* ಭಾರತೀಯ ಹುಡುಗರ ಪ್ರೀತಿಗೆ ವಿದೇಶಿ ಹುಡುಗಿಯರು
* ಪ್ರೀತಿಗಾಗಿ ಸಪ್ತ ಸಾಗರ ದಾಟಿ ಬರುತ್ತಿದ್ದಾರೆ ಬೆಡಗಿಯರು
* ಟ್ರೆಂಡ್ ಹೆಚ್ಚಾಗುತ್ತಿರುವ ಹಿಂದಿನ ಕಾರಣವೇನು?
ಮೇರಿ ಲೋರಿ ಹೆರಾಲ್ ಪ್ಯಾರಿಸ್(Paris)ನಿಂದ ಭಾರತಕ್ಕೆ ಬಂದಿದ್ದು ಸುತ್ತಾಡಬೇಕೆಂದು. ದೆಲ್ಲಿಯ ಪ್ರವಾಸಿ ಸ್ಥಳಗಳು, ಅವುಗಳ ವಿಶೇಷವನ್ನು ತಿಳಿಸುತ್ತಿದ್ದ ಬಿಹಾರದ ಟೂರ್ ಗೈಡ್ ರಾಕೇಶ್ ಜೊತೆ ಸುತ್ತುತ್ತಾ ಅವನ ಮೇಲೇ ಮೇರಿಗೆ ಪ್ರೀತಿಯಾಗಿ ಬಿಟ್ಟಿತು. ಬಿಹಾರದ ಪುಟ್ಟ ಹಳ್ಳಿ ಬೆಗುಸರಾಯ್‌ನ ರಾಕೇಶ್ ಕೂಡಾ ಅದಾಗಲೇ ಫ್ರೆಂಚ್ ಬೆಡಗಿಗೆ ಮನಸೋತಿದ್ದ. ಇದೆಲ್ಲ ಆಗಿದ್ದು 6 ವರ್ಷಗಳ ಹಿಂದೆ. ಮೇರಿ ಪ್ಯಾರಿಸ್ಸಿಗೆ ಮರಳಿದ ಮೇಲೂ ರಾಕೇಶ್ ಜೊತೆ ಫೋನ್ ಸಂಪರ್ಕದಲ್ಲಿದ್ದಳು. ಮಾತಾಡುತ್ತಾ ಮಾತಾಡುತ್ತಾ ಇಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಂಡರು.
ಈ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಹೇಗೆ ಮುಂದುವರಿಸುವುದೆಂದು ಯೋಚಿಸಿದ ಮೇರಿ, ರಾಕೇಶ್‌ನನ್ನೇ ಪ್ಯಾರಿಸ್ಸಿಗೆ ಕರೆಸಿಕೊಂಡು ತನ್ನೊಂದಿಗೆ ಟೆಕ್ಸ್‌ಟೈಲ್ ಬಿಸ್ನೆಸ್ ಆರಂಭಿಸಲು ಹೇಳಿದಳು. ಇಬ್ಬರೂ ಒಟ್ಟಾಗಿ ಬಿಸ್ನೆಸ್ ಮಾಡತೊಡಗಿದ ಮೇಲೆ ಅವರ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತಲೇ ಹೋಯಿತು. ಕಡೆಗೆ ಈ ವರ್ಷ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದರು.
ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಿಗೆ ಮಾರು ಹೋಗಿರುವ ಮೇರಿ ಬಿಹಾರದಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ರಾಕೇಶ್‌ನನ್ನು ವಿವಾಹವಾದಳು. ಮೇರಿ ಹಾಗೂ ರಾಕೇಶ್‌ನ ಎರಡೂ ಕುಟುಂಬಗಳು ಮದುವೆಯಲ್ಲಿ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಇನ್ನೊಂದು ವಾರದಲ್ಲಿ ಜೋಡಿ ಪ್ಯಾರಿಸ್ಸಿಗೆ ಮರಳಲಿದೆ. ಇದು ವಿದೇಶದಲ್ಲಿ ಸೆಟಲ್ ಆಗಲು ನಿಶ್ಚಯಿಸಿರುವ ಜೋಡಿಯಾದರೆ, ಭಾರತದಲ್ಲೇ ಇರಬೇಕೆಂದು ಬಯಸಿ ಬರುವ ವಿದೇಶಿ ಹುಡುಗಿಯರ ಸಂಖ್ಯೆಯೂ ಕಡಿಮೆಯೇನಿಲ್ಲ.
