ಅಕ್ಕನ ಬಳಿ ಬಂದ್ರೆ ತಂಗಿನೂ ಫ್ರೀ! ಈ ಅವಳಿ ಸಹೋದರಿಯ ವಿಚಿತ್ರ ಬಯಕೆ ಹೀಗಿದೆ ನೋಡಿ...!

By Suchethana D  |  First Published Oct 10, 2024, 8:17 PM IST

ಅಕ್ಕನ ಬಳಿ ಬಂದ್ರೆ ತಂಗಿನೂ ಫ್ರೀ! ಇಬ್ಬರಿಗೂ ಒಬ್ಬನೇ ಬಾಯ್​ಫ್ರೆಂಡ್​​ ಬೇಕಂತೆ. ಇದಕ್ಕೆ ಈ  ಅವಳಿ ಸಹೋದರಿಯ ಏನು ಹೇಳಿದ್ದಾರೆ ನೋಡಿ... 
 


ಒಂಬತ್ತು ತಿಂಗಳು ತಾಯಿಯ ಗರ್ಭದಿಂದ ಹಿಡಿದು 20-25 ವರ್ಷಗಳವರೆಗೆ ಒಟ್ಟಿಗೇ ಬೆಳೆಯುವ ಅವಳಿ-ಜವಳಿ ಮಕ್ಕಳ ಜೀವನವೇ ಬೇರೆ ಮಕ್ಕಳಿಗಿಂತಲೂ ಸ್ವಲ್ಪ ಭಿನ್ನವಾಗಿರುತ್ತದೆ. ಒಂದೇ ರೂಪ, ಒಂದೇ ರೀತಿಯ ಗುಣ ಸಾಕಷ್ಟು ಬಾರಿ ಇಲ್ಲದಿದ್ದರೂ ಹಲವಾರು ಅವಳಿ ಮಕ್ಕಳಲ್ಲಿ ಇರುವ ಅನ್ಯೋನ್ಯತೆ ಬೇರೆ ಮಕ್ಕಳಿಗಿಂತಲೂ ತುಸು ಹೆಚ್ಚೇ ಎಂದು ಹೇಳಬಹುದು. ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆಯುವ ಅವಳಿ ಮಕ್ಕಳು ಅದರಲ್ಲಿಯೂ ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗುವುದು ಎಂದರೆ ಹಲವರಿಗೆ ಇದು ನುಂಗಲಾಗದ ತುತ್ತೇ. ಇದೇ ಕಾರಣಕ್ಕೆ ಬಹುತೇಕ ಅವಳಿ ಮಕ್ಕಳು ಅವಳಿ ಸಹೋದರರನ್ನೇ ಮದುವೆಯಾಗುವುದು ಇದೆ. ಇಲ್ಲವೇ ಒಂದೇ ಮನೆಗೆ ಸೊಸೆಯಾಗಿ ಹೋಗುವುದು ಇದೆ. 

ಆದರೆ ಇಲ್ಲೊಬ್ಬ ಅವಳಿ ಸಹೋದರಿಯರು ಮಾತ್ರ  ವಿಭಿನ್ನ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದೇನೆಂದರೆ, ಸದ್ಯ ಇವರು ಮದುವೆಯ ವಿಷಯ ಹೇಳದಿದ್ದರೂ ಇವರಿಗೆ ಬಾಯ್​ಫ್ರೆಂಡ್​​ ಬೇಕಂತೆ. ಆದರೆ ಆತ ಒಬ್ಬನೇ ಆಗಿರಬೇಕಂತೆ! ಹೌದು. ಸರಿಯಾಗಿಯೇ ಕೇಳಿಸಿಕೊಂಡಿರುವಿರಿ. ಈ ಇಬ್ಬರೂ ಅಕ್ಕ-ತಂಗಿಯರಿಗೆ ಬೇರೆ ಬೇರೆ ಬಾಯ್​ಫ್ರೆಂಡ್ ಬೇಡ್ವಂತೆ. ಇಬ್ಬರೂ ಒಬ್ಬನ ಬಳಿಗೇ ಹೋಗುವುದಂತೆ. ಒಂದರ್ಥದಲ್ಲಿ ಒಂದಕ್ಕೆ ಇನ್ನೊಂದು ಫ್ರೀ ಆಫರ್​ ಕೊಟ್ಟಿದ್ದಾರೆ ಈ ಸಹೋದರಿಯರು. ಅಷ್ಟಕ್ಕೂ ಇವರು ಹೀಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ಇವರು ಇದಾಗಲೇ ಬೇರೆ ಬೇರೆವರ ಜೊತೆ ಡೇಟಿಂಗ್​ ಮಾಡುತ್ತಿದ್ದರಂತೆ. ಆದರೆ ಈ ಅಕ್ಕ-ತಂಗಿ ಸದಾ ಒಟ್ಟಿಗೇ ಇರಬೇಕು ಎಂದು ಬಯಸುವುದನ್ನು ಕಂಡ ಈ ಬಾಯ್​ಫ್ರೆಂಡ್ಸ್​ ಬ್ರೇಕಪ್​ ಮಾಡಿಕೊಂಡ್ರಂತೆ!

