Parenting tips: ಜೆನ್ ಆಲ್ಫಾ ಮಕ್ಕಳಿಗೆ ಹೇಳಿಕೊಡಬೇಕಾದ್ದು ಹಾಗಲ್ಲ, ಹೀಗೆ!

Published : Oct 08, 2025, 10:07 PM IST
Parenting tips

ಸಾರಾಂಶ

ಹಿಂದಿನ ತಲೆಮಾರಿನವರು ನಮಗೆ ಕಲಿಸಿದ ಮೌಲ್ಯಗಳು ಮತ್ತು ಇಂದಿನ ಮಕ್ಕಳಿಗೆ ನಾವು ಕಲಿಸಬೇಕಾದ ಹೊಸ ಪಾಠಗಳ ನಡುವೆ ತುಂಬಾ ವ್ಯತ್ಯಾಸವಿದೆ. ಜೆನ್‌ ಆಲ್ಫಾ (Gen Alpha) ಮಕ್ಕಳು ನಮ್ಮಿಂದ ಕೇಳಿಸಿಕೊಳ್ಳಲು ಬಯಸುವ ಮಾತುಗಳೇ ಬೇರೆ!

'ಯಾರು ಬೈದರೂ ತಿರುಗಿ ಮಾತಾಡಬೇಡʼ ಅಂತ ಹೇಳಿಕೊಟ್ಟಿರುತ್ತಾರೆ ನಮಗೆ ಚಿಕ್ಕಂದಿನಲ್ಲಿ. ಈಗ ಅದೇ ಮಾತನ್ನು ನಿಮ್ಮ ಮಕ್ಕಳಿಗೆ ಅಂದರೆ ಜೆನ್‌ ಆಲ್ಫಾ (Gen Alpha) ಹೇಳಿ ನೋಡೋಣ! ಸಾಧ್ಯವಿಲ್ಲ ಅಲ್ವಾ? ಯಾಕೆಂದರೆ ಕಾಲ ಬದಲಾಗಿದೆ. ಕೆಲವು ವಿಚಾರಗಳನ್ನು ಮೌಲ್ಯಗಳನ್ನು ನಾವು ಚಿಕ್ಕಂದಿನಲ್ಲಿ ಹಿರಿಯರಿಂದ ಕಲಿತಿರುತ್ತೇವೆ. ಅದನ್ನೇ ಜೀವಮಾನವಿಡೀ ಆಚರಿಸಿಕೊಂಡು ಬರುತ್ತೇವೆ. ಆದರೆ ಆ ಮೌಲ್ಯಗಳೆಲ್ಲ ಆ ಕಾಲಕ್ಕೇ ಸರಿ. ಇಂದು ಕೂಡ ನಾವು ನಮ್ಮ ಮಕ್ಕಳಿಗೆ ಅದನ್ನೇ ಹೇಳಿಕೊಡಬೇಕು ಅಂತಿಲ್ಲ. ನಾವು ಕಲಿತಿರೋದಕ್ಕೆ ತದ್ವಿರುದ್ಧ ಅನ್ನೋದನ್ನೂ ಮಕ್ಕಳು ಕಲಿಯುತ್ತಾರೆ, ನಾವೂ ಕಲಿಸಬಹುದು ಕೂಡ. ಜೀವನ ಅನ್ನೋದು ಹಾಗೇ ಇರಬೇಕು ಕೂಡ. ಹಾಗಾದ್ರೆ, ನಾವು ಕಲಿತಿರೋದೇನು, ಮಕ್ಕಳಿಗೆ ಈಗ ಹೇಳಿಕೊಡಬೇಕಾದ್ದೇನು ಅಂತ ನೋಡೋಣ ಬನ್ನಿ.

1. ಹೀಗಲ್ಲ: ನಿನಗಿಂತ ಪ್ರಾಯದಲ್ಲಿ ದೊಡ್ಡವರಾದ ಎಲ್ಲರನ್ನೂ ಗೌರವಿಸು.

ಹೀಗೆ: ಹಿರಿತನ ಅನ್ನುವುದು ಪ್ರಾಯದಿಂದ ಬರುವುದಿಲ್ಲ, ಅದನ್ನು ಪಡೆಯಬೇಕಾಗುತ್ತದೆ.

2. ಹೀಗಲ್ಲ: ಮಗಳೇ, ನೆಂಟರಿದ್ದಾರೆ, ಡೀಸೆಂಟ್ ಬಟ್ಟೆಗಳನ್ನು ಧರಿಸು.

ಹೀಗೆ: ನಿನಗೆ ಕಂಫರ್ಟಬಲ್ ಅನ್ನಿಸುವ ಬಟ್ಟೆಗಳನ್ನು ಧರಿಸು.