13ನೇ ವಯಸ್ಸಿಗೇ 30 ವರ್ಷ ಡೊಡ್ಡವರನ್ನು ಮದುವೆಯಾಗಿದ್ದ ಸರೋಜ್ ಖಾನ್!
ಲೈಸೆಟ್ ಋಷಿಕೇಶಕ್ಕೆ ಬಂದಿದ್ದು ರ್ಯಾಫ್ಟಿಂಗ್(Rafting)ಗಾಗಿ. ಟ್ರಿಪ್ ಮುಗಿಸಿ ತನ್ನ ದೇಶಕ್ಕೆ ಮರಳಿ ವರ್ಷವಾದರೂ Rafting ಟ್ರೇನರ್ ಮೇಲೆ ಅವಳಿಗಾದ ಪ್ರೀತಿ ತಡೆಯುವುದು ಸಾಧ್ಯವಿರಲಿಲ್ಲ. ಕಡೆಗೆ ಟ್ರೇನರ್ ಮುಖೇಶ್ ಜೋಷಿಯನ್ನು ಮದುವೆಯಾಗಿ ಭಾರತದಲ್ಲೇ ನೆಲೆಸಿದಳು. ಇವಳಷ್ಟೇ ಅಲ್ಲ, ಕೇವಲ ಋಷಿಕೇಶವೊಂದರಲ್ಲಿ Rafting ಹಾಗೂ ಯೋಗ ಕಲಿಯಲು ಬರುವ ವಿದೇಶಿ ಹುಡುಗಿಯರು ಅಲ್ಲಿಯ ಲೋಕಲ್ ಹುಡುಗರನ್ನೇ ಮದುವೆಯಾಗಿ ಅಲ್ಲೇ ನೆಲೆಸುವುದು ಸ್ಥಳೀಯರಿಗಂತೂ ಹಳತಾಗಿ ಹೋಗಿರುವ ವಿಷಯ. ನಾಲ್ಕೈದು ವರ್ಷಗಳಲ್ಲಿ ಸುಮಾರು 50 ಇಂತಹ ವಿವಾಹಗಳಿಗೆ ಋಷಿಕೇಶ ಸಾಕ್ಷಿಯಾಗುತ್ತದೆ.
ನಂಬಿಕೆಗರ್ಹರು
ಹೀಗೆ ವಿವಾಹವಾದ ವಿದೇಶಿ ಹುಡುಗಿಯರನ್ನು ಕೇಳಿದಾಗ ಬರುವ ಉತ್ತರ ಭಾರತೀಯರು ನಂಬಿಕೆಗರ್ಹರು ಎಂಬುದು. ಹೌದು ಈ ಲೈಸೆಟ್‌ಳನ್ನೇ ಕೇಳಿದರೆ ಅವಳು ಹೇಳುವುದಿಷ್ಟು, ''ಅವನಿಗೆ ನನ್ನ ಮೇಲಿರುವ ಪ್ರೀತಿ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತದೆ ಎಂಬುದು ನನಗೆ ಗೊತ್ತು. ಅವನು ಅಷ್ಟು ಸುಲಭವಾಗಿ ನನ್ನ ಬಿಡಲಾರ. ಬೇರೊಬ್ಬ ಹೆಣ್ಣಿನ ಕಡೆ ದೃಷ್ಟಿ ಹರಿಸಲಾರ. ಏಕೆಂದರೆ ಒಬ್ಬಳನ್ನೇ ವಿವಾಹವಾಗುವುದು ಭಾರತೀಯ ಸಂಸ್ಕೃತಿಯಲ್ಲೇ ಇದೆ. ಹೀಗಾಗಿ, ಇಲ್ಲಿನ ಹೆಚ್ಚಿನ ಯುವಕರ ಸ್ವಭಾವವೇ ಹಾಗಿರುತ್ತದೆ.''
ಪ್ರೀತಿಯಲ್ಲಿ ಬೀಳುವುದಕ್ಕಿಂತ ಸುಂದರವಾದ ಸಂಗತಿ ಈ ಭೂಮಿ ಮೇಲೆ ಮತ್ತೊಂದಿರಲಾರದು. ಆದರೆ, ಪ್ರೀತಿಸಿದವನು ಯಾವಾಗ ಬಿಟ್ಟು ಹೋಗುತ್ತಾನೋ ಎಂಬ ಭಯದಲ್ಲೇ ಬದುಕುವುದು ಅತಿ ಕಷ್ಟದ ವಿಷಯ. ಭಾರತೀಯ ಯುವಕರನ್ನು ನಂಬಿದರೆ ಇಂಥ ಭಯಕ್ಕೆ ಆಸ್ಪದವಿಲ್ಲ ಎಂಬುದು ವಿದೇಶಿ ಹೆಣ್ಣುಮಕ್ಕಳ ಮನಸ್ಸಿನ ಲೆಕ್ಕಾಚಾರ.
