
ಈ ಜಗತ್ತಿನಲ್ಲೇ ಪ್ರೀತಿ(Love)ಯಷ್ಟು ಪವರ್‌ಫುಲ್ ಫೋರ್ಸ್ ಮತ್ತೊಂದಿರಲಿಕ್ಕಿಲ್ಲ. ಪ್ರೀತಿಯಲ್ಲಿ ಬೀಳುವುದೇ ಸುಂದರ. ಹಾಗೆ ಪ್ರೀತಿಸಿದವರನ್ನೇ ವಿವಾಹ(Marriage)ವಾಗುವುದು ಮನುಷ್ಯ ಅನುಭವಿಸುವ ಅತ್ಯುತ್ತಮ ಫೀಲಿಂಗ್‌ಗಳಲ್ಲೊಂದು.
ಇಂಥ ಸಂದರ್ಭದಲ್ಲಿ ತಾನು ಹೀಗೆಯೇ ತಯಾರಾಗಬೇಕು, ಇಂಥದೇ ಬಟ್ಟೆ ಹಾಕಬೇಕು, ಅದಕ್ಕೆ ಇಂತಿಂಥ ಆಭರಣಗಳನ್ನೇ ಧರಿಸಬೇಕು ಎಂದು ಹುಡುಗಿಯರು ವರ್ಷಗಳ ಕಾಲ ಕನಸು ಕಂಡಿರುತ್ತಾರೆ. ಅದರಲ್ಲೂ ಈಗಂತೂ ಯಾವ ಹುಡುಗಿ ಬೇಕಾದರೂ ತನ್ನ ವಿವಾಹಕ್ಕೆ ಬಾಲಿವುಡ್ ನಟಿಯರು ತಯಾರಾದಂತೆಯೇ ತಯಾರಾಗಬಲ್ಲಳು. ಅದು ಅಂಥ ಕಷ್ಟದ ವಿಚಾರವಲ್ಲ.
ಸಾಮಾನ್ಯವಾಗಿ ವಧು ಈಗ ರಿಸೆಪ್ಶನ್ ಎಂದರೆ ಹೆವೀ ಲೆಹೆಂಗಾ ಹಾಗೂ ಜುವೆಲ್ಲರಿ (jewellery) ಹಾಕಿಕೊಳ್ಳುವುದು ಕಾಮನ್. ಅದು ಸಿಕ್ಕಾಪಟ್ಟೆ ಭಾರವಾಗಬಲ್ಲದಾದರೂ, ಅದನ್ನು ಹಾಕಿಕೊಳ್ಳುವ ಆಸೆ ಬಿಡುವುದು ಅಷ್ಟು ಸುಲಭದ್ದಲ್ಲ. ಒಂದು ದಿನ ತಾನೇ ಕಷ್ಟವಾದರೂ ನಿಭಾಯಿಸಿಬಿಡೋಣ ಎಂದುಕೊಳ್ಳುತ್ತಾರೆ. ಏಕೆಂದರೆ, ಫೋಟೋಗೆ ಚೆನ್ನಾಗಿ ಬರುವುದು ಮುಖ್ಯ. ಆ ಫೋಟೋ ಜೀವನಪರ್ಯಂತ ಬದುಕಿನ ಬಹುಮುಖ್ಯ ಈವೆಂಟೊಂದರ ನೆನಪಾಗಿ ಇರುತ್ತದೆ.
ಹೀಗೆ ಭಾರದ ಲೆಹೆಂಗಾ ತೊಡುವ ಹುಡುಗಿಯರು ನಿಂತಲ್ಲೇ ನಗುತ್ತಾ ಆರತಕ್ಷತೆಯಲ್ಲಿ ಭಾಗವಹಿಸುತ್ತಾರೆ. ಆದರೆ, ಇಲ್ಲೊಬ್ಬ ವಧು (Bride) ಅತಿ ಭಾರದ ಲೆಹೆಂಗಾ ಧರಿಸಿ, ಸ್ಟೇಜಿಗೆ ಬರಲೇ ಒದ್ದಾಡುವುದನ್ನು ಕಂಡ ವರ(groom) ಕೂಡಲೇ ಆಕೆಯ ಸಹಾಯಕ್ಕೆ ಧಾವಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣ(Social media)ಗಳಲ್ಲಿ ವೈರಲ್ (viral) ಆಗಿದೆ.
Love with Indians: ದೇಸಿ ಹುಡುಗರ ಪ್ರೀತಿಯಲ್ಲಿ ಬೀಳೋ ವಿದೇಶಿ ಬೆಡಗಿಯರು!
ಈಗಾಗಲೇ 146K ವ್ಯೂಸ್ (views) ಗಳಿಸಿರುವ ಈ ವೀಡಿಯೋದಲ್ಲಿ ಅಂಥದ್ದೇನಿದೆ ಗೊತ್ತಾ?
ವಿವಾಹ ಸಮಾರಂಭಕ್ಕಾಗಿ ಸ್ಟೇಜ್‌ಗೆ ಬರುವ ಮಧುಮಗಳು, ಭಾರದ ಲೆಹೆಂಗಾ(lehenga)ಹೊತ್ತು ನಡೆಯಲೇ ಕಷ್ಟ ಪಡುತ್ತಿರುತ್ತಾಳೆ. ಕೂಡಲೇ ಅವಳ ನೆರವಿಗೆ ಬರುವ ಮಧುಮಗ, ಲೆಹೆಂಗಾವನ್ನು ಚೂರು ಎತ್ತಿ ಹಿಡಿದು ಅವಳು ಮುಂದೆ ನಡೆಯಲು ಸಹಾಯ ಮಾಡುತ್ತಾನೆ. ಆ ಸಂದರ್ಭದಲ್ಲಿ ಅವಳ ಕೈಯನ್ನು ಕೂಡಾ ಹಿಡಿದು ನಡೆಸುತ್ತಾನೆ.
