ಸುಂದರಿಯ ಫೋಟೋ ಸಿಕ್ಕಿತೆಂದು ಹೀಗೆ ಮೋಸ ಮಾಡೋದಾ ಭಾರತ್​ ಮ್ಯಾಟ್ರಿಮೋನಿ? ಗೃಹಿಣಿ ಆಕ್ರೋಶ

By Suchethana D  |  First Published Nov 2, 2024, 12:47 PM IST

ವಧು-ವರರು ಬೇಕಾಗಿದ್ದಾರೆ ಎಂದು ಆನ್​ಲೈನ್​ ಮ್ಯಾಟ್ರಿಮೋನಿ ಸೈಟ್​ಗೆ ಸಹಸ್ರಾರು ರೂಪಾಯಿ ಹಣ ಸುರಿಯುವ ಮುನ್ನ ಒಮ್ಮೆ ಈ ಘಟನೆ ಕೇಳಿ...
 


ಮದುವೆ ಎನ್ನುವುದು ದೊಡ್ಡ ಬಿಸಿನೆಸ್​ ಮಾರ್ಕೆಟ್​ ಆಗಿ ದಶಕಗಳೇ ಕಳೆದು ಬಿಟ್ಟಿವೆ. ವಧು-ವರರು ಸಿಗುತ್ತಿಲ್ಲ ಎಂದು ವಧು-ವರರ ವೇದಿಕೆಗಳ ಕಚೇರಿಗಳು ಗಲ್ಲಿಗಳಲ್ಲಿ ತಲೆ ಎತ್ತಿ ನಿಂತಿದ್ದರೆ, ದೊಡ್ಡ ದೊಡ್ಡ ಕಂಪೆನಿಗಳು ಆನ್​ಲೈನ್​ ಮೂಲಕ ವಧು-ವರರನ್ನು ಹುಡುಕಿ ಕೊಡುವುದಾಗಿ ಹೇಳಿ ಸಹಸ್ರಾರು ರೂಪಾಯಿಗಳನ್ನು ವಸೂಲು ಮಾಡುತ್ತಿವೆ. ಭಾರತ್​ ಮ್ಯಾಟ್ರಿಮೋನಿ ಸೇರಿದಂತೆ ಹಲವರಾಗು ಇಂಥ ವೇದಿಕೆಗಳು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮೂಲಕ ಮದುವೆಯಾದವರೂ ಇದ್ದಾರೆ. ಹೆಚ್ಚು ದುಡ್ಡು ಕೊಟ್ಟರೆ, ಒಳ್ಳೊಳ್ಳೆ ಪ್ರೊಫೈಲ್​ ಕೊಡುತ್ತೇವೆ ಎನ್ನುವ ಆಮಿಷ ಒಡ್ಡಿ, ಬೇಕಾಗಿದ್ದಾರೆ ಜಾಹೀರಾತಿನಲ್ಲಿ ಇರುವವರ ಸ್ಟ್ಯಾಂಡರ್ಡ್​ಗೆ ತಕ್ಕಂತೆ ಹಣ ವಸೂಲಿ ಮಾಡಲಾಗುತ್ತಿದೆ. ಹುಡುಗಿ- ಹುಡುಗ ಸಿಕ್ಕರೆ ಸಾಕಪ್ಪಾ ಎಂದುಕೊಳ್ಳುವವರು ಹೆಚ್ಚಾಗಿರುವ ಕಾರಣ, ಅದರಲ್ಲಿಯೂ ತಮ್ಮದೇ ಜಾತಿಯ ಹುಡುಗಿ ಸಿಗುತ್ತಿಲ್ಲ ಎಂದು ಪರಿತಪಿಸುತ್ತಿರುವ ದೊಡ್ಡ ವರ್ಗದ ಯುವಕರು ಇಂಥ ಆನ್​ಲೈನ್​ ಮದುವೆ ವೇದಿಕೆಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ.

ಇಂಥ ಆನ್​ಲೈನ್ ವೇದಿಕೆಗಳಿಂದ ಮೋಸ ಹೋಗುವವರು ನಾಚಿಕೆಗೆ ಅಂಜಿ ಅದರ ಬಗ್ಗೆ ಓಪನ್​ ಆಗಿ ಮಾತನಾಡುವುದಿಲ್ಲ ಎನ್ನುವುದು ಇಂಥ ವೇದಿಕೆ ಸೃಷ್ಟಿಕರ್ತರಿಗೂ ಗೊತ್ತು. ಆದರೆ ಇಲ್ಲೊಂದು ಪ್ರಕರಣದಲ್ಲಿ ಸುಂದರ ಗೃಹಿಣಿಯೊಬ್ಬಳ ಫೋಟೋ ಹಾಕುವ ಮೂಲಕ, ಇವರ ಜಾತಕವನ್ನೂ ಅಲ್ಲಿ ಕೊಟ್ಟಿದ್ದಾರೆ. ವರ ಬೇಕಾಗಿದ್ದಾನೆ ಎನ್ನುವ ಅರ್ಥದಲ್ಲಿ ಈ ಜಾಹೀರಾತು ಇದೆ. ಆದರೆ ಇದಾಗಲೇ ಮದುವೆಯಾಗಿರುವ ಈ ಗೃಹಿಣಿ ವಿಡಿಯೋ ಮಾಡಿ, ಭಾರತ್​ ಮ್ಯಾಟ್ರಿಮೋನಿಯ ವಿರುದ್ಧದ ಗರಂ ಆಗಿದ್ದಾರೆ. ಸಿಕ್ಕ ಸಿಕ್ಕ ಫೋಟೋ ಹಾಕಿ ಹೆಣ್ಣುಮಕ್ಕಳ ಮಾನ ಹರಾಜು ಹಾಕುತ್ತಿರುವ ಬಗ್ಗೆ ಅವರು ಕಿಡಿ ಕಾರಿದ್ದಾರೆ.