Relationship : ಈ ಅಭ್ಯಾಸಗಳಿದ್ರೆ Boy Friend ಖಂಡಿತಾ ನಿಮ್ಮಿಂದ ದೂರ ಹೋಗ್ತಾರೆ
ಒಂಟಿತನ ಕಾಡದು
ಅಲ್ಲದೆ, ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲಿ ಅತಿಯಾದ ಖಾಸಗಿತನವಿಲ್ಲ. ಕುಟುಂಬದಲ್ಲಿ ಹಿರಿಕಿರಿಯರೆಲ್ಲರೂ ಒಟ್ಟಿಗೇ ಬದುಕುತ್ತಾರೆ. ಹಾಗಾಗಿ, ಇಲ್ಲಿ ಖಿನ್ನತೆ(Depression)ಅಥವಾ ಒಂಟಿತನಕ್ಕೆ ಆಸ್ಪದ ಕಡಿಮೆ ಎನ್ನುವುದು ಮತ್ತೊಬ್ಬ ಭಾರತೀಯ ಸೊಸೆ ಎಮಿಲಿಯ ವಿವರಣೆ. ವಿದೇಶದಲ್ಲಿ ಬೆಳೆದ ಯುವತಿಯರು ಸ್ಟೇಬಲ್ ಮ್ಯಾರೇಜ್ (Stable marriage) ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಅಲ್ಲಿನ ಜೀವನಶೈಲಿಯೇ ಅಂಥದ್ದು. ಹಾಗಾಗಿ, ಸ್ಟೇಬಲ್ ಮ್ಯಾರೇಜ್ ಎನ್ನುವುದು ಅಲ್ಲಿನ ಬಹುತೇಕ ಹೆಣ್ಣುಮಕ್ಕಳ ಕನಸು. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿ ಅವರನ್ನು ಆಕರ್ಷಿಸುವುದು.
\ಹಾಗಾಗಿಯೇ ಅವರು ಭಾರತೀಯ ಯುವಕರ ಕೈ ಹಿಡಿದು ಇಲ್ಲಿಯೇ ಬಂದು ನೆಲೆಸಲು ಬಯಸುವುದು. ಹೀಗೆ ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿಗೆ ಮಾರು ಹೋಗಿ ಬರುವ ವಿದೇಶಿ ಯುವತಿಯರು ತಮ್ಮನ್ನು ಭಾರತೀಯರಂತೆಯೇ ಸಿಂಗರಿಸಿಕೊಳ್ಳಲು ಬಯಸುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಅಡುಗೆ ಕಲಿತು ಒಪ್ಪವಾಗಿ ಮನೆ ನಿರ್ವಹಿಸಿಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚಿದೆ.
'ಅದು ನಂದು, ಇದು ನಿಂದು' ಎಂದು ರೇಖೆ ಎಳೆದುಕೊಂಡು ಬದುಕುವ ಜೀವನ ನೋಡಿದ ವಿದೇಶಿ ಹೆಣ್ಮಕ್ಕಳಿಗೆ ಎಲ್ಲರೂ ಎಲ್ಲವನ್ನೂ ಹಂಚಿ ಬದುಕುವ ಇಲ್ಲಿನ ಸಂಸ್ಕೃತಿಯೂ ಇಷ್ಟವಂತೆ. ಈ ಮಿಕ್ಸ್ಡ್ ಮ್ಯಾರೇಜ್ ಟ್ರೆಂಡ್(Trend) ನಿಲ್ಲುವಂಥದ್ದಲ್ಲ. ಏಕೆಂದರೆ ಎಷ್ಟೇ ಕಾರಣಗಳನ್ನು ಹುಡುಕಿದರೂ ಪ್ರೀತಿ ಜಾತಿ, ಧರ್ಮ, ಊರು ಪ್ರವರ ಹೇಳಿ ಕೇಳಿ ಆಗುವಂಥದ್ದಲ್ಲ.