
ಇಂದು ಕೆಲವರು ಒಂದು, ಎರಡು ಮದುವೆ ಆಗುತ್ತಿದ್ದರೆ, ಕೆಲವು ಸಿಂಗಲ್‌ಗಳು ಸಿಂಗಲ್ ಆಗಿಯೇ ಉಳಿಯುತ್ತಿದ್ದಾರೆ. ಕೆಲ ಹುಡುಗಿಯರು ಲವ್ ಮಾಡಿಕೊಂಡು ಮದುವೆ ಆಗೋದುಂಟು. ಮದುವೆ ಆಗೋಕೆ ಹುಡುಗಿ ಇಲ್ಲ ಎಂದು ಕೆಲವರು ಬೇಸರ ಮಾಡಿಕೊಂಡಿದ್ದೂ ಇದೆ. ಇನ್ನೂ ಕೆಲವರು ದುಡುಕು ನಿರ್ಧಾರ ತಗೊಂಡಿದ್ದೂ ಇದೆ. ಈಗ ಕಾಮಿಡಿ ವಿಡಿಯೋಗಳ ಮೂಲಕ ಸದ್ದು ಮಾಡುವ ಪ್ರಕಾಶ್ ಆರ್‌ಕೆ ಎನ್ನುವವರು “ನಾನು ಸಿಂಗಲ್ ಆಗಿದ್ದೇನೆ, ಮಿಂಗಲ್ ಆಗಿದ್ದೇನೆ” ಎಂದು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಪತ್ರವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮತ್ತೊಮ್ಮೆ ಎಲ್ಲರ ಮುಖದಲ್ಲಿ ನಗು ತರಿಸಿದ್ದಾರೆ.
ನನ್ನ ಆತ್ಮೀಯ ಸಿಂಗಲ್ ಸಂಘಟನೆಯ ಸದಸ್ಯರೇ,
ನಿನ್ನೆ ನನ್ನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆ ಫೋಟೋದಲ್ಲಿ ಒಂದು ಹುಡುಗಿ ನನ್ನನ್ನು ಅಪ್ಪಿಕೊಂಡಿರುವಂತೆ ಕಾಣಿಸುತ್ತಿದೆ. ಇದರಿಂದ ಹಲವರು ಮದುವೆ ಆಯಿತಾ?”, “ಎಂಗೇಜೆಂಟ್ ಆಗಿತಾ?”, “ನಿಮ್ ಲವ್ವರನಾ?” ಎಂಬ ಪ್ರಶ್ನೆಗಳನ್ನು ಕೇಳುತ್ತಿರುವುದು ಗಮನಕ್ಕೆ ಬಂದಿದೆ.
ಆದರೆ, ಸ್ಪಷ್ಟವಾಗಿ ತಿಳಿಸಬೇಕಾದ್ದು ಏನೆಂದರೆ - ಆ ಫೋಟೋ ಸಂಪೂರ್ಣವಾಗಿ ಕೃತಕ - ಬುದ್ದಿಮತ್ತೆ (AI) ಮೂಲಕ ರಚಿಸಲಾದದ್ದು. ಯಾವುದೇ ವಾಸ್ತವಿಕ ಘಟನೆ ಅಲ್ಲ. ನಾನು ಸಿಂಗಲ್ ಆಗಿಯೇ ಇದ್ದೇನೆ, ಮತ್ತು ಅದರ ಬಗ್ಗೆ ನನಗೆ ಯಾವುದೇ ಲಜ್ಜೆ ಅಥವಾ ಬೇಸರವಿಲ್ಲ.
ನಮ್ಮ ಹಣೆಬರಹಕ್ಕೆ ಹುಡುಗಿಯರು ಬೀಳದೆ ಇರೋದಕ್ಕೆ ಹೊಟ್ಟೆಕಿಚ್ಚು ಬಂದು, ಕೆಲವರು “ಕನಸಿನ ಹುಡುಗಿಯನ್ನಾದ್ರೂ ಕ್ರಿಯೇಟ್ ಮಾಡೋಣ” ಅನ್ನೋ ಮಟ್ಟಕ್ಕೆ ಇಳಿದಿದ್ದಾರೆ - ಇದು ಕೇವಲ ಕೃತ್ಯವಲ್ಲ, ದುಃಖಕರ ಮನಸ್ಥಿತಿ ಕೂಡ.
ಈ ಘಟನೆಯಿಂದ ನಮ್ಮ ಸಿಂಗಲ್ ಸಂಘಟನೆಯ ಸದಸ್ಯರು ಮನಸ್ಸಿಗೆ ನೋವು ಅನುಭವಿಸಿರುವುದನ್ನು ನಾನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಈ ಹಿನ್ನೆಲೆಯಲ್ಲಿ ಸಂಘದ ಪ್ರತಿಯೊಬ್ಬ ಸದಸ್ಯನಿಗೂ ನಾನು ಹೃತ್ತೂರ್ವಕ ಕ್ಷಮೆಯಾಚನೆ ಮಾಡುತ್ತೇನೆ.
ನಾನು ನಿಮಗೆ ಭರವಸೆ ನೀಡುತ್ತೇನೆ - ಈ ಘಟನೆ ಕುರಿತು ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಾನು ಸದಾ ನಿಮ್ಮ ಜೊತೆ ಇದ್ದೇನೆ, ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವೆ.
ಇಂತಿ,
ನಿಮ್ಮ ಸಿಂಗಲ್ ಸಂಘಟನೆಯ ಅಧ್ಯಕ್ಷ ಪ್ರಕಾಶ್.ಆರ್.ಕೆ.
ಇದು ಹಾಸ್ಯಾತ್ಮಕ ಪತ್ರ ಅಷ್ಟೇ..
ಇಂದು ಎಐ ತುಂಬ ಮುಂದುವರೆದಿದೆ. ಸಾಕಷ್ಟು ಜನರು ವಿಧ ವಿಧವಾದ ಫೋಟೋಗಳನ್ನು ರೆಡಿ ಮಾಡುತ್ತಿದ್ದಾರೆ. ಇದು ಎಷ್ಟು ಪ್ರಯೋಜನಕಾರಿಯಿದೆಯೋ ಅಷ್ಟೇ ದುಷ್ಪ್ರಯೋಜನ ಕೂಡ ಆಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.