ಈಗ ಈ ವೀಡಿಯೋ ಕ್ಯೂಟೆಸ್ಟ್ ಥಿಂಗ್ ಟು ವಿಟ್ನೆಸ್ ಎಂದು ಜನಮೆಚ್ಚುಗೆ ಗಳಿಸುತ್ತದೆ.
ವಿಡಿಯೋ ನೋಡಿದವರೆಲ್ಲ ಹುಡುಗ ಅಂದ್ರೆ ಹೀಗಿರಬೇಕು ಅಂಥ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ಈ ವೀಡಿಯೋವನ್ನು Wedding Planning_witty Wedding ಇನ್ಸ್ಟಾಗ್ರಾಂ(Instagram) ಪೇಜ್ ಶೇರ್ ಮಾಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:
ವೀಡಿಯೋ ನೋಡಿದ ನೆಟ್ಟಿಗರೆಲ್ಲ(Netizens) ವರನನ್ನು ಮೆಚ್ಚಿ ಮಾತಾಡಿದರೆ, ವಧುವಿನ ಅದೃಷ್ಟವನ್ನು ಕೊಂಡಾಡುತ್ತಿದ್ದಾರೆ. ಅದರಲ್ಲೂ ಮಹಿಳಾಮಣಿಗಳಂತೂ ಹುಡುಗನ ಗೆಸ್ಚರ್‌ಗೆ ಫಿದಾ ಆಗಿದ್ದಾರೆ.
'ಶೀ ಈಸ್ ಲಕ್ಕಿ' ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, 'ವೆರಿ ಸ್ವೀಟ್', 'ಸೋ ಸ್ವೀಟ್', 'ಹೀ ಈಸ್ ದ ಕ್ಯೂಟೆಸ್ಟ್' ಎಂಬ ಕಾಮೆಂಟ್‌ಗಳನ್ನು ಬಹಳಷ್ಟು ಜನ ಮಾಡಿದ್ದಾರೆ.
ಮದುವೆ ಗಂಡೆಂದು ದರ್ಪ ತೋರಿಸುವವರ ನಡುವೆ ಅಂಥ ಯಾವ ಹಮ್ಮೂ ಬಿಮ್ಮನ್ನೂ ತೋರಿಸದೆ, ತನ್ನ ಹುಡುಗಿಯ ಕಷ್ಟ ಅರ್ಥ ಮಾಡಿಕೊಂಡು, ಬಹಳ ನ್ಯಾಚುರಲ್ಲಾಗಿ ಬಂದು ಅವಳ ಲೆಹೆಂಗಾ ಹಾಗೂ ಕೈಯನ್ನು ಹಿಡಿದು ನಡೆಸುವ ವರನ ನಡೆ ಹೆಣ್ಣುಮಕ್ಕಳ ಮನಸ್ಸನ್ನು ಗೆದ್ದಿದೆ.
Daddy Issues: ಹೆಣ್ಣುಮಕ್ಕಳಿಗೆ ಕಾಡುವ ಈ ಸಮಸ್ಯೆಗೇನು ಕಾರಣ?
ಈಗಲೇ ಹೀಗೆ ನಡೆಸಿಕೊಳ್ಳುವ ಹುಡುಗ ಮುಂದೆ ಅವಳನ್ನು ಹೂವಿನ ಹಾಸಿಗೆ ಮೇಲೆಯೇ ನಡೆಸುತ್ತಾನೆ, ಇದರಲ್ಲೇ ಆತನ ನಿಜವಾದ ಪ್ರೀತಿ ಕಾಣಿಸುತ್ತದೆ ಎಂದೆಲ್ಲ ಹೊಗಳುತ್ತಿದ್ದಾರೆ.
'ಹುಡುಗ ಹುಡುಗಿಯ ನಡುವೆ ಹಮ್ಮು, ಬಿಮ್ಮು, ನಾ ಹೆಚ್ಚು ಎಂಬ ಭಾವವಿಲ್ಲದಿದ್ದರೆ ಅಂಥ ಜೋಡಿ ಖಂಡಿತವಾಗಿಯೂ ಜೀವನಪೂರ್ತಿ ಸುಖವಾಗಿರುತ್ತದೆ. ಈ ಜೋಡಿಯೂ ಅಂಥದೇ' ಎಂದು ಒಬ್ಬರೆಂದರೆ, 'ಇಂಥಾ ಹುಡುಗ ನನಗೇಕೆ ಸಿಗಲಿಲ್ಲ' ಎಂದು ಕರುಬಿದ್ದಾರೆ ಮತ್ತೊಬ್ಬ ಯುವತಿ.
'ಈ ಹುಡುಗನಿಗೇನಾದರೂ ಟ್ವಿನ್ ಬ್ರದರ್ ಇದ್ದರೆ ನನಗೆ ತಿಳಿಸಿ' ಎಂದು ಮತ್ತೊಬ್ಬಾಕೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.