ಛತ್ತೀಸ್ಗಡದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಳ್ಳತನ ಮಾಡಲು ಬಂದ ಕಳ್ಳನ ಕಣ್ಣಿಗೆ ಮಂಚದ ಮೇಲಿದ್ದ ದಂಪತಿ ಬಿದ್ದಿದ್ದಾರೆ. ಅಷ್ಟೇ, ಮೊಬೈಲ್ ಕೈನಲ್ಲಿ ಹಿಡಿದು ರೆಕಾರ್ಡ್ ಮಾಡಿ, ಸಿಕ್ಕಿ ಬಿದ್ದಿದ್ದಾನೆ.
ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡ್ದೆ, ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ. ಇದಕ್ಕೆ ಈ ಕಳ್ಳ ಉತ್ತಮ ನಿದರ್ಶನವಾಗ್ತಾನೆ. ಕಳ್ಳತನ ಮಾಡೋದು ಅಪರಾಧ. ಈತ ತಪ್ಪು ಕೆಲಸವನ್ನೇನೋ ಮಾಡ್ತಾ ಇದ್ದ. ಅದ್ರ ಜೊತೆ ಮತ್ತಷ್ಟು ದುಡ್ಡಿನ ಆಸೆಗೆ ಬಿದ್ದು ಮಾಡಿದ ಕೆಲಸ ಈಗ ಜೈಲಿನ ಕಂಬಿ ಎಣಿಸುವಂತೆ ಆಗಿದೆ. ಅಷ್ಟಕ್ಕೂ ಆತ ಮಾಡಿದ ಕೆಲಸ ಕೇಳಿದ್ರೆ ನೀವು ದಂಗಾಗ್ತೀರಿ.
ಘಟನೆ ಛತ್ತೀಸ್‌ಗಢ (Chhattisgarh) ದಲ್ಲಿ ನಡೆದಿದೆ. ಸಿವಿಲ್ (Civil) ಪರೀಕ್ಷೆ ಬರೆದಿದ್ದ ಯುವಕನ ಕನಸು ಈಡೇರಲಿಲ್ಲ. ಏನೇ ಕೆಲಸ ಮಾಡಿದ್ರೂ ಕೈ ಕೂರುತ್ತಿರಲಿಲ್ಲ. ಹಾಗಾಗಿ ಎಲ್ಲ ಬಿಟ್ಟು ಕಳ್ಳತನ (Theft) ಕ್ಕೆ ಇಳಿದಿದ್ದಾನೆ. ತನ್ನ ಸುತ್ತಮುತ್ತಲ ಮನೆಗೆ ಹೋಗಿ ಕಳ್ಳತನ ಮಾಡ್ತಿದ್ದ ಆರೋಪಿ ಒಂದು ದಿನ ಕಳ್ಳತನ ಮಾಡುವ ಬದಲು, ಬೆಡ್ ಮೇಲೆ ಸಂಭೋಗಿಸುತ್ತಿದ್ದ ದಂಪತಿ ವಿಡಿಯೋ (Video) ಮಾಡಿದ್ದಾನೆ. ಅದನ್ನು ಬೆಳಿಗ್ಗೆ ದಂಪತಿಗೆ ಕಳುಹಿಸಿದ್ದಲ್ಲದೆ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದ್ರಿಂದ ಕಂಗಾಲಾದ ದಂಪತಿ ಪೊಲೀಸರಿಗೆ ದೂರು ನೀಡಿದ್ದು, ಕೊನೆಗೂ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
undefined
250ರ ಸಂತಸದಲ್ಲಿ ಸೀತಾರಾಮ: ಮದುವೆ ಸಂಭ್ರಮದಲ್ಲಿರೋ ಜೋಡಿಗೆ ಕಾದಿದ್ಯಾ ಆಪತ್ತು?
ಈ ಯುವಕನ ಹೆಸರು ವಿನಯ್ ಕುಮಾರ್ ಸಾಹು. ವಯಸ್ಸು 28 ವರ್ಷ. ಈತ ಸರ್ಕಾರಿ ನೌಕರಿ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದ. ಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದ. ಆದ್ರೆ ಯಾವುದೇ ಕೆಲಸ ಈತನಿಗೆ ಸಿಗಲಿಲ್ಲ. ಸರ್ಕಾರಿ ಕೆಲಸದ ಆಸೆ ಬಿಟ್ಟು ತನ್ನ ಲೈನ್ ಚೇಂಜ್ ಮಾಡಲು ಮುಂದಾದ ವಿನಯ್, ತರಕಾರಿ ಮಾರುಕಟ್ಟೆಗೆ ಬರ್ತಿದ್ದವರ ಮೊಬೈಲ್ ಕಳ್ಳತನ ಶುರು ಮಾಡಿದೆ. ಆರಂಭದಲ್ಲಿ ಮೊಬೈಲ್ ಕದಿಯುತ್ತಿದ್ದ ವಿನಯ್, ನಿಧಾನವಾಗಿ ಸಣ್ಣಪುಟ್ಟ ವಸ್ತುಗಳನ್ನು ಕದಿಯಲು ಶುರು ಮಾಡಿದೆ. ರಾತ್ರಿ ತನ್ನ ಊರಿನಲ್ಲಿರುವ ಮನೆಗಳಿಗೆ ಹೋಗಿ ಕಳ್ಳತನ ಮಾಡ್ತಿದ್ದ. ವಿನಯ್ ತನ್ನೂರು ಬಿಟ್ಟು ಮತ್ತೆಲ್ಲಿಯೂ ಕಳ್ಳತನ ಮಾಡುವ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ.
