ತಾಯಿ ಮತ್ತು ಹೆಂಡತಿ…! ಕೆಲವೊಮ್ಮೆ ಯೋಚಿಸಿದರೆ ಪುರುಷರಿಗೆ ಈ ಇಬ್ಬರೂ ತಲೆನೋವಿನಂತೆ ಭಾಸವಾಗಬಹುದು! ಏಕೆಂದರೆ, ಇವರಿಬ್ಬರ ಸಂಬಂಧ ಸಹಜವಾಗಿಯೇ ಸೂಕ್ಷ್ಮ. ಇದನ್ನು ಜಾಣತನದಿಂದ, ಪ್ರೀತಿಯಿಂದ ನಿಭಾಯಿಸುವುದು ಮುಖ್ಯ. ಹಾಗೆಯೇ ಗಂಡಸರು ಸಹ ಇಲ್ಲಿ ಜಾಣತನದಿಂದ ವರ್ತಿಸಬೇಕಾಗುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್ ಇಲ್ಲಿವೆ
ಮುತ್ತಾ? ತುತ್ತಾ? ಇದು ಬಹುಶಃ ಪ್ರತಿಯೊಬ್ಬ ಗಂಡಸರನ್ನೂ ಕಾಡುವ ಪ್ರಶ್ನೆ. ಆದರೆ, ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಅಮ್ಮ (Mother) - ಪತ್ನಿ (Wife) ಇಬ್ಬರಿಗೂ ಅವರ ಪಾಲಿನ ಸಮಾನ ಗೌರವ, ಮನ್ನಣೆ ನೀಡಿದರೆ ಸಾಕು. ಆದರೂ ಇಬ್ಬರ ನಡುವೆ ತಾವೇ ಹೆಚ್ಚು ಎನ್ನುವ ಹೋರಾಟಗಳು ನಡೆದಾಗ ಮಾತ್ರ ಜಾಣತನದಿಂದ ಸಂದರ್ಭವನ್ನು ನಿಭಾಯಿಸಬೇಕಾಗುತ್ತದೆ. ಇವರಿಬ್ಬರ ಸಂಬಂಧ ಸಹಜವಾಗಿಯೇ ಸೂಕ್ಷ್ಮ. ಇದನ್ನು ಜಾಣತನದಿಂದ, ಪ್ರೀತಿಯಿಂದ ನಿಭಾಯಿಸುವುದು ಮುಖ್ಯ. ಆದರೆ, ಅದರ ಅರಿವಿಲ್ಲದವರಿಗೆ ಈ ಸಂಬಂಧವೊಂದು ಹೊರೆಯಾಗಿ, ಜೀವನದ ಅತಿ ಕಷ್ಟದ ಬಂಧವಾಗಿ ಕಾಣಿಸಬಹುದು. ಅವರಿಬ್ಬರ ಜುಗಲ್ ಬಂದಿಯಲ್ಲಿ ಪತಿ (Husband) ಯಾದವನು ಹೈರಾಣಾಗಬಹುದು.
ಹಿಂದೆ ಮುಂದೆ ಯೋಚಿಸದೆ ಪತ್ನಿಯ ಮಾತು ಕೇಳಿ ಅಮ್ಮನಿಗೆ ದಬಾಯಿಸುವುದು, ಅಮ್ಮನ ಮಾತು ಕೇಳಿ ಪತ್ನಿಯನ್ನು ದೂರವಿಡುವುದು, ಅವರಿಬ್ಬರ ಜಗಳವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದೆ ಏನೇನೋ ಮಾತನಾಡಿ ಸಂಬಂಧವನ್ನು(Relationship) ಇನ್ನಷ್ಟು ಕಷ್ಟಕರವನ್ನಾಗಿಸುವುದು ಗಂಡಸರ ಕೈಯಲ್ಲೇ ಇದೆ. ಅಂದರೆ, ಕೆಲವು ಸನ್ನಿವೇಶಗಳನ್ನು ತುಂಬ ನಾಜೂಕಾಗಿ ನಿಭಾಯಿಸಬೇಕಾಗುತ್ತದೆ. ಅದಕ್ಕಾಗಿ ಒಂದಿಷ್ಟು ಟಿಪ್ಸ್ (Tips) ಇಲ್ಲಿವೆ, ನೋಡಿಕೊಳ್ಳಿ.
• ಕೆಲಸದ ಸ್ಥಳದಿಂದ (Working Place) ಅವರಿಬ್ಬರನ್ನು ದೂರವಿಡಿ!
