Viral News : 24 ಗಂಟೆ 130 ಕಿ.ಮೀ ಸೈಕಲ್ ಓಡಿಸಿದ ಬಾಲಕ, ಕಾರಣ ಕೇಳಿದ್ರೆ ದಂಗಾಗ್ತೀರಿ!

By Suvarna News  |  First Published Apr 12, 2023, 1:55 PM IST

ಪಾಲಕರ ಜೊತೆ ಜಗಳವಾದಾಗ ಮಕ್ಕಳು ಕೋಪದಲ್ಲಿ ಬೆದರಿಸುವ ಪ್ರಯತ್ನ ನಡೆಸ್ತಾರೆ. ಅದು ಮಾಡ್ತಿನಿ, ಇದು ಮಾಡ್ತಿನಿ ಅಂತಾ ಬೆದರಿಸ್ತಾರೆ. ಆದ್ರೆ ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸೋದಿಲ್ಲ. ಕೆಲ ಜಿದ್ದಿನ ಮಕ್ಕಳು ತಾವು ಹೇಳಿದ್ದನ್ನು ಮಾಡಿ ತೋರಿಸಲು ಹೋಗಿ ಯಡವಟ್ಟು ಮಾಡಿಕೊಳ್ತಾರೆ. ಈ ಬಾಲಕ ಕೂಡ ದೊಡ್ಡ ಸಾಹಸಕ್ಕೆ ಕೈ ಹಾಕಿ ಸುದ್ದಿಯಾಗಿದ್ದಾನೆ. 
 


ಮೊಮ್ಮಕ್ಕಳೆಂದ್ರೆ ಯಾವಾಗ್ಲೂ ಅಜ್ಜ – ಅಜ್ಜಿಗೆ ಅತೀವ ಮುದ್ದಿರುತ್ತದೆ. ತಮ್ಮ ಮಕ್ಕಳು ಚಿಕ್ಕವರಿರುವಾಗ ಬರೆ ಬೀಳುವಂತೆ ಹೊಡೆದಿದ್ರೂ ಈಗ ತಮ್ಮ ಮಕ್ಕಳು, ಅವರ ಮಕ್ಕಳಿಗೆ ಹೊಡೆಯಬಾರದು, ಮೊಮ್ಮಕ್ಕಳಿಗೆ ನೋವಾಗಬಾರದು ಎಂಬ ರೂಲ್ಸನ್ನು ಅಜ್ಜ – ಅಜ್ಜಿ ಪಾಲನೆ ಮಾಡ್ತಾರೆ. ಇದೇ ಕಾರಣಕ್ಕೆ ಮೊಮ್ಮಕ್ಕಳು ಅಜ್ಜಿ – ಅಜ್ಜ ಕಂಡ್ರೆ ಸ್ವಲ್ಪ ಹೆಚ್ಚಿಕೊಳ್ತಾರೆ. ಅಪ್ಪ – ಅಮ್ಮನ ಬಗ್ಗೆ ಅವರು ತಮ್ಮ ಅಜ್ಜಿ – ಅಜ್ಜನ ಮುಂದೆ ದೂರು ಹೇಳೋದನ್ನು ಕೂಡ ನೀವು ಕೇಳಿರಬಹುದು. ತಾಯಿ ಹೊಡೆಯಲು ಬಂದ್ರೆ ಅಜ್ಜಿ ಸೆರಗಿನಡಿ ಅವಿತುಕೊಳ್ತಿದ್ದ ಮೊಮ್ಮಕ್ಕಳ ಸಂಖ್ಯೆ ಸಾಕಷ್ಟಿದೆ. ತಾಯಿ ಹೊಡೆದ್ರೆ ಮಕ್ಕಳು ಅಜ್ಜಿಗೆ ದೂರು ನೀಡಲು ಫೋನೆತ್ತಿಕೊಳ್ತಾರೆ. ಆದ್ರೆ ಈ ಹುಡುಗ ಸೈಕಲ್ ಹಿಡಿದು ಹೊರಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಚೀನಾ ಹುಡುಗನ ಸುದ್ದಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಅಮ್ಮನ ಮೇಲೆ ಕೋಪಗೊಂಡ ಆತ ಮಾಡಿದ್ದೇನು ಎಂಬುದನ್ನು ನಾವು ಹೇಳ್ತೇವೆ.

ಚೀನಾ (China) ದಲ್ಲಿ 11 ವರ್ಷದ ಬಾಲಕ ಸೈಕಲ್ ಹತ್ತಿ ಸುದ್ದಿ ಮಾಡಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಈ ಹುಡುಗ ತನ್ನ ಉದ್ದೇಶವನ್ನು ಪೂರೈಸಲು ಸುಮಾರು 24 ಗಂಟೆಗಳ ಕಾಲ ಸೈಕಲ್ (Bicycle)  ಓಡಿಸಿದ್ದಾನೆ. ಚೀನಾದ ಮಾಧ್ಯಮಗಳ ಪ್ರಕಾರ, ಬಾಲಕ ಸೈಕಲ್ ಏರಿ 24 ಗಂಟೆ ಪ್ರಯಾಣ ಬೆಳೆಸಿದ್ದು ತನ್ನ ಅಜ್ಜಿಯನ್ನು ಭೇಟಿಯಾಗಲು. ಅಜ್ಜಿಮನೆಗೆ ಹೋಗಲು ಆತ ನೀಡಿದ ಕಾರಣ ಬೆಚ್ಚಿ ಬೀಳಿಸುವಂತಿದೆ. ತಾಯಿಯ ಬಗ್ಗೆ ದೂರು ನೀಡಲು ಬಾಲಕ (Boy) ಸೈಕಲ್‌ನಲ್ಲಿ 130 ಕಿಮೀ ದೂರದ ಪ್ರಯಾಣವನ್ನು ಸೈಕಲ್ ನಲ್ಲಿ  ಪೂರ್ಣಗೊಳಿಸಿದ್ದಾನೆ.  