ಈ ಮನೆಗೂ ಆತ ಎರಡು ಬಾರಿ ಬಂದಿದ್ದ. ಎರಡೂ ಬಾರಿ ಯಶಸ್ವಿಯಾಗಿ ಕಳ್ಳತನ ಮಾಡಿದ್ದ. ಮೂರನೇ ಬಾರಿಯೂ ಆರಾಮವಾಗಿ ಕಳ್ಳತನ ಮಾಡಬಹುದು ಎಂಬ ನಂಬಿಕೆಯಲ್ಲೇ ಆತ ಮನೆಯೊಳಗೆ ಬಂದಿದ್ದ. ಆದ್ರೆ ಅಲ್ಲಿ ಆತನ ಮನಸ್ಸು ಬದಲಾಯ್ತು. ಕಳ್ಳತನ ಮಾಡ್ತಿದ್ದವನಿಗೆ ಬೆಡ್ ಮೇಲಿದ್ದ ಜೋಡಿ ಕಣ್ಣಿಗೆ ಬಿದ್ದು.
ಮನೆಯಲ್ಲಿ ಯಾವ ಪರಿವೆಯೂ ಇಲ್ಲದೆ ಶಾರೀರಿಕ ಸಂಬಂಧ (Physical Relationship) ಬೆಳೆಸುತ್ತಿದ್ದ ಜೋಡಿಯನ್ನು ನೋಡಿದ ವಿನಯ್, ತನ್ನ ಕದ್ದ ಮೊಬೈಲ್ ತೆಗೆದಿದ್ದಾನೆ. ಕಿಟಕಿ ಪಕ್ಕ ನಿಂತು ಅವರ ವಿಡಿಯೋ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮರುದಿನ ಬೆಳಗ್ಗೆ ವಾಟ್ಸ್ ಆ್ಯಪ್‌ನಲ್ಲಿ ದಂಪತಿಗೆ ವಿಡಿಯೋ ಬಂದಿದೆ. ಇದನ್ನು ನೋಡಿದ ದಂಪತಿ ದಂಗಾಗಿದ್ದಾರೆ. ವಿಡಿಯೋ ಜೊತೆ ವಿನಯ್ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇಲ್ಲವೆಂದ್ರೆ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕಿದ್ದಾನೆ.
ಬೆಳ್ಳಿಯ ದೇಗುಲದಲ್ಲಿ ಚಿನ್ನದ ವಿಗ್ರಹಗಳು; ಅನಂತ್ ರಾಧಿಕಾ ವೆಡ್ಡಿಂಗ್ ಕಾರ್ಡ್ ವಿಡಿಯೋ ವೈರಲ್
ವಿನಯ್ ಗೆ 10 ಲಕ್ಷ ನೀಡುವ ಬದಲು ದಂಪತಿ ಪೊಲೀಸ್ ಮೊರೆ ಹೋಗಿದ್ದಾರೆ. ವಿಚಾರಣೆ ಕೈಗೊಂಡ ಪೊಲೀಸರು, ಸೈಬರ್ ಕ್ರೈಂ ಪೊಲೀಸರ (Cyber Crime Police) ಸಹಾಯದಿಂದ ವಿನಯ್ ನಿವಾಸ ಪತ್ತೆ ಮಾಡಿದ್ದಾರೆ. ಪೊಲೀಸ್ ದಾಳಿಯವರೆಗೂ ವಿನಯ್ ಅದೇ ನಂಬರ್ ಬಳಕೆ ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫೋನ್ ಟ್ರ್ಯಾಕ್ ಮಾಡಿ ವಿನಯ್ ಹಿಡಿದ ಪೊಲೀಸರಿಗೆ ಎಲ್ಲ ವಿಷ್ಯ ಗೊತ್ತಾಗಿದೆ. ವಿನಯ್ ಫೋನ್ ನಲ್ಲಿದ್ದ ವಿಡಿಯೋ ಡಿಲಿಟ್ ಮಾಡಿ, ಆರೋಪಿಯನ್ನು ಒಳಗೆ ತಳ್ಳಿದ್ದಾರೆ.