿತರ ಹಾಸಿಗೆಯಲ್ಲಿ ಮಲಗಿದ್ದನ್ನು ನೋಡಿದೆ ಎನ್ನುವ ಲಿರಿಕ್ಸ್ ಬರುತ್ತೆ. ಇದನ್ನು ನೋಡಿದ ಫ್ಯಾನ್ಸ್, ಇದು ಧನಶ್ರೀ ವೈಯಕ್ತಿಕ ಜೀವನದ ಕಥೆ ಎನ್ನುತ್ತಿದ್ದಾರೆ.
ದಿನಕ್ಕೆ 50 ಸಾವಿರ, 818 ದಿನದ ಸಂಸಾರಕ್ಕೆ 4.75 ಕೋಟಿ ಕೊಟ್ಟ ಚಾಹಲ್, ಮದುವೆ ಬದಲು ಇನ್ವೆಸ್ಟ್
ವಿಡಿಯೋ ನೋಡಿದ ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಈ ಹಾಡು ಬೆಂಕಿಯಲ್ಲ, ಬದಲಾಗಿ ಕಾಡ್ಗಿಚ್ಚು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಾಡು ತುಂಬಾ ಚೆನ್ನಾಗಿದೆ, ಅದು ನನ್ನ ಹೃದಯವನ್ನು ನೇರವಾಗಿ ಮುಟ್ಟಿತು ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಹಾಡಿನಲ್ಲಿ ಯುಜ್ವೇಂದ್ರ ಜೀವನವನ್ನು ತೋರಿಸಲಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಅನೇಕರು ವಿಚ್ಛೇದನದ ದಿನವೇ ಈ ಹಾಡು ಬಿಡುಗಡೆ ಮಾಡಿದ್ದಾರೆ. ಇದು ಹಾಡು ರಿಲೀಸ್ ಮಾಡೋಕೆ ಸೂಪರ್ ಟೈಂ ಎಂದು ಕಮೆಂಟ್ ಮಾಡಿದ್ದಾರೆ.
ವಿಚ್ಛೇದನದ ನಂತರ ಜೀವನದಲ್ಲಾದ ಅನುಭವಗಳನ್ನು ಹಂಚಿಕೊಂಡ ಹಾರ್ದಿಕ್ ಪಾಂಡ್ಯ!
ಧನಶ್ರೀ ಮತ್ತು ಯುಜ್ವೇಂದ್ರ ಚಹಲ್ ಡೇಟಿಂಗ್ ನಂತರ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಧನಶ್ರೀ ಇನ್ನೂ ಚಾಹಲ್ ಜೊತೆಗಿನ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಹಾಕಿಲ್ಲ. ಅವರ ಮದುವೆಯ ಫೋಟೋಗಳು ಇಂದಿಗೂ ವೈರಲ್ ಆಗುತ್ತಿವೆ. ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಅರ್ಜಿಯನ್ನು ಗುರುವಾರದೊಳಗೆ ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಈ ವರ್ಷ ಫೆಬ್ರವರಿ 5 ರಂದು ಚಹಲ್ ಮತ್ತು ವರ್ಮಾ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಕೋರಿರುವುದರಿಂದ ಕಾನೂನುಬದ್ಧವಾಗಿ ಕಡ್ಡಾಯವಾದ ಆರು ತಿಂಗಳ ಅವಧಿಯನ್ನು ಮನ್ನಾ ಮಾಡಬೇಕೆಂದು ಅರ್ಜಿಯಲ್ಲಿ ಕೋರಿದ್ದರು. ಅದಕ್ಕೆ ಕೋರ್ಟ್ ಅಸ್ತು ಎಂದಿದೆ. ಯುಜ್ವೇಂದ್ರ ಚಹಲ್, ಆರ್ ಜೆ ಮಹ್ವಾಶ್ ಜೊತೆ ಸಂಬಂಧ ಹಿಂದಿದ್ದಾರೆ ಎಂಬ ಸುದ್ದಿ ಇದೆ. ಅವರಿಬ್ಬರು ಜೊತೆಗಿರುವ ಅನೇಕ ವಿಡಿಯೋ, ಫೋಟೋಗಳು ವೈರಲ್ ಆಗಿವೆ.