3. ಹೀಗಲ್ಲ: ನಿನ್ನ ತಪ್ಪು ಇಲ್ಲದಿದ್ರೂ ಹಿರಿಯರ ಬಳಿ ಕ್ಷಮೆ ಕೇಳು.

ಹೀಗೆ: ನಿನ್ನ ತಪ್ಪು ಇದ್ದರೆ ಮಾತ್ರ ಕ್ಷಮೆ ಕೇಳು.

4. ಹೀಗಲ್ಲ : ಹೆತ್ತವರು ಹೇಳೋದು ಯಾವಾಗ್ಲೂ ಸರಿ, ಯಾಕೆಂದರೆ ಅವರು ಅನುಭವಸ್ಥರು.

ಹೀಗೆ: ನಮ್ಮ ಅನುಭವ ಮತ್ತು ತಲೆಮಾರು ಹಳೆಯದು, ಹೀಗಾಗಿ ನಿನ್ನ ತೀರ್ಮಾನಕ್ಕೆ ನಿನ್ನ ಹೃದಯದ ಮಾತನ್ನು ಕೇಳು.

5. ಹೀಗಲ್ಲ: ಮದ್ಯಪಾನ, ಧೂಮಪಾನ ಮಾಡುವವರು ಕೆಟ್ಟ ವ್ಯಕ್ತಿಗಳು.

ಹೀಗೆ : ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅದನ್ನು ಮಾಡುವ ಮಾತ್ರಕ್ಕೇ ಅವರು ಕೆಟ್ಟವರಲ್ಲ.

6. ಹೀಗಲ್ಲ: ಮದುವೆಯ ನಂತರ ಗಂಡ ಹೇಳಿದಂತೆ ಕೇಳಬೇಕು.

ಹೀಗೆ: ನೀನು ನಿನ್ನ ಗಂಡನ ಆಸ್ತಿಯಲ್ಲ.

7. ಹೀಗಲ್ಲ: ಇದು ಗಂಡುಮಕ್ಕಳ ಹವ್ಯಾಸ.

ಹೀಗೆ: ಹವ್ಯಾಸಕ್ಕೆ ಲಿಂಗಭೇದವಿಲ್ಲ. ಅದು ಹೃದಯಕ್ಕೆ ಸಂಬಂಧಿಸಿದ್ದು.

8. ಹೀಗಲ್ಲ: ಇನ್ನೆಷ್ಟು ದಿನ ಹೀಗೆ, ನನಗೆ ಬೇಗ ಅಜ್ಜಿ ಆಗಬೇಕು ಎಂಬ ಆಸೆ!

ಹೀಗೆ: ಮಗು ಹೆರೋದು ಬಿಡೋದು ನಿಮ್ಮ ಆಯ್ಕೆ, ಅದು ನಿಮ್ಮ ಕರ್ತವ್ಯ ಅಲ್ಲ.

9. ಹೀಗಲ್ಲ: ತಡವಾಗಿ ಮದುವೆಯಾದರೆ ಅಡ್ಜಸ್ಟ್‌ಮೆಂಟ್ ಕಷ್ಟವಾಗುತ್ತೆ.

ಹೀಗೆ: ನಿನಗಿಷ್ಟ ಬಂದಾಗ ಮದುವೆಯಾಗು. ಯಾಕಂದ್ರೆ ಮದುವೆ ಅಂದ್ರೆನೇ ಅಡ್ಜಸ್ಟ್‌ಮೆಂಟ್.

10. ಹೀಗಲ್ಲ: ಪ್ಲೇಟ್‌ನಲ್ಲಿ ಇರೋದನ್ನೆಲ್ಲ ತಿಂದು ಮುಗಿಸಬೇಕು.

ಹೀಗೆ: ನಿನಗೆಷ್ಟು ಬೇಕೋ ಅಷ್ಟೇ ತೆಗೆದುಕೋ, ಹೊಟ್ಟೆ ತುಂಬಿದ ಮೇಲೂ ತುಂಬಿಸಬೇಡ.

11. ಹೀಗಲ್ಲ: ಬೆತ್ತದ ರುಚಿ ತೋರಿಸಿದ್ರೆ ಮಾತ್ರ ಮಕ್ಕಳು ಕಲಿಯೋದು.

ಹೀಗೆ: ನಾವು ಹೆತ್ತವರು, ಡಿಕ್ಟೇಟರ್‌ಗಳಲ್ಲ. ಹೊಡೆಯುವುದು, ಹೊಡೆಸಿಕೊಳ್ಳುವುದನ್ನು ನಾನು ಕಲಿಸಲಾರೆ.

12. ಹೀಗಲ್ಲ: ಆ ಬೇರೆ ಗ್ಲಾಸಿನಲ್ಲಿ ಗಾರ್ಡ್‌ಗೆ ನೀರು ಕೊಡು.

