ಮಕ್ಕಳ ಮುಂದೆ ಮೊಬೈಲ್ ಇದ್ರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಮೊಬೈಲ್ ಹಿಡಿದು ಕುಳಿತ ಮಕ್ಕಳಿಗೆ ಪಾಲಕರ ಮಾತು ಕೇಳೋದಿಲ್ಲ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಓದಿಗೆ ಎಲ್ಲ ಸಿದ್ಧತೆ ನಡೆಸಿ ಕೊನೆಯಲ್ಲಿ ಹುಡುಗಿ ಮಾಡುವ ಕೆಲಸ ನೋಡಿದ ಜನ ಇದು ವಾಸ್ತವ ಎನ್ನುತ್ತಿದ್ದಾರೆ.
ಸ್ಕೂಲಿನಿಂದ ಬಂದು ಬಟ್ಟೆ ಬದಲಿಸಿ, ಕೈ ಕಾಲು ಸ್ವಚ್ಛಗೊಳಿಸಿ, ಅಮ್ಮ ಕೊಟ್ಟ ಆಹಾರ ತಿಂದು ಸ್ಕೂಲ್ ಬ್ಯಾಗ್ ಮುಂದೆ ಕುಳಿತು, ಹೋಮ್ ವರ್ಕ್ ಮುಗಿಸಿ, ಇಂದಿನ, ನಾಳೆಯ ಪೋಶನ್ ಓದಿ ನಂತ್ರ ಸಮಯ ಉಳಿದ್ರೆ ಟಿವಿ ನೋಡಿ ಮಲಗುವ ಮಕ್ಕಳು ಈಗಿಲ್ಲ ಬಿಡಿ. ಅದೆಲ್ಲ ಹಿಂದಿನ ಕಾಲವಾಯ್ತು. ಈಗಿನ ಮಕ್ಕಳ ಅಭ್ಯಾಸದ ವಿಧಾನವೇ ಬದಲಾಗಿದೆ.
ಕೊರೊನಾ (Corona) ಸಂದರ್ಭದಲ್ಲಿ ಮನೆಯಲ್ಲಿದ್ದ ಮಕ್ಕಳು (Children) ಮನೆ ಹೊರಗೆ ಹೋಗೋದನ್ನು ಮರೆತಿದ್ದಾರೆ. ಮನೆಯಲ್ಲಿಯೇ ಮೂರು ಹೊತ್ತು ಸಮಯ ಕಳೆಯುವವರಿಗೆ ಆಸರೆಯಾಗಿರೋದು ಟಿವಿ ಇಲ್ಲವೆ ಮೊಬೈಲ್ (Mobile). ಬಾಲ್ಯದಲ್ಲಿಯೇ ಮಕ್ಕಳ ಕೈಗೆ ಮೊಬೈಲ್ ಸಿಗುತ್ತೆ. ಹಾಗಾಗಿ ದೊಡ್ಡವರಿಗಿಂತ ಎರಡು ಪಟ್ಟು ಮೊಬೈಲ್ ಬಳಸೋರು ಮಕ್ಕಳು. ಇನ್ನು ವರ್ಷವಾಗದ ಮಕ್ಕಳೇ ಮೊಬೈಲ್ ಆಪರೇಟ್ ಮಾಡೋದನ್ನು ಕಲಿತಿರುವಾಗ ಶಾಲೆಗೆ ಹೋಗುವ ಮಕ್ಕಳನ್ನು ಕೇಳ್ಬೇಕಾ? ಬೇಕಾಗಿದ್ದನ್ನು ಡೌನ್ಲೋಡ್ ಮಾಡಿ, ಬೇಡದ್ದನ್ನು ನೋಡಿ ಸಮಯ ಹಾಳು ಮಾಡೋದ್ರಲ್ಲಿ ಈಗಿನ ಮಕ್ಕಳು ಮುಂದಿದ್ದಾರೆ.
ಹುಡುಗಿ ಅಂತಾ ನಂಬಬೇಡಿ: ಫೋಟೋ ತೆಗೆದು ಬ್ಲಾಕ್ಮೇಲ್ ಮಾಡ್ಬಹುದು ಹುಷಾರ್!
ಈಗಿನ ಮಕ್ಕಳಿಗೆ ಹೇಳಿದ ತಕ್ಷಣ ಎಲ್ಲವೂ ಕೈನಲ್ಲಿ ಇರಬೇಕು. ಸ್ಕೂಲ್ ಬುಕ್ಸ್, ನೋಟ್ ಬುಕ್ಸ್, ಪೆನ್ಸಿಲ್, ಪೆನ್ ಅಷ್ಟೇ ಅಲ್ಲ ಹೆಚ್ಚಿನ ವಿದ್ಯಾಭ್ಯಾಸ, ಆನ್ಲೈನ್ ಕ್ಲಾಸ್, ಟ್ಯೂಷನ್ ಹೆಸರಿನಲ್ಲಿ ಅವರ ಕೈಗೆ ಲ್ಯಾಪ್ ಟಾಪ್ ಸಿಕ್ಕಿರುತ್ತೆ. ಜೊತೆಗೊಂದು ಮೊಬೈಲ್. ಇವೆಲ್ಲವನ್ನೂ ಒಟ್ಟಿಗೆ ಇಟ್ಟುಕೊಂಡು ಓದಲು ಕುಳಿತ್ರೆ ಪುಸ್ತಕದ ಮೇಲೆ ಕಣ್ಣು ಹೋಗೋ ಬದಲು ಮೊಬೈಲ್ ಮೇಲೆ ಹೋಗೋದು ಗ್ಯಾರಂಟಿ.