Tap to resize

Latest Videos

undefined

ಲಾಯರ್​ ಜಗದೀಶ್​ ಮಾತಿಗೆ ನಾಚಿಕೊಂಡ ರಕ್ಷಿತಾ: 'ನಾಟಿ ಆ್ಯಟ್​ ಫಾರ್ಟಿ ಸರ್​ ನೀವು' ಎಂದ ನಟಿ!

ತಮ್ಮ ಪತಿಯನ್ನೂ ವಿಡಿಯೋದಲ್ಲಿ ತೋರಿಸಿರುವ ಸ್ವಾತಿ ಮುಕುಂದ್​ ಎನ್ನುವವರು, ಭಾರತ್​ ಮ್ಯಾಟ್ರಿಮೋನಿಯಲ್ಲಿ  ತಮ್ಮ ಫೋಟೋ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ನನ್ನ ಮದುವೆ ಇದಾಗಲೇ ಆಗಿದೆ. ಖಂಡಿತವಾಗಿಯೂ ನಮ್ಮ ಮದುವೆ ಯಾವುದೇ ಆನ್​ಲೈನ್​ ಸೈಟ್​ ಮೂಲಕವೂ ಆಗಿಲ್ಲ ಎಂದಿರುವ ಸ್ವಾತಿ ಅವರು, ತಮ್ಮ ಫೋಟೋ ಬಳಕೆ ಮಾಡಿಕೊಂಡಿರುವ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮ್ಯಾಟ್ರಿಮೋನಿ ಸೈಟ್​ಗಳು ಬಳಕೆದಾರರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತವೆ. ದುಡ್ಡು ಕೊಟ್ಟರೆ ಎಲ್ಲಾ ರೀತಿಯ ಗೋಪ್ಯತೆ ಕಾಪಾಡಿಕೊಂಡು ಮಾಹಿತಿ ನೀಡಲಾಗುತ್ತದೆ ಎನ್ನುವ ಜಾಹೀರಾತು ಬರುತ್ತದೆ. ಮಾತ್ರವಲ್ಲದೇ ಫೋಟೋಗಳನ್ನು ಹಾಗೂ ವಧು-ವರರ ಫೋಟೋಗಳನ್ನು ಅಪ್​ಲೋಡ್​ ಮಾಡುವಾಗ ಸೂಕ್ತ ತನಿಖೆ, ವಿಮರ್ಶೆ, ಪರಾಮರ್ಶೆ ಎಲ್ಲವನ್ನೂ ಮಾಡಿಯೇ ಮುಂದುವರೆಯುವ ಆಶ್ವಾಸನೆ ನೀಡುತ್ತವೆ. ಆದರೆ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ.

ಇಂಥ ಆನ್​ಲೈನ್​ ವೇದಿಕೆಗಳನ್ನು ದಯವಿಟ್ಟು ನಂಬಬೇಡಿ ಅಂದಿರುವ ಅವರು, ಇಂಥ ವೇದಿಕೆಗಳ ಗುಣಮಟ್ಟ ಹಾಗೂ ಇದನ್ನು ನಂಬಿಕೊಂಡು ದುಡ್ಡು ಸುರಿಯುವ ಬಳಕೆದಾರರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಫೋಟೋ ಇವರದ್ದು ಹಾಕಿ ನಿತ್ಯಾ ರಾಜಶೇಖರ್​ ಎನ್ನುವ ಬೇರೆ ಹೆಸರು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಸಿಕ್ಕಿಬೀಳಬಾರದು ಎನ್ನುವ ಉದ್ದೇಶ ಆನ್​ಲೈನ್​ ವೇದಿಕೆಯವರದ್ದು ಇದ್ದ ಹಾಗೆ ಕಾಣಿಸುತ್ತದೆ. ಆದರೆ ಬಳಕೆದಾರರು ಎಷ್ಟು ಜಾಗರೂಕರಾಗಿ ಇರಬೇಕು ಎನ್ನುವ ಬಗ್ಗೆ ಇದು ಸೂಚಿಸುತ್ತದೆ. ಅದೇ ರೀತಿ ಸೋಷಿಯಲ್​ ಮೀಡಿಯಾಗಳಲ್ಲಿ ಫೋಟೋ ಅಪ್​ಲೋಡ್​  ಮಾಡುವುದು ಎಷ್ಟು ಡೇಂಜರ್​ ಎನ್ನುವ ಬಗ್ಗೆ ಇದಾಗಲೇ ಹಲವರು ಬೇರೆ ಬೇರೆ ರೀತಿಯ ಉದಾಹರಣೆಗಳನ್ನೂ ಕೊಟ್ಟಿದ್ದಾರೆ. 

ನೀಲಿ ಚಿತ್ರದಲ್ಲಿ ನಟಿಸಲು ಆಫರ್​ ಬಂದಿದೆ ಎಂದ ಮಗ! ಅಮ್ಮನ ರಿಯಾಕ್ಷನ್​ ನೋಡಿ- ವಿಡಿಯೋ ವೈರಲ್​

 
 
 
 
 
 
 
 
 
 
 
 
 
 
 

A post shared by Swati Mukund (@swatimukund)

click me!