ಮಗಳು ಹಸ್ತಮೈಥುನ ಮಾಡಿಕೊಳ್ಳೋದನ್ನ ನೋಡಿದೆ, ಏಕೋ ಮನಸ್ಸಿಗೆ ಕಸಿವಿಸಿ..

By Suvarna News  |  First Published Jan 27, 2020, 2:33 PM IST

ಮಗಳು ಹಸ್ತಮೈಥುನ ಮಾಡಿಕೊಳ್ಳೋದು ತಂದೆ ತಾಯಿಗಳಿಗೆ ಗೊತ್ತಾದರೆ, ಏನು ಮಾಡಬೇಕು? ಇಂಥ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸೋದು ಹೇಗೆ?


ಪ್ರಶ್ನೆ: ನನ್ನ ಮಗಳಿಗೆ ಈಗ 22 ವರ್ಷ ವಯಸ್ಸು. ಮಾಸ್ಟರ್ಸ್ ಮಾಡುತ್ತಿದ್ದಾಳೆ. ಮನೆಯಲ್ಲಿ ನಮ್ಮ ರೂಂ ಕೆಳಗಿದ್ದರೆ ಅವಳ ರೂಂ ಇರೋದು ಫಸ್ಟ್ ಫ್ಲೋರ್‌ನಲ್ಲಿ. ಇತ್ತೀಚೆಗೆ ಏನೋ ಕೆಲಸಕ್ಕೆಂದು ಫಸ್ಟ್ ಫ್ಲೋರ್ ಕಡೆ ಹೋದೆ. ಆಗ ಹಸ್ತ ಮೈಥುನ ಮಾಡುತ್ತಿದ್ದ ಮಗಳು ಸಿಕ್ಕಿಬಿದ್ದಳು. ಅವಳ ಖಾಸಗಿತನಕ್ಕೆ ಬಹಳ ಬೆಲೆ ಕೊಡುವ ನಾನು ಈ ವಿಷಯವನ್ನು ನೋಡಿಯೂ ನೋಡದ ಹಾಗೆ ಇದ್ದೆ. ಇದನ್ನು ನನ್ನ ಪತ್ನಿಯ ಗಮನಕ್ಕೂ ತರಲಿಲ್ಲ. ಒಂದು ವೇಳೆ ಅವಳ ಬಳಿ ಹೇಳಿದರೆ ಅವಳು ಯಾವ ರೀತಿ ರಿಯಾಕ್ಟ್ ಮಾಡಬಹುದೋ ಗೊತ್ತಿಲ್ಲ. ಅವಳದು ಸ್ವಲ್ಪ ಭಾವುಕ ಸ್ವಭಾವವೂ ಆಗಿರುವ ಕಾರಣ ಮನಸ್ಸಿಗೆ ಹಚ್ಚಿಕೊಳ್ಳುವ ಸಾಧ್ಯತೆ ಇದೆ. ಮನೆಯವರಿಂದೆಲ್ಲ ಮಗಳು ಸಿಕ್ಕಿಬಿದ್ದ ವಿಚಾರ ಮುಚ್ಚಿಟ್ಟೆ. ಆದರೆ ನನ್ನೊಳಗೇ ಗಿಲ್ಟ್ ಫೀಲ್ ಶುರುವಾಗಿದೆ. ನಾನು ಅದನ್ನು ಕಂಡೂ ಕಾಣದ ಹಾಗಿದ್ದದ್ದು ತಪ್ಪೋ ಏನೋ, ಇಂಥ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸೋದು ಹೇಗೆ? ದಯವಿಟ್ಟು ತಿಳಿಸಿ.

ಹುಡುಗೀರು ಹಸ್ತ ಮೈಥುನ ಮಾಡಿಕೊಳ್ಳುವುದು ತಪ್ಪಾ?
 

Tap to resize

Latest Videos

ಉತ್ತರ: ಹೌದು, ಈ ಬಗೆಯ ಪ್ರಸಂಗಗಳು ಬಹಳ ಅಪರೂಪವೇನಲ್ಲ. ನಿಮ್ಮ ಮಗಳಿಗೆ 22 ವರ್ಷ ಅಂದಿರಿ. ಅಂದರೆ ಅವಳು ಚಿಕ್ಕ ಹುಡುಗಿಯೇನಲ್ಲ. ಪ್ರಬುದ್ಧ ಯುವತಿ. ನಿಮ್ಮ ಪಾಲಿಗಷ್ಟೇ ಅವಳು ಚಿಕ್ಕ ಮಗಳಾಗಿರಬಹುದು. ಈ ವಯಸ್ಸಿನಲ್ಲಿ ಹಾರ್ಮೋನ್ ಕಾರಣಕ್ಕೆ ಲೈಂಗಿಕ ಕಾಮನೆಗಳು ಹೆಚ್ಚಿರುತ್ತವೆ. ಆದರೆ ಇಂಥವುಗಳನ್ನು ಹೇಗೆ ಮ್ಯಾನೇಜ್ ಮಾಡಬೇಕು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಮಗಳಿಗೆ ಸಾಮಾನ್ಯವಾಗಿ ಅಮ್ಮಂದಿರು ಈ ಬಗ್ಗೆ ತಿಳುವಳಿಕೆ ಮೂಡಿಸಿದರೆ ಅವಳಿಗೂ ಮನಸ್ಸಲ್ಲಿದ್ದ ಸಂದೇಹ ಹೊರ ಹಾಕುವುದು ಸುಲಭವಾಗುತ್ತದೆ. ತಂದೆಯ ಜೊತೆಗೆ ಹೆಣ್ಮಕ್ಕಳು ಎಷ್ಟೇ ಕ್ಲೋಸ್ ಆಗಿದ್ರೂ ಇಂಥಾ ತೀರಾ ಖಾಸಗಿ ವಿಷಯವನ್ನು ಸ್ವತಂತ್ರವಾಗಿ ಚರ್ಚಿಸಲಾರರು ಅನಿಸುತ್ತದೆ. ಆದರೆ ನಮ್ಮ ಪಾರಂಪರಿಕ ಸಮಾಜದಲ್ಲಿ ಎಷ್ಟೋ ಸಲ ಅಮ್ಮಂದಿರೂ ಮಕ್ಕಳ ಜೊತೆಗೆ ಇಂಥಾ ವಿಷಯಗಳನ್ನು ಸ್ವತಂತ್ರವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ನಿಮ್ಮ ಪತ್ನಿಗೆ ಮಗಳ ಸಮಸ್ಯೆಯನ್ನು ಮನದಟ್ಟು ಮಾಡಿ ಅವಳಲ್ಲಿ ಈ ಬಗೆಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಬಹುದು.