ದೊಡ್ಡವರಾದ ನಮಗೆ ಮೊಬೈಲ್ ಬಿಟ್ಟಿರೋದು ಕಷ್ಟ. ಪಕ್ಕದಲ್ಲಿ ಮೊಬೈಲ್ ಇದ್ರೆ ಕೆಲಸ ಬಿಟ್ಟು ರಿಲ್ಯಾಕ್ಸ್ ಹೆಸರಿನಲ್ಲಿ ಮೊಬೈಲ್ ಹಿಡಿತೇವೆ. ರೀಲ್ಸ್, ಫೇಸ್ಬುಕ್, ಯುಟ್ಯೂಬ್ ಅಂತಾ ಸ್ಕ್ರಾಲ್ ಮಾಡ್ತಾ ಮಾಡ್ತಾ ಸಮಯ ಹೋಗಿದ್ದೇ ತಿಳಿಯೋದಿಲ್ಲ. ಹೀಗಿರುವಾಗ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದ್ರೆ ಕಥೆ ಮುಗಿದಂತೆ. ಹೋಮ್ ವರ್ಕ್, ಓದು ಹಿಂದಿರುತ್ತೆ. ರೀಲ್ಸ್ ಓಡ್ತಿರುತ್ತೆ.
ಹಸುವಿಗೆ ಕೈ ಮುಗಿದ ಮಹಿಳೆ : ಅದ ನೋಡಿ ಮಕ್ಕಳೇನು ಮಾಡಿದ್ರು : ವೈರಲ್ ಆಯ್ತು ವೀಡಿಯೋ
ಸಾಮಾಜಿಕ ಜಾಲತಾಣದಲ್ಲಿ ಇದನ್ನೇ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ವಿಡಿಯೋ ನೋಡಿದ ಮಕ್ಕಳು, ಹೌದ್ಹೌದು, ನಾನು ಮಾಡೋದು ಇದನ್ನೇ ಎನ್ನುತ್ತಿದ್ದಾರೆ. ಈ ವಿಡಿಯೋವನ್ನು sravs_chittyy ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹುಡುಗಿಯೊಬ್ಬಳು ಚೇರ್ ಮೇಲೆ ಕುಳಿತು ಮುಂದಿರುವ ಟೇಬಲ್ ಮೇಲೆ ಲ್ಯಾಪ್ ಟಾಪ್ ಇಡ್ತಾಳೆ. ನಂತ್ರ ಪಕ್ಕದಲ್ಲಿ ಪುಸ್ತಕ ಇಡ್ತಾಳೆ. ನಂತ್ರ ಜ್ಯೂಸ್ ಬಾಟಲ್ ಇಡುತ್ತಾಳೆ. ಅದಾದ್ಮೇಲೆ ಪೆನ್ ಇಡುತ್ತಾಳೆ. ಅದ್ರ ನಂತ್ರ ನೀರಿನ ಬಾಟಲ್ ಇಡ್ತಾಳೆ. ಆಮೇಲೆ ಕನ್ನಡಕ ಹಾಕಿಕೊಳ್ತಾಳೆ. ಎಸಿ ಆನ್ ಮಾಡಿ, ಹೊರಗಿನ ಮಾತು ಕೇಳ್ಬಾರದು ಎನ್ನುವ ಕಾರಣಕ್ಕೆ ಕಿವಿಯನ್ನು ಇಯರ್ ಫೋನ್ ನಿಂದ ಮುಚ್ಚಿ ಪುಸ್ತಕ ಹಿಡಿತಾಳೆ. ಓಹೋ ಒಳ್ಳೆ ಹುಡುಗಿ, ಎಲ್ಲ ಸಿದ್ಧತೆ ಮಾಡ್ಕೊಂಡು ಇನ್ನೊಂದು ಗಂಟೆ ಏಳಲ್ಲ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಪುಸ್ತಕ ಹಿಡಿದ ಕೆಲವೇ ನಿಮಿಷದಲ್ಲಿ ಆಕೆ ಪಕ್ಕದಲ್ಲಿರೋ ಮೊಬೈಲ್ ಕಣ್ಣಿಗೆ ಬೀಳುತ್ತೆ. ಪುಸ್ತಕ ಬದಿಗಿಟ್ಟು ಮೊಬೈಲ್ ಹಿಡಿದು ರೀಲ್ಸ್ ಸ್ಕ್ರೋಲ್ ಮಾಡ್ತಾ ಸಮಯ ಕಳೆಯುತ್ತಾಳೆ ಹುಡುಗಿ.
ಈ ವಿಡಿಯೋ ನೋಡಿದ ಬಹುತೇಕರು, ನಾವೂ ಹೀಗೆ ಅಂತಾ ಹೆಗಲು ಮುಟ್ಟಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು, ನಾನು ಓದಲು ಶುರು ಮಾಡಿದ ಐದು ನಿಮಿಷಕ್ಕೆ ಬ್ರೇಕ್ ತೆಗೆದುಕೊಳ್ತೇನೆ ಎಂದು ಬರೆದಿದ್ದಾರೆ.
ಇದೇ ಕೆಲಸವನ್ನು ನಾನು ಈಗ ಮಾಡ್ತಿದ್ದೇನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾನು ಈ ರೀಲನ್ನು ಓದುವಾಗ ನೋಡ್ತಿದ್ದೇನೆ ಎಂದು ಮತ್ತೊಬ್ಬರು ಬರೆದಿದ್ದಾರೆ.