ಮನೆಯಲ್ಲಿ ಮಕ್ಕಳಿಲ್ಲ, ಸಂಬಂಧಿಕರು, ಆಪ್ತರಿಲ್ಲ ಎಂದಾಗ ವಿಲ್ ಬರೆಯುವ ಜನರು ನೂರು ಬಾರಿ ಆಲೋಚನೆ ಮಾಡ್ತಾರೆ. ಯಾರಿಗೆ ಆಸ್ತಿ ನೀಡಬೇಕೆಂಬ ಪ್ರಶ್ನೆ ಅವರನ್ನು ಕಾಡುತ್ತದೆ. ಆದ್ರೆ ಈ ಶ್ರೀಮಂತ ಇಡೀ ದೇಶವೇ ತಲೆಕೆಡಿಸಿಕೊಳ್ಳುವಂತೆ ವಿಲ್ ಬರೆದು ದಂಗುಬಡಿಸಿದ್ದಾನೆ.
ಜನರು ಶ್ರೀಮಂತರಾಗ್ಬೇಕೆಂದು ಬಯಸ್ತಾರೆ. ಜೀವನಪರ್ಯಂತ ಹಗಲು – ರಾತ್ರಿ ದುಡಿದು ಹಣ ಸಂಪಾದಿಸುತ್ತಾರೆ. ಸಾಯುವಾಗ ಯಾರೂ ಹಣ ತೆಗೆದುಕೊಂಡು ಹೋಗೋದಿಲ್ಲ. ಜೀವಂತವಿದ್ದಾಗ ಸುಖ ಅನುಭವಿಸುವ ಜನರು ಸತ್ತ ಮೇಲೆ ನಮ್ಮ ಆಸ್ತಿ ಯಾರ ಪಾಲಾಗಬೇಕು ಅಂತ ವಿಲ್ ಬರೆದಿಡುತ್ತಾರೆ. ವ್ಯಕ್ತಿಗಳು ಸತ್ತಾಗ ಅವರ ವಿಲ್ ನೋಡಿ ಅವರ ಆಸ್ತಿಯನ್ನು ವಿಲ್‌ನಲ್ಲಿರುವಂತೆ ಹಂಚುತ್ತಾರೆ. ಕೆಲವರು ವಿಲ್ ಮೂಲಕ ಮಕ್ಕಳಿಗೆ ಶಾಕ್ ನೀಡ್ತಾರೆ. ಆಪತ್ಕಾಲದಲ್ಲಿ ಮಕ್ಕಳು ತಮ್ಮನ್ನು ನೋಡಿಕೊಂಡಿಲ್ಲ ಎನ್ನುವ ಕಾರಣಕ್ಕೆ ಕೆಲ ಪಾಲಕರು ತಮ್ಮ ಆಸ್ತಿಯನ್ನು ಬೇರೆಯವರಿಗೆ ಬರೆಯುವುದಿದೆ. ಇನ್ನು ಕೆಲವರು ಆಶ್ರಮ, ಸಂಘ – ಸಂಸ್ಥೆಗೆ ಆಸ್ತಿ ಬರೆಯುತ್ತಾರೆ. ಕುಟುಂಬದಲ್ಲಿ ಯಾರೂ ಇಲ್ಲ ಎನ್ನುವ ಅನಾಥರು ಕೂಡ ತಮ್ಮ ಆಸ್ತಿಯನ್ನು ಆಪ್ತರಿಗೆ ಅಥವಾ ಸಂಘ – ಸಂಸ್ಥೆಗೆ ಬರೆಯುತ್ತಾರೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತನ್ನ ಆಸ್ತಿಯನ್ನು ಸಾಕು ನಾಯಿಗೆ ಬರೆದಿದ್ದಳು. ಈಗ ಕೋಟ್ಯಾಧಿಪತಿಯೊಬ್ಬನ ಉಯಿಲು ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ.
ಶ್ರೀಮಂತ (Rich) ವ್ಯಕ್ತಿ ಬರೆದ ಉಯಿಲು ಎಲ್ಲರನ್ನೂ ದಂಗಾಗಿಸಿದೆ. ಸರ್ಕಾರ (Govt) ಕ್ಕೆ ಕೂಡ ಏನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ. ಕೋಟ್ಯಾಧಿಪತಿ (Billionaire) ಉಯಿಲು ಜನರ ಮಧ್ಯೆ ಗಲಾಟೆ ಸೃಷ್ಟಿಸಿದ್ದು, ಕೊನೆಗೂ ನ್ಯಾಯಾಲಯ ಮಧ್ಯಪ್ರವೇಶ ಮಾಡಿದೆ. ಆ ನಂತ್ರ ಅರ್ಹರಿಗೆ ಶ್ರೀಮಂತನ ಆಸ್ತಿಯನ್ನು ಹಂಚಲಾಗಿದೆ. ಅಷ್ಟಕ್ಕೂ ಆತನ ಉಯಿಲಿನಲ್ಲಿ ಇದ್ದಿದ್ದು ಏನು ಗೊತ್ತಾ?
ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ
ಈ ಘಟನೆ ನಡೆದಿರೋದು ಕೆನಡಾದಲ್ಲಿ. ಚಾರ್ಲ್ಸ್ ವ್ಯಾನ್ಸ್ ಮಿಲ್ಲರ್ ಯಶಸ್ವಿ ವಕೀಲ. ಚಾರ್ಲ್ಸ್ ವ್ಯಾನ್ಸ್ ಮಿಲ್ಲರ್ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾನೆ. ಸರಿಯಾಗಿ ಲೆಕ್ಕ ಹಾಕಿದ್ರೆ ಚಾರ್ಲ್ಸ್ ವ್ಯಾನ್ಸ್ ಮಿಲ್ಲರ್ ಬಳಿ 83 ಕೋಟಿ ರೂಪಾಯಿ ಆಸ್ತಿ ಇತ್ತು. ಆದ್ರೆ ಆತನಿಗೆ ಉತ್ತರಾಧಿಕಾರಿ ಇರಲಿಲ್ಲ. ಮಕ್ಕಳು, ಸಂಬಂಧಿಕರು ಯಾರೂ ಇರಲಿಲ್ಲ. ಹಾಗಾಗಿ ಉಯಿಲು ಬರೆದ ಚಾರ್ಲ್ಸ್ ವ್ಯಾನ್ಸ್ ಮಿಲ್ಲರ್ ಟೊರೊಂಟೊದ ಕುಟುಂಬಕ್ಕೆ ನೀಡಿದ್ದರು. ಹಾಸ್ಯದ ಸ್ವಭಾವ ಹೊಂದಿದ್ದ ಚಾರ್ಲ್ಸ್ ವ್ಯಾನ್ಸ್ ಮಿಲ್ಲರ್, ವಿಲ್ ಮೂಲಕ ದೊಡ್ಡ ಹಾಸ್ಯ ಮಾಡಿದ್ದರು. ಹತ್ತು ವರ್ಷದಲ್ಲಿ ಅತಿ ಹೆಚ್ಚು ಮಕ್ಕಳನ್ನು ಪಡೆಯುವ ಕುಟುಂಬಕ್ಕೆ ತನ್ನ ಆಸ್ತಿ ಹಂಚುವಂತೆ ಅವರು ವಿಲ್ ಬರೆದಿದ್ದರು.
ಈ ಘಟನೆ ಈಗಿನದ್ದಲ್ಲ. 1926ರಲ್ಲಿ ನಡೆದಿದ್ದು. ಚಾರ್ಲ್ಸ್ ವಿಲ್ ಬಗ್ಗೆ ಸುದ್ದಿ ತಿಳಿದಿದ್ದೇ ಜನರು ಹೆಚ್ಚು ಮಕ್ಕಳನ್ನು ಪಡೆಯಲು ತಯಾರಿ ನಡೆಸಿದ್ರು. ಆಸ್ತಿ ಮೇಲೆ ಆಸೆ ಬೆಳೆಸಿಕೊಂಡ ಜನರು ಸ್ಪರ್ಧೆಯಂತೆ ಮಕ್ಕಳನ್ನು ಪಡೆಯಲು ಶುರು ಮಾಡಿದ್ದರು. ಇದಕ್ಕೆ ಸ್ಟೋರ್ಕ್ ಡರ್ಬಿ ಎಂದು ಕರೆಯಲಾಗುತ್ತಿತ್ತು. ಸಂತಾನೋತ್ಪತ್ತಿ ಹೆಚ್ಚಿಸಿಕೊಳ್ಳಲು ಜನರು ಮಾತ್ರೆ ಸೇವನೆ ಶುರು ಮಾಡಿದ್ದರು. ಕೆಲ ಮಹಿಳೆಯರು ಹೆರಿಗೆಯಾದ ಕೆಲವೇ ತಿಂಗಳಲ್ಲಿ ಮತ್ತೆ ಗರ್ಭಧರಿಸಲು ಶುರು ಮಾಡಿದ್ದರು. ಇದು ಸರ್ಕಾರಕ್ಕೆ ದೊಡ್ಡ ತಲೆಬಿಸಿಯಾಯ್ತು. ಹತ್ತು ವರ್ಷದ ಅವಧಿಯನ್ನು ಆರು ವರ್ಷಕ್ಕೆ ಇಳಿಸಿದ ಸರ್ಕಾರ, ಆಸ್ತಿಯನ್ನು ಟೊರಾಂಟೊ ವಿಶ್ವವಿದ್ಯಾನಿಲಯಕ್ಕೆ ಇದನ್ನು ನೀಡುವ ಘೋಷಣೆ ಮಾಡಿತ್ತು. ಆದ್ರೆ ಮಕ್ಕಳನ್ನು ಹೆತ್ತಿದ್ದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಹಾಗಾಗಿ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯಿತು.
ಮಕ್ಕಳು ಬ್ರಶ್ ಮಾಡುವಾಗ ಎಷ್ಟು ಪೇಸ್ಟ್ ಬಳಸ್ಬೇಕು?
ನಂತ್ರ ಮತ್ತೆ ಮಕ್ಕಳ ಸ್ಪರ್ಧೆ ಜೋರಾಯ್ತು. ಅನೇಕ ಬಡ ಕುಟುಂಬಗಳು ಮಕ್ಕಳಿಗೆ ಜನ್ಮ ನೀಡಿದ್ದವು. ಆದ್ರೆ ಸರಿಯಾದ ಆರೈಕೆ ಇಲ್ಲದೆ ಮಕ್ಕಳು ಸಾವನ್ನಪ್ಪಿದ್ದವು. 9 ಮಕ್ಕಳಿಗೆ ಜನ್ಮ ನೀಡಿದ ಆರು ಕುಟುಂಬಗಳನ್ನು ಪತ್ತೆ ಮಾಡಿದ ಕೋರ್ಟ್ ಚಾರ್ಲ್ಸ್ ಆಸ್ತಿಯನ್ನು ಅವರಿಗೆ ಹಂಚಿತು.