5 ವರ್ಷದ ಪ್ರೀತಿ, ಸರ್ಪ್ರೈಸ್ ಮದುವೆ ಆಯೋಜಿಸಿದ ಬಾಯ್‌ಫ್ರೆಂಡ್‌ಗೆ ಕೈಕೊಟ್ಟ ಗೆಳತಿ!

By Suvarna News  |  First Published Jun 22, 2023, 7:04 PM IST

ಇಬ್ಬರದ್ದೂ 5 ವರ್ಷದ ಪ್ರೀತಿ. ಮದುವೆ ಕುರಿತು ಚರ್ಚೆ ನಡೆಸಿದ್ದರು. ಇತ್ತ ಬಾಯ್‌ಫ್ರೆಂಡ್ ಗೆಳತಿಗೆ ಗೊತ್ತಿಲ್ಲದೆ ಮದುವೆ ಸಮಾರಂಭ ಆಯೋಜಿಸಿದ್ದಾನೆ. ಪೋಷಕರು, ಕುಟುಂಬಸ್ಥರು, ಆಪ್ತರನ್ನು ಕರೆದಿದ್ದಾನೆ. ಸಮಾರಂಭದ ಹಾಲ್‌ಗೆ ಬಂದಾಗ ಗೆಳತಿಗೆ ಅಚ್ಚರಿ ಮೇಲೆ ಅಚ್ಚರಿ. ಆದರೆ ಅಚ್ಚರಿ ನೀಡಿದ ಬಾಯ್‌ಫ್ರೆಂಡ್‌ಗೆ ಗೆಳತಿ ಡಬಲ್ ಶಾಕ್ ನೀಡಿದ್ದಾಳೆ.


ನವದೆಹಲಿ(ಜೂ.22): ಸುದೀರ್ಘ ದಿನಗಳ ಪ್ರೀತಿ. 5 ವರ್ಷದ ಇವರ ಪ್ರೀತಿ ಆಳವಾಗಿತ್ತು. ಇಬ್ಬರು ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದರು. ಮದುವೆ ಕುರಿತು ಚರ್ಚೆ ನಡೆಸಿದ್ದರು. ತಕ್ಷಣ ಮದುವೆ ಬೇಡ. ತಯಾರಿ ನಡೆಸಿ,ದಿನಾಂಕ ನಿರ್ಧರಿಸಿ ಮದುವೆಯಾಗೋಣ. ಆದರೆ ನಾವಿಬ್ಬರು ಜೊತೆಯಾಗಿ ಬಾಳಬೇಕು. ಹೀಗಾಗಿ ಮದುವೆಯಾಗಲೇಬೇಕು ಎಂದು ಮಾತುಕತೆ ನಡೆಸಿದ್ದರು. ಗೆಳತಿ ಮದುವೆಗೆ ಒಪ್ಪಿದ್ದಾಳೆ. ಹೀಗಾಗಿ ಆಕೆಗೆ ಅತೀ ದೊಡ್ಡ ಸರ್ಪ್ರೈಸ್ ನೀಡಲು ಬಾಯ್‌ಫ್ರೆಂಡ್ ಮುಂದಾಗಿದ್ದಾನೆ. ಗೆಳತಿಗೆ ಗೊತ್ತಿಲ್ಲದ್ದಂತೆ ಅದ್ಧೂರಿ ಮದುವೆ ಸಮಾರಂಭ ಆಯೋಜಿಸಿದ್ದಾನೆ. ಪೋಷಕರು, ಕುಟುಂಬಸ್ಥರು, ಆಪ್ತರು, ಗೆಳೆಯರು ಸೇರಿ ಹಲವರನ್ನು ಆಹ್ವಾನಿಸಿದ್ದಾನೆ. ಪಾರ್ಟಿ ಇದೆ ಬರಬೇಕು ಎಂದು ಗೆಳತಿಯನ್ನು ಆಹ್ವಾನಿಸಿದ್ದಾನೆ.ಪಾರ್ಟಿಗೆ ಆಗಮಿಸಿದ ಗೆಳತಿಗೆ ಅಚ್ಚರಿ. ಅದು ಪಾರ್ಟಿ ಅಲ್ಲ, ತನ್ನದೇ ಮದುವೆ ಅನ್ನೋದು ಅರಿವಾಗಿದೆ. ಇತ್ತ ಬಾಯ್‌ಫ್ರೆಂಡ್ ಗೆಳತಿಯನ್ನು ಬರಮಾಡಿಕೊಳ್ಳಲು ಬಂದಿದ್ದಾನೆ. ಆದರೆ ಗೆಳತಿಗೆ ಅಚ್ಚರಿ ನೀಡಿದ ಬಾಯ್‌ಫ್ರೆಂಡ್‌ಗೆ ಡಬಲ್ ಶಾಕ್ ಎದುರಾಗಿದೆ. ತನಗೆ ಮದುವೆ ಬೇಡ ಎಂದು ಮಂಟಪದಿಂದ ಹೊರನಡೆದಿದ್ದಾಳೆ.

