ವಧುವಿನ ಜೊತೆ ಕಾರ್‌ನಲ್ಲಿ ಶುರು ಹಚ್ಕೊಂಡು ವರ; ಮನೆ ತಲುಪೋವರೆಗಾದ್ರೂ ವೇಟ್ ಮಾಡು ಗುರು ಎಂದ ನೆಟ್ಟಿಗರು 

By Mahmad Rafik  |  First Published Oct 13, 2024, 3:09 PM IST

ಮದುವೆಯಾಗಿ ವಧುವಿನ ಜೊತೆ ಕಾರಿನಲ್ಲಿ ತೆರಳುತ್ತಿರುವಾಗ ವರನೊಬ್ಬ ಹುಚ್ಚಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗೆ ತೆರಳುವ ಮಾರ್ಗದಲ್ಲಿಯೇ ವಧುವಿನ ಜೊತೆ ವರನ ಈ ನಡವಳಿಕೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಸೋಶಿಯಲ್ ಮೀಡಿಯಾದಲ್ಲಿಂದು ಜನರು ತಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಫೋಟೋ, ವಿಡಿಯೋ ಹಂಚಿಕೊಂಡ್ರೆ ಒಳ್ಳೆಯ ಬರಹಗಾರರು ಲೇಖನದ ಮೂಲಕ ತಮ್ಮ ಅಭಿಪ್ರಾಯ ಅಥವಾ ತಮ್ಮ ಜೀವನದಲ್ಲಿ ನಡೆದ ವಿಶೇಷ ಘಟನೆಯನ್ನು ಬರೆದುಕೊಳ್ಳುತ್ತಾರೆ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಖಾಸಗಿ ವಿಷಯ/ಫೋಟೋ/ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತವೆ. ಇದೀಗ ಅಂತಹುವುದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸಿದ್ದು, ಮನೆ ತಲುಪವರೆಗಾದ್ರೂ ವೇಟ್ ಮಾಡು ಎಂದು ವರನಿಗೆ ಸಲಹೆ ನೀಡಿ ಕಾಲೆಳೆದಿದ್ದಾರೆ. ಜೀವನ ಅತಿ ಖಾಸಗಿ ವಿಡಿಯೋ/ಫೋಟೋಗಳನ್ನು ಎಂದಿಗೂ ಯಾರೊಂದಿಗೂ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಲಾಗುತ್ತದೆ. ಆದರೆ ಈ ಯುವಕ ಮದುವೆಯಾಗಿ ವಧುವಿನ ಜೊತೆ ಕಾರಿನಲ್ಲಿ ತೆರಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾನೆ. ಮನೆಗೆ ತೆರಳುವ ಮಾರ್ಗದಲ್ಲಿಯೇ ವಧುವಿನ ಜೊತೆ ವರ ಹುಚ್ಚಾಟ ಮಾಡಲು ಪ್ರಾರಂಭಿಸುತ್ತಾನೆ. ಈ ರೀತಿಯ ನಡವಳಿಕೆ ಉಚಿತವಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಮದುವೆಯಾದ ಬಳಿಕ ವಧು ಗಂಡನ ಮನೆಗೆ ತೆರಳೋದು ಸಂಪ್ರದಾಯ. ಮೊದಲ ಬಾರಿಗೆ ಗಂಡನ ಮನೆಗೆ ಆಗಮಿಸುತ್ತಿರುವ ವಧುಗಾಗಿ ಹೂಗಳಿಂದ ಅಲಂಕೃತ ಕಾರ್ ಸಿದ್ದಪಡಿಸಲಾಗಿರುತ್ತದೆ. ಕಾರ್‌ನಲ್ಲಿ ಚಾಲಕ ಹೊರತುಪಡಿಸಿದ್ರೆ ಜೋಡಿ ಮಾತ್ರ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ ಹತ್ತಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ವರ, ಅಲ್ಲಿಯೇ ಮದ್ಯದ ಟಿನ್ ಓಪನ್ ಮಾಡಿದ್ದಾನೆ. ವಧುವಿಗೂ ಮದ್ಯ ಸೇವಿಸುವಂತೆ ಒತ್ತಾಯಿಸಿದಂತೆ ಕಾಣಿಸುತ್ತದೆ. ವಧು ಪದೇ ಪದೇ ತನ್ನ ಮುಖವನ್ನು ದುಪ್ಪಟ್ಟಾದಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾಳೆ. ಇಷ್ಟಕ್ಕೆ ಸುಮ್ಮನಾಗದ ವರ ಬಿಯರ್ ತುಂಬಿದ ಗ್ಲಾಸ್ ವಧುವಿನ ಕೈಗೆ ಕೊಡುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. 

ಟಾಟಾ , ಬೈ ಬೈ ಖತಂ.. ವಧುವನ್ನ ರಾಕೆಟ್‌ನಲ್ಲಿ ಹಾರಿಸ್ಕೊಂಡು ಹೋದ ವರ

ಈ ವಿಡಿಯೋವನ್ನು itz_ankit_1112 ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 4 ಲಕ್ಷಕ್ಕೂ ಅಧಿಕ ಜನರು ಲೈಕ್ ಬಟನ್ ಒತ್ತಿದ್ದು, 1 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಇದು ಖಂಡಿತ ಒಳ್ಳೆಯ ನಡವಳಿಕೆ ಅಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿರೋ ಕಾರಣ ಹುಡುಗ ಹೀಗೆ ಮಾಡುತ್ತಿದ್ದಾನೆ. ಸದ್ಯ ವಧು ನಗುತ್ತಿದ್ದು, ಮುಂದೆ ಆಕೆ ಖಂಡಿತ ಅಳುತ್ತಾಳೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರ ಮದುವೆಗಳಲ್ಲಿ ಮದ್ಯ ಸೇವನೆ ಸಾಮಾನ್ಯವಾಗಿರುತ್ತದೆ. ಇದು ಅದೇ ರೀತಿ ಮದುವೆ ಆಗಿರಬಹುದಲ್ಲವಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಫೈಸ್ಟ್‌ ನೈಟ್‌ನಲ್ಲಿ ಹೂಗಳಿಂದ ತುಂಬಿದ ಮಂಚದ ಮೇಲೆ ನಾಚುತ್ತಾ ಕುಳಿತಿದ್ಳು: ಮುಖ ನೋಡಿ ಆಧಾರ್ ಕಾರ್ಡ್ ಕೇಳಿದ ವರ

click me!