Latest Videos

undefined

ನಿಮ್ಮ ವೈವಾಹಿಕ ಜೀವನದಲ್ಲೂ ಹೀಗಾಗ್ತಾ ಇದ್ಯಾ? ಅಂತಹ ಸಂಬಂಧ ಬೇಡವೇ ಬೇಡ…

ಮಾಹಿತಿ ಪ್ರಕಾರ, 24 ಗಂಟೆಗಳ ಕಾಲ ನಿರಂತರವಾಗಿ ಸೈಕ್ಲಿಂಗ್ ಮಾಡಿದ ಪರಿಣಾಮ ಬಾಲಕ ಸುಸ್ತಾಗಿದ್ದಾನೆ. ಎಕ್ಸ್ ಪ್ರೆಸ್‌ವೇ ಸುರಂಗದಲ್ಲಿ ಆತನನ್ನು ಕಂಡ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕನನ್ನು ವಿಚಾರಿಸಿದ್ದಾರೆ. ಬಾಲಕ ಕೊಟ್ಟ ಕಾರಣ ಕೇಳಿ ಪೊಲೀಸರಿಗೆ ಅಚ್ಚರಿಯಾಗಿದೆ. ಬಾಲಕನಿಗೆ ನಡೆಯುವಷ್ಟು ಶಕ್ತಿ ಇರಲಿಲ್ಲ. ಆತ ಅಲ್ಲಿಯೇ ಕುಸಿದು ಕುಳಿತಿದ್ದ. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಜ್ಜಿ ಹಾಗೂ ತಾಯಿ ಅಲ್ಲಿಗೆ ಬಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 

ತಾಯಿ ಜೊತೆ ಜಗಳವಾಡಿದ ನಂತ್ರ ಆತ ಸೈಕಲ್ ಹತ್ತಿದ್ದಾನೆ. ಸೈಕಲ್ ಏರಿ ಪ್ರಯಾಣ ಬೆಳೆಸುವ ಮೊದಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾನೆ. ನೀರು ಹಾಗೂ ಬ್ರೆಡ್ ಬ್ಯಾಗ್ ನಲ್ಲಿ ತುಂಬಿದ್ದಾನೆ. ರಾತ್ರಿ ಪೂರ್ತಿ ಸೈಕಲ್ ಓಡಿಸಿರುವ ಬಾಲಕ, ಮಧ್ಯ ಮಧ್ಯ ನೀರು ಹಾಗೂ ಬ್ರೆಡ್ ಸೇವನೆ ಮಾಡಿದ್ದಾನೆ. ಝೆಜಿಯಾಂಗ್‌ನ ಕೌಂಟಿಯಾದ ಮೈಜಿಯಾಂಗ್‌ನಲ್ಲಿರುವ ತನ್ನ ಅಜ್ಜಿಯ ಮನೆಗೆ ಆತ ಹೊರಟಿದ್ದ.  ಅಜ್ಜಿಯ ಮನೆ ತಲುಪಲು ರಸ್ತೆ ಬದಿಯ ಫಲಕಗಳ ಸಹಾಯವನ್ನು ಬಾಲಕ ಪಡೆದಿದ್ದಾರೆ. ಆದ್ರೆ ಕೆಲವೆಡೆ ದಾರಿ ತಪ್ಪಿದ್ದಾನೆ. ಇದೇ ಕಾರಣಕ್ಕೆ ಆತ ಅಜ್ಜಿ ಮನೆಗೆ ಬರುವುದು ಕಷ್ಟವಾಗಿದೆ. ಅಜ್ಜಿ ಮನೆ ತಲುಪಲುಬೇಕಾದ ಸಮಯಕ್ಕಿಂತ ಎರಡು ಪಟ್ಟು ಸಮಯ ಈತನಿಗೆ ಹಿಡಿದಿದೆ. ಕೋಪದಲ್ಲಿ ಬಾಲಕ, ಅಜ್ಜಿ ಮನೆಗೆ ಹೋಗ್ತೇನೆಂದು ತಾಯಿಗೆ ಹೇಳಿದ್ದನಂತೆ. ತಾಯಿ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಶ್.... ಲೈಂಗಿಕತೆ ವೇಳೆ ನೀವೂ ಹೀಗೆಲ್ಲಾ ಹೇಳ್ತೀರಾ ಚೆಕ್ ಮಾಡಿಕೊಳ್ಳಿ!

ಸಾಮಾಜಿಕ ಜಾಲತಾಣ ಬಳಕೆದಾರರು ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಕಮೆಂಟ್ ಗಳ ಮಹಾಪೂರ ಹರಿದು ಬಂದಿದೆ. ಅಜ್ಜಿ ಆಕೆ ಮಗಳಿಗೆ ಹೇಗೆ ಪಾಠ ಹೇಳಿದ್ರು ಎಂಬುದನ್ನು ತಿಳಿಯುವ ಕುತೂಲವಿದೆ ಎಂದು ವ್ಯಕ್ತಿಯೊಬ್ಬ ಬರೆದಿದ್ದಾನೆ. ಬಾಲಕ ಮೇಧಾವಿ. ರಸ್ತೆ ಫಲಕ ಬಳಸಿ ಪ್ರಯಾಣ ಬೆಳೆಸುವ ಸಾಮರ್ಥ್ಯ ಆತನಿಗಿದೆ. ಅದೂ ರಾತ್ರಿಯಲ್ಲಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

click me!