ನೀವು ಹೇಳಿದ ಹಾಗೆ ಪತಿರಾಯ ಕೇಳ್ಬೇಕೆಂದ್ರೆ ಇಲ್ಲಿವೆ ಸಿಂಪಲ್ ಟಿಪ್ಸ್!

By Suvarna NewsFirst Published Nov 23, 2022, 3:11 PM IST
Highlights

ಗಂಡ ಒಂದು ಮಾತೂ ಕೇಳಲ್ಲ ಎನ್ನುವ ಪತ್ನಿಯರು ಸಾಕಷ್ಟು ಮಂದಿ. ಪತ್ನಿ ಮಾತನ್ನು ತಲೆಗೆ ಹಾಕಿಕೊಳ್ಳದ ಪತಿಯನ್ನು ದಾರಿಗೆ ತರೋದು ಸುಲಭವಲ್ಲವಾದ್ರೂ ಸಾಧ್ಯವಿದೆ. ಅವರನ್ನು ಕೆಲ ಟ್ರಿಕ್ಸ್ ಮೂಲಕ ಕಟ್ಟಿಹಾಕ್ಬಹುದು.
 

ಪತಿ – ಪತ್ನಿ ಮಧ್ಯೆ ಹೊಂದಾಣಿಗೆ ಬಹಳ ಸುಲಭವಲ್ಲ. ಅನೇಕ ವಿಷ್ಯದಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವಿರುತ್ತದೆ. ಅನೇಕ ಬಾರಿ ಪತ್ನಿ, ಪತಿಯೊಂದಿಗೆ ಮಾತನಾಡಲು ಹೆದರುತ್ತಾಳೆ. ಪತಿ ಜೊತೆ ಒಂದು ವಿಷ್ಯದ ಬಗ್ಗೆ ಚರ್ಚಿಸೋದು ಜಗಳಕ್ಕೆ ದಾರಿ ಎಂದುಕೊಳ್ತಾಳೆ. ದಂಪತಿ ಮಧ್ಯೆ ಬಹುತೇಕ ಬಾರಿ ಆರೋಗ್ಯಕರ ಚರ್ಚೆ ಬದಲು ಜಗಳವಾಗುತ್ತದೆ. ಪತಿ, ಪತ್ನಿ ಬಗ್ಗೆ ತನ್ನದೇ ಆದ ಅಭಿಪ್ರಾಯ ಹೊಂದಿರುತ್ತಾನೆ. ಹಾಗಾಗಿ ಆಕೆ ಯಾವುದೇ ವಿಷ್ಯ ಮಾತನಾಡಲು ಬಂದ್ರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಯ ವ್ಯರ್ಥ ಎಂಉ ಭಾವಿಸುತ್ತಾನೆ. ಪತಿ ನಿಮ್ಮ ಸಲಹೆಯನ್ನು ತಾಳ್ಮೆಯಿಂದ ಕೇಳಬೇಕು, ನೀವು ಹೇಳಿದ ಕೆಲ ವಿಷ್ಯಕ್ಕೆ ತಲೆ ಆಡಿಸಬೇಕು ಎಂದಾದ್ರೆ ನೀವು ಆ ವಾತಾವರಣ ಸೃಷ್ಟಿ ಮಾಡ್ಬೇಕು. ಕೆಲ ಉಪಾಯದ ಮೂಲಕ ನೀವು ಪತಿ ನಿಮ್ಮ ದಾರಿಗೆ ಬರುವಂತೆ ಮಾಡಬಹುದು. ನಾವಿಂದು ಪತಿಯನ್ನು ನಿಮ್ಮ ದಾರಿಗೆ ತರೋದು ಹೇಗೆ ಎಂಬುದನ್ನು ಹೇಳ್ತೆವೆ.

ಪ್ರೀತಿ (Love) ಯಿಂದ ಆಗದಿರುವುದು ಏನಿದೆ ? : ಪ್ರೀತಿ ಪ್ರತಿಯೊಬ್ಬನನ್ನು ಬಗ್ಗಿಸುವ ಶಕ್ತಿ ಹೊಂದಿದೆ. ನೀವು ಅಗತ್ಯಕ್ಕಿಂತ ಮೊದಲೇ ಪತಿಗೆ ಪ್ರೀತಿ ತೋರಿಸಬೇಕು. ನಿಮ್ಮ ಮಾತು (Speech ) ಆರಂಭಕ್ಕಿಂತ ಮೊದಲು ಒಂದಿಷ್ಟು ಪ್ರೀತಿಯ ಮಾತುಗಳನ್ನು ಆಡಿ. ನೀವು, ನಿಮ್ಮ ಪತಿಯನ್ನು ಎಷ್ಟು ಇಷ್ಟಪಡುತ್ತೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿ. ಸಿಹಿಯಾದ ಪ್ರೀತಿ, ಮುತ್ತಿನ ಮಧ್ಯೆ ನೀವು ಪತಿಗೆ ನಿಮಗೇನು ಬೇಕು ಎಂಬುದನ್ನು ಹೇಳಿದ್ರೆ ಅದನ್ನು ಅವರು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ನಿಮಗೆ ಈಗ ಬೇಕಿರುವ ವಸ್ತು ಅಥವಾ ಮಾಡಬೇಕಾದ ಕೆಲಸ ಎಷ್ಟು ಅವಶ್ಯಕ ಎಂಬುದನ್ನು ಪತಿಗೆ ಮನವರಿಕೆ ಮಾಡಬೇಕು. ಆಗ ಅವರು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ತಾರೆ.