 


 

ಆದರೆ ಇದಕ್ಕಿಂತಲೂ ಉತ್ತಮವಾದ ಇನ್ನೊಂದು ಮಾರ್ಗ ಇದೆ. ಅದು ನಿಮ್ಮ ಮಗಳಿಗೆ ಈ ಬಗ್ಗೆ ಶಿಕ್ಷಣ ನೀಡುವಂಥಾ ಪುಸ್ತಕವನ್ನು ಗಿಫ್ಟ್ ಕೊಡೋದು. ಮಕ್ಕಳಿಗೆ ಲೈಂಗಿಕತೆ, ಹಾರ್ಮೋನ್ ಬದಲಾವಣೆ ಇತ್ಯಾದಿ ವಿಷಯಗಳಲ್ಲಿ ಅರಿವು ಮೂಡಿಸುವಂಥಾ ಅನೇಕ ಪುಸ್ತಕಗಳಿವೆ. ಉತ್ತಮವಾದ ಪುಸ್ತಕ ಹುಡುಕಿ ಮಗಳಿಗೆ ನೀಡಿದರೆ ಮಗಳ ಗೊಂದಲಗಳು, ಸಮಸ್ಯೆಗಳು ಪರಿಹಾರವಾಗುತ್ತವೆ. ನಿಮ್ಮಲ್ಲೂ ಮಗಳಿಗೆ ತಿಳುವಳಿಕೆ ಮೂಡಿಸಿದ ತೃಪ್ತಿ ಇರುತ್ತದೆ.


ಆ ಕಾರಣದಿಂದ ಪತ್ನಿ ಎದುರು ದಿನವೂ ಸೋಲುತ್ತಿದ್ದೇನೆ 

 

ಎಷ್ಟು ದಿನಕ್ಕೊಮ್ಮೆ ಹಸ್ತಮೈಥುನ ಸೇಫ್‌

ಪ್ರಶ್ನೆ: ನಾನು 28 ವರ್ಷದ ಪುರುಷ. ವಾರಕ್ಕೆ ಎರಡು ಬಾರಿ ಹಸ್ತಮೈಥುನ ಮಾಡುತ್ತಿದ್ದೇನೆ. ಆದರೆ ಇದರಿಂದ ನನ್ನ ವೈವಾಹಿಕ ಬದುಕಿಗೆ ಸಮಸ್ಯೆ ಆಗಬಹುದೇ? ಇದರಿಂದ ಮಕ್ಕಳಾಗದಿರುವ ಸಾಧ್ಯತೆ ಇದೆಯೇ? ಎಷ್ಟು ಸಲಕ್ಕೊಮ್ಮೆ ಹಸ್ತಮೈಥುನ ಮಾಡಿದರೆ ಸೇಫ್‌? ನನಗೆ ಎಷ್ಟೋ ಸಲ ಭವಿಷ್ಯ ನೆನಪಾಗಿ ಭಯವಾಗುತ್ತದೆ.
 

ಉತ್ತರ: ಹಸ್ತ ಮೈಥುನ ಇಂತಿಷ್ಟೇ ಸಲ ಮಾಡಬೇಕು ಅನ್ನುವ ನಿಯಮ ಖಂಡಿತಾ ಇಲ್ಲ. ಇದನ್ನು ಮಾಡುವುದು ಲೈಂಗಿಕ ಉದ್ವೇಗ ತಡೆಯೋದಕ್ಕೋಸ್ಕರ. ಇದರಿಂದ ಭವಿಷ್ಯಕ್ಕೆ ಹಾನಿ ಏನಿಲ್ಲ. ಆದರೆ ನಿಮ್ಮ ದೇಹದ ಬಗ್ಗೆ ನೀವು ಕಾಳಜಿವಹಿಸಿ ಹಸ್ತಮೈಥುನ ಮಾಡಬೇಕು. ದೈಹಿಕವಾದ ಕಾಳಜಿ ಮಾಡದೇ ಇದ್ದರೆ ಈ ಬಗ್ಗೆ ಭಯ, ಗೊಂದಲ ಇತ್ಯಾದಿ ಸಮಸ್ಯೆ ಬರಬಹುದು.

click me!