
Google Employee Left Job: ಗೂಗಲ್ ಉದ್ಯೋಗಿಯೊಬ್ಬರು 34 ಮಿಲಿಯನ್ (ಸುಮಾರು $3.4 ಮಿಲಿಯನ್) ಸಂಬಳದ ಹೊರತಾಗಿಯೂ, ತಮ್ಮ ಬಾಯ್‌ಫ್ರೆಂಡ್ ಜೊತೆ ಉತ್ತಮ ಸಮಯ ಕಳೆಯಲು ಟೈಮ್ ಸಿಗುತ್ತಿಲ್ಲ ಎನ್ನುವ ಕಾರಣ ಉಲ್ಲೇಖಿಸಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎನ್‌ಬಿಸಿ ವರದಿಯ ಪ್ರಕಾರ, ಗೂಗಲ್‌ನ ಜ್ಯೂರಿಚ್ ಕಚೇರಿಯ ಸೀನಿಯರ್ ಪ್ರೋಗ್ರಾಮ್ ಮ್ಯಾನೇಜರ್ ಫ್ಲಾರೆನ್ಸ್ ಪೊಯ್ರೆಲ್ ಅವರು ಸಮತೋಲಿತ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬಯಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
37 ವರ್ಷದ ಪೊಯ್ರೆಲ್, ತನ್ನ ಕಾರ್ಪೊರೇಟ್ ಜೀವನದಲ್ಲಿ ದಣಿದಿಲ್ಲ ಅಥವಾ ಅತೃಪ್ತಿ ಹೊಂದಿಲ್ಲ ಎಂದಿದ್ದಾರೆ. "ನಾನು ಎದ್ದುಹೋದಾಗ, ನಾನು ಸ್ವಲ್ಪವೂ ದಣಿದಿರಲಿಲ್ಲ. ತಂಡವು ಅದ್ಭುತವಾಗಿತ್ತು. ಕೆಲಸ ಅದ್ಭುತವಾಗಿತ್ತು, ಆದರೆ ನನಗೆ ಸ್ಪಷ್ಟತೆಯ ಕೊರತೆಯಿತ್ತು" ಎಂದು ಅವರು ಸಿಎನ್‌ಬಿಸಿ ಮೇಕ್ ಇಟ್‌ಗೆ ತಿಳಿಸಿದ್ದಾರೆ. "ನಾನು ಪ್ರೀತಿಸುವ ಜನರೊಂದಿಗೆ ಕಳೆಯುವ ಸಮಯವೇ ಅತ್ಯಂತ ಮುಖ್ಯ ಎಂದು ನಾನು ಅರಿತುಕೊಂಡೆ. ನನ್ನ ಸಂಗಾತಿ ಕೂಡ ಗೂಗಲ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ನನಗಿಂತ 17 ವರ್ಷ ಹಿರಿಯರು. ಅವರೊಂದಿಗೆ ಸಮಯ ಕಳೆಯಲು ನಾನು ನಿವೃತ್ತಿಯಾಗುವವರೆಗೂ ಕಾಯಲು ಸಾಧ್ಯವಿಲ್ಲ" ಎಂದು ಆ ಮಹಿಳೆ ಹೇಳಿದ್ದಾರೆ.
ಗೂಗಲ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದ ನಂತರ, ಪೊಯ್ರೆಲ್ ಕಂಪನಿಯ ಯುರೋಪಿಯನ್ ಆಫೀಸ್‌ಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿದ್ದರು. ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ವೃತ್ತಿಜೀವನ ಆರಂಭಿಸಿದ್ದ ಪೋಯ್ರೆಲ್, ನಂತರ ಜ್ಯೂರಿಚ್‌ಗೆ ಶಿಫ್ಟ್ ಆಗಿದ್ದರು. 2024 ರ ಹೊತ್ತಿಗೆ, ಅವರ ವಾರ್ಷಿಕ ವೇತನವು ಸುಮಾರು $3.9 ಲಕ್ಷ (ಸುಮಾರು 3.40 ಕೋಟಿ) ಎಂದು ಅಂದಾಜಿಸಲಾಗಿದೆ. ಆದರೆ ಅವರು FIRE ಚಳುವಳಿಯ ಬಗ್ಗೆ (ಆರ್ಥಿಕ ಸ್ವಾತಂತ್ರ್ಯ ಮತ್ತು ಆರಂಭಿಕ ನಿವೃತ್ತಿ, ಫೈನಾನ್ಶಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ) ತಿಳಿದಾಗ, ಅವರು ತಮ್ಮ ಜೀವನದ ಆದ್ಯತೆಗಳನ್ನು ಪುನರ್ವಿಮರ್ಶಿಸಲು ನಿರ್ಧರಿಸಿದರು.