Tap to resize

Latest Videos

ಲವರ್​ ಜೊತೆ ಮಾತನಾಡುವಾಗ ಹಾವು ಹೀಗೆ ಮಾಡೋದಾ? ಪ್ಯಾಂಟ್​ ಒಳಗೆ ಮಾಡಿದ್ದೇನು ನೋಡಿ!

ಇದೇ ಕಾರಣಕ್ಕೆ ಬೇರೆ ಬೇರೆ ಬಾಯ್​ಫ್ರೆಂಡ್ಸ್​ ತಮಗೆ ಸರಿ ಬರುವುದಿಲ್ಲ ಎಂದು ಈ ಅವಳಿ ಸಹೋದರಿಯರು ಇಬ್ಬರನ್ನೂ ಒಪ್ಪಿಕೊಳ್ಳೋ ಒಬ್ಬನನ್ನೇ ಹುಡುಕುತ್ತಿದ್ದಾರೆ! ಅಂದಹಾಗೆ ಇವರು ಭಾರತದವರಲ್ಲ. ಭಾರತದಲ್ಲಿನ ಸಾಮಾನ್ಯ ವರ್ಗದ ಮಂದಿ ಹೀಗೆ ಮಾಡುವುದು ಕನಸಿನಲ್ಲಿಯೂ ಎಣಿಸಲು ಸಾಧ್ಯವಿಲ್ಲ ಬಿಡಿ. ತಮ್ಮ ಬಾಯ್​ಫ್ರೆಂಡ್​ ಬೇರೆ ಹುಡುಗಿಯನ್ನು ಹೆಚ್ಚು ಆಸಕ್ತಿಯಿಂದ ನೋಡಿದ್ರೆ ಅಲ್ಲಿಗೇ ಸಂಬಂಧ ಮುರಿದುಕೊಳ್ಳುವವರೂ ಇದ್ದಾರೆ. ಇನ್ನು ಹಂಚಿಕೊಳ್ಳೋದಾ? ಆದರೆ ಇವರು ಆಸ್ಟ್ರೇಲಿಯನ್​ ಅವಳಿ ಯುವತಿಯರು. ವಯಸ್ಸು 20. ಇವರ ಹೆಸರು ಏಪ್ರಿಲ್ ಮತ್ತು ಅಮೆಲಿಯಾ.

ಅಷ್ಟಕ್ಕೂ ಇವರ ಬಾಲ್ಯ ತುಂಬಾ ರೋಚಕವಾಗಿತ್ತಂತೆ.  ಬಾರ್ಬಿ ಡಾಲ್​, ಬೈಸಿಕಲ್​, ಬಟ್ಟೆ ಮತ್ತು ಮೇಕಪ್​ ಎಲ್ಲವನ್ನೂ ಹಂಚಿಕೊಂಡಿದ್ದಾರೆ ಅಂದರೆ ಒಂದನ್ನೇ ಇಬ್ಬರೂ ಹಂಚಿಕೊಂಡವರು. ಸಾಮಾನ್ಯ ಮಕ್ಕಳಂತೆ ಬೇರೆ ಬೇರೆ ಆಟದ ಸಾಮಾನು ಆಡಿದವರಲ್ಲ. ಏನೇ ತಂದರೂ ಒಂದೇ ತಂದು ಅದನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಅದನ್ನೇ ಮುಂದುವರೆಸಿಕೊಂಡು ಬಂದಿರೋ ಈ ಸಹೋದರಿಯರು ಈಗ ಒಬ್ಬನೇ ಬಾಯ್​ಫ್ರೆಂಡ್​ನ ಹುಡುಕಾಟದಲ್ಲಿ ಇದ್ದಾರಂತೆ!  ಹಾಗೆಂದು ತಮ್ಮ ಬಾಯ್​ಫ್ರೆಂಡ್​ ಹೇಗೆ ಇರಬೇಕು ಎನ್ನುವುದನ್ನು ಅವರು ಹೇಳಿದ್ದು, ಇಬ್ಬರಿಗೂ ಒಂದೇ ರೀತಿಯ ಆಸೆ ಇದೆ.  ಅವನು ಎತ್ತರವಾಗಿರಬೇಕು, ಹ್ಯಾಂಡ್ಸಮ್ ಆಗಿರಬೇಕು ಮತ್ತು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರಬೇಕು ಅನ್ನುವುದು ಈ ಸಹೋದರಿಯ ಬಯಕೆ.  ಒಂದೇ ಬಾಯ್​ಫ್ರೆಂಡ್​ ಇದ್ದರೆ  ಯಾವುದೇ ತೊಂದರೆಯಾಗುವುದಿಲ್ಲವಂತೆ.  ನಾವು ಮೂವರೂ ಒಟ್ಟಿಗೆ ಸಮಯ ಕಳೆಯಬಹುದು, ತಿರುಗಾಡಬಹುದು ಮತ್ತು ಮಾತನಾಡಬಹುದು, ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಇವರು! 

ನಮ್ಮ ಮಕ್ಕಳು ಗಾಯತ್ರಿ ಮಂತ್ರ ಹೇಳ್ತಾರೆ, ನಾನು ಬಿಸ್ಮಿಲ್ಲಾ ಎನ್ನುತ್ತೇನೆ... ಶಾರುಖ್​ ಖಾನ್ ಮಾತು ವೈರಲ್​

click me!