ಲವರ್​ ಜೊತೆ ಮಾತನಾಡುವಾಗ ಹಾವು ಹೀಗೆ ಮಾಡೋದಾ? ಪ್ಯಾಂಟ್​ ಒಳಗೆ ಮಾಡಿದ್ದೇನು ನೋಡಿ!

By Suchethana D  |  First Published Oct 10, 2024, 4:13 PM IST

ಗರ್ಲ್​ಫ್ರೆಂಡ್​ ಜೊತೆ ಲವ್​ ವಿಷ್ಯ ಮಾತಾಡ್ತಿರುವಾಗಲೇ ಪ್ಯಾಂಟ್​ ಒಳಗೆ ಹೊಕ್ಕ ಹಾವು! ಯುವಕ ಕಂಗಾಲಾಗಿ ಓಡಿದ ವಿಡಿಯೋ ವೈರಲ್​...
 


ನೀನು ನನ್ನನ್ನು ಪ್ರೀತಿ ಮಾಡ್ತಿಯೋ ಇಲ್ವೋ ಎಂದು ಫೋನ್​ನಲ್ಲಿ ಸ್ನೇಹಿತೆಗೆ ಪದೇ ಪದೇ ಕೇಳುತ್ತಿದ್ದ ಯುವಕ ಅದೇ ಗುಂಗಿನಲ್ಲಿ ಇರುವಾಗಲೇ ಸದ್ದಿಲ್ಲದೇ ಬಂದ ಹಾವೊಂದು ಅವನ ಪ್ಯಾಂಟ್​ ಕೆಳಗೆ ಹರಿದು ಹೋಗುತ್ತಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತೆ ಮಾಡಿದೆ.  ಈ ವೈರಲ್​ ವಿಡಿಯೋದಲ್ಲಿ,  ಯುವಕನೊಬ್ಬ ಮೈದಾನದಲ್ಲಿ ಮೈಮರೆತು ಸ್ನೇಹಿತೆ ಜೊತೆ  ಮಾತನಾಡುವುದನ್ನು ನೋಡಬಹುದು. ನೀನು ನನ್ನನ್ನು ಪ್ರೀತಿಸ್ತಿಯೋ ಇಲ್ವೋ ಎಂದು ಕೇಳುತ್ತಿದ್ದಾನೆ. ಅತ್ತ ಕಡೆಯಿಂದ ಉತ್ತರ ಬರದಿದ್ದಾಗ ಮತ್ತೊಮ್ಮೆ ಕೇಳಿದ್ದಾನೆ. ಅಷ್ಟರಲ್ಲಿಯೇ  ಅವನ ಬಳಿ ಹಾವು ಹರಿದು ಬಂದುಪ್ಯಾಂಟ್​ ಒಳಗೆ ಹೋಗಿದೆ. 

ಯುವಕನಿಗೆ ಏನೋ ಒಂದು ಹರಿದು ಬಂದಂತೆ ಅನ್ನಿಸಿ ನೋಡಿದ್ದಾನೆ. ಹಾವನ್ನು ನೋಡಿ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದಾನೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ  ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಕಮೆಂಟ್​ ಮಾಡುತ್ತಿದ್ದಾರೆ. ಅದು ಯಾವುದೋ ಲೋಕಲ್​ ಹಾವು. ನಾಗರಹಾವು ಆಗಿದ್ರೆ ದೇವ್ರೇ ಗತಿ ಎಂದೆಲ್ಲಾ ಹೇಳುತ್ತಿದ್ದಾರೆ. ಲವರ್​ ಜೊತೆ ಮೈಮರೆತರೆ ಹೀಗೆ ಆಗುವುದು, ಇಂಥ ಸ್ಥಳಗಳಲ್ಲಿ ಜೋಪಾನ ಎಂದೆಲ್ಲಾ ಎಚ್ಚರಿಕೆ ಕೊಡುತ್ತಿದ್ದಾರೆ. 

Tap to resize

Latest Videos

undefined

ಮದ್ವೆ- ಮಕ್ಕಳು ಬಗ್ಗೆ ನಟಿ ವೈಷ್ಣವಿ ಬೋಲ್ಡ್​ ಮಾತು: ನಾಚಿ ನೀರಾದ ರಾಮ್​ ಪಾತ್ರಧಾರಿ ಗಗನ್!

ಈ ಘಟನೆ ಎಲ್ಲಿ ನಡೆದದ್ದು ಗೊತ್ತಿಲ್ಲ. ಫೋನಿನಲ್ಲಿ ಯುವಕ ಅದೇ ವಿಷಯ ಮಾತನಾಡುತ್ತಿದ್ದನೋ ಅಥ್ವಾ ಹಿನ್ನೆಲೆಯಿಂದ ಆ ಧ್ವನಿ ಹಾಕಲಾಗಿದ್ಯೋ ಎನ್ನುವುದೂ ಸ್ಪಷ್ಟವಾಗಿಲ್ಲ. ಆದರೆ ಫೋನ್​ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೀಗೆ ಆಗಿದ್ದು, ಹಾವು ನೋಡಿ ಅವನು ಓಡಿದ್ದರಿಂದ ಜನರು ತಮಾಷೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ,  ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಯುವಕನೊಬ್ಬನ ಜೀನ್ಸ್‌ ಪ್ಯಾಂಟ್ ಒಳಗೆ ನಾಗರ ಹಾವು ಹೊಕ್ಕಿಕೊಂಡಿದ್ದ ಘಟನೆ ನಡೆದಿತ್ತು.   ಭಯಬಿದ್ದ ಯುವಕ ರಾತ್ರಿಯಿಡೀ ಕಂಬವೊಂದನ್ನು ಹಿಡಿದು ಸಮಯ ಕಳೆದಿದ್ದ. ಬೆಳಗಾಗುತ್ತಿದ್ದಂತೆಯೇ ಹಾವಾಡಿಗನ ಸಹಾಯದಿಂದ ಪ್ಯಾಂಟ್‌ನೊಳಗಿದ್ದ ಹಾವನ್ನು ಹೊರ ತೆಗೆಯಲಾಗಿತ್ತು.  ಈ ವೇಳೆ ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಗ್ರಾಮಸ್ಥರೆಲ್ಲರೂ ಅಲ್ಲಿ ಜಮಾಯಿಸಿದ್ದರು.


ಈ ಘಟನೆ ಜಾಮಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಕಂದರ್‌ಪುರದಲ್ಲಿ ನಡೆದಿತ್ತು. ಇಲ್ಲಿ ವಿದ್ಯುತ್ ಇಲಾಖೆ ವತಿಯಿಂದ ಕಂಬ ಹಾಗೂ ತಂತಿ ಹಾಕುವ ಕೆಲಸ ನಡೆಯುತ್ತಿತ್ತು. ಕೆಲಸಕ್ಕಿದ್ದ ಕಾರ್ಮಿಕರು ಅದೇ ಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ವೇಳೆ ಉಳಿದುಕೊಂಡಿದ್ದರು. ಹೀಗಿರುವಾಗ ರಾತ್ರಿ ಎಲ್ಲರೂ ಊಟ ರೆಡಿ ಮಾಡಿ, ತಿಂದು ಮಲಗಿದ್ದರು. ಮಲಗಿದ್ದ ಲವ್ಲೇಶ್ ಕುಮಾರ್‌ ಎಂಬಾತನ ಶರ್ಟ್ ಮೂಲಕ ಒಳಗೆ ನುಗ್ಗಿದ ಹಾವು ಆತನ ಪ್ಯಾಂಟ್‌ನೊಳಗೆ ಪ್ರವೇಶಿಸಿದೆ. ಹಾವೊಂದು ಪ್ಯಾಂಟ್‌ನೊಳಗೆ ನುಗ್ಗಿದೆ ಎಂದು ಅರಿತ ಆ ಯುವಕ ಕೂಡಲೇ ಅಲ್ಲೇ ಇದ್ದ ಕಂಬ ಹಿಡಿದು ನಿಂತಿದ್ದ. ಹೀಗಿರುವಾಗ ಆ ನಾಗರಹಾವು ಆತನ ಪ್ಯಾಂಟ್‌ನೊಳಗೇ ಉಳಿದುಕೊಂಡಿದೆ. ಬೆಳಗಾಗುತ್ತಿದ್ದಂತೆಯೇ ಸ್ಥಳೀಯ ಜನರು ಅಲ್ಲಿನ ಹಾವಾಡಿಗನನ್ನು ಕರೆದು ಹಾವನ್ನು ಹೊರ ತೆಗೆಸಿದ್ದಾರೆ. ಈ ಮೂಲಕ ಯುವಕನ ಪ್ರಾಣ ಉಳಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಆಂಬುಲೆನ್ಸ್‌ ಕೂಡಾ ಕರೆಯಲಾಗಿತ್ತು.
 

ಉಫ್​! ಎಂತೆಂಥ ಲವ್​ ಸಂಬಂಧಗಳು ಇವೆಯಪ್ಪಾ? ಇದು ಪಾಕೆಟಿಂಗ್​ ರಿಲೇಷನ್​ಷಿಪ್​ ಅಂತೆ! ಹಾಗಂದ್ರೆ ಏನ್​ ಗೊತ್ತಾ?

 

click me!