ಅರ್ಥಾತ್, ನೀವು ಕೆಲಸ ಮಾಡುವ ಸ್ಥಳದಲ್ಲೂ ತಾಯಿ ಹಾಗೂ ಪತ್ನಿಯ ಹೊಂದಾಣಿಕೆ ಬಗ್ಗೆಯೇ ಯೋಚಿಸುತ್ತಿರಬೇಡಿ. ಅದರಿಂದ ನಿಮ್ಮ ಕಾರ್ಯಕ್ಷಮತೆ ಕುಂದುತ್ತದೆ. ಹಾಗೆಯೇ, ನಿಮ್ಮ ಹೆಂಡತಿ ನಿಮ್ಮ ಅಮ್ಮನೊಂದಿಗೆ ಜಗಳವಾಡಿಕೊಂಡು ಫೋನ್ ಮಾಡಿದರೆ ನಿಂತ ಕ್ಷಣದಲ್ಲೇ ಅದನ್ನು ಬಗೆಹರಿಸಲು ಯತ್ನಿಸಬೇಡಿ. ಸಂಜೆ ಮನೆಗೆ ಬಂದ ನಂತರ ಮಾತನಾಡುವುದಾಗಿ ನಯವಾಗಿ ತಿಳಿಸಿ. ಹಾಗೂ ಪರಿಸ್ಥಿತಿ ಗಂಭೀರವಾಗಿದ್ದರೆ ಹೊರಗೆ ಬಂದು ಕೆಲವೇ ನಿಮಿಷಗಳ ಕಾಲ ಮಾತನಾಡಿ ಏನಾಯಿತು ಎಂದು ಘಟನೆ ಬಗ್ಗೆ ತಿಳಿದುಕೊಳ್ಳಲು ಯತ್ನಿಸಬಹುದು. ಆದರೆ, ಇಂಥದ್ದಕ್ಕೆ ಅವಕಾಶ ನೀಡುವುದೇ ಬೇಕಾಗಿರುವುದಿಲ್ಲ. ಒಮ್ಮೆ ಇದು ಅಭ್ಯಾಸವಾದರೆ ಇಬ್ಬರೂ ನಿಮಗೆ ಫೋನ್ ಮಾಡಿ ತಮ್ಮ ಜಗಳದ ಬಗ್ಗೆ ಹೇಳಲು ಯತ್ನಿಸಬಹುದು. ಹೀಗಾಗಿ, ಕಚೇರಿಗೆ ಮನೆಯ ಜಗಳ ತರುವುದು ಬೇಡವೇ ಬೇಡ. ಇಬ್ಬರಲ್ಲೂ “ನೀನು ಧೈರ್ಯವಾಗಿರು, ನಾನಿದ್ದೇನೆ, ಹೆದರಬೇಡ, ಅಪ್ಸೆಟ್ ಆಗಬೇಡ.." ಹೀಗೆ ಸಮಾಧಾನದ ಮಾತನ್ನಾಡಿ ಇಟ್ಟುಬಿಡಿ.
ಇದನ್ನೂ ಓದಿ: ಡಬ್ಬಲ್ ಧಮಾಕ: ಇಬ್ಬರನ್ನು ಒಟ್ಟಿಗೆ ಮದುವೆಯಾದ ಯುವಕ
• ಯಾರ ಪಕ್ಷ (Side) ವಹಿಸಬೇಕೆನ್ನುವ ಗೊಂದಲದಿಂದ ದೂರವಿರಿ
ಯಾರೋ ಒಬ್ಬರು ತಪ್ಪು (Fault) ಮಾಡಿದ್ದಾರೆ, ಇನ್ನೊಬ್ಬರು ಅದರ ಬಲಿಪಶು (Victim) ವಾಗಿದ್ದಾರೆ ಎನ್ನುವುದನ್ನು ಮೊದಲು ತಲೆಯಿಂದ ತೆಗೆದುಹಾಕಿ. ಇಬ್ಬರೂ ಕುಟುಂಬದ ಸದಸ್ಯರು. ಹೀಗಾಗಿ, ಇಲ್ಲಿ ಯಾರ ಪಕ್ಷ ವಹಿಸಬೇಕು ಎನ್ನುವುದರ ಬದಲು, ಯಾರು ಹೆಚ್ಚು ಚೈಲ್ಡಿಶ್ (Childish) ಆಗಿ ವರ್ತಿಸುತ್ತಿದ್ದಾರೆ, ಯಾರ ನಿರೀಕ್ಷೆಗಳು ಯಾವ ರೀತಿ, ಯಾರು ಯಾರಿಗೆ ಏನು ಹೇಳಿದರು, ಬೇಜಾರಾಗುವಂತಹ ಕಾರಣವೇನಿತ್ತು ಇತ್ಯಾದಿ ಅರಿಯಲು ಯತ್ನಿಸಿ. ಇಬ್ಬರೊಂದಿಗೆ ನೇರವಾಗಿ ಮಾತನಾಡುವ ಸಂದರ್ಭವನ್ನು ಅವಾಯ್ಡ್ (Avoid) ಮಾಡುವ ಬದಲು ನೇರವಾಗಿ ಮಾತನಾಡುವುದು ಉತ್ತಮ. ಇಲ್ಲಿ ಹುಷಾರಾಗಿರಿ. ಸೊಸೆಯ ಎದುರು ಅಮ್ಮನನ್ನು, ಅತ್ತೆಯ ಎದುರು ಸೊಸೆಯನ್ನು ಬೈಯ್ಯಲು ಹೋಗಬೇಡಿ, ಅವರ ತಪ್ಪಿದ್ದರೂ ಸಹ! ಯಾರಿಗಾದರೂ ತಿಳಿವಳಿಕೆ ಹೇಳುವುದಿದ್ದರೆ ಪ್ರತ್ಯೇಕವಾಗಿ ಅವರಿಗೆ ಮಾತ್ರ ತಿಳಿಸಿ ಹೇಳಿ.
ಇದನ್ನೂ ಓದಿ: Sexy Figure : ಪುರುಷರ ಬಯಕೆ ಹೆಚ್ಚಿಸುತ್ತೆ ಮಹಿಳೆಯರ ಈ ಅಂಗ
• ಶಾಶ್ವತ ಪರಿಹಾರ (Resolve) ಕಂಡುಹಿಡಿಯುವ ಪ್ರಯತ್ನ ಬೇಡ!
ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ. ಸಾಧ್ಯವಾದಷ್ಟೂ ಇಬ್ಬರಿಗೂ ತಿಳಿವಳಿಕೆ ಮೂಡಿಸುವುದೇ ಪರಿಹಾರ ಬಿಟ್ಟರೆ ಬೇರೆ ಪರಿಹಾರಗಳನ್ನು ಹುಡುಕಲು ಹೋದರೆ ಕಷ್ಟವಾದೀತು. ಮನೆಯಿಂದ ದೂರವಾಗಬೇಕಾದೀತು. ಅದರ ಬದಲು ಎಲ್ಲರೂ ಜತೆಗಿದ್ದರೆ ಸಂತಸ ಎನ್ನುವುದನ್ನು ಅವರು ಅರಿಯುವಂತೆ ಮಾಡಿ. ಅಮ್ಮನೊಂದಿಗೆ ಭಾವನಾತ್ಮಕವಾಗಿ (Emotion) ಭಾರೀ ನೋವಾಗುತ್ತಿದೆ ಎನ್ನುವಂತೆ ಮಾತನಾಡಿ. ಅವರು ಕರಗುತ್ತಾರೆ, ನಿಮ್ಮ ಮುಖ ನೋಡಿ ಸೊಸೆಗೆ ತಕ್ಷಣ ಏನಾದರೂ ಹೇಳಲು ಹಿಂದೇಟು ಹಾಕುತ್ತಾರೆ. ಹಾಗೆಯೇ, ಪತ್ನಿಯ ಬಳಿಯೂ ಅಷ್ಟೆ, “ನೀನು ನನ್ನ ಜತೆಗಿದ್ದರೆ ಹೇಗಾದರೂ ಬದುಕನ್ನು ಜಯಿಸಬಲ್ಲೆʼ ಎಂದು ಹೇಳಿ. ಆಕೆಯೂ ಖುಷಿಯಾಗುತ್ತಾಳೆ. ಆದರೆ, ಇಬ್ಬರ ನಡುವೆ ಗಲಾಟೆಯಾದಾಗ ನೀವೇ ಮುಂದಾಗಿ ಮಧ್ಯೆ ಪ್ರವೇಶಿಸಬೇಡಿ. ಅವರು ನಿಮ್ಮವರೆಗೆ ಪ್ರಕರಣ ತಂದರೆ ಮಾತ್ರ ನೋಡಿಕೊಳ್ಳಿ.