ಜನವರಿ 2024 ರ ಹೊತ್ತಿಗೆ, ಅವರು $1.5 ಮಿಲಿಯನ್ (12.6 ಕೋಟಿ) ಉಳಿಸಿದ್ದರು. ಇದು ನನ್ನ ಮಿನಿ ರಿಟೈರ್‌ಮೆಂಟ್‌ಗೆ ಹಣ ಸಾಕಾಗುತ್ತದೆ.ಕೆಲ ತಿಂಗಳುಗಳ ನಂತರ ಅಂದರೆ ಏಪ್ರಿಲ್‌ನಲ್ಲಿಅವರು ಮತ್ತು ಅವರ ಸಂಗಾತಿ ತಮ್ಮ ಉದ್ಯೋಗಗಳನ್ನು ತೊರೆದು ಪ್ರಯಾಣಕ್ಕಾಗಿ ಕನಿಷ್ಠ 18 ತಿಂಗಳುಗಳ ರಜೆ ತೆಗೆದುಕೊಂಡು ಪ್ರವಾಸಕ್ಕೆ ಹೋಗಿದ್ದರು
ಇತ್ತೀಚಿನ ದಿನಗಳಲ್ಲಿ, ಪೊಯ್ರೆಲ್ ಜ್ಯೂರಿಚ್ ಸರೋವರದಲ್ಲಿ ಈಜುತ್ತಾ, ಪ್ರಯಾಣಿಸುತ್ತಾ ಮತ್ತು ಮಹಿಳೆಯರಿಗೆ ವೃತ್ತಿ ತರಬೇತಿ ನೀಡುತ್ತಾ ತನ್ನ ಸಮಯವನ್ನು ಕಳೆಯುತ್ತಿದ್ದಾರೆ "ಈ ರೀತಿಯ ಆದಾಯವನ್ನು ಬೇಡವೆಂದು ಹೇಳುವುದು ಕಷ್ಟಕರವಾಗಿರುತ್ತದೆ" ಎಂದು ಅವರು ಒಪ್ಪಿಕೊಂಡರು, ಅವರು ತಮ್ಮ ಹಳೆಯ ದಿನಚರಿಯನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಹೇಳಿದರು. "ನಾನು ತುಂಬಾ ಸುಲಭವಾಗಿ ಬೇಸರಗೊಳ್ಳುತ್ತೇನೆ ಎಂದು ಭಾವಿಸಿದೆ. ಆದರೆ ಈಗ, ಒಂದೂವರೆ ವರ್ಷಗಳು ಕಳೆದಿವೆ, ಮತ್ತು ನನಗೆ ಇನ್ನೂ ಬೇಸರದ ಸಮಯ ಬಂದಿಲ್ಲ' ಎಂದಿದ್ದಾರೆ.
ತಮ್ಮ ನಿರ್ಧಾರವನ್ನು ಮರುವಿಮರ್ಶೆ ಮಾಡಿದ ಪೋಯ್ರೆಲ್, ಜೀವನದಲ್ಲಿ ಒಂದು ಪ್ರಮುಖ ಪಾಠ ಕಲಿತಿದ್ದಾಗಿ ಹೇಳಿದರು. ಜೀವನ ಅನ್ನೋದು ತುಂಬಾ ಚಿಕ್ಕದು ಹಾಗೂ ಸುಂದರವಾದದ್ದು. ನಮ್ಮ ಹೆಚ್ಚಿನ ಸಮಯವನ್ನು ಕೆಲಸದಲ್ಲೇ ಕಳೆಯುತ್ತೇವೆ. ಆದರೆ, ಇದೇ ಸಮಯವನ್ನು ಜನರೊಂದಿಗೆ ಹಾಗೂ ಅನುಭವಗಳೊಂದಿಗೆ ಕಳೆದರೆ ನಿಮಗೆ ಬಹಳ ಸಂತೋಷವಾಗುತ್ತದೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.