30 ವರ್ಷದ ಯುವತಿ ಮಾರ್ಕ್ ಅನ್ನೋ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದಿದ್ದಳು. 5 ವರ್ಷಗಳಿಂದ ಪ್ರೀತಿ ಗಾಢವಾಗಿತ್ತು. ಮದುವೆ ಕುರಿತು ಇಬ್ಬರು ಚರ್ಚೆ ನಡೆಸಿ ಸದ್ಯಕ್ಕೆ ಬೇಡ. ಆದರೆ ಮದುವೆ ಆಗಬೇಕು ಎಂದು ನಿರ್ಧರಿಸಿದ್ದರು. ಹೇಗೂ ಮದುವೆಯಾಗಲು ಗೆಳತಿ ಒಪ್ಪಿದ್ದಾಳೆ. ಹೀಗಾಗಿ ಆಕೆಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದಾನೆ. ತಮ್ಮ ಮದುವೆ ಸಮಾರಂಭಕ್ಕೆ ಎಲ್ಲಾ ತಯಾರಿ ಮಾಡಿದ್ದಾನೆ.

Tap to resize

Latest Videos

ಪತಿ, ಮಕ್ಕಳನ್ನು ಬಿಟ್ಟು ಲಿವ್‌ ಇನ್‌ ಸಂಗಾತಿ ಜತೆ ವಾಸಿಸಲು ವಿವಾಹಿತ ಮಹಿಳೆಗೆ ಅನುಮತಿ ನೀಡಿದ ಹೈಕೋರ್ಟ್‌

ಪೋಷಕರು ಸೇರಿದಂತೆ ಬಂಧು ಬಳಕವನ್ನು ಮದುವೆಗೆ ಆಹ್ವಾನಿಸಿದ್ದಾನೆ. ಈ ವೇಳೆ ಇದು ತನ್ನ ಗೆಳತಿಗೆ ಸರ್ಪ್ರೈಸ್ ಮದುವೆ. ಹೀಗಾಗಿ ಯಾರೂ ಯಾವುದೇ ಮಾಹಿತಿಯನ್ನು ಆಕೆಗೆ ಹೇಳದಂತೆ ಸೂಚಿಸಿದ್ದಾನೆ. ಮದುವೆ ಕಾರ್ಯಕ್ರಮಕ್ಕೆ ಹೊಟೆಲ್‌ನಲ್ಲಿ ಎಲ್ಲಾ ಆಯೋಜನೆ ಮಾಡಿದ್ದಾನೆ. ಇದೇ ಹೊಟೆಲ್‌ಗೆ ಗಳತಿಯನ್ನು ಆಹ್ವಾನಿಸಿದ್ದಾನೆ. 

ಹೊಟೆಲ್‌ನ ಸಮಾರಂಭದ ಹಾಲ್‌ಗೆ ಕಾಲಿಟ್ಟ ತಕ್ಷಣ ಪಾರ್ಟಿ ರೀತಿ ಕಾಣಿಸಿಲ್ಲ. ನೋಡಿದರೆ ಅಪ್ತರು, ಬಂಧು ಬಳಗ ಎಲ್ಲರೂ ಇದ್ದಾರೆ. ಎಲ್ಲರೂ ಚಪ್ಪಾಳೆ ಮೂಲಕ ಈಕೆಯನ್ನು ಸ್ವಾಗತಿಸಿದ್ದಾರೆ. ವೇದಿಕೆಯಲ್ಲಿ ಮದುವೆಗೆ ಎಲ್ಲಾ ತಯಾರಿ ನಡೆದಿದೆ. ಇತ್ತ ಬಾಯ್‌ಫ್ರೆಂಡ್ ಆಕೆಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾನೆ. ಆದರೆ ಈಕೆ ಮಾತ್ರ ಈ ಅಚ್ಚರಿಯಿಂದ ಚೇತರಿಸಿಕೊಂಡಿಲ್ಲ. 

ವೇದಿಕೆ ಹತ್ತಿರ ಬಂದಾಗ ಇದು ಮದುವೆ ಅನ್ನೋದು ಖಚಿತಗೊಂಡಿದೆ. ತನ್ನದೇ ಮದುವೆ. ಆದರೆ ಅಚ್ಚರಿ ಮದುವೆ ಅನ್ನೋದು ಅರಿವಾಗಿದೆ. 5 ವರ್ಷದ ಪ್ರೀತಿ, ಮದವೆ ಮಾತುಕತೆ ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗಿದೆ. ಯುವತಿ ಗಟ್ಟಿ ನಿರ್ಧಾರ ಮಾಡಿದ್ದಾಳೆ. ವೇದಿಕೆಯಲ್ಲಿ ಬಾಯ್‌ಫ್ರೆಂಡ್ ಖಡಕ್ ತಿರುಗೇಟು ನೀಡಿ ಸಮಾರಂಭದಿಂದ ಹೊರನಡೆದಿದ್ದಾಳೆ.

29 ವರ್ಷದ ಹೀರೋಯಿನ್‌ಗೆ 83 ವರ್ಷದ ಬಾಯ್‌ಫ್ರೆಂಡ್‌: ಮದುವೆಯಾಗದೆ ತಂದೆ ತಾಯಿಯಾದ ನಟ-ನಟಿ !

ಈ ಕುರಿತು ಆಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಪ್ರೀತಿಸಿದ್ದೇನೆ, ಆತನನ್ನೇ ಮದುವೆಯಾಗಲು ಬಯಸಿದ್ದೆ. ಆದರೆ ಒಂದು ಹೆಣ್ಣಿಗೆ ಮದುವೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ. ಮುಖ್ಯವಾಗಿ ಮಾನಸಿಕವಾಗಿ ಆಕೆ ತಯಾರಿ ಮಾಡಿಕೊಳ್ಳಬೇಕು. ಮದುವೆ ಅತ್ಯಂತ ಪ್ರಮುಖ ಮೈಲಿಗಲ್ಲು. ಇದನ್ನು ಅಚ್ಚರಿ ಮೂಲಕ ನಡೆಸಲು ಸಾಧ್ಯವಿಲ್ಲ. ಚರ್ಚೆ ನಡೆಸಬೇಕು, ದಿನಾಂಕ ನಿಗದಪಡಿಸಬೇಕು. ಒಬ್ಬರೆ ನಿರ್ಧರಿಸಿ ಮದುವೆಯಾಗಲು ಸಾಧ್ಯವಿಲ್ಲ. ಹೆಣ್ಣು ಸರಕಲ್ಲ.ನಾವಿಬ್ಬರು ಮದುವೆ ಕುರಿತು ಚರ್ಚಿಸಿದ್ದೇವು. ಆದರೆ ಆತ ನನ್ನ ನಂಬಿಕೆಗೆ ದ್ರೋಹ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ವಿದೇಶದಲ್ಲಿ ಆದರೆ ಯಾವ ದೇಶದಲ್ಲಿ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

click me!