ಹೀಗೆ: ಎಲ್ಲ ವ್ಯಕ್ತಿಗಳೂ ಸಮಾನ. ಎಲ್ಲರಿಗೂ ಒಂದೇ ಬಗೆಯ ಗೌರವ ನೀಡಬೇಕು.

13. ಹೀಗಲ್ಲ: ಡಿಪ್ರೆಶನ್ ವಗೈರೆ ಮಕ್ಕಳಿಗೆ ಆಗೊಲ್ಲ.

ಹೀಗೆ: ಮಕ್ಕಳಿಗೂ ಅವರದೇ ಸುರಕ್ಷಿತ ಮನೋಲೋಕ ಒದಗಿಸಬೇಕು.

14. ಹೀಗಲ್ಲ: ಥೆರಪಿ ಎಲ್ಲ ನಮಗಲ್ಲ, ಅದು ಮನಸ್ಸು ಸರಿ ಇಲ್ಲದವರಿಗೆ.

ಮಗಳು: ನನ್ನ ಮಗುವಿಗೆ ವೃತ್ತಿಪರ ಮನೋ ಕೌನ್ಸೆಲಿಂಗ್ ಬೇಕಾದರೆ ನಾನು ಒದಗಿಸಲು ಸದಾ ಸಿದ್ಧ.

15. ಹೀಗಲ್ಲ: ನಮಗಿಷ್ಟವಿಲ್ಲದಿದ್ದರೂ ಬಂಧುಗಳನ್ನು ತಬ್ಬಿಕೊಂಡು ಸ್ವಾಗತಿಸಬೇಕು.

ಹೀಗೆ: ವಿಧೇಯರಾಗಿರೋದಕ್ಕಿಂತಲೂ ಸುರಕ್ಷಿತತೆ ಉತ್ತಮ. ಭೌತಿಕ, ಸಾಮಾಜಿಕ ಬೌಂಡರಿಗಳನ್ನು ಗೌರವಿಸಿ.

16. ಹೀಗಲ್ಲ: ಸೊಸೆ ಬಂದಾಗ ಸರಿಹೋಗ್ತಾನೆ.

ಹೀಗೆ: ಹೆಂಡತಿ ಅನ್ನೋಳು ಬೇಜವಾಬ್ದಾರಿ ಗಂಡಸನ್ನು ಸರಿಪಡಿಸುವ ರಿಹ್ಯಾಬಿಲಿಟೇಶನ್ ಸೆಂಟರ್ ಅಲ್ಲ.

17. ಹೀಗಲ್ಲ: ಅಡಿಗೆ ಕಲಿ, ನೀನಲ್ಲದಿದ್ದರೆ ಇನ್ಯಾರು ಅಡಿಗೆ ಮಾಡ್ಬೇಕು?

ಹೀಗೆ: ಅಡಿಗೆ ಕಲಿ, ಯಾಕೆಂದರೆ ಅದೊಂದು ಬದುಕುವ ಕಲೆ.

18. ಹೀಗಲ್ಲ: ರೂಮ್ ಬಾಗಿಲು ಹಾಕಿಕೊಂಡು ಯಾಕೆ ಇರ್ತೀಯ?

ಹೀಗೆ: ಮಕ್ಕಳು ದೊಡ್ಡವರಾದಂತೆ ಅವರ ಖಾಸಗಿತನ, ಸ್ವಾತಂತ್ರ್ಯವನ್ನು ನಾನು ಗೌರವಿಸ್ತೇನೆ.

19. ಹೀಗಲ್ಲ: ಒಳ್ಳೆಯ ಮಕ್ಕಳು ಅಳುವುದಿಲ್ಲ.

ಹೀಗೆ: ಅಳು ಬಂದರೆ ಅಳಬಹುದು. ಭಾವನೆಗಳನ್ನು ಮುಚ್ಚಿಡುವುದಕ್ಕಿಂತ ವ್ಯಕ್ತಪಡಿಸುವುದು ಒಳ್ಳೆಯದು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸುಖ ಸಂಸಾರಕ್ಕೆ ಪತ್ನಿಯರಲ್ಲಿರಬೇಕಾದ 7 ಶ್ರೇಷ್ಠ ಗುಣಗಳು: ಪತಿಯ ಮನ ಗೆಲ್ಲುವ ಆ 4ನೇ ಸೂತ್ರ ಯಾವುದು?
'ಅಂಕಿತಾ ಜೊತೆ ಡಿಸೆಂಬರ್‌ನಲ್ಲಿ ಪಕ್ಕಾ ಮದುವೆ' ಎಂದಿದ್ದ ಸುಶಾಂತ್ ಸಿಂಗ್ ರಜಪೂತ್! ಆದರೆ.. ಆಮೇಲೇನಾಯ್ತು?