ಅಜ್ಜ-ಅಜ್ಜಿಯ ಕ್ಯೂಟ್ ಫೈಟ್‌ ವಿಡಿಯೋ ವೈರಲ್, ಯಾರ ದೃ‍ಷ್ಟಿಯೂ ಬೀಳದಿರಲಿ ಎಂದ ನೆಟ್ಟಿಗರು

By Vinutha Perla  |  First Published Jun 22, 2023, 3:33 PM IST

ಪ್ರೀತಿಯೆಂದರೆ ನಿಜವಾಗಿಯೂ ಏನು..? ಇವತ್ತಿನ ಜನರೇಷನ್‌ನವರಿಗೆ ಉತ್ತರ ತಿಳಿದಿರೋ ಸಾಧ್ಯತೆ ಕಡಿಮೆ. ನಾವಂದುಕೊಂಡಿರೋ ಟೈಂಪಾಸ್, ಬೆಸ್ಟ್ ಫ್ರೆಂಡ್ಸ್ ಎಲ್ಲಾ ಪ್ರೀತಿಯಲ್ಲ. ಈ ವೃದ್ಧ ದಂಪತಿಯನ್ನು ನೋಡಿ ನಿಜವಾದ ಪ್ರೀತಿ ಅಂದ್ರೇನು ನಿಮ್ಗೆ ಅರ್ಥವಾಗುತ್ತೆ.


ಪ್ರೀತಿಯೆಂದರೆ ಈಗ ಟೈಂ ಪಾಸ್‌. ಜಸ್ಟ್ ಫ್ರೆಂಡ್ ಅಷ್ಟೆ, ಬೆಸ್ಟ್‌ ಫ್ರೆಂಡ್ಸ್, ಕಸಿನ್‌ ಹೀಗೆ ಸಂಬಂಧಗಳಿಗೆ ಹೊಸ ಹೊಸ ಹೆಸರಿಡುವ ಗೊಂದಲ. ಆದ್ರೆ ಮೊದಲ್ಲೆಲ್ಲಾ ಪ್ರೀತಿಯೆಂದರೆ ಹಾಗಲ್ಲ. ಅದು ಅಚ್ಚರಿ ಮೂಡಿಸುವ ಬೆಚ್ಚನೆಯ ಭಾವನೆ. ಏಳೇನು ಜನ್ಮಕ್ಕೂ ಜೊತೆಗಿರಬೇಕು ಎನ್ನುವ ತುಡಿತ. ಕಷ್ಟ-ಸುಖಗಳ ಮಧ್ಯೆ ಹೆಗಲಿಗೆ ಹೆಗಲಾಗಿ ಜೀವನ ಸಾಗಿಸುವ ಛಲ. ಪ್ರೀತಿಯೆಂದರೆ ಹಾಗೇ. ಅದು ಮಾತಿಗೂ ಮೀರಿದ ಸುಂದರ ಭಾವನೆ. ಪ್ರೀತಿಸಿದವರು ತಮ್ಮ ಜೊತೆಗಿದ್ದವರನ್ನೇ ಸಾಕು, ಮತ್ಯಾವ ಸಂಪತ್ತೂ ಬೇಡ ಎಂದು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುವವರೂ ಇದ್ದಾರೆ. ಹಾಗೆಯೇ ಇಲ್ಲೊಂದೆಡೆ ವೃದ್ಧ ದಂಪತಿಯ ಪ್ರೀತಿಯ ಮುದ್ದಾದ ವಿಡಿಯೋ ವೈರಲ್ ಆಗಿದೆ. 

ವಿಡಿಯೋದಲ್ಲಿ ಅಜ್ಜಿ ತನ್ನ ಪಾಡಿಗೆ ತಾನು ಸೊಪ್ಪು ಬಿಡಿಸುತ್ತಿದ್ದಾಳೆ. ಆದರೆ ಈ ಅಜ್ಜ ಆಕೆಯನ್ನು ವಾಕಿಂಗ್ ಸ್ಟಿಕ್‌ನಿಂದ ತಿವಿದು ತನ್ನೆಡೆ ಗಮನ ಸೆಳೆಯುತ್ತಿದ್ದಾನೆ. ಕೆಲಸವನ್ನೂ ಮಾಡುತ್ತ ಅಜ್ಜನೊಂದಿಗೆ ಮಾತನಾಡುತ್ತಲೇ ಇದ್ದಾಳೆ. ಕೊನೆಗೆ ತಂಬಿಗೆಯಲ್ಲಿಯ ನೀರನ್ನು ತಲೆಗೆ ಸಿಂಪಡಿಸಿ ಉಜ್ಜಿಕೊಳ್ಳುತ್ತ ಮತ್ತೆ ಆಕೆಯನ್ನು ತನ್ನೆಡೆ ಸೆಳೆಯಲು ನೋಡುತ್ತಿದ್ದಾನೆ. ಅಜ್ಜಿ ಹುಸಿ ಗದರಿನಿಂದಲೇ ತಂಬಿಗೆಯನ್ನು ಇಸಿದುಕೊಳ್ಳುತ್ತಾಳೆ. ಅತ್ತಿತ್ತ ಓಲಾಡುವ ಅಜ್ಜನ ಗದ್ದ ಹಿಡಿದು ತಲೆಯನ್ನು ಬಾಚುತ್ತಾಳೆ. ಇದು ವೃದ್ಧಾಪ್ಯದಲ್ಲಿ ಮಕ್ಕಳಂತೆ ವರ್ತಿಸುವ ಮುಗ್ಧ ಜೋಡಿಯ ಪ್ರೀತಿಯನ್ನು ಅನಾವರಣಗೊಳಿಸುತ್ತದೆ.

Tap to resize

Latest Videos

ಭಲೇ ಜೋಡಿ..ಕೋಲ್ಕತ್ತಾ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ವೃದ್ಧ ದಂಪತಿ

ವಯಸ್ಸಾದ ಬಂಗಾಳಿ ದಂಪತಿಗಳ ಮುದ್ದಾದ ಕಿತ್ತಾಟ
ವಯಸ್ಸಾದ ಬಂಗಾಳಿ ದಂಪತಿಗಳ ಕಿತ್ತಾಟದ ಈ ಮುದ್ದಾದ ವಿಡಿಯೋವನ್ನು ಕೋಲ್ಕತ್ತಾ ಚಿತ್ರಗ್ರಫಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವೀಡಿಯೊವನ್ನು (Viral video) 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಡೈನಿಂಗ್ ಟೇಬಲ್‌ನಲ್ಲಿ ದಂಪತಿಗಳು ಒಟ್ಟಿಗೆ ಕುಳಿತಿರುವುದನ್ನು ನೀವು ನೋಡಬಹುದು. ವಯಸ್ಸಾದ ವ್ಯಕ್ತಿ ತನ್ನ ಹೆಂಡತಿಯನ್ನು (Wife) ಮುದ್ದಾಗಿ ತಳ್ಳುತ್ತಾನೆ ಮತ್ತು ಅವಳು ಕಿರಿಕಿರಿಗೊಳ್ಳುತ್ತಾಳೆ. ಅವರ ತಮಾಷೆಯ ವರ್ತನೆಗಳು ವೀಕ್ಷಿಸಲು ತುಂಬಾ ಮುದ್ದಾಗಿವೆ. 

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ವೀಡಿಯೋವನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಈ ಜನರೇಷನ್‌ನಲ್ಲಿ ಇಂಥಾ ಪ್ರೀತಿಯನ್ನು ನೋಡಲು ಖಂಡಿತವಾಗಿಯೂ ಸಾಧ್ಯವಿಲ್ಲ' ಎಂದಿದ್ದಾರೆ. ಮತ್ತೊಬ್ಬರು 'ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಆ ಹುಸಿ ಕೋಪ, ಜಗಳ ನೋಡುವುದೇ ಚೆಂದ. ಅದನ್ನು ನೋಡಿ ನನ್ನ ಹೃದಯ ಪ್ರೀತಿಯಿಂದ ತುಂಬಿ ಹೋಗಿದೆ' ಎಂದು ಕಮೆಂಟಿಸಿದ್ದಾರೆ. 

30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ, ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ

ಇನ್ನುಬ್ಬ ಬಳಕೆದಾರರು (User), 'ಪ್ಯೂರ್ ಲವ್‌, ಈ ಜನರೇಷನ್‌ನ ಹುಕಪ್‌ ಗೈಯ್ಸ್‌ ಈ ಪ್ರೀತಿಯನ್ನು ಯಾವತ್ತಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಈ ವಿಡಿಯೋ ಸ್ಕ್ರಿಪ್ಟೆಡ್‌ ಆಗಿದ್ದರೂ ಸಹ ಮನ ಮುಟ್ಟುವಂತಿದೆ. ಇದು ನನಗೆ ಪ್ರತಿ ದಿನ ಮತ್ತಷ್ಟು ಪ್ರೀತಿಸಲು ಪ್ರೇರೇಪಿಸುತ್ತಿದೆ' ಎಂದು ತಿಳಿಸಿದ್ದಾರೆ.

ವೈರಲ್ ವಿಡಿಯೋವನ್ನು ಇಲ್ಲಿ ನೋಡಿ:

click me!