ಸಮಯ (Time) ಹಾಗೂ ಸ್ಥಳ ಮುಖ್ಯ : ಪತಿ ಕಚೇರಿಗೆ ಹೋಗುವ ತರಾತುರಿಯಲ್ಲಿದ್ದಾಗ, ಸುಸ್ತಾಗಿ ಮನೆಗೆ ಬಂದಾಗ ಅಥವಾ ಬೇರೆ ಯಾವುದೋ ಟೆನ್ಷನ್ ನಲ್ಲಿದ್ದಾಗ ನೀವು ಆತನನ್ನು ಮಾತಿಗೆ ಎಳೆದ್ರೆ ಪ್ರಯೋಜನವಿಲ್ಲ. ನಿಮ್ಮ ಮಾತಿಗೆ ಆಗ ಮನ್ನಣೆ ಸಿಗಲು ಸಾಧ್ಯವಿಲ್ಲ. ಪತಿಗೆ ಆ ಸಂದರ್ಭದಲ್ಲಿ ಮಾತನಾಡಲು ಆಸಕ್ತಿ ಇರದೆ ಇರಬಹುದು. ಹಾಗಾಗಿ ನೀವು, ಸರಿಯಾದ ಸಮಯ ನೋಡಿಕೊಂಡು ಮಾತನಾಡಬೇಕು. ರಿಲ್ಯಾಕ್ಸ್ ಆಗಿರುವ ಸಮಯದಲ್ಲಿ ಹಾಗೂ ಯಾರೂ ಇಲ್ಲದೆ ಏಕಾಂತದಲ್ಲಿರುವ ಅಥವಾ ಪತಿ ಖುಷಿಯಾಗಿರುವ ಸಮಯದಲ್ಲಿ ನೀವು ನಿಮ್ಮ ಬೇಡಿಕೆ ಮುಂದಿಟ್ಟರೆ ಅದಕ್ಕೆ ಸಹಿ ಬಿದ್ದಂತೆ.

ಸಂಗಾತಿಗೆ ಈ ರೀತಿ ಸುಳ್ಳು ಹೇಳಿದ್ರೆ ಸಂಬಂಧ ಹಾಳಾಗುತ್ತೆ !

ಪ್ರಾಮಾಣಿಕತೆ (Honest) ಮುಖ್ಯ : ಪತಿ ಬಳಿ ಏನು ಮಾತನಾಡ್ಬೇಕು ಎಂಬುದನ್ನು ಮೊದಲೇ ನೀವು ನಿರ್ಧರಿಸಿಕೊಳ್ಳಬೇಕು. ಪತಿ ಮುಂದೆ ಬಂದಾಗ, ಅದು, ಇದು ಹೇಳಿ ಸಮಯ ಹಾಳು ಮಾಡಬಾರದು. ನೇರವಾಗಿ ನಿಮಗೆ ಏನು ಬೇಕು ಎಂಬುದನ್ನು ನೀವು ಹೇಳಬೇಕು. ನೀವು ಪ್ರಾಮಾಣಿಕವಾಗಿ ಮಾತನಾಡಿದರೆ ಪತಿ ಅದನ್ನು ಮೆಚ್ಚುತ್ತಾನೆ. ನಿಮ್ಮ ಸಮಸ್ಯೆ ಏನು ಅಥವಾ ನಿಮ್ಮ ಬೇಡಿಕೆ ಏನು ಎಂಬುದನ್ನು ನೀವು ನೇರವಾಗಿ ಪತಿಗೆ ಹೇಳಬೇಕು. ಆಗ ಅವರು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. 

ಹುಡುಗರ ಈ ಲುಕ್‌ಗೆ ಹುಡುಗಿಯರು ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ

ಮಾತನಾಡುವಾಗ ಮಾತು, ಧ್ವನಿ ಮೇಲೆ ಗಮನವಿರಲಿ : ಅನೇಕರು ಪತಿ ಮುಂದೆ ಭಯದಲ್ಲಿ ಮಾತನಾಡ್ತಾರೆ. ಮತ್ತೆ ಕೆಲವರು ದೊಡ್ಡ ಧ್ವನಿಯಲ್ಲಿ ಆದೇಶ ಮಾಡ್ತಾರೆ. ಇವೆರಡೂ ತಪ್ಪು. ಮಾತನಾಡುವ ವೇಳೆ ಧ್ವನಿ ಸಾಮಾನ್ಯವಾಗಿರಬೇಕು. ಪತಿ ಬಳಿ ಕುಳಿತು ಶಾಂತವಾಗಿ ವಿವರಿಸಬೇಕು. ಪತಿ ಕೂಡ ತನ್ನದೆ ಆದ ದೃಷ್ಟಿಕೋನ ಹೊಂದಿರುತ್ತಾನೆ. ಆತ ನಿಮ್ಮ ಮಾತಿಗೆ ಏನು ಹೇಳ್ತಾನೆ ಎಂಬುದನ್ನು ನೀವು ಆಲಿಸಬೇಕು. ಹಾಗೆ ಅದು ಸರಿ ಎನ್ನಿಸಿದ್ರೆ ಅದನ್ನು ಒಪ್ಪಿಕೊಳ್ಳಬೇಕು. ಇಬ್ಬರ ಮಧ್ಯೆ ಹೊಂದಾಣಿಕೆ ಇರಬೇಕು. 
 

click me!