Latest Videos

ಮಕ್ಕಳಿಗೆ Sex Education ನೀಡೋ ಮುನ್ನ ಇದು ತಿಳಿದಿರಲಿ

By Suvarna NewsFirst Published Jun 22, 2023, 2:46 PM IST
Highlights

ಸೆಕ್ಸ್ ಹೆಸರು ಕೇಳ್ತಿದ್ದಂತೆ ಈಗ್ಲೂ ಜನರು ಮಡಿವಂತಿಕೆ ತೋರಿಸ್ತಾರೆ. ಇದೊಂದು ನೈಸರ್ಗಿಕ ಕ್ರಿಯೆ. ಇದ್ರಲ್ಲಿ ಯಾವುದೇ ತಪ್ಪಾಗಿ, ಮಕ್ಕಳು ದಾರಿ ತಪ್ಪಬಾರದು ಅಂದ್ರೆ ಪಾಲಕರ ಹೊಣೆ ದೊಡ್ಡದು. 
 

ಭಾರತದಲ್ಲಿ ಲೈಂಗಿಕತೆ ಬಗ್ಗೆ ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡೋದೇ ಕಷ್ಟ. ಇನ್ನು ಮಕ್ಕಳ ಜೊತೆ..! ಅಯ್ಯೋ… ದೊಡ್ಡ ಅಪರಾಧ ಎನ್ನುವವರೇ ಹೆಚ್ಚು. ಮಕ್ಕಳು ದಾರಿ ತಪ್ಪಿದ್ಮೇಲೆ ಅಥವಾ ಜೀವನದಲ್ಲಿ ಎಡವಿದಾಗ ಪಶ್ಚಾತಾಪಪಡುವ ಬದಲು ಪಾಲಕರು ಲೈಂಗಿಕ ವಿಷ್ಯವನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಇದ್ರ ಬಗ್ಗೆ ಹಂತ ಹಂತವಾಗಿ ಮಾಹಿತಿ ನೀಡಬೇಕು. 

ಸಾಮಾನ್ಯವಾಗಿ ಮಕ್ಕಳಿಗೆ ಎಲ್ಲ ವಿಷ್ಯದ ಬಗ್ಗೆ ಕುತೂಹಲವಿರುತ್ತದೆ. ಲೈಂಗಿಕ (Sexual) ಶಿಕ್ಷಣ ಎನ್ನುವುದು ಒಂದೇ ಬಾರಿ ಹೇಳಿ ಮುಗಿಸುವಂತಹದ್ದಲ್ಲ. ಅದ್ರ ಬಗ್ಗೆ ಮಕ್ಕಳಿಗೆ ನಿರಂತರವಾಗಿ ಮಾಹಿತಿ ನೀಡಬೇಕಾಗುತ್ತದೆ. ಮಕ್ಕಳು (Child) ಬೆಳೆದಂತೆ ಅವರ ಆಲೋಚನೆಕೂಡ ಗಾಢವಾಗಿರುತ್ತದೆ. ಅವರ ಪ್ರಶ್ನೆಗೆ ಪಾಲಕರು ಪ್ರಾಮಾಣಿಕವಾಗಿ ಉತ್ತರ ನೀಡಲು ಸಿದ್ಧರಿರಬೇಕು. ಭಾರತ (India) ದಲ್ಲಿ ಸೆಕ್ಸ್ ಒಂದು ಮಡಿವಂತಿಕೆ ವಿಷ್ಯ. ಮಗು ಎಲ್ಲಿಂದ ಬಂತು ಎಂದು ಮಕ್ಕಳು ಪ್ರಶ್ನೆ ಮಾಡಿದ್ರೆ, ದೇವರು ಕೊಟ್ಟಿದ್ದಾನೆ ಎಂದು ಉತ್ತರ ನೀಡುವವರೇ ಹೆಚ್ಚು. ಇದನ್ನೇ ಮಗು ನಂಬಿ, ಮುಂದೆ ಕಷ್ಟಕ್ಕೆ ಸಿಲುಕುವುದಿದೆ. ಪಾಲಕರಾದವರು ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

Parenting Tips : ಮಕ್ಕಳ ವರ್ತನೆ ಬದಲಾಗ್ತಿದ್ಯಾ? ಏನಾಗಿರಬಹುದು ಪ್ರಾಬ್ಲಂ?

ಮಕ್ಕಳಿಗೆ ಈ ವಯಸ್ಸಿನಲ್ಲಿ ನೀಡಿ ಲೈಂಗಿಕ ಶಿಕ್ಷಣ :
ಮಕ್ಕಳ ವಯಸ್ಸಿಗೆ ತಕ್ಕಂತೆ ಮಾಹಿತಿ ಇರಲಿ :
ಮಗು ಚಿಕ್ಕದಾಗಿರುವಾಗ, 7 -8 ವರ್ಷದಲ್ಲಿರುವಾಗ್ಲೇ ನೀವು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಇದು ಮಗುವಿಗೆ ಅರ್ಥವಾಗೋದಿಲ್ಲ. ಹಾಗಾಗಿ ಆರಂಭದಲ್ಲಿ ಮಗುವಿಗೆ ಅದ್ರ ದೇಹದ ಭಾಗಗಳನ್ನು ಪರಿಚಯಿಸಿ. ಖಾಸಗಿ ಅಂಗ ಸೇರಿದಂತೆ ದೇಹದ ಪ್ರತಿಯೊಂದು ಭಾಗಕ್ಕೆ ಅದ್ರ ಮೂಲ ಹೆಸರನ್ನೇ ತಿಳಿಸಿ. ಮಕ್ಕಳು ಬೆಳೆದಂತೆ ನೀವು ಲೈಂಗಿಕ ವಿಷ್ಯದಲ್ಲಿ ಅವರ ಜ್ಞಾನ ಹೆಚ್ಚಿಸಬೇಕು. ನಿಖರವಾದ ಮತ್ತು ವಾಸ್ತವ ಮಾಹಿತಿಯನ್ನು ಒದಗಿಸುವುದು ಮುಖ್ಯ. ಮಕ್ಕಳು ದಾರಿತಪ್ಪಿಸುವ ಮಾಹಿತಿ ನೀಡಬೇಡಿ. ಹಂತ ಹಂತವಾಗಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಪಾಲಕರು, ತಾಳ್ಮೆಯಿಂದ ನೀಡಬೇಕು.   

ಮಕ್ಕಳ ತಿಳುವಳಿಕೆ ಮೇಲೆ ವಿಷ್ಯವಿರಲಿ : ಪ್ರತಿಯೊಂದು ಮಗುವೂ ವಿಭಿನ್ನವಾಗಿರುತ್ತದೆ. ಆದ್ದರಿಂದ ನಿಮ್ಮ ಮಗುವಿನ ತಿಳುವಳಿಕೆ, ಕುತೂಹಲ ಮತ್ತು ಲೈಂಗಿಕತೆಯ ಬಗ್ಗೆ ಹೆಚ್ಚು ಆಳವಾದ ಚರ್ಚೆಗೆ ಸಿದ್ಧವಾಗಿದೆಯೇ ಎಂಬುದನ್ನು ನೋಡಿ ಮಾತನಾಡಿ. ಕೆಲವು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ವಿವರವಾದ ಮಾಹಿತಿ ಪಡೆಯಲು ಸಿದ್ಧರಾಗಿರುತ್ತಾರೆ. ಮತ್ತೆ ಕೆಲವರಿಗೆ ಸಮಯ ಹಿಡಿಯುತ್ತದೆ.

ಮಕ್ಕಳಿಗೆ ಸ್ವಾತಂತ್ರ್ಯ ನೀಡಿ (Give Space to Kids) : ಮಕ್ಕಳು ಲೈಂಗಿಕತೆ ಬಗ್ಗೆ ಪ್ರಶ್ನೆ ಕೇಳಿದಾಗ ಪಾಲಕರು ಸಿಡಿಮಿಡಿಗೊಳ್ತಾರೆ. ಇದೆಲ್ಲ ನೀನು ಕೇಳುವ ಪ್ರಶ್ನೆಯಲ್ಲ ಎಂದು ಹಾರಿಕೆ ಉತ್ತರ ನೀಡ್ತಾರೆ. ಇದು ತಪ್ಪು. ಮಕ್ಕಳಿಗೆ ಪ್ರಶ್ನೆ ಕೇಳಲು ನೀವು ಅವಕಾಶ ನೀಡಬೇಕು. ಅವರಿಗೆ ಮಾತನಾಡಲು ಮುಕ್ತ ವಾತಾವರಣ ಸೃಷ್ಟಿಮಾಡಿ. ಅವರ ಪ್ರಶ್ನೆಗಳನ್ನು ಶಾಂತವಾಗಿ ಕೇಳಿ. ಅದಕ್ಕೆ ನಿಮ್ಮಲ್ಲಿ ಸಾಧ್ಯವಾದಷ್ಟು ಪ್ರಾಮಾಣಿಕ ಉತ್ತರ ನೀಡಿ. 

ಸಂಗಾತಿಯ ಸಕ್ಸಸ್ ಕಂಡ್ರೆ ‘ಈ ರಾಶಿ’ಯವರಿಗೆ ಹೊಟ್ಟೆ ಉರಿ

ಮೌಲ್ಯ ಮತ್ತು ಮಿತಿಯ ಬಗ್ಗೆ ತಿಳುವಳಿಕೆ ಇರಲಿ (Let Kids know about moral values and limitation) : ವೈಯಕ್ತಿಕ ಮೌಲ್ಯಗಳು, ಗಡಿಗಳು ಮತ್ತು ಆರೋಗ್ಯಕರ ಸಂಬಂಧಗಳ ಬಗ್ಗೆ ಮಕ್ಕಳಲ್ಲಿ ಚರ್ಚಿಸಬೇಕು. ದೇಹವನ್ನು ಗೌರವಿಸುವುದು, ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಸಿ. ಹಾಗೆಯೇ ವಿಶ್ವಾಸಾರ್ಹ ಮೂಲಗಳಿಂದ ಅವರು ಮಾಹಿತಿ ಕಲೆಹಾಕಲು ಪ್ರೋತ್ಸಾಹ ನೀಡಬೇಕು. ಅತಿ ಕುತೂಹಲದಿಂದ ಮಕ್ಕಳು ಯಾವುದೋ ಮೂಲದಿಂದ ಮಾಹಿತಿ ಕಲೆಹಾಕಲು ಶುರು ಮಾಡುತ್ತಾರೆ. ಇದ್ರಿಂದ ತಪ್ಪು ಮಾಹಿತಿ ಅವರಿಗೆ ಲಭ್ಯವಾಗಬಹುದು. ಹಾಗಾಗಿ ಪ್ರಾಮಾಣಿಕವಾಗಿ ಮಾಹಿತಿ ಕಲೆಹಾಕುವ ವೇಳೆ ಅವರ ಸಹಾಯಕ್ಕೆ ನೀವು ನಿಲ್ಲಬೇಕು